ಹವ್ಯಕ ಮಹಾಮಂಡಲದ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ: ವಿವಿಧ ಮಂಡಲಗಳಲ್ಲಿ ಚೆಕ್ ವಿತರಣೆ

ಆರ್ತತ್ರಾಣ ಶಿಕ್ಷಣ ಸುದ್ದಿ

ವಿದ್ಯಾಭ್ಯಾಸ ನಡೆಸಲು ಆರ್ಥಿಕ ತೊಂದರೆ ಎದುರಿಸುತ್ತಿರುವ ಶ್ರೀಮಠದ ಶಿಷ್ಯರ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರೀ ರಾಮಚಂದ್ರಾಪುರ ಮಠ ಪ್ರತಿ ವರ್ಷದಂತೆ ಈ ವರ್ಷವೂ, 2018-19 ನೇ ಸಾಲಿನ ಅರ್ಹ 221 ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ₹9,36,000ಗಳನ್ನು ಮಂಜೂರುಗೊಳಿಸಿದೆ.

 

ದಿನಾಂಕ 11.11.2018ನೆಯ ಭಾನುವಾರದಂದು ಮಹಾಮಂಡಲದ ಏಳು ಮಂಡಲಗಳಲ್ಲಿ ಆರ್ಥಿಕ ಸಹಾಯಧನವನ್ನು ಚೆಕ್ ಮೂಲಕ ವಿತರಣೆ ಮಾಡಲಾಯಿತು. ಕುಮಟಾ, ಹೊನ್ನಾವರ, ಮಂಗಳೂರು, ಉಪ್ಪಿನಂಗಡಿ, ಮುಳ್ಳೇರಿಯ, ಉತ್ತರ ಬೆಂಗಳೂರು, ದಕ್ಷಿಣ ಬೆಂಗಳೂರು ಮಂಡಲಗಳ ಒಟ್ಟು 173 ವಿದ್ಯಾರ್ಥಿಗಳಿಗೆ ₹6,70,000ಗಳ ಸಹಾಯಧನ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಮಹಾಮಂಡಲ, ಮಂಡಲದಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಎಲ್ಲ ಮಂಡಲಗಳಲ್ಲಿಯೂ ವಿದ್ಯಾಸಹಾಯ ಪಡೆದ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿ , ವಿದ್ಯಾರ್ಥಿಗಳಲ್ಲಿ ಇರಬೇಕಾದ ಗುಣಗಳು, ವಿದ್ಯಾಭ್ಯಾಸದ ಅನಂತರ ಉದ್ಯೋಗಾವಕಾಶಗಳು, ಆ ಬಗ್ಗೆ ಶ್ರೀಮಠದ ಜೀವಿಕಾ-ದಿಶಾದರ್ಶಿ ವಿಭಾಗದ ಸಹಾಯ ಪಡೆಯುವ ಬಗ್ಗೆ ತಿಳಿವಳಿಕೆ ನೀಡಲಾಯಿತು. ಹಾಗೆಯೇ ವಿದ್ಯಾರ್ಥಿಗಳಿಗೆ ಶ್ರೀಮಠದ ಪರಿಚಯ, ವಿದ್ಯಾರ್ಥಿಗಳಿಗಿರುವ ಸೇವಾವಕಾಶ, ಇರಬೇಕಾದ ಬದ್ಧತೆ, ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಠದ ಕಾರ್ಯಕ್ರಮಗಳನ್ನು, ಸೇವಾಕಾರ್ಯಗಳನ್ನು ಪ್ರಸಾರ ಮಾಡುವ ಮೂಲಕ ಮಾಡಬಹುದಾದ ಸೇವೆ ಇತ್ಯಾದಿ ಮಾಹಿತಿಗಳನ್ನು ತಿಳಿಸಿ, ಪ್ರೇರಣೆ ನೀಡಲಾಯಿತು.

Author Details


Srimukha

Leave a Reply

Your email address will not be published. Required fields are marked *