ನಮ್ಮ ನಡವಳಿಕೆ ಆದರ್ಶವಾಗಿರಬೇಕು. ಒಮ್ಮೆ ಒಂದು ಪುಟ್ಟ ಮಗು ತನ್ನ ತಾಯಿಯನ್ನು, “ಅಮ್ಮಾ ನಿನ್ನ ಕೆಲವು ಕೂದಲುಗಳು ಮಾತ್ರ ಬಿಳಿಯಾಗಿವೆ; ಏಕೆ?” ಎಂದು ಕೇಳುತ್ತದೆ.
ಅದಕ್ಕೆ ತಾಯಿ ಆಲೋಚಿಸಿ, “ನೀನು ಮಾಡಿದ ಒಂದೊಂದು ತಪ್ಪಿನಿಂದ ಒಂದೊಂದೇ ಕೂದಲು ಬಿಳಿಯಾಗಿದೆ” ಎನ್ನುತ್ತಾಳೆ.
ಆಗ ಮಗು ಮುಗ್ಧತೆಯಿಂದ ಕೇಳುತ್ತದೆ,
“ಅಜ್ಜಿಯ ಕೂದಲು ಪೂರಾ ಬಿಳಿಯಾಗಿದೆಯಲ್ಲ; ಅದಕ್ಕೆ ನೀನು ಮಾಡಿದ ತಪ್ಪುಗಳೇ ಕಾರಣವೇ?”ಎಂದು.
ಆಗ ತಾಯಿಗೆ ತಾನು ಮಗುವಿನ ಪ್ರಶ್ನೆಗೆ ನೀಡಿದ ಉತ್ತರ ಸರಿಯಿಲ್ಲ ಎಂಬ ಅರಿವಾಗುತ್ತದೆ.
ಮಕ್ಕಳು ಹಸಿಗೋಡೆಯಿದ್ದಂತೆ. ಅಲ್ಲಿ ಏನು ಮೆತ್ತಿದರೂ ಅದು ಸ್ಥಿರವಾಗಿ ನಿಲ್ಲುತ್ತದೆ. ಆದ್ದರಿಂದ ಮಕ್ಕಳ ಪ್ರಶ್ನೆಗೆ ಉತ್ತರಿಸುವಾಗ ಜಾಗರೂಕರಾಗಿರಬೇಕು. ಅಲ್ಲದೇ ನಮ್ಮ ನಡವಳಿಕೆ ನಮ್ಮ ಮಕ್ಕಳನ್ನು ಪ್ರೇರೇಪಿಸುವಂತೆ ಇರಬೇಕು. ನಡವಳಿಕೆಯೇ ಆದರ್ಶ. ಬರಿಯ ಮಾತಲ್ಲ.