ಶ್ರೀರಾಮಚಂದ್ರಾಪುರಮಠಕ್ಕೆ ಮತ್ತೊಮ್ಮೆ ಜಯ

ಸುದ್ದಿ

ಬೆಂಗಳೂರು: ಗಿರಿನಗರ ಪುನರ್ವಸು ಜಾಗಕ್ಕೆ ಸಂಬಂಧಿಸಿ; ವಿಶ್ವಭಾರತೀ ಹೌಸಿಂಗ್ ಕೋ ಆಪರೇಟೀವ್ ಸೊಸೈಟಿ ಮಾಡಿದ್ದ ಮೇಲ್ಮನವಿಯನ್ನು ಬುಧವಾರ ರಾಜ್ಯ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ.

 

ಗಿರಿನಗರ ಶಾಖಾ ಮಠದ ಜಾಗಕ್ಕೆ ಸಂಬಂಧಿಸಿದ ವಿಚಾರಣೆಗೆ ತನ್ನನ್ನು ಪ್ರತಿವಾದಿಯಾಗಿ ಪುರಸ್ಕರಿಸಬೇಕು ಎಂದು ವಿಶ್ವಭಾರತೀ ಹೌಸಿಂಗ್ ಕೋ ಆಪರೇಟೀವ್ ಸೊಸೈಟಿ ಮಾಡಿದ್ದ ಮೇಲ್ಮನವಿಯು ರಾಜ್ಯ ಉಚ್ಚನ್ಯಾಯಾಲಯದ ದ್ವಿಸದಸ್ಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಈ ಸಂದರ್ಭದಲ್ಲಿ ವಿಶ್ವಭಾರತೀ ಸೊಸೈಟಿಯವರು ಪ್ರಕರಣದಿಂದ ಹಿಂದೆ ಸರಿದಿದ್ದರಿಂದ ಪ್ರಕರಣವು ವಜಾಗೊಂಡಿತು. ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿ ಏಕಸದಸ್ಯ ಪೀಠದ ಮುಂದೆ ಮುಖಭಂಗ ಮಾಡಿಕೊಂಡಿದ್ದನ್ನು ಸ್ಮರಿಸಬಹುದಾಗಿದೆ.

Author Details


Srimukha

Leave a Reply

Your email address will not be published. Required fields are marked *