ಪರಮಪೂಜ್ಯರ ಪರಮಾನುಗ್ರಹ ಪಡೆದ ಪ್ರತಿಭೆಗಳು

ಶಿಕ್ಷಣ

* ಚಿ| ಅನಿರುದ್ಧ ಭಟ್ಟ
ಕೃಷಿ ವಿಜ್ಞಾನ ಪದವಿ ವಿದ್ಯಾರ್ಥಿ, ಮುಳ್ಳೇರಿಯಾ ಮಂಡಲಾಂತರ್ಗತ ಸುಳ್ಯ ವಲಯದ ನಿವಾಸಿಗಳಾದ ಮೂಲತಃ ಸಾಗರ ಪ್ರಾಂತ್ಯದ ಶ್ರೀಮತಿ ಅನಿತಾ ಹಾಗೂ ಶ್ರೀ ವೇದಮೂರ್ತಿ ಇವರ ಸುಪುತ್ರ. ಹವ್ಯಾಸಕ್ಕಾಗಿ ಕಿರುಚಿತ್ರ ನಿರ್ಮಿಸುತ್ತ, ಅಭಿನಯ ನಿರ್ದೇಶನಗಳಲ್ಲಿ ತೊಡಗಿಸಿಕೊಂಡ ಅನಿರುದ್ಧ ಭಟ್ಟ ತನ್ನ ಸಮಾನ ಆಸಕ್ತ ಸ್ನೇಹಿತರೊಡಗೂಡಿ ನಿರ್ಮಿಸಿದ ಮಂಗಳಮುಖಿಯರ ಕುರಿತಾದ ಕಿರುಚಿತ್ರ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿಕೊಂಡಿತು.
* ಚಿ| ನಿರಂಜನ ಪ್ರಸಾದ್
ಉಡುಪಿ ವಲಯದ ಶ್ರೀಮತಿ ಕೀರ್ತನಾ ಪ್ರಸಾದ್ ಹಾಗೂ ಖ್ಯಾತ ಆರ್ಥಿಕ ತಜ್ಞ ಶ್ರೀ ಜಯದೇವ ಪ್ರಸಾದ ಮೊಳೆಯಾರ ಇವರ ಸುಪುತ್ರ. Indian Institute Of Management ಇದರ Common Admission Test 2018 (CAT 2018)ನಲ್ಲಿ 100% ಅಂಕಗಳನ್ನು ಗಳಿಸುವುದರ ಮೂಲಕ ಅನುಪಮ ಸಾಧನೆಗೈದ ಈ ಪ್ರತಿಭಾವಂತ ಭಾರತದಾದ್ಯಂತ ಈ ಸಾಧನೆಗೈದ ಹನ್ನೊಂದು ವಿದ್ಯಾರ್ಥಿಗಳಲ್ಲಿ ಒಬ್ಬ.

Author Details


Srimukha

Leave a Reply

Your email address will not be published. Required fields are marked *