ಕಾವ್ಯಗಳು ಕಲ್ಪನೆಯನ್ನು ಕಣ್ಣಿಗೆ ಕಟ್ಟಿಸುತ್ತದೆ. – ಶ್ರೀಸಂಸ್ಥಾನ

ಶ್ರೀಸಂಸ್ಥಾನ

ಗಿರಿನಗರ: ಜೀವಲೋಕಕ್ಕೆ ಮಾಡಬೇಕಾದ ಚಿಕಿತ್ಸೆಯನ್ನು ಬೇಕಾದ ಸಮಯದಲ್ಲಿ ಪರಮಾತ್ಮ ಮಾಡುತ್ತಾನೆ. ಕಾವ್ಯಗಳು ದೃಶ್ಯಮಾಧ್ಯಮ ಇಲ್ಲದೆ ಕಲ್ಪನೆಯನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಕವಿಯಲ್ಲಿ ಅಗತ್ಯ ವಿಚಾರಗಳ ಬಗ್ಗೆ ಮಾಹಿತಿ ಇದ್ದಾಗ ಮಾತ್ರ ಕವಿತೆಯನ್ನು ರಚಿಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

 

ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ನಾಲ್ಕನೇ ದಿನ ಆಶೀರ್ವಚನ ನೀಡಿದರು.

 

ಪುಸ್ತಕ ಬಂದ ಬಳಿಕ ಮಸ್ತಕದ ಶಕ್ತಿ ಕುಂದಿದೆ. ಉಪಕರಣಗಳನ್ನು ಬಳಸಿದಷ್ಟು ನಾವು ದುರ್ಬಲವಾಗುತ್ತಾ ಹೋಗುತ್ತೇವೆ. ಮಾಡುವ ಕಾರ್ಯದಲ್ಲಿ ಸ್ಪಷ್ಟತೆ ಇದ್ದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ. ಭಾವ ಇದ್ದಾಗ ಮಾತ್ರ ಹಾಡಿಗೆ ಜೀವ ಇರುತ್ತದೆ. ಜೀವನನ್ನು ದೇವನವರೆಗೆ ಕರೆದುಕೊಂಡು ಹೋಗುವ ಶಕ್ತಿ ಸಂಗೀತಕ್ಕೆ ಇದೆ ಎಂದು ತಿಳಿಸಿದರು.

 

ವಾಲ್ಮೀಕಿಗಳು ರಾಮಾಯಣವನ್ನು ಪ್ರಪಂಚಕ್ಕೆ ನೀಡುವವರು ಯಾರೆಂಬ ಪ್ರಶ್ನೆಯಲ್ಲಿದ್ದಾಗ, ಅಲ್ಲಿಗೆ ಬಂದ ಲವ ಕುಶರು ಯಥಾವತ್ತಾಗಿ ಉಚ್ಚರಿಸುತ್ತಾರೆ. ಅಯೋಧ್ಯೆ ನಗರದಲ್ಲಿ ರಾಮಾಯಣದ ಶ್ಲೋಕಗಳನ್ನು ಹೇಳಿಕೊಂಡು ಬಂದ ಲವ ಕುಶರ ಮೇಲೆ ಶ್ರೀರಾಮನ ಕಣ್ಣು ಬಿದ್ದು ಆಸ್ಥಾನಕ್ಕೆ ಕರೆಸಿಕೊಳ್ಳುತ್ತಾನೆ. ಕಥಾನಾಯಕನ ಮುಂದೆ ರಾಮಕಥೆಯನ್ನು ಪ್ರಸ್ತುತ ಪಡಿಸುವ ಸಂದರ್ಭವನ್ನು ವರ್ಣಿಸಿದರು.

 

ಮೋಹನಬಾಸ್ಕರ ಹೆಗಡೆ ದಂಪತಿಗಳು ಫಲ ಸಮರ್ಪಿಸಿದರು. ಅರುಣ ಚೌಧರಿ ಕೋಲ್ಕತ್ತ ಪರವಾಗಿ ಶಾರದಾ ಜಯಗೋವಿಂದ ಅವರು ಮಹಾ ದೀಪಕ್ಕೆ ತೈಲ ಸಮರ್ಪಣೆ ಮಾಡಿದರು. ಧರ್ಮಕರ್ಮ ಖಂಡದ ಶ್ರೀಸಂಯೋಜಕ ರಾಮಕೃಷ್ಣ ಕೂಟೇಲು ಪ್ರಸ್ತಾವನೆಗೈದರು. ವಿನಾಯಕ ಎನ್. ಭಟ್ ಕಾರ್ಯಕ್ರಮ ನಿರೂಪಿಸಿದರು.

 

Author Details


Srimukha

Leave a Reply

Your email address will not be published. Required fields are marked *