ದೈವೇಚ್ಛೆಯಾಗಿದ್ದಾಗ ಮಾತ್ರ ಕಾರ್ಯ ಕೈಗೂಡಲು ಸಾಧ್ಯ – ಶ್ರೀಸಂಸ್ಥಾನ

ಶ್ರೀಸಂಸ್ಥಾನ

 

ಗಿರಿನಗರ: ಜೀವನದಲ್ಲಿ ಮಾಡುವ ಬಹುದೊಡ್ಡ ತ್ಯಾಗವೂ ವೀರತನವಾಗುತ್ತದೆ. ಜಟಾಯುವಿನ ಬದುಕು ಪ್ರತಿಯೊಬ್ಬ ಕಾರ್ಯಕರ್ತನಿಗೂ ಮಾದರಿ. ನಮ್ಮ ಇಚ್ಛೆ ಎಲ್ಲರ ಇಚ್ಛೆಯ ಜತೆಗೆ ದೈವೇಚ್ಛೆಯಾಗಿದ್ದಾಗ ಮಾತ್ರ ಕಾರ್ಯ ಕೈಗೂಡಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.

 

ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಎರಡನೆಯ ದಿನ ಆಶೀರ್ವಚನ ನೀಡಿದರು.

 

ಗುರುದೈವವನ್ನು ನಿಜವಾಗಿ ಆಶ್ರಯಿಸಿದ್ದೇ ಆದಲ್ಲಿ ಅವರು ಮಾಡಿದ್ದೆಲ್ಲವೂ ಒಳಿತಾಗಿರುತ್ತದೆ. ಭಕ್ತಿ ಭಾವಕ್ಕಿಂದ ದೊಡ್ಡ ವಿಚಾರ ಜಗತ್ತಿನಲ್ಲಿ ಬೇರೊಂದಿಲ್ಲ. ಇದರ ಮೂಲಕ ಎಲ್ಲವನ್ನು ಪಡೆಯಲು ಸಾಧ್ಯವಿದೆ. ಮಹಾತ್ಮರು ಇರುವಲ್ಲಿ ಭಯ ಪಡುವ ಅಗತ್ಯವಿಲ್ಲ, ಅಲ್ಲಿ ರಕ್ಷಣೆ ಇರುತ್ತದೆ ಎಂದು ತಿಳಿಸಿದರು.

 

ಅಮೇರಿಕಾ ನಿವಾಸಿ ಯಜ್ಞೇಶ್ ಭಟ್ ಬಂಗಲಗಲ್ಲು ಅವರು ಮಹಾಸಮರ್ಪಣೆಯನ್ನು ಮಾಡಿದರು.

 

ಶ್ರೀರಾಮನಿಗೆ ಪಟ್ಟಾಭಿಷೇಕ ಆಗುವ ಆಸುಪಾಸಿನ ಸಮಯದಲ್ಲಿ ನಾರದರು ವಾಲ್ಮೀಕಿಯವರಿಗೆ ರಾಮಾಯಣದ ಕಥೆಯನ್ನು ಹೇಳುತ್ತಾರೆ ಎಂಬುದನ್ನು ಪ್ರವಚನದಲ್ಲಿ ಪ್ರಸ್ತುತ ಪಡಿಸಲಾಯಿತು. ಧರ್ಮಕರ್ಮ ಖಂಡದ ಶ್ರೀಸಂಯೋಜಕ ರಾಮಕೃಷ್ಣ ಕೂಟೇಲು ಪ್ರಸ್ತಾವನೆಗೈದರು.

Author Details


Srimukha

Leave a Reply

Your email address will not be published. Required fields are marked *