ಸಾಮೂಹಿಕ ಭಗವದ್ಗೀತೆ ಪಾರಾಯಣ

ದೇವಾಲಯ

ಗೋಲೋಕ: ಹೊಸನಗರ ಮಹಾನಂದಿ ಗೋಲೋಕದಲ್ಲಿ ಡಿ.೭ರಂದು ಗೀತಾಜಯಂತಿಯ ಅಂಗವಾಗಿ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಿಯಲ್ಲಿ ಸಾಮೂಹಿಕ ಭಗವದ್ಗೀತೆ ಪಾರಾಯಣ ಸಂಪನ್ನಗೊಂಡಿದೆ.

ಬೆಳಿಗ್ಗೆ ೯-೩೦ಕ್ಕೆ ಪ್ರಾರಂಭವಾದ ಪಾರಾಯಣ ಅಪರಾಹ್ನ ೧೨-೩೦ ರವರೆಗೆ ನೆರವೇರಿದೆ. ಪುರುಷ ಮತ್ತು ಮಹಿಳೆಯರು ಭಾಗವಹಿಸಿದ್ದ ಈ ಕಾರ್ಯಕ್ರಮದ ನೇತೃತ್ವವನ್ನು ವಿದ್ವಾನ್ ಶೇಷಗಿರಿ ಭಟ್ ರವರು ವಹಿಸಿದ್ದರು.

ನಂತರ ಶ್ರೀಕೃಷ್ಣನಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಶ್ರೀಮಠದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬ್ರಾಹ್ಮಣಸಭಾ ಅಧ್ಯಕ್ಷರಾದ ಡಾ. ರಾಮಚಂದ್ರರಾವ್ ಹಿರಿಯರಾದ ಶ್ರೀಧರ ಉಡುಪ ಮುಂತಾದವರು ಉಪಸ್ಥಿತರಿದ್ದರು.

Author Details


Srimukha

Leave a Reply

Your email address will not be published. Required fields are marked *