ಮಾಲೂರು ಗೋಶಾಲೆಯಲ್ಲಿ ಮಕರ ಸಂಕ್ರಾಂತಿ : ಗೋವುಗಳಿಗೆ ವಿಶೇಷ ಪೂಜೆ

ಮಾಲೂರು: ಮಕರ ಸಂಕ್ರಾಂತಿ ಹಬ್ಬದ ದಿನ ಕೆ. ಆರ್. ಪುರಂ, ಹೊಸಕೋಟೆ, ಮಾಲೂರು ಭಾಗದ ನೂರಾರು ಗೋಭಕ್ತರು ಮಾಲೂರಿನ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಆಗಮಿಸಿದ್ದರು. ಎಲ್ಲರೂ ಸೇರಿ ಗೋಶಾಲೆಯ ಗೋವುಗಳಿಗೆ ವಿಶೇಷ ಗೋಪೂಜೆಯನ್ನು ಸಲ್ಲಿಸಿ, ಮೇವು ನೀಡಿದರು.   ಗೋಶಾಲೆಗೆ ಆರ್ಥಿಕ ಸಹಾಯ: ಬೆಂಗಳೂರಿನ ಗಾಯತ್ರಿ ಪರಿವಾರದ ನೂರಕ್ಕೂ ಹೆಚ್ಚಿನ‌ ಜನರ ತಂಡವು ಗೋಪ್ರೇಮಿಗಳಿಂದ ಸಂಗ್ರಹಿಸಿದ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಗೋಶಾಲೆಗೆ ಹಸ್ತಾಂತರಿಸಿದರು. ಅನಂತರ ಹನುಮನ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭಜನೆಯನ್ನು ನೆರವೇರಿಸಿದರು. ಇದರೊಂದಿಗೇ […]

Continue Reading

ಅಂಬಿಲಡ್ಕ ಪೂಮಾಣಿ-ಕಿನ್ನಿಮಾಣಿ ದೈವಸ್ಥಾನದ ಪರಿಸರದಲ್ಲಿ ಅರ್ಘ್ಯ : ಗೋವಿಗಾಗಿ ಮೇವು-ಮೇವಿಗಾಗಿ ನಾವು

ಸೀತಾಂಗೋಳಿ: ಪರಮಪೂಜ್ಯ ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿ‌ ನಡೆಯುತ್ತಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯ ‘ಗೋವಿಗಾಗಿ ಮೇವು-ಮೇವಿಗಾಗಿ ನಾವು’ ಯೋಜನೆಯ ಅಂಗವಾಗಿ ಗುಂಪೆವಲಯದ ಅಂಬಿಲಡ್ಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಪರಿಸರದಲ್ಲಿ ತಾ.09.01.19ರಂದು ಸೇವಾ ಅರ್ಘ್ಯ ಜರಗಿತು. ಬಿ.ಜೆ.ಪಿ.ಕಾಸರಗೋಡು ಜಿಲ್ಲಾ ಕಾರ್ಯಕಾರೀ ಸಮಿತಿ ಸದಸ್ಯ ಪೂಕಟ್ಟೆ ಶ್ರೀ ಸುರೇಶಕುಮಾರ ಶೆಟ್ಟಿಯವರು ಧ್ವಜಾರೋಹಣ ಮಾಡಿ ಉದ್ಘಾಟಿಸಿ, 10 ಎಕರೆ ವಿಶಾಲ ಸ್ಥಳದಲ್ಲಿರುವ ಮುಳಿಹುಲ್ಲನ್ನು ಪೂರ್ಣವಾಗಿ ಕತ್ತರಿಸುವುದೇ ಕಷ್ಟ. ಅಂಥದ್ದನ್ನು ಪ್ರತ್ಯಕ್ಷವಾಗಿ ಕಾಣುವ ದೇವರಾದ ಗೋವುಗಳ ಉದರಂಭರಣಕ್ಕಾಗಿ ಮಾಡುತ್ತಿರುವುದು ಪುಣ್ಯಕಾರ್ಯ. ಕಿದೂರು ಮಹಾದೇವರ, ಇಲ್ಲಿನ ದೈವಗಳ […]

Continue Reading

ಗಂವ್ಹಾರ ಮಠದಲ್ಲಿ ಪಂಚಗವ್ಯ ಪ್ರಶಿಕ್ಷಣ ಶಿಬಿರ ಸಂಪನ್ನ

ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಗಂವ್ಹಾರದ ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಮಠದಲ್ಲಿ ಪಂಚಗವ್ಯ ಪ್ರಶಿಕ್ಷಣ ಶಿಬಿರ ಹಮ್ಮಿಕೊಳ್ಳಲಾಗಿತ್ತು.   ಗಂವ್ಹಾರ ಮಠದ ಪರಮಪೂಜ್ಯ ಶ್ರೀ ಸೋಪಾನನಾಥ ಮಹಾಸ್ವಾಮಿಗಳು ಉದ್ಘಾಟನಾ ಸಭೆಯಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.   ಕರ್ನಾಟಕ ರಾಜ್ಯ ಗೋಪರಿವಾರದ ಅಧ್ಯಕ್ಷ ಪೂಜ್ಯ ಶ್ರೀ ಪಾಂಡುರಂಗ ಮಹಾರಾಜ್ ಅವರು ಮಾರ್ಗದರ್ಶನ ಮಾಡಿದರು.   ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದ ಶ್ರೀಮತಿ ಸುಲೋಚನಾ ಅವರು, ಗೋಮಯಾದಿ ತೈಲ, ಸುಕಾಂತಿ ಫೇಸ್ ಪ್ಯಾಕ್, ಧೂಪ, […]

Continue Reading

ಟೆಕ್ಕಿಗಳಿಂದ ಮಾಲೂರು ಗೋಶಾಲೆಯಲ್ಲಿ ಕಾರ್ಯಕ್ರಮ

ಬೆಂಗಳೂರು: ಪ್ರತಿದಿನವು ಕಂಪ್ಯೂಟರ್ ಎದುರು ಕುಳಿತು ಏಕತಾನೆತೆಯಿಂದ ಹೊರಬರಲು ಟೆಕ್ಕಿಗಳು ವಾರಾಂತ್ಯದ ಬಿಡುವಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದಾರೆ.   ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ರಾಮಮೂರ್ತಿ ತಂಡ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಹಯೋಗ ದಲ್ಲಿ ದಿನಾಂಕ ೧೩-೦೧-೨೦೧೯ರ ಭಾನುವಾರದಂದು ಮಾಲೂರಿನ ರಾಘವೇಂದ್ರ ಗೋಆಶ್ರಮದಲ್ಲಿ ಒಂದು ದಿನದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.   ಭಾನುವಾರ ಬೆಳಗ್ಗೆ ಗೋ ಪೂಜೆಯಿಂದ ಕಾರ್ಯಕ್ರಮಕ್ಕೆ ಚಾಲನೆ ದೊರೆತು ಭಜನೆ, ಪ್ರಾರ್ಥನೆ, ಗಾಳಿಪಟ ಹಾರಿಸುವಿಕೆ ಜತೆಗೆ ಗೋವಿನ ಉತ್ಪನ್ನಗಳ ತಯಾರಿಕಾ ಘಟಕಕ್ಕೆ ಭೇಟಿ […]

Continue Reading

ಹೊಸಾಡದಲ್ಲಿ ನಡೆಯಲಿದೆ ಗೋಸಂಧ್ಯಾ ಕಾರ್ಯಕ್ರಮ

ಕುಮಟಾ: ಗೋಪ್ರೇಮಿಗಳಿಗಾಗಿ ಇದೇ ಬರುವ ಜನವರಿ 26, ಶನಿವಾರದಂದು ‘ಅಮೃತಧಾರಾ ಗೋಬ್ಯಾಂಕ್ ಹೊಸಾಡ’ದಲ್ಲಿ ವಾರ್ಷಿಕ ‘ಗೋಸಂಧ್ಯಾ’ ಕಾರ್ಯಕ್ರಮ ನಡೆಯಲಿದೆ.   ಇದೊಂದು ಗೋಪ್ರೇಮಿಗಳ ದಿನವಾಗಿದ್ದು, ಅಂದು ಸಂಜೆ 5.00 ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮಕ್ಕೆ ಎಲ್ಲ ಗೋಪ್ರೇಮಿಗಳೂ ಆಗಮಿಸಿ ಗೋಶಾಲೆಯ ಗೋವುಗಳನ್ನು ವೀಕ್ಷಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ, ಗೋಸೇವೆಯಲ್ಲೂ ಪಾಲ್ಗೊಂಡು ಪುಣ್ಯಕ್ಕೆ ಪಾತ್ರರಾಗಬೇಕೆಂದು ಕೋರಲಾಗಿದೆ. ಕಾರ್ಯಕ್ರಮದ ಬಳಿಕ ಮಿತಭೋಜನವನ್ನೂ ಏರ್ಪಡಿಸಲಾಗಿದೆ.  

Continue Reading

ಗಂವ್ಹಾರ ಮಠದಲ್ಲಿ ಪಂಚಗವ್ಯ ಪ್ರಶಿಕ್ಷಣ ಶಿಬಿರ ಉದ್ಘಾಟನೆ

ಗಂವ್ಹಾರ (ಕಲಬುರ್ಗಿ): ನಮ್ಮ ಸಮೃದ್ಧಿಗಾಗಿ ಹಾಗೂ ಗೋವುಗಳ ಉಳಿವಿಗಾಗಿ ಪಂಚಗವ್ಯ ಬಳಸಿ ಗೋಮಾತೆಯ ಋಣ ತೀರಿಸಬೇಕು ಎಂದು ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಮಠದ ಪರಮಪೂಜ್ಯ ಶ್ರೀಶ್ರೀ ಸೋಪಾನನಾಥ ಮಹಾಸ್ವಾಮಿಗಳು ಹೇಳಿದರು.   ‘ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ’ ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪಂಚಗವ್ಯ ಪ್ರಶಿಕ್ಷಣ ಶಿಬಿರವನ್ನು ಗೋಪೂಜೆ ಮಾಡುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.   ‘ಅನಾದಿ ಕಾಲದಿಂದಲೂ ಗೋಜನ್ಯ ವಸ್ತುಗಳನ್ನು ದಿನನಿತ್ಯದ ಜೀವನದಲ್ಲಿ ಬಳಸಿಕೊಂಡು ಬಂದಿದ್ದು ಈಗ ಅದನ್ನು ಮತ್ತೆ ಹೇಳಿಕೊಡುವ ಸಂದರ್ಭ […]

Continue Reading

ಮುಖಾರಿಕಂಡದಲ್ಲಿ ಸೇವಾಅರ್ಘ್ಯ : ಗೋವಿಗಾಗಿ ಮೇವು-ಮೇವಿಗಾಗಿ ನಾವು

ಮುಖಾರಿಕಂಡ: ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯ `ಗೋವಿಗಾಗಿ ಮೇವು-ಮೇವಿಗಾಗಿ ನಾವು’ ಯೋಜನೆಯ ಅಂಗವಾಗಿ ದಿನಾಂಕ 23.12.2018ರಂದು ಸೀತಾಂಗೋಳಿ ಮುಖಾರಿಕಂಡದಲ್ಲಿ ನಡೆದ ‘ಸೇವಾ ಅರ್ಘ್ಯ’ದಲ್ಲಿ ವಿವಿಧ ಕ್ಲಬ್‌ ಗಳ ಸದಸ್ಯರು ಪಾಲ್ಗೊಂಡು ಗೋಸೇವೆಗೈದರು.   ಕಳೆದ ಕೆಲವು ವಾರಗಳಿಂದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಮೇವು ಸಂಗ್ರಹಕ್ಕಾಗಿ ವಿವಿಧೆಡೆ ಶ್ರಮದಾನಗಳನ್ನು ನಡೆಸಲಾಗುತ್ತಿತ್ತು. ಅದರಂತೆ ಸೀತಾಂಗೋಳಿ ಮುಖಾರಿಕಂಡದಲ್ಲಿ ಪ್ರಕೃತಿ ಸಹಜವಾಗಿ ಬೆಳೆದ ಮುಳಿಹುಲ್ಲನ್ನು ಕಟಾವು ಮಾಡಿ ಸಾಗಿಸಲಾಯಿತು.   ಈ ಗೋಸೇವಾಕಾರ್ಯವನ್ನು ಕಾಮಧೇನು ಧ್ವಜಾರೋಹಣಗೈಯುವ ಮೂಲಕ ಪುತ್ತಿಗೆ ಗ್ರಾಮಪಂಚಾಯತ್ ಸದಸ್ಯ […]

Continue Reading

ಗಳಿಸಿದ ಲಾಭವನ್ನು ಗೋಶಾಲೆಗಿತ್ತ ಗೋಪ್ರೇಮಿಗಳು

ಕುಮಟಾ: ಇತ್ತೀಚಿಗೆ ಕುಮಟಾದ ಕೊಂಕಣ ಎಜ್ಯುಕೇಶನ್ ಸೊಸೈಟಿಯ ಸರಸ್ವತೀ ವಿದ್ಯಾಕೇಂದ್ರ ಸಂಸ್ಥೆಯ ರಜತ ಮಹೋತ್ಸವವು ನಡೆಯಿತು. ಈ ಸಮಾರಂಭದಲ್ಲಿ ಕುಮಟಾ ಮಂಡಲದ ವತಿಯಿಂದ ಆಲೆಮನೆಯನ್ನು ನಡೆಸಲಾಯಿತು. ಅಲ್ಲಿ ಸಂಗ್ರಹಗೊಂಡು ಉಳಿದ ಲಾಭದ ಹಣವನ್ನು ಗೋಪ್ರೇಮಿಗಳು ಹೊಸಾಡ ಗೋಶಾಲೆಗೆ ನೀಡಿ ಗೋಪ್ರೇಮ ಮೆರೆದರು.

Continue Reading

ಗೋಸೇವಾ ಸದ್ಭಾವನಾ ಯಾತ್ರೆ ಕರ್ನಾಟಕ ಪ್ರವೇಶ – ಗೋಭಕ್ತ ಫೈಜ್ ಖಾನ್‍ರನ್ನು ಸ್ವಾಗತಿಸಿದ ಭಾರತೀಯ ಗೋಪರಿವಾರ

ದೇಶ ಕಂಡ ಅಪರೂಪದ ಗೋಭಕ್ತ, ಮೊಹಮ್ಮದ್ ಫೈಜ್ ಖಾನ್ ಅವರು ದೇಶವ್ಯಾಪಿ ಗೋಮಹತ್ವ ಜಾಗೃತಿಯ ಉದ್ದೇಶದಿಂದ ಕೈಗೊಂಡಿರುವ ‘ಗೋ ಸೇವಾ ಸದ್ಭಾವನಾ ಯಾತ್ರೆ’ ಎಂಬ ಭಾರತ ಪ್ರದಕ್ಷಿಣ ಪಾದಯಾತ್ರೆಯು ನಿನ್ನೆ ಕರ್ನಾಟಕ ಪ್ರವೇಶಿಸಿದೆ.   ಚಾಮರಾಜನಗರದ ಮೂಲಕ ಕರ್ನಾಟಕ ರಾಜ್ಯ ಪ್ರವೇಶಿಸಿದ ಫೈಜ್ ಖಾನ್ ಅವರನ್ನು ಭಾರತೀಯ ಗೋಪರಿವಾರದ ಕರ್ನಾಟಕ ರಾಜ್ಯ ಘಟಕ ಹಾರ್ದಿಕವಾಗಿ ಸ್ವಾಗತಿಸಿದೆ.   ಭಾರತೀಯ ಗೋತಳಿಗಳ ಮಹತ್ವದ ಜಾಗೃತಿ, ಗೋಜನ್ಯ ಪದಾರ್ಥಗಳ ಅಗತ್ಯ ಮತ್ತು ಉಪಯೋಗಗಳ ಕುರಿ‌ತು ಜನಮಾನಸಕ್ಕೆ ತಲುಪಿಸಬೇಕು ಹಾಗೂ ಗೋಮಾತೆಯ […]

Continue Reading

ಗೋಶಾಲೆಗೆ ಶಾಲಾಪ್ರವಾಸ : ಗೋವೃಂದದೊಡನೆ ಸಂಭ್ರಮಿಸಿದ ಮಕ್ಕಳು

  ಕುಮಟಾ: ತಾಲೂಕಿನ ಹುಬ್ಬಣಕೇರಿ ಬಾಡ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲಾಪ್ರವಾಸಕ್ಕೆಂದು ಹೊಸಾಡ ಗೋಶಾಲೆಗೆ ತೆರಳಿದರು. ಗೋಶಾಲೆಯಲ್ಲಿರುವ ವಿವಿಧ ಭಾರತೀಯ ತಳಿಯ ಗೋವುಗಳನ್ನು ವೀಕ್ಷಿಸಿ ಸಂಭ್ರಮಿಸಿದರು.  

Continue Reading

ಬಜಕೂಡ್ಲು ಗೋಶಾಲೆಯ ಗೋವುಗಳಿಗೆ ಮುಳಿಹುಲ್ಲು : ಸೇವಾ ಅರ್ಘ್ಯ

ಗುಂಪೆಗುಡ್ಡೆಯ ಶ್ರೀಶಂಕರಧ್ಯಾನಮಂದಿರ ಪರಿಸರದಲ್ಲಿ ಮುಳಿಹುಲ್ಲು ಕತ್ತರಿಸುವ ಕಾರ್ಯ ದಿನಾಂಕ 9-12-2018ರಂದು ಪ್ರಾರಂಭವಾಯಿತು.   ಗುಂಪೆವಲಯದ ಅಧ್ಯಕ್ಷ ಶ್ರೀ ಅಮ್ಮಂಕಲ್ಲು ರಾಮಭಟ್ಟರು ಗೋಮಾತೆಗೆ ಗೋಗ್ರಾಸ ನೀಡುವ ಮೂಲಕ ಚಾಲನೆ ನೀಡಿದರು. ಕಾಮದುಘಾ ಕಾರ್ಯದರ್ಶಿ ಡಾ. ವೈ.ವಿ.ಕೃಷ್ಣಮೂರ್ತಿ ಯವರು ಧ್ಜಜಾರೋಹಣ ಮಾಡಿದರು. ಗುರುವಂದನೆ, ಗೋಸ್ತುತಿ ನಡೆಸಲಾಯಿತು.   ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನ ಕೇಶವಪ್ರಸಾದ ಎಡಕ್ಕಾನ, ವಲಯದ ಕಾರ್ಯದರ್ಶಿ ಬಜಪ್ಪೆ ಸುಬ್ರಹ್ಮಣ್ಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.   ಮಹಾಮಂಡಲದ ಉಲ್ಲೇಖ ಪ್ರಧಾನ ಬಳ್ಳಮೂಲೆ ಗೋವಿಂದ ಭಟ್ಟ, ಶಾಮ ಭಟ್ ಬೇರ್ಕಡವು, ಮುಳ್ಳೇರಿಯಾ […]

Continue Reading

ಗೋಸ್ವರ್ಗದಲ್ಲಿ ಪುಟಾಣಿಗಳ ಕಲರವ- ಗೋವುಗಳ ಜೊತೆ ಮೈಮರೆತ ಮಕ್ಕಳು

ಸಿದ್ದಾಪುರ: ಸಾಕ್ಷಾತ್ ಗೋವುಗಳ ಪಾಲಿನ ಸ್ವರ್ಗವಾಗಿರುವ ಗೋಸ್ವರ್ಗದಲ್ಲಿ ಭಾನುವಾರ ಗೋವುಗಳ ಜೊತೆ ಪುಟ್ಟ ಪುಟ್ಟ ಮಕ್ಕಳ ಜಾತ್ರೆಯೇ ಸೃಷ್ಟಿಯಾಗಿತ್ತು.   ಸಿದ್ದಾಪುರದ ಪ್ರಶಾಂತಿ ವಿದ್ಯಾಲಯದ ಪುಟಾಣಿ ಮಕ್ಕಳು ಗೋಸ್ವರ್ಗಕ್ಕೆ ಬಂದು ಗೋವುಗಳ ಕುರಿತು ಮಾಹಿತಿ ಪಡೆದು ಅವುಗಳ ಮೈದಡವಿ ಮೇವು‌ತಿನ್ನಿಸಿ ಆಟವಾಡಿ ಸಂಭ್ರಮಿಸಿದರು.   ಶಿಕ್ಷಕರು ಹಾಗೂ ಕೆಲ ಪಾಲಕರೊಂದಿಗೆ ಗೋಸ್ವರ್ಗಕ್ಕೆ ಬಂದಿದ್ದ ಮಕ್ಕಳು ಒಂದೆಡೆಯಲ್ಲಿ ಗೋವುಗಳ ರಾಶಿ ಕಂಡು ಕುಣಿದಾಡಿದರು. ಗೋಸ್ವರ್ಗದಲ್ಲಿಯೇ ಮಧ್ಯಾಹ್ನದ ಪ್ರಸಾದ ಸ್ವೀಕರಿಸಿದ ಮಕ್ಕಳು ಸಂಜೆಯವರೆಗೂ ಅಲ್ಲಿಯೇ ಆಟವಾಡಿ ಬಳಿಕ ಒಲ್ಲದ ಮನಸ್ಸಿನಿಂದ […]

Continue Reading

ಗೋವಿಗಾಗಿ ಮೇವು : ಗುಂಪೆ ವಲಯದ ಕಾರ್ಯಕರ್ತರ ಶ್ರಮದಾನ, ಬಜಕೂಡ್ಲು ಗೋಶಾಲೆಗೆ ಹುಲ್ಲು ಸಾಗಾಟ

ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿರುವ ಕಾಸರಗೋಡು ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಗುಂಪೆ ವಲಯ ಪುತ್ತಿಗೆ ಸುಬ್ರಾಯ ದೇವಸ್ಥಾನದ ಹತ್ತಿರದ ಗದ್ದೆಯಲ್ಲಿದ್ದ ಮೇವಿನ ಹುಲ್ಲನ್ನು ಸಾಗಿಸಿ ತಲಪಿಸುವ ಶ್ರಮದಾನ 3.12.2018ರಂದು ನಡೆಯಿತು.   ಹವ್ಯಕ ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಈಶ್ವರಿಶ್ಯಾಮ ಭಟ್ ಬೇರ್ಕಡವು, ಮಹಾಮಂಡಲ ಕಾಮದುಘಾ ಕಾರ್ಯದರ್ಶಿ ಡಾ.ವೈ.ವಿ. ಕೃಷ್ಣಮೂರ್ತಿ, ಮುಳ್ಳೇರಿಯಾ ಮಂಡಲದ ವಿದ್ಯಾರ್ಥಿವಾಹಿನಿ ಪ್ರಧಾನ ಶ್ರೀ ಕೇಶವಪ್ರಸಾದ ಎಡಕ್ಕಾನ, ಮಂಡಲ ಮಾತೃ ಪ್ರಧಾನೆ ಶ್ರೀಮತಿ ಕುಸುಮ ಪೆರ್ಮುಖ, ಗುಂಪೆ ವಲಯ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ನೀರ್ಚಾಲು […]

Continue Reading

ಮಾಲೂರು ಶ್ರೀರಾಘವೇಂದ್ರ ಗೋ ಆಶ್ರಮದಲ್ಲಿ ಭಾಷಣ ಕಾರ್ಯಾಗಾರ ಯಶಸ್ವಿಯಾಗಿ ಸಂಪನ್ನ

ಮಾಲೂರು: ಭಾರತೀಯ ಗೋಪರಿವಾರ-ಕರ್ನಾಟಕದ ಗೋಮಹತಿ ವಿಭಾಗದಿಂದ ಒಂದು ದಿನದ ಭಾಷಣ ಕಾರ್ಯಗಾರವು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಗಂಗಾಪುರದ ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ನಡೆಯಿತು.   ಗೋಪೂಜೆ ಹಾಗೂ ಗೋಗ್ರಾಸ ನೀಡುವುದರೊಂದಿಗೆ ಶಿಬಿರವು ಆರಂಭವಾಯಿತು. ಬಳಿಕ ನಡೆದ ಕಾರ್ಯಾಗಾರದಲ್ಲಿ ಭಾರತೀಯ ಗೋಪರಿವಾರ, ಕರ್ನಾಟಕದ ಗೋಮಹತಿ ವಿಭಾಗದ ರಾಜ್ಯಾಧ್ಯಕ್ಷ ಶ್ರೀ ನಿತ್ಯಾನಂದ ವಿವೇಕವಂಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತರ ಶ್ರೀ ನಿತ್ಯಾನಂದ ವಿವೇಕವಂಶಿ, ಡಾ.ರವಿ ಪಾಂಡವಪುರ ಹಾಗೂ ಚಂದನ್ ಕಲಾಹಂಸ ಗೋವಿನ ಮಹತ್ತ್ವ ಮತ್ತು ಭಾಷಣ ತರಬೇತಿಯನ್ನು ನಡೆಸಿಕೊಟ್ಟರು. ಬಳಿಕ ಗೋಶಾಲೆಗೆ […]

Continue Reading

ಮಂಗಲಗೋಯಾತ್ರೆಯ ಸ್ಮರಣಸಂಚಿಕೆ ‘ಸನ್ಮಂಗಲ’ ಶ್ರೀಸಂಸ್ಥಾನದವರಿಂದ ಲೋಕಾರ್ಪಣೆ

ಬೆಂಗಳೂರು: ಮಂಗಲಗೋಯಾತ್ರೆಯ ವಿವರಗಳನ್ನೊಳಗೊಂಡ ‘ಸನ್ಮಂಗಲ’ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಇಂದು, 1.12.2018 ರಂದು, ಲೋಕಾರ್ಪಣೆಗೊಂಡಿತು.   ಭಾರತೀಯ ಗೋತಳಿಗಳ ಸಂರಕ್ಷಣೆಗಾಗಿ ಶ್ರೀಸಂಸ್ಥಾನದವರು ಯೋಜಿಸಿದ ಮಹತ್ತಾದ ಹಲವು ಕಾರ್ಯಗಳಲ್ಲಿ ಗೋಯಾತ್ರೆಗಳು ಪ್ರಮುಖವಾದುವು. ಗೋವಿನ ಕಾರಣದಿಂದ ಆರಂಭವಾದ ಮೊದಲ ಸ್ವಾತಂತ್ರ್ಯಸಂಗ್ರಾಮಕ್ಕೆ ಮಂಗಲಪಾಂಡೆಯ ಸ್ಮರಣಾರ್ಥ ‘ಮಂಗಲಗೋಯಾತ್ರೆ’ ಎಂದ ಕರೆಯಲ್ಪಟ್ಟ ಈ ಯಾತ್ರೆಯು 2016 ನವೆಂಬರಿನಿಂದ 2017 ಜನವರಿಯ ವರೆಗೆ ರಾಜ್ಯಾದ್ಯಾಂತ ಸಂಚರಿಸಿ, 2017 ಜನವರಿ 27ರಿಂದ 29ರ ತನಕ ಮಂಗಳೂರಿನ ಮಂಗಲಭೂಮಿಯಲ್ಲಿ ಮಹಾಮಂಗಲದೊಂದಿಗೆ ಮುಕ್ತಾಯಗೊಂಡಿತು. ಅದರ ನೆನಪನ್ನು ಶಾಶ್ವತವಾಗಿಡುವ ನಿಟ್ಟಿನಲ್ಲಿ ಮಂಗಲಯಾತ್ರೆಯ ಸ್ಮರಣಸಂಚಿಕೆ […]

Continue Reading

ಗೋಸ್ವರ್ಗದಲ್ಲಿ ಪಂಚಗವ್ಯ ಪ್ರಶಿಕ್ಷಣ ಶಿಬಿರ : ಗೋಸೇವೆಯ ನೈಜ ಅನುಭವ ಪಡೆದ ಶಿಬಿರಾರ್ಥಿಗಳು

  ಸಾವಿರ ಗೋವುಗಳ ಸ್ವಚ್ಛಂದ ವಿಹಾರತಾಣವಾದ ಜಗತ್ತಿನ ಏಕೈಕ ಗೋಸ್ವರ್ಗದಲ್ಲಿ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ, ಭಾರತೀಯ ಗೋಪರಿವಾರ ಕರ್ನಾಟಕದ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡ ಪಂಚಗವ್ಯ ಪ್ರಶಿಕ್ಷಣ ಶಿಬಿರ ನೆರವೇರಿತು. ಶಿಬಿರಾರ್ಥಿಗಳಿಗೆ ಗೋವುಗಳ ಒಡನಾಟದ ವಿಶಿಷ್ಟ ಅನುಭವದೊಂದಿಗೆ ಗೋಸೇವೆಯ ಮಹತ್ತ್ವ, ಗೋವುಗಳ ಸಂರಕ್ಷಣೆಯ ಕುರಿತು ಅರಿವುಗಳನ್ನು ಮೂಡಿಸುವಲ್ಲಿ ಶಿಬಿರವು ಯಶಸ್ವಿಯಾಯಿತು.   ರಾಜ್ಯದ ವಿವಿಧ ಜಿಲ್ಲೆಗಳಿಂದ ಮೂವತ್ತಾರು ಜನ ಶಿಬಿರಾರ್ಥಿಗಳು ಪಾಲ್ಗೊಂಡ ಈ ಶಿಬಿರವನ್ನು ಗೋ ಸ್ವರ್ಗದ ಅಧ್ಯಕ್ಷರಾದ ಶ್ರೀ ಆರ್. ಎಸ್. […]

Continue Reading

ಪಂಚಗವ್ಯ ಪ್ರಶಿಕ್ಷಣ-ಬಜಕೊಡ್ಲು

ಭಾರತೀಯ ಗೋಪರಿವಾರ-ಕರ್ನಾಟಕ ವತಿಯಿಂದ ಈ ಬಾರಿಯ ಪಂಚಗವ್ಯ ಪ್ರಶಿಕ್ಷಣವನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೇರ್ಲ ಸಮೀಪದ ಬಜಕೊಡ್ಲುವಿನಲ್ಲಿರುವ ಅಮೃತಧಾರ ಗೋಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜನವರಿ 18ರಿಂದ 20ರವರೆಗೆ ಮೂರುದಿನಗಳ ಕಾಲ ಪಂಚಗವ್ಯ ಪ್ರಶಿಕ್ಷಣ ನಡೆಯಲಿದೆ. ಜನವರಿ 16ರ ಬೆಳಗ್ಗೆ 9ಗಂಟೆಗೆ ಪ್ರಾರಂಭವಾಗಿ ಜನವರಿ 18ರ ಸಂಜೆ 5 ಘಂಟೆಗೆ ಮುಕ್ತಾಯಗೊಳ್ಳುತ್ತದೆ. ★ಪಂಚಗವ್ಯ ಪ್ರಶಿಕ್ಷಣ-ಬಜಕೊಡ್ಲು ಶಿಬಿರದಲ್ಲಿ… ◆ಗೋವುಗಳ ಪರಿಚಯ ◆ಗವ್ಯ ಉತ್ಪನ್ನಗಳ ಪರಿಚಯ ◆ಗವ್ಯ ಉತ್ಪನ್ನಗಳ ತಯಾರಿಕೆ (ಮಾಹಿತಿ ಮತ್ತು ಪ್ರಾಯೋಗಿಕ ತರಬೇತಿ) ◆ಗೋ ಆಧಾರಿತ ಕೃಷಿ ◆ಗೋ […]

Continue Reading

ಪಂಚಗವ್ಯ ಪ್ರಶಿಕ್ಷಣ-ಗಂವ್ಹಾರ

ಭಾರತೀಯ ಗೋಪರಿವಾರ-ಕರ್ನಾಟಕ ವತಿಯಿಂದ ಈ ಬಾರಿಯ ಪಂಚಗವ್ಯ ಪ್ರಶಿಕ್ಷಣವನ್ನು ಕಲಬುರಗಿ(ಗುಲ್ಬರ್ಗ) ಜಿಲ್ಲೆಯ ಜೀವರ್ಗಿ ತಾಲೂಕಿನ ಗಂವ್ಹಾರದ ಶ್ರೀತ್ರಿವಿಕ್ರಮಾನಂದ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಜನವರಿ 4ರಿಂದ 6ರವರೆಗೆ ಮೂರುದಿನಗಳ ಕಾಲ ಪಂಚಗವ್ಯ ಪ್ರಶಿಕ್ಷಣ ನಡೆಯಲಿದೆ. ಜನವರಿ 4ರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಿ ಜನವರಿ 6ರ ಸಂಜೆ 5 ಘಂಟೆಗೆ ಮುಕ್ತಾಯಗೊಳ್ಳುತ್ತದೆ. ★ಪಂಚಗವ್ಯ ಪ್ರಶಿಕ್ಷಣ-ಗಂವ್ಹಾರ ಶಿಬಿರದಲ್ಲಿ… ◆ಗೋವುಗಳ ಪರಿಚಯ ◆ಗವ್ಯ ಉತ್ಪನ್ನಗಳ ಪರಿಚಯ ◆ಗವ್ಯ ಉತ್ಪನ್ನಗಳ ತಯಾರಿಕೆ (ಮಾಹಿತಿ ಮತ್ತು ಪ್ರಾಯೋಗಿಕ ತರಬೇತಿ) ◆ಗೋ ಆಧಾರಿತ ಕೃಷಿ ◆ಗೋ ಆಧಾರಿತ […]

Continue Reading

ಶ್ರೀ ಶ್ರೀ ಯೋಗೇಶ್ವರ ಸ್ವಾಮಿಗಳು, ಶ್ರೀ ಶ್ರೀ ಯೋಗೇಶ್ವರ ಮಠ ಉತ್ತರಹಳ್ಳಿ, ಬೆಂಗಳೂರು ಇವರು ಇಂದು ಗೋಸ್ವರ್ಗಕ್ಕೆ ಭೇಟಿ ನೀಡಿ ಶ್ರೀರಾಮದೇವರಿಗೆ ಮತ್ತು ಸಪ್ತಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ಗೋವುಗಳು ಸ್ವಚ್ಛಂದವಾಗಿರುವುದನ್ನು ಕಂಡು ಸಂತಸಪಟ್ಟು ಹರಸಿದರು

Continue Reading

ಉಪ್ಪಿನಪಟ್ಟಣ-ಸಾಗರಗಳಲ್ಲಿ ಅಮೃತಪಥ

ಶ್ರೀಸಂಸ್ಥಾನದವರು ನಿರ್ದೇಶಿಸಿದಂತೆ ಗೋವುಗಳ ಪಥವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಅಮೃತಪಥ ಕಾರ್ಯಕ್ರಮ ಸಾಗರ ಮತ್ತು ಕುಮಟ ಮಂಡಲಗಳಲ್ಲಿ ನಡೆಯಿತು.   ಸಾಗರ ನಗರದ ಪೂರ್ವ ಮತ್ತು ಪಶ್ಚಿಮ ವಲಯಗಳ ನೇತೃತ್ವದಲ್ಲಿ ಶನಿವಾರ ನಗರದ ಅಗ್ರಹಾರದಲ್ಲಿ ಹಾಗೂ ಕುಮಟ ಮಂಡಲದ ಉಪ್ಪಿನಪಟ್ಟಣ ವಲಯದಲ್ಲಿ ಅಮೃತಪಥ ಕಾರ್ಯಕ್ರಮ ನಡೆಯಿತು. ಹಲವು ಮಂದಿ ಶಿಷ್ಯಭಕ್ತರು ಭಾಗವಹಿಸಿದ್ದರು.

Continue Reading