ಅಂಬಿಲಡ್ಕ ಪೂಮಾಣಿ-ಕಿನ್ನಿಮಾಣಿ ದೈವಸ್ಥಾನದ ಪರಿಸರದಲ್ಲಿ ಅರ್ಘ್ಯ : ಗೋವಿಗಾಗಿ ಮೇವು-ಮೇವಿಗಾಗಿ ನಾವು

ಗೋವು

ಸೀತಾಂಗೋಳಿ: ಪರಮಪೂಜ್ಯ ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿ‌ ನಡೆಯುತ್ತಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯ ‘ಗೋವಿಗಾಗಿ ಮೇವು-ಮೇವಿಗಾಗಿ ನಾವು’ ಯೋಜನೆಯ ಅಂಗವಾಗಿ ಗುಂಪೆವಲಯದ ಅಂಬಿಲಡ್ಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಪರಿಸರದಲ್ಲಿ ತಾ.09.01.19ರಂದು ಸೇವಾ ಅರ್ಘ್ಯ ಜರಗಿತು.

ಬಿ.ಜೆ.ಪಿ.ಕಾಸರಗೋಡು ಜಿಲ್ಲಾ ಕಾರ್ಯಕಾರೀ ಸಮಿತಿ ಸದಸ್ಯ ಪೂಕಟ್ಟೆ ಶ್ರೀ ಸುರೇಶಕುಮಾರ ಶೆಟ್ಟಿಯವರು ಧ್ವಜಾರೋಹಣ ಮಾಡಿ ಉದ್ಘಾಟಿಸಿ, 10 ಎಕರೆ ವಿಶಾಲ ಸ್ಥಳದಲ್ಲಿರುವ ಮುಳಿಹುಲ್ಲನ್ನು ಪೂರ್ಣವಾಗಿ ಕತ್ತರಿಸುವುದೇ ಕಷ್ಟ. ಅಂಥದ್ದನ್ನು ಪ್ರತ್ಯಕ್ಷವಾಗಿ ಕಾಣುವ ದೇವರಾದ ಗೋವುಗಳ ಉದರಂಭರಣಕ್ಕಾಗಿ ಮಾಡುತ್ತಿರುವುದು ಪುಣ್ಯಕಾರ್ಯ. ಕಿದೂರು ಮಹಾದೇವರ, ಇಲ್ಲಿನ ದೈವಗಳ ಮತ್ತು ಗೋಮಾತೆಯ ಆಶೀರ್ವಾದ ನಮಗೆಲ್ಲರಿಗೂ ಸಿಗಲಿ, ಎಂದರು.

ನವಸೇವಾವೃಂದದ ಶ್ರೀ ಭೋಜರಾಜ, ಶ್ರೀ ನರಹರಿ ಪಾಲೆಚ್ಚಾರು, ಶ್ರೀ ಬಜಪ್ಪೆ ಚಂದ್ರಶೇಖರ ಭಟ್ಟ, ಶ್ರೀ ವೆಂಕಟ್ರಮಣ ಆಚಾರ್ಯ ಇವರು ಶುಭಹಾರೈಸಿದರು.
ಗುಂಪೆ ವಲಯದ ಅಧ್ಯಕ್ಷ ಅಮ್ಮಂಕಲ್ಲು ಶ್ರೀ ರಾಮ ಭಟ್ಟರು ಸ್ವಾಗತಿಸಿ, ಕಾರ್ಯದರ್ಶಿ ಬಜಪ್ಪೆ ಶ್ರೀ ಸುಬ್ರಹ್ಮಣ್ಯ ಭಟ್ಟರು ವಂದಿಸಿದರು.

ಕಾಮದುಘಾ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಈಶ್ವರೀ ಬೇರ್ಕಡವು, ಶ್ರೀ ಶ್ಯಾಮ ಭಟ್ ಬೇರ್ಕಡವು, ಮುಳ್ಳೇರಿಯಾ ಮಂಡಲದ ವಿದ್ಯಾರ್ಥಿವಾಹಿನಿ ಪ್ರಧಾನ ಶ್ರೀ ಎಡಕ್ಕಾನ ಕೇಶವಪ್ರಸಾದ, ಜೀವಿಕಾವಿಭಾಗದ ಪ್ರಧಾನ ಹಿಳ್ಳೆಮನೆ ಶ್ರೀ ಸತ್ಯಶಂಕರಭಟ್ಟ, ಮಾತೃ ವಿಭಾಗದ ಶ್ರೀಮತಿ ಕುಸುಮಾ ಪೆರ್ಮುಖ, ಕುಂಬಳೆವಲಯದ ಅಧ್ಯಕ್ಷ ಶ್ರೀ ಬಾಲಕೃಷ್ಣ ಶರ್ಮಾ, ಸೇವಾವಿಭಾಗದ ಶ್ರೀ ಸೂರ್ಯನಾರಾಯಣ ಭಟ್, ಮೇವುಬ್ಯಾಂಕ್ ಸಂಚಾಲಕಿ ಡಾ.ಮಾಲತಿ ಪ್ರಕಾಶ, ಪೆರಡಾಲ ವಲಯ ಅಧ್ಯಕ್ಷ ಶ್ರೀ ಹರಿಪ್ರಸಾದ ಪೆರ್ಮುಖ, ಗುಂಪೆಯ ಶ್ರೀ ಶಂಕರನಾರಾಯಣ ಭಟ್, ವಿವಿಧ ವಲಯ ಪದಾಧಿಕಾರಿಗಳು ಮತ್ತು ಗೋಪ್ರೇಮಿಗಳು ಶ್ರಮದಾನದಲ್ಲಿ ಭಾಗವಹಿಸಿದರು. ಅಂಬಿಲಡ್ಕದ ನವಸೇವಾವೃಂದ ಹಾಗೂ ಅದರ ಮಹಿಳಾಘಟಕಗಳು ಈ ಸೇವಾಕಾರ್ಯದಲ್ಲಿ ಸಹಕರಿಸಿದವು.

ಶ್ರೀ ಶಂಭು ಹೆಬ್ಬಾರ ಶ್ರಾವಣಕೆರೆ ಮಠ ಇವರು ಭೋಜನ ವ್ಯವಸ್ಥೆ ಹಾಗೂ ಮಾತೃ ವಿಭಾಗದವರು ಪಾನೀಯದ ವ್ಯವಸ್ಥೆ ಮಾಡಿದರು.

ಇದೇ ಸಂದರ್ಭದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಯಾಗಶಾಲೆಯ ನಿರ್ಮಾಣಕ್ಕಾಗಿಯೂ ಮುಳಿಹುಲ್ಲನ್ನು ಸಾಗಿಸಲಾಯಿತು.

 

Leave a Reply

Your email address will not be published. Required fields are marked *