“ನೀನಾರಿಗಾದೆಯೋ ಎಲೆ ಮಾನವ” : ರಾಮಕೃಷ್ಣ ಹೆಗಡೆ ಕಲ್ಲಬ್ಬೆ

ಲೇಖನ

 

ಗೋವಿನ ಪ್ರಸ್ತುತ ಪರಿಸ್ಥಿತಿ ನೋಡುವಾಗ, ಗೋವಿನ ಜನ್ಮ ಯಾರಿಗೂ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವ ದಿನ ಬಂದಿದೆ ಎಂದು ಅನಿಸುತ್ತದೆ. ಭಾರತ ಉದ್ದಗಲಕ್ಕೂ ಎಲ್ಲಿ ನೋಡಿದರೂ, ನಮ್ಮ ಜಗಜ್ಜನನಿ ಗೋಮಾತೆಗೆ ಚಿತ್ರಹಿಂಸೆ ಕೊಡುವಷ್ಟು ಬೇರೆಯಾವ ಜೀವಿಗೂ ಕೊಡುವುದಿಲ್ಲವೇನೋ, ಅಷ್ಟು ಕ್ರೌರ್ಯದಿಂದ ಗೋಮಾತೆಯನ್ನು ನಡೆಸಿಕೊಳ್ಳಲಾಗುತ್ತಿದೆ.
ಇದಕ್ಕೆ ಕಾರಣ ಗೋವುಗಳ‌ ಮೇಲಿನ ಕ್ರೌರ್ಯವನ್ನು ನೋಡಿಯೂ ನೋಡದಂತಿರುವ ಬಹುತೇಕ ಭಾರತೀಯರ ಮೌನ. ದಿನದಿಂದ ದಿನಕ್ಕೆ ಗೋಮಾತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ದುಡ್ಡು ಕೊಟ್ಟರೆ ನಮಗೆ ಏನು ಬೇಕೋ ಅದು ಸಿಗುತ್ತದೆ ಎನ್ನುವ ಪಟ್ಟಣ ವಾಸಿಗಳು ಒಂದು ಕಡೆಯಾದರೆ, ಗೋವನ್ನು ಸಾಕಿ ಯಾಕೆ ಕೆಲಸ ಜಾಸ್ತಿ ಮಾಡಿಕೊಳ್ಳಬೇಕು, ಅದೇ ಸುಲಭವಾಗಿ ಹಣ ಮಾಡಬೇಕು ಎನ್ನುವ ರೈತರು ಒಂದು ಕಡೆ. ಹೀಗಾಗಿ, ಗೋವನ್ನು ಸಾಕಲು ಹೆಚ್ಚಿನ ಜನ ಮುಂದೆ ಬರದಿರುವುದು ಶೋಚನೀಯ.

ಗೋವಿಲ್ಲದೆ ಜನರು ಬದುಕಲು ಸಾಧ್ಯವೇ? ಇದನ್ನೇ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳವರು ತಮ್ಮ ಪೀಠಾರೋಹಣದ ದಿನದಿಂದಲೂ ಇಲ್ಲಿಯವರೆಗೂ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಲೇ ಬಂದಿದ್ದಾರೆ. ಗೋವಿನ ಮಹತ್ವ ಸಾರುವ ಹತ್ತು ಹಲವು ಕಾರ್ಯಕ್ರಮವನ್ನು ಏರ್ಪಡಿಸಿ, ಭಾರತದಲ್ಲೆಲ್ಲಾ ಸಂಚರಿಸಿದ ವಿಶ್ವಮಂಗಲ ಗೋಗ್ರಾಮ ಯಾತ್ರೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ತದನಂತರ, ಶ್ರೀಗುರುಗಳು ಶಿವಮೊಗ್ಗದ ಹೊಸನಗರದಲ್ಲಿ ವಿಶ್ವ ಗೋಸಮ್ಮೇಳನ ಸಂಘಟಿಸಿ, ಗೋವಿನ ಮಹತ್ವವನ್ನು ವಿಶ್ವದೆಲ್ಲೆಡೆ ಕೋಟ್ಯಾಂತರ ಜನರಿಗೆ ತಲುಪುವಂತೆ ಮಾಡಿದರು. ಇತ್ತೀಚೆಗೆ ಎರಡೇ ವರ್ಷಗಳ ಹಿಂದೆ ನಡೆದ “ಮಂಗಲ ಗೋಯಾತ್ರೆ” ಅತ್ಯದ್ಭುತ ಯಶಸ್ಸು ಕಂಡಿತು.

ಮೆಕೆನೈಸ್ಡ್ ಕಸಾಯಿಕಾನೆಗಳು ದೇಶದಲ್ಲೆಡೆ ತಲೆಎತ್ತಿ ನಿಲ್ಲಲು ಪ್ರಾರಂಭಿಸಿದೆ. ಇಲ್ಲಿ, ಗೋವಿಗೆ ಕೊಡುವ ಚಿಂತ್ರಹಿಂಸೆ ನೆನೆಸಿಕೊಂಡರೇ ಮೈನಡುಕ ಬರುತ್ತದೆ.

ಗೋವನ್ನು ಎರಡುದಿನ ಉಪವಾಸವಿಟ್ಟು, ಸಾಲಲ್ಲಿ ನಿಲ್ಲಿಸಿ ನೂರೂ ಡಿಗ್ರಿಗಿಂತಲೂ ಮಿಗಿಲಾಗಿರುವ ಬಿಸಿಬಿಸಿ ನೀರನ್ನು ಮೈ ಮೇಲೆ ಸುರಿಯಲಾಗುತ್ತದೆ, ಕಾಲುಗಳನ್ನು ಮೇಲೆ ಕಟ್ಟಲಾಗುತ್ತದೆ. ತದನಂತರ ಕತ್ತನ್ನು ಸಣ್ಣ ಪ್ರಮಾಣದಲ್ಲಿ ಸೀಳಿ, ರಕ್ತ ಸೋಸಿಹೋಗುವಂತೆ ಮಾಡಲಾಗುತ್ತದೆ, ಸುಮಾರು ಹನ್ನೆರಡುಘಂಟೆ ಆದಮೇಲೆ, ಚರ್ಮವನ್ನು ಜೀವ ಇರುವಾಗಲೇ ಕೀಳಲಾಗುತ್ತದೆ, ಗೋವು ವಿಲವಿಲ ಒದ್ದಾಡಿ ಒದ್ದಾಡಿ ಅಂತೂ ನಲವತ್ತೆಂಟು ಘಂಟೆಯಲ್ಲಿ ಪ್ರಾಣ ಬಿಡುತ್ತದೆ.
ಇದನ್ನು ಕೇಳಿದರೇ ದುಃಖ ಉಮ್ಮಳಿಸಿ ಬರುತ್ತದೆ, ನಾವೂ ಇದನ್ನು ತಡೆಯಲು ಏನೂ ಮಾಡಲಾಗುತ್ತಿಲ್ಲವಲ್ಲ ಅನ್ನುವ ಅಸಾಯಕತೆ ಮನೆಮಾಡುತ್ತಿದೆ.

Sir Paul McCartney ಹೇಳುತ್ತಾರೆ ” If Slaughterhouses had Glass Walls, Everyone Would be Vegetarian ”

ಇದೆಲ್ಲದರ ನಡುವೆ, ಈ ಪರಿಸ್ಥಿತಿಯ ಲಾಭ ಪಡೆದಿರುವವರು ಗೋಹಂತಕರು, ಕಸಾಯಿಖಾನೆಯವರು. ನಮ್ಮ ಈ ನಿರ್ಲಕ್ಷ್ಯದಿಂದಲೇ ಅವರಿಗೆ ಬೇಕಾದಷ್ಟು ಗೋವು ಕಡಿಯಲು ಸಿಗುತ್ತಿರುವುದು.

ಈ ಮಹಾ ಕ್ರೌರ್ಯ ಗೋಹತ್ಯೆಯನ್ನು ತಡೆಯಲು ಒಂದು ಸಣ್ಣ ಆಶಾಕಿರಣವೇ *ಅಭಯಾಕ್ಷರ*

ಕಳೆದ ವರ್ಷ, ಶ್ರೀಗುರುಗಳು ರಾಜ್ಯದೆಲ್ಲೆಡೆ ‘ಅಭಯ ಗೋಯಾತ್ರೆ’ ಆಯೋಜಿಸಿ, ಕೇಂದ್ರ ಸರಕಾರಕ್ಕೂ ಮತ್ತು ರಾಜ್ಯ ಸರಕಾರಕ್ಕೂ, ಗೋಪ್ರೇಮಿಗಳಿಂದ ಹಕ್ಕೊತ್ತಾಯದ ಗೋ ಹತ್ಯಾ ನಿಷೇಧಿಸಿ ಎಂಬ ನೂತನ “ಅಭಯಾಕ್ಷರ” ಅರ್ಜಿಗಳನ್ನು ಸಂಗ್ರಹಿಸಲಾಯಿತು. ಈ ಅಭಿಯಾನದಲ್ಲಿ ಒಂದೂ ಕೋಟಿಗೂ ಮೀರಿ ಜನರು ಅಭಯಾಕ್ಷರ ಅರ್ಜಿಯನ್ನು ಸಮರ್ಪಿಸಿದರು. ನಾಲ್ಕು ಸಾವಿರಕ್ಕೂ ಮೀರಿ ಗೋಪ್ರೇಮಿಗಳು, ಅಭಯಾಕ್ಷರವನ್ನು ಸ್ವರಕ್ತದಲ್ಲಿ ಬರೆದು ಸಮರ್ಪಿಸಿದರು.

ಅಭಯಾಕ್ಷರದ ಹಕ್ಕೊತ್ತಾಯ ಯಾಕೆ ಬೇಕು ಎಂದರೆ, ಒಂದೊಮ್ಮೆ ಸರಕಾರ ಗೋಹತ್ಯೆ ನಿಷೇದ ಮಾಡದಿದ್ದಲ್ಲಿ ಕಟುಕರು ಭಾರತದಲ್ಲಿ ಇನ್ನು ಕೆಲವೇ ಕೆಲವು ವರ್ಷದಲ್ಲಿ ಭಾರತೀಯ ಗೋವಂಶದ ಗೋವುಗಳನ್ನು ಭಾರತದ ಪುಟದಿಂದಲೇ ಅಳಿಸಿಬಿಡುತ್ತಾರೆ. ರಸ್ತೆಯಲ್ಲಿ ಮಲಗಿದ, ರಸ್ತೆಯಲ್ಲಿ ಓಡಾಡುವ ಗೋವುಗಳನ್ನು ಮತ್ತು ನಮ್ಮ ಕಣ್ಣೆದುರಿಗೇ ನಮ್ಮ ಕೊಟ್ಟಿಗೆಯಿಂದಲೇ ಗೋವುಗಳ್ಳನ್ನು ರಾಜಾರೋಷವಾಗಿ ಕದ್ದು ಒಯ್ಯಲಾಗುತ್ತಿದೆ. ಈ ತರಹದ ಪರಿಸ್ಥಿತಿಗೆ ಕಡಿವಾಣ ಹಾಕದಿದ್ದಲ್ಲಿ, ನಾವು ಮುಂದೊಂದು ದಿನ, ಚಿತ್ರಪಠದಲ್ಲಸ್ಟೇ ಗೋವನ್ನು ನೋಡಬೇಕಾಗುತ್ತದೆ.

ನಮಗೆ ಸಕಲವನ್ನೂ ಕೊಡುವ ಗೋವಿನ ಋಣ ತೀರಿಸಲು ಮತ್ತು ಗೋವಂಶವನ್ನು ರಕ್ಷಿಸಲು, ಈ ಅಭಯಾಕ್ಷರ ಆಂದೋಲನಕ್ಕೆ ಕಳೆದ ವರುಷ ಶ್ರೀಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಕರೆಕೊಟ್ಟಿದ್ದರು. ಸಮರ್ಪಿತವಾದ ಎಲ್ಲ ಅಭಯಾಕ್ಷರ ಅರ್ಜಿಗಳನ್ನು ಜನೆವರಿ ೨೧, ೨೦೧೯ರಂದು ಕೇಂದ್ರ ಸರಕಾರಕ್ಕೂ ಮತ್ತು ರಾಜ್ಯ ಸರಕಾರಕ್ಕೂ ಸಲ್ಲಿಸಲಾಗುವುದು. ಬನ್ನಿ ನಮ್ಮ ಜೊತೆಗೂಡಿ, “ನೀನಾರಿಗಾದೆಯೋ ಎಲೆ ಮಾನವ” ಎಂದು ಗೋವು ಕೇಳುವ ಮುನ್ನ, ಗೋ ಹತ್ಯಾ ನಿಷೇಧ ಆಗಲೇಬೇಕು ಎಂಬ ನಮ್ಮ ಹಕ್ಕೊತ್ತಾಯವನ್ನು ಮಂಡಿಸೋಣ.

🙏 *ವಂದೇ ಗೋಮಾತರಮ್* 🙏

Author Details


Srimukha

Leave a Reply

Your email address will not be published. Required fields are marked *