ವಿಲಂಬನಾಮ ಸಂವತ್ಸರ / ಉತ್ತರಾಯಣ /
ಹೇಮಂತ ಋತು / ಪೌಷ ಮಾಸ /
ಶುಕ್ಲಪಕ್ಷ / ದ್ವಾದಶಿ ತಿಥಿ
ಶುಕ್ರವಾರ / ರೋಹಿಣೀ ನಕ್ಷತ್ರ
ದಿನಾಂಕ. 18.01.2019
ಮೇಷ
ವ್ಯಾವಹಾರಿಕ ಹಿನ್ನಡೆ. ಹಣಕಾಸಿನ ಒತ್ತಡ. ಭೂಸಂಬಂಧಿ ತಕರಾರು ಬರುವ ಸಾಧ್ಯತೆ. ಅಲರ್ಜಿಗೆ ಸಂಬಂಧಿಸಿದ ತೊಂದರೆ. ದಾಂಪತ್ಯದಲ್ಲಿ ಕಲಹ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ.
ಪರಿಹಾರ
ದೇವಿಯ ಆರಾದನೆಯಿಂದ ಶುಭ.
ಜಪಿಸಲು
ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ ||
ವೃಷಭ
ಮನಃಶಾಂತಿಯನ್ನು ಪಡೆಯುವಿರಿ. ಸೋದರರಿಂದ ಸಹಕಾರ.. ವಿವಾಹಾದಿ ಭಾಗ್ಯಗಳು ಒದಗುವುದು. ದಾಂಪತ್ಯದಲ್ಲಿ ಸಣ್ಣ ಕಲಹವಿದ್ದರೂ ಹೊಂದಾಣಿಕೆಯಾಗುವುದು. ಉದ್ಯೋಗದಲ್ಲಿ ಕಿರುಕುಳ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫಲತೆ. ಉದಾಸೀನತೆ ಬಿಡಬೇಕು.
ಪರಿಹಾರ
ದೇವಿಯ ಆರಾಧನೆಯಿಂದ ಶುಭ.
ಜಪಿಸಲು
ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಮಿಥುನ
ಮಾನಸಿಕವಾದ ತೊಂದರೆಗಳು. ಆಲಸ್ಯವು ನಿಮ್ಮನ್ನು ಹಿನ್ನಡೆಯುವಂತೆ ಮಾಡುವುದು. ವ್ಯವಹಾರ ಕರ್ಮಗಳಲ್ಲಿ ಉದಾಸೀನತೆ ಬಿಟ್ಟು ಮುನ್ನಡೆದಲ್ಲಿ ಸಾಫಲ್ಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ದಾಂಪತ್ಯದಲ್ಲಿ ಕಲಹ. ರಕ್ತದ ಒತ್ತಡ ಬರುವ ಸಾಧ್ಯತೆ.
ಪರಿಹಾರ
ಶ್ರೀರಾಮನ ಆರಾಧನೆಯಿಂದ ಶುಭ.
ಜಪಿಸಲು
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ||
ಕರ್ಕಾಟಕ
ವ್ಯಾವಹಾರಿಕ ಒತ್ತಡಗಳು. ಮಾನಸಿಕ ಕಿರಿಕಿರಿ. ಆರೋಗ್ಯದಲ್ಲಿ ಎಲುಬಿಗೆ ಸಂಬಂಧಿಸಿದ ತೊಂದರೆ. ಮೈಕೈಗಂಟು ನೋವು. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ. ವೃಥಾ ಆರೋಪ ಬರುವುದು.
ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ದೇವೀ ಆರಾಧನೆಯಿಂದ ಶುಭ.
ಜಪಿಸಲು
ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ||
ಸಿಂಹ
ಉದ್ಯೋಗದಲ್ಲಿ ಮುನ್ನಡೆ. ಕೋಪೋದ್ರಿಕ್ತವಾಗದಿರಿ. ಹೊಟ್ಟೆಗೆ ಸಂಬಂಧಿಸಿದ ಕಾಯಲೆಗಳು ಬರುವುದು. ದಾಂಪತ್ಯದಲ್ಲಿ ಕಲಹ. ವಿದ್ಯಾರ್ಥಿಗಳು ಉದಾಸೀನತೆಯನ್ನು ಬದಿಗೊತ್ತಿ ಪರಿಶ್ರಮಿಸಬೇಕು. ವ್ಯಾವಹಾರಿಕ ವಿಷಯದಲ್ಲಿ ಮೋಸ ಹೋಗುವಿರಿ.
ಪರಿಹಾರ
ಶಿವನ ಆರಾಧನೆ ಅಗತ್ಯ. ಶಿವದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆ, ಲಿಂಗಾಷ್ಟಕ ಶ್ಲೋಕವನ್ನು ಪಠಿಸುವುದರಿಂದ ಶುಭ.
ಜಪಿಸಲು
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ / ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ /
.
ಕನ್ಯಾ
ಉದ್ಯೋಗದಲ್ಲಿ ನಿಧಾನಗತಿಯ ಮುನ್ನಡೆ. ಮಾನಸಿಕವಾಗಿ ತೊಂದರೆ ಅನುಭವಿಸುವಿರಿ. ತಾಯಿಗೆ ಅನಾರೋಗ್ಯ. ಸಹೋದರರಲ್ಲಿ ಕಲಹ. ಪ್ರಯಾಣದಲ್ಲಿ ವಿಘ್ನ. ವಿದ್ಯಾರ್ಥಿಗಳಿಗೆ ಪರರ ಸಹಾಯದಿಂದ ಮುನ್ನಡೆ.
ಪರಿಹಾರ
ಶ್ರೀರಾಮದೇವರ ಆರಾಧನೆಯಿಂದ ಶುಭ.
ಜಪಿಸಲು
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ|
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||
ತುಲಾ
ಉದ್ಯೋಗ ವ್ಯವಹಾರದಲ್ಲಿ ಕಿರಿಕಿರಿ. ಹಣಕಾಸಿನ ವ್ಯವಹಾರದಲ್ಲಿ ತೊಂದರೆ, ಸಾಲಗಳು ಆಗುವ ಸಾಧ್ಯತೆ. ವಾಹನ ಓಡಾಟದಲ್ಲಿ ಜಾಗರೂಕರಾಗಿರಬೇಕು. ಮಾನಸಿಕ ಒತ್ತಡ. ರಕ್ತಸಂಬಂಧಿ, ಉದರಸಂಬಂಧಿ ತೊಂದರೆ ಬರುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಯತ್ನ ಅತ್ಯಗತ್ಯ.
ಪರಿಹಾರ
ದುರ್ಗಾದೇವಿಯ ಶ್ಲೋಕ ಪಠಿಸುವುದರಿಂದ ಶುಭ.
ಜಪಿಸಲು
ಸರ್ವಸ್ವರೂಪೇ ಸರ್ವೇಶೀ ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇದೇವಿ ನಮೋಸ್ತುತೇ||
ವೃಶ್ಚಿಕ
ಉದ್ಯೋಗ ವ್ಯವಹಾರದಲ್ಲಿ ಇನ್ನೊಬ್ಬರ ಸಹಾಯವನ್ನು ಪಡೆಯುವಿರಿ. ಹಣಕಾಸಿನಲ್ಲಿತೊಂದರೆ. ದಾಂಪತ್ಯಸುಖ ಪಡೆಯುವಿರಿ. ವಿದ್ಯಾರ್ಥಿಗಳು ಆಲಸ್ಯದಿಂದ ಹಿನ್ನಡೆ ಹೊಂದುವರು. ಕೋಪವನ್ನು ಕಡಿಮೆ ಮಾಡಬೇಕು. ರಕ್ತಸಂಬಂಧಿ, ಪಿತ್ತಸಂಬಂಧಿ ತೊಂದರೆ ಬರುವುದು.
ಪರಿಹಾರ
ದೇವಿಯ ಆರಾದನೆಯಿಂದ ಶುಭ.
ಜಪಿಸಲು
ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ||
ಧನು
ವ್ಯವಹಾರ ಉದ್ಯೋಗದಲ್ಲಿ ಹಿನ್ನಡೆ. ಹಣಕಾಸಿನ ವಿಚಾರದಲ್ಲಿ ತೊಂದರೆ. ಮಾನಸಿಕ ಕಿರಿಕಿರಿ. ಅಲರ್ಜಿ ಮುಂತಾದ ಕಾಯಿಲೆಗಳು ಬರುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಪ್ರಯತ್ನದಿಂದ ಸಾಫಲ್ಯ.
ಪರಿಹಾರ
ಕುಲದೇವತಾ ಆರಾಧನೆ ಅಗತ್ಯ. ವಿಷ್ಣುಸಹಸ್ರನಾಮ ಪಾರಾಯಣ.
ಜಪಿಸಲು
ಶ್ರೀಕೇಶವಾಯ ನಮಃ / ಶ್ರೀನಾರಾಯಣಾಯ ನಮಃ / ಶ್ರೀಮಾಧವಾಯ ನಮಃ / ಶ್ರೀಗೋವಿಂದಾಯ ನಮಃ / ಶ್ರೀವಿಷ್ಣವೇ ನಮಃ / ಶ್ರೀಮಧುಸೂದನಾಯ ನಮಃ / ಶ್ರೀತ್ರಿವಿಕ್ರಮಾಯ ನಮಃ / ಶ್ರೀವಾಮನಾಯ ನಮಃ / ಶ್ರೀಶ್ರೀಧರಾಯ ನಮಃ / ಶ್ರೀಹೃಷಿಕೇಶಾಯ ನಮಃ / ಶ್ರೀಪದ್ಮನಾಭಾಯ ನಮಃ / ಶ್ರೀದಾಮೋದರಾಯ ನಮಃ /
ಮಕರ
ಉದ್ಯೋಗ ವ್ಯವಹಾರದಲ್ಲಿ ಹಿನ್ನಡೆ. ಹಣಕಾಸಿನ ವಿಚಾರದಲ್ಲಿ ತೊಂದರೆ. ಒತ್ತಡ, ಮಾನಸಿಕವಾಗಿ ತೊಂದರೆ. ದಾಂಪತ್ಯದಲ್ಲಿ ಕಿರಿಕಿರಿ. ಅಲರ್ಜಿ ಚರ್ಮದ ತೊಂದರೆ ಬರುವ ಸಾಧ್ಯತೆ. ಪ್ರಯಾಣದಲ್ಲಿ ವಿಘ್ನ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಪರಿಹಾರ
ಶಿವ ದೇವಸ್ಥಾನ ದರ್ಶನ, ರುಧ್ರಾಭಿಷೇಕ, ಕುಲದೇವತಾರಾಧನೆಯಿಂದ ಶುಭ.
ಜಪಿಸಲು
ಶ್ರೀಮಹಾದೇವಾಯ ನಮಃ / ಶ್ರೀಮಹೇಶ್ವರಾಯ ನಮಃ / ಶ್ರೀಶಂಕರಾಯ ನಮಃ / ಶ್ರೀವೃಷಭಧ್ವಜಾಯ ನಮಃ / ಶ್ರೀಕೃತ್ತಿವಾಸಸೇ ನಮಃ / ಶ್ರೀಕಾಮಾಂಗನಾಶನಾಯ ನಮಃ / ಶ್ರೀದೇವದೇವೇಶಾಯ ನಮಃ / ಶ್ರೀಶ್ರೀಕಂಠಾಯ ನಮಃ / ಶ್ರೀಹರಾಯ ನಮಃ / ಶ್ರೀಪಾರ್ವತೀಪತಯೇ ನಮಃ / ಶ್ರೀರುದ್ರಾಯ ನಮಃ / ಶ್ರೀಶಿವಾಯ ನಮಃ /
ಕುಂಭ
ಉದ್ಯೋಗ ವ್ಯವಹಾರದಲ್ಲಿ ಮುನ್ನಡೆ. ಹೊಸತನ ಬರುವುದು. ಹಣಕಾಸಿನ ವ್ಯವಹಾರದಲ್ಲಿ ತಟಸ್ಥ. ತಾಯಿಯ ಆರೋಗ್ಯದಲ್ಲಿ ಏರುಪೇರು. ಮಾನಸಿಕ ತೊಂದರೆ. ಆರೋಗ್ಯ ತೊಂದರೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ವಿಘ್ನ. ದಾಂಪತ್ಯ ಕಲಹ.
ಪರಿಹಾರ
ಶಿವದೇವಸ್ಥಾನ ದರ್ಶನ, ರುಧ್ರಾಭಿಷೇಕ ಸೇವೆ, ಕುಲದೇವತಾ ಆರಾಧನೆಯಿಂದ ಶುಭ.
ಮೀನ
ಉದ್ಯೋಗವ್ಯವಹಾರ ಕ್ಷೇತ್ರದಲ್ಲಿ ಹಿನ್ನಡೆ. ಮಾನಸಿಕ ಕಿರಿಕಿರಿ. ಉದಾಸೀನತೆಯಿಂದ ಅವಕಾಶವನ್ನು ಕಳೆದುಕೊಳ್ಳುವಿರಿ. ದಾಂಪತ್ಯದಲ್ಲಿ ಕಲಹ. ಉದರ ಸಂಬಂಧಿ ಕಾಯಲೆಗಳು ಬರುವುದು. ಕೋಪದಿಂದ ಸಮಾಜವನ್ನು ದೂರ ಮಾಡದಿರಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಉನ್ನತ ಸ್ಥಾನ ಲಭ್ಯ.
ಪರಿಹಾರ
ಶ್ರೀಮಹಾವಿಷ್ಣುದೇವರ ಆರಾಧನೆಯಿಂದ ಶುಭ.
ಜಪಿಸಲು
ಪದ್ಮಪತ್ರ ವಿಶಾಲಾಕ್ಷ ಪದ್ಮನಾಭ ಸುರೋತ್ತಮ | ಭಕ್ತಾನಾಮಾನುರಕ್ತಾನಾಂ ತ್ರಾತಾ ಭವ ಜನಾರ್ದನ||
ವಿ. ಸೂ. : ಮೇಲೆ ಕೊಟ್ಟ ಪರಿಹಾರ ಶ್ಲೋಕವನ್ನು ಸ್ನಾನದ ಅನಂತರ ಶುಚಿಯಾಗಿ ದೇವರ ಮುಂದೆ ದೀಪ ಹಚ್ಚಿ ನಿರ್ಮಲ ಮನಸ್ಸಿನಿಂದ ೪೮ ಸಲ ಪಠಿಸಬೇಕು.

