|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಆರೋಗ್ಯ ತಪಾಸಣಾ ಶಿಬಿರ

ಅಶೋಕೆ: ಅನ್ನಬ್ರಹ್ಮ ಚಾತುರ್ಮಾಸ್ಯದ ಸಂದರ್ಭದಲ್ಲಿ ‘ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಕಾರ್ಯಕ್ರಮ’ ನಾಲ್ಕು ದಿನಗಳ ಕಾಲ ನಡೆಯಿತು.

ಮಂಗಳೂರಿನ ನಿಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆ, ಶ್ರೀರಾಮಚಂದ್ರಾಪುರ ಮಠದ ಶಾಸನತಂತ್ರದ ಸೇವಾಖಂಡದ ಯೋಗಕ್ಷೇಮ ವಿಭಾಗ ಹಾಗೂ ಹವ್ಯಕ ಮಹಾಮಂಡಲದ ಸಹಾಯ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಅಶೋಕೆಯಲ್ಲಿ ಶ್ರಾವಣ ಕೃಷ್ಣ ದ್ವಾದಶಿಯಿಂದ ಅಮಾವಾಸ್ಯೆಯವರೆಗೆ (08-09-2026 ರಿಂದ 11-09-2026) ನಡೆದ ಶಿಬಿರವನ್ನು ದೀಪಪ್ರಜ್ವನಲದ ಮೂಲಕ ಉದ್ಘಾಟಿಸಲಾಯಿತು.

ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್, ಅನ್ನಬ್ರಹ್ಮ ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ ಶಾಸ್ತ್ರಿ, ಸತೀಶ್ ಭಟ್, ಶ್ರೀವತ್ಸ ಭೀಮನಕೋಣೆ, ಎಮ್. ಜಿ. ಹೆಗಡೆ, ಜಿ. ವಿ. ಹೆಗಡೆ ಮುಗ್ವ, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಾಲ್ಕು ದಿನಗಳ ಶಿಬಿರದ ಫಲಾನುಭವವನ್ನು ಐದು ನೂರಕ್ಕೂ ಅಧಿಕ ಜನ ಪಡೆದರು.