ಸದಾ ವ್ಯಷ್ಟಿಯ, ಸಮಷ್ಟಿಯ ಒಳಿತನ್ನಷ್ಟೇ ಬಯಸುವ, ಮೊದಲ ಪ್ರಜೆಯಿಂದ ಹಿಡಿದು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಸಮಾಭಾವದಿಂದ- ವಾತ್ಸಲ್ಯದಿಂದ “ಒಳಿತಾಗಲಿ” ಎಂದು ಹರಸುವ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಮೇಲೆ ಅಂಥ ಹೀನಾಯವಾದ, ಕಲ್ಪಿಸಲೂ ಹೇಸುವ, ಅಲ್ಲದ, ನಿಲ್ಲದ, ದಾನವರಿಂದಲೂ ಆಗದ ಮಿಥ್ಯಾಪವಾದ ಹಾಕಿದಿರಿ! ಯಾಕೆ?
ಸಮಾಜೋದ್ಧರಣವೇ ಉಸಿರಾಗಿರುವ ಆ ಶಕ್ತಿಯನ್ನು ನೋಯಿಸಿದ “ದುರ್ಗುಣಿ- ಗುರುದ್ರೋಹಿಗಳೇ”… ಏನು ಸಾಧಿಸಿದಿರಿ? ದುಷ್ಟರಾಗಿಬಿಟ್ಟಿರಿ! ಯಾಕೆ?
ಯಾವುದರಲ್ಲೂ ಗೆಲ್ಲದೇ ಹೆಜ್ಜೆಹೆಜ್ಜೆಗೂ ಸೋಲು ಕಂಡಾಗಲೂ ಅಂತರಾತ್ಮ ಎಚ್ಚರಿಸಲಿಲ್ಲವೇ! ಯಾಕೆ?
ಅದೆಷ್ಟು ಷಡ್ಯಂತ್ರಗಳು!ಕುತಂತ್ರಗಳು!! ಅದೆಷ್ಟು ಅಪವಾದಗಳು! ನಕಲಿ ಸಿಡಿಗಳು! ವಿರೋಧೀ ಸಭೆಗಳು!! ವಿಚಾರಹೀನ ನಡೆವಳಿಕೆಗಳು!! ಯಾಕೆ?
ಯಾರ ಮೆಚ್ಚಿಸಲು? ಯಾರ ಹೆಚ್ಚಿಸಲು? ಯಾರ ಬೇಳೆ ಬೇಯಿಸಿಕೊಳ್ಳಲು? ಸ್ವಾರ್ಥವೂ ಇಲ್ಲದ, ಪರಾರ್ಥವೂ ಅಲ್ಲದ ಸಂಚಿಗೆ ಮೂಲವಾಗಿಬಿಟ್ಟಿರಿ! ಯಾಕೆ?
ಮನೆಯಲ್ಲಿ ಗೌರವದ ಗೋವಾಗಿ ಇರುವ ಬದಲು ಯಾರದೋ ಮನೆಯ ನಾಯಿಯಾಗಲೂ ಹಿಂಜರಿಯಲಿಲ್ಲವಲ್ಲ! ಯಾಕೆ?
ನಿಮ್ಮ ಕೋಳಿ ಕೂಗಿದರಷ್ಟೇ ಬೆಳಗಾಗುತ್ತದೆಂದುಕೊಂಡಿರಲ್ಲ ! ಯಾಕೆ?
ನಿಮ್ಮ ಅಸತ್ಯ ಗೆಲ್ಲುವುದೆಂದುಕೊಂಡಿರಲ್ಲ! ಯಾಕೆ?
ನಿಮ್ಮ ಮತಿಹೀನ ವ್ಯವಹಾರದಿಂದ, ೧೩೦೦ ವರ್ಷಕ್ಕೂ ಮಿಗಿಲಾದ ಶ್ರೇಷ್ಠ ಇತಿಹಾಸವಿರುವ, ಅವಿಚ್ಛಿನ್ನತೆಯಿರುವ, ಶ್ರೀಶಂಕರರೇ ಪೀಠದಲಿ ಇರುವ ಶ್ರೀಸಂಸ್ಥಾನ ಶ್ರೀರಾಮಚಂದ್ರಾಪುರಪೀಠದ ಒಂದು ಕೂದಲೂ ಕೊಂಕದು ಎಂದು ತಿಳಿಯಲಿಲ್ಲವಲ್ಲ! ಯಾಕೆ?
ಬೇರೆಯವರು ತೊಂದರೆ ಕೊಟ್ಟಾಗ ರಕ್ಷಿಸಿಕೊಳ್ಳುವುದು ಸಹಜ! ಆದರೆ ನಿಮಗೆ ನಾವ್ಯಾರೂ ತೊಂದರೆ ಕೊಡಲು ಬಂದಿರಲಿಲ್ಲ ಅಲ್ಲವೇ? ನಿರಪರಾಧಿಗೆ ನೋವುಂಟುಮಾಡುವ ಗುರುದ್ರೋಹಿಗಳೇ… ಅದರ ಪರಿಣಾಮ ಈ ಜನ್ಮದಲ್ಲೇ ತಾವು ಎದುರಿಸುತ್ತೇವೆಂದೂ ನಿಮಗೆ ತಿಳಿಯಲಿಲ್ಲವಲ್ಲ! ಯಾಕೆ?
ಏನು ಬಳುವಳಿ ಕೊಟ್ಟಿರಿ ನಿಮ್ಮ ಕುಲಕ್ಕೆ? ನಿಮ್ಮ ಕುಲಪುತ್ರರಿಗೆ? ನಿಮ್ಮ ಕುಲಪ್ರಸೂತರಿಗೆ? ಅದೇನು ಉಡುಗೊರೆಯಿತ್ತಿರಿ? ನಿಮ್ಮವರ ನರಕಕೆ ನೀವೇ ಕಾರಣರಾದಿರಲ್ಲ! ಯಾಕೆ?
ನಿಮ್ಮ ಹುನ್ನಾರದಿಂದ ನಿಮ್ಮ ಒಬ್ಬ ಪೀಠಾಧಿಪತಿಗಳಿಂದಲೇ ” ಪೀಠದ ಮೇಲೆ ಕುಳ್ಳಿರಿಸಿ” ಸುಳ್ಳು ಹೇಳಿಸಿದರಲ್ಲ… ಅಯ್ಯೋ.. ಯಾಕೆ?
ಪೀಠದಲ್ಲಿ ಕುಳಿತೂ ಸ್ವಂತಿಕೆ ಇಲ್ಲದೇ, ನಿಮ್ಮ ಮಾತುಗಳನ್ನು ನಂಬುವ ಮಗುಮನಸಿನ ನಿಮ್ಮ ಪೀಠಾಧಿಪತಿಗಳಿಂದಲೂ ಸಾಮಾನ್ಯರಂತೇ ಮಿಥ್ಯೆಯನಾಡಿಸಿ ಆ ಪೀಠದ, ಆ ಕಾವಿಯ ಮಹತಿಯನ್ನೇ ಕಳೆದಿರಲ್ಲ ?ಯಾಕೆ?
ನಿಮ್ಮನ್ನು ಉದ್ಧರಿಸಿ, ಸತ್ಪಥ ದರ್ಶಿಸಬೇಕಾಗಿದ್ದ ನಿಮ್ಮ ಎರಡು ಮತ್ತೊಂದು ಪೀಠಗಳ ಸ್ವಾಮಿಗಳ ಅಂತರಂಗವ ಕಲುಷಿತಗೊಳಿಸಿ, ಅವರನ್ನೂ ನಿಮ್ಮಂಥ ಸಾಮಾನ್ಯರನ್ನಾಗಿಸಿದಿರಲ್ಲ… ಸ್ವಾಮೀ… ಯಾಕೆ?
ನೂರರಲ್ಲಿ ಹದಿನೈದರಷ್ಟಿರುವ ನೀವು ತಮ್ಮಿಂದ ಏನೋ ಸಂಚು ಸಾಧನೆಯಾಗಿ, ತಮ್ಮ ದುರುದ್ದೇಶ ಈಡೇರಿಸಿಕೊಳ್ಳಲಾಗುತ್ತದೆ ಎಂದುಕೊಂಡುಬಿಟ್ಟಿರಲ್ಲ! ಯಾಕೆ?
“ಇದು ರಾಮನಾಳಿದ ನೆಲ, ಸನಾತನ ಸತ್ಯ ಉಳಿಸುವ ಜವಾಬ್ದಾರಿ ನಮ್ಮದು” ಎಂಬ ಮೂಲಮಂತ್ರವನ್ನೇ ಮರೆತಿರಲ್ಲ! ಯಾಕೆ?
!!ಕೇಳಿ!!
ಬೆಳ್ಳಗಿರುವ ಸತ್ಯವ ಕಪ್ಪಾಗಿಸಲಾಗದು!
ಶ್ರೀರಾಮನ ಅನುಗ್ರಹವಿರುವ, ಶ್ರೀಶಂಕರರ ಅವಿಚ್ಛಿನ್ನ ಪೀಠಪರಂಪರೆಯ ಗೋಕರ್ಣಮಂಡಲಾಧೀಶ್ವರರ ಶಕ್ತಿಯ ಪ್ರಭೆಯೆದುರು ನೀವೆಲ್ಲ ಯಾವ ಗಿಡದ ತೊಪ್ಪಲೂ ಅಲ್ಲ!
ರಾಮನ ಹಿಂದೆ ಇಡೀ ಅಯೋಧ್ಯೆ ಇರುವಂತೆ, ನಮ್ಮ ಗುರುವಿನ ಹೆಜ್ಜೆಯ ಗೆಜ್ಜೆಯಾಗಿ ನಾವೆಲ್ಲರೂ ಇದ್ದೇ ಇರುತ್ತೇವೆ- ಅದೆಂಥದ್ದೇ ವಿಷಮಯ ಸಂದರ್ಭದಲ್ಲೂ!
ದುರ್ಗುಣಿ- ಗುರುದ್ರೋಹಿಗಳೇ… ಗುರುವ ನರನೆಂದವಗೆ ನರಕ ಭಾಜನವಕ್ಕು ಎಂಬ ನಮ್ಮ ಹಿರಿಯರುಪದೇಶ ನಾವು ಮರೆತಿಲ್ಲ!
ನಮ್ಮ ಕುಲಕ್ಕೆ “ಸತ್ಯದ ಮಾರ್ಗದಲ್ಲಿ ನಮ್ಮ ಹಿರಿಯರು ನಡೆದಿದ್ದಾರೆ, ತಾವೂ ಅಂತೆಯೇ ಸಾಗುವಾ” ಎಂಬ ಹೆಮ್ಮೆ- ಸಮಾಧಾನ- ತೃಪ್ತಿ- ಆನಂದ- ಕೊಟ್ಟು ಹೋಗುತ್ತೇವೆ ನಾವು! ನಮ್ಮ ಹಿರಿಯರು ನಮಗೆ ಇತ್ತಂತೆ!
ಅದೆಂಥದ್ದೆ ಮಿಥ್ಯಾಪವಾದ ಬರಲಿ- ಹೆದರುವವರಲ್ಲ ನಾವು! ಯಾರೆಂದುಕೊಂಡಿರಿ ನಮ್ಮನ್ನು?ನಾವು ಶ್ರೀರಾಮಚಂದ್ರಾಪುರ ಪೀಠಾಧೀಶ್ವರರ ಶಿಷ್ಯರು!
ಗೋಕರ್ಣಮಂಡಲಾಧೀಶ್ವರಶ್ರೀಮಜ್ಜಗದ್ಗುರು ಶಂಕರಾಚಾರ್ಯ ವಿಖ್ಯಾತವ್ಯಾಖ್ಯಾನಸಿಂಹಾಸನಾಧೀಶ್ವರ, ಸಂಕಲ್ಪಿತಕಾರ್ಯಸಿದ್ಧಿಪ್ರವೀಣ, ಅವಿಚ್ಛಿನ್ನಪೀಠಾಧೀಶ್ವರ ಶ್ರೀಸಂಸ್ಥಾನ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪ್ರೀತಿಯ ಶಿಷ್ಯರು ನಾವು!
ಆಚಂದ್ರಾರ್ಕವಾಗಿರುವ ಸತ್ಯವೆಂಬ ಗೋವಿನ ಹಿಂದೆ ನಲಿದೊಲಿದು ಸಾಗುವ ಮುದ್ದುಕರುಗಳು ನಾವು!
“ಯಾವ ಒಕ್ಕೂಟವೂ ನಮ್ಮ ಕೂದಲನ್ನೂ ಕೊಂಕಿಸಲಾಗದು!!”
ಹೌದು,ಹೌದು.ನಾವು ಶ್ರೀ ರಾಮಚಂದ್ರಾಪುರ ಮಠದ ಅಪ್ಪಟ ಶಿಷ್ಯರು.ನಮ್ಮ ಮಠದುಳಿವಿಗಾಗಿ,ಗುರುವಿನೊಂದು ಮಾತಿಗೆ ಒಕ್ಕೊರಲಿನಿಂದ ಕೂಗಿ ಮೇಲೇಳಲು ಸದಾ ಸನ್ನದ್ಧರಾಗಿರುವವರು.ಪ್ರಾಣ ತ್ಯಾಗಕ್ಕೂ ಸಿದ್ಧರಾಗಿರುವವರು.
ಅಂಥದೊಂದು ಸೇವಾ ಸದವಕಾಶವನ್ನು ಸದಾ ನಿರೀಕ್ಷಿಸುವವರು.ಸದ್ಗುರುವಿನಲ್ಲಿ ಪ್ರಾರ್ಥಿಸುವವರೂ ಕೂಡ.
“ನಮ್ಮ ಮಠ ನಮ್ಮ ಹೆಮ್ಮೆ’