ಶ್ರೀಮಠದಂಗಳದಲ್ಲಿ ಬೆಳೆದ ವೃಕ್ಷ : ಜೀವಿಕಾ ವಿಭಾಗ (ದಿಶಾದರ್ಶಿ)

ಲೇಖನ

ಯಾವಾಗಲೂ ಸಮಾಜಮುಖಿ ಕಾರ್ಯಗಳನ್ನೇ ಮಾಡುತ್ತಾ ಸಮಾಜದ ಒಳಿತನ್ನೇ ಬಯಸುವ ನಮ್ಮ ನೆಚ್ಚಿನ ಶ್ರೀ ಸಂಸ್ಥಾನದವರು ಉದ್ಯೋಗವನ್ನರಸಿ ಬರುವ ತಮ್ಮ ಶಿಷ್ಯರಿಗೆ ಅನುಗ್ರಹಿಸಲೆಂದೇ 5 ವರ್ಷಗಳ ಹಿಂದೆ ಬಿತ್ತಿದ “ದಿಶಾದರ್ಶಿ” ಯೆಂಬ ಬೀಜ, ಶ್ರೀಮಠವೆಂಬ ಅಂಗಳದ ಫಲವತ್ತಾದ ಮಣ್ಣಿನಲ್ಲಿ ಬೆಳೆದು ಹೆಮ್ಮರವಾಗಿ ಶ್ರೀಗಳ ಅನುಗ್ರಹ ಹಾಗೂ ಆಶೀರ್ವಾದಗಳೊಂದಿಗೆ ಇಂದು ರುಚಿಯಾದ ಹಣ್ಣುಗಳನ್ನು ನೀಡಲಾರಂಬಿಸಿದೆ. ಈ ಬರಹದ ಹೊತ್ತಿಗೆ ಫಲಾನುಭವಿಗಳ ಸಂಖ್ಯೆ 577…..


ಹಿನ್ನಲೆ :
ನಮ್ಮ ಮಠದ ಹೆಚ್ಚಿನ ಶಿಷ್ಯರ (ಹವ್ಯಕರು ಮತ್ತು ಹವ್ಯಕೇತರರು) ಮೂಲ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಹಳ್ಳಿಗಳು. ಹಾಗಾಗಿ ವಿದ್ಯಾರ್ಥಿ ದೆಸೆಯನ್ನು ಮುಗಿಸಿ ಉದ್ಯೋಗಕ್ಕಾಗಿ ಪಟ್ಟಣಗಳಿಗೆ ಬಂದಾಗ ಸರಿಯಾದ ಮಾರ್ಗದರ್ಶನವಿಲ್ಲದೇ ಕಷ್ಟ ಪಡುತ್ತಿದ್ದ ಶಿಷ್ಯರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಶ್ರೀ ಗುರುಗಳ ಆಶಯದಂತೆ ಆರಂಭವಾದ ಯೋಜನೆಯೇ ’ದಿಶಾದರ್ಶಿ’. ಆರಂಭದಲ್ಲಿ ಶ್ರೀ ಬಾಲಸುಬ್ರಮಣ್ಯ ಭಟ್, ಡಾ| ವೈ ವಿ ಕೆ , ಪ್ರಕಾಶ್ ಭಟ್ ಮುಂತಾದವರ ನೇತೃತ್ವದಲ್ಲಿ ಇದರ ಬಗ್ಗೆ ಒಂದು ಕಾರ್ಯ ಯೋಜನೆಯನ್ನು ರೂಪಿಸಲಾಯಿತು. ಇದರ ಜೊತೆಯಲ್ಲಿ , ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ವಾರಾಂತ್ಯಗಳಲ್ಲಿ ಮನ:ಪೂರ್ವಕವಾಗಿ ಇದಕ್ಕಾಗಿ ಕೆಲಸ ಮಾಡುವ ತಂಡವೂ ಸಿದ್ದವಾಯಿತು. “ಋಷಿ ಸಿಸ್ಟಮ್ಸ್” ಮಾಲಿಕರಾದ ಶ್ರಿ ಸತ್ಯಶಂಕರ್ ಮರಕ್ಕಿಣಿ ಹಾಗೂ ಕುಮಾರಿ ಚೈತ್ರ ಅವರಿಂದ ದಿಶಾದರ್ಶಿಗಾಗಿಯೇ ಒಂದು ಜಾಲತಾಣದ ಕೊಂಡಿಯೂ ಸಿದ್ದಗೊಂಡಿತು. ಕ್ರಮೇಣ ಹಲವು ಸಂಪರ್ಕಗಳ ಮೂಲಕ ಉದ್ಯೋಗ ಮಾಹಿತಿ ಸಂಗ್ರಹಿಸಿತ್ತ, ಇದರ ಜೊತೆ ಜೊತೆಗೆ ಸಂದರ್ಶನ ಎದುರಿಸುವುದು, ರೆಸುಮೆ ತಯಾರಿ,ಸಂಹವನ ಕಲೆ, ಆಪ್ತ ಸಮಾಲೊಚನೆ ಮುಂತಾದ ಹಲವು ಕಾರ್ಯಗಳನ್ನು ಆರಂಬಿಸಲಾಯಿತು.
ಆರಂಭದಲ್ಲಿ ಮಹಾಮಂಡಲದ ಯೋಜನೆಯಾಗಿ ಆರಂಭವಾದ ದಿಶಾದರ್ಶಿ,ಆರಂಭದ ದಿನಗಳಲ್ಲಿ ತಂಡ ತಯಾರಿಗಾಗಿ ಕೂಡಾ ಪ್ರತೀ ಶನಿವಾರದ ದಿನ ಎಲ್ಲರೂ ಬೆಂಗಳೂರಿನ ಗಿರಿನಗರದ ರಾಮಾಶ್ರಮದ ಮಹಾಮಂಡಲದ ಕಛೇರಿಯಲ್ಲಿ ಸಭೆ ಸೇರಿ ಒಟ್ಟಾಗಿ ಕೆಲಸ,ಜೊತೆಗೇ ಕೆಲಸದ ತರಬೇತಿ ನಡೆಯುತ್ತಿತ್ತು. ಸಾಮಾನ್ಯವಾಗಿ ತಿಂಗಳಿಗೊಮ್ಮೆ ಶ್ರೀ ಸಂಸ್ಥಾನದವರ ನೇರ ಭೇಟಿ, ಮಾರ್ಗದರ್ಶನ, ಆಶೀರ್ವಾದ ಕೂಡಾ ದೊರೆಯುತ್ತಿತ್ತು. ಇದು ತಂಡದ ನೈತಿಕ ಬಲ ಹಾಗೂ ಸ್ಫೂರ್ತಿಗೆ ಅಸೀಮ ಬಲ, ಉತ್ಸಾಹ ನೀಡಿತು.
ಪರಿಣಾಮವಾಗಿ,ಆರಂಭವಾದ ಎರಡೇ ವರ್ಷಗಳಲ್ಲಿ ಸ್ವಯಂಸ್ಫೂರ್ತಿಯಿಂದ ಸೇವೆ ಸಲ್ಲಿಸಲು ಉತ್ಸಾಹಿಗಳ ಎರಡು ಮತ್ತು ಮೂರನೇ ಹಂತದ ಪರ್ಯಾಯವಾಗಿ ನಾಯಕತ್ವದ ಜವಾಬ್ದಾರಿ ಹೊರಬಲ್ಲ ತಂಡ ತಯಾರಾಗಿದೆ!

ಗುರುಕೃಪೆಯ ವ್ಯಕ್ತ ದೃಷ್ಟಾಂತ!
ಉದ್ಯೋಗಾಕಾಂಕ್ಷಿಗಳ ಜೀವನದ ಹಲವು ಮಜಲುಗಳಲ್ಲಿ ಸಹಾಯ ಮಾಡುವ ಕಾರ್ಯಕ್ರಮಗಳನ್ನು ಮನದಲ್ಲಿರಿಸಿ ಈ ವಿಭಾಗವನ್ನು “ಜೀವಿಕಾ ವಿಭಾಗ” ಎಂದು ಶ್ರೀಗಳು ಮರುನಾಮಕರಣ ಮಾಡಿದರು.

ದಿಶಾದರ್ಶಿ ಹೆಜ್ಜೆಗುರುತು :
ಶ್ರೀ ಗುರುಗಳಿಂದ ಲೋಕಾರ್ಪಣೆ : ಸೆಪ್ಟೆಂಬರ್ 27,2015
ಮೊದಲ ಉದ್ಯೋಗ ಪ್ರಾಪ್ತಿ : ಸೆಪ್ಟೆಂಬರ್ 27,2015
100ನೇ ಉದ್ಯೋಗ ಪ್ರಾಪ್ತಿ : ಡಿಸೆಂಬರ್ 22,2016
200ನೇ ಉದ್ಯೋಗ ಪ್ರಾಪ್ತಿ : ಒಕ್ಟೋಬರ್ 19, 2017
“ವಿಜಯೀಭವ” – 200ರ ಸಂಭ್ರಮ – ಶ್ರೀ ಗುರುಗಳಿಂದ ವಿಶೇಷ ಅನುಗ್ರಹ ಮಂತ್ರಾಕ್ಷತೆ – ನವೆಂಬರ್ 12,2017
300ನೇ ಉದ್ಯೋಗ ಪ್ರಾಪ್ತಿ : ಆಗಸ್ಟ್ 25, 2018
400ನೇ ಉದ್ಯೋಗ ಪ್ರಾಪ್ತಿ : ಮೇ 22, 2019
500ನೆ ಉದ್ಯೋಗ ಪ್ರಾಪ್ತಿ : ನವೆಂಬರ್ 1, 2019

ದಿಶಾದರ್ಶಿ ಕಾರ್ಯ ವೈಖರಿ :
ತಮ್ಮ ವಿದ್ಯಾರ್ಥಿ ದೆಸೆಯನ್ನು ಮುಗಿಸಿ ಉದ್ಯೋಗ ಹುಡುಕಾಟ ಆರಂಭಿಸುವ ಅಥವಾ ಪ್ರಸ್ತುತ ಉದ್ಯೋಗದಿಂದ ಬದಲಾವಣೆ ಬಯಸುವ ಮಠದ ಶಿಷ್ಯರು ಆರಂಭದಲ್ಲಿ ದಿಶಾದರ್ಶಿಯ ಜಾಲತಾಣದ ಕೊಂಡಿಯಲ್ಲಿ ನೋಂದಣಿ ಮಾಡಬೇಕು. ನಂತರ ದಿಶಾದರ್ಶಿ ತಂಡ ಅದರಲ್ಲಿ ನಮೂದಿಸಿದ ಗುರಿಕ್ಕಾರರನ್ನು ಸಂಪರ್ಕಿಸಿ ಆಕಾಂಕ್ಷಿಯ ಹಿನ್ನಲೆಯನ್ನು ತಿಳಿಯುತ್ತದೆ. ಗುರಿಕ್ಕಾರರ ಮಾಹಿತಿಯನ್ನಾಧರಿಸಿ ಆಕಾಂಕ್ಷಿಯನ್ನು ಅನುಮೋದಿಸಲಾಗುತ್ತದೆ. ಹೀಗೆ ಅನುಮೋದಿಸಿದ ಆಕಾಂಕ್ಷಿಗಳನ್ನು ಉದ್ಯೋಗ ಮಾಹಿತಿ ಕೊಡುವ ವಾಟ್ಸಾಪ್ ಗ್ರೂಪಿಗೆ ಸೇರಿಸಲಾಗುತ್ತದೆ. ನಂತರ ಎಲ್ಲ ಉದ್ಯೋಗ ಮಾಹಿತಿಗಳೂ ಅವರ ಸಂಚಾರಿ ದೂರವಾಣಿಯ ಮೂಲಕ ಅವರಿಗೆ ನೇರವಾಗಿ ತಲುಪುತ್ತದೆ. ಇದರ ಜೊತೆಗೆ, ಅವರ ರೆಸ್ಯೂಮನ್ನು ಪರಿಶೀಲಿಸಿ (ಅಗತ್ಯ ಇದ್ದಲ್ಲಿ) ಏನಾದರು ಬದಲಾವಣೆಗಳು ಬೇಕಾದರೆ ಮಾಹಿತಿ ಒದಗಿಸಲಾಗುತ್ತದೆ ಹಾಗು ಸಂದರ್ಶನ ಎದುರಿಸುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಯಾರಿಗಾದರೂ ಆಪ್ತ ಸಮಾಲೋಚನೆ( ಕೌನ್ಸೆಲ್ಲಿಂಗ್)ನ ಅವಶ್ಯಕತೆ ಇದ್ದಲ್ಲಿ ಅದನ್ನೂ ಮುಖತ: ಅಥವಾ ದೂರವಾಣಿ ಮೂಲಕ ನಡೆಸಲಾಗುವುದು. ಈ ಎಲ್ಲ ಕೆಲಸಗಳು ಇಂದಿನವರೆಗೂ ನಿರಂತರವಾಗಿ ನಡೆಯುತ್ತಿದೆ.
ಮೊದಲು ಕೇವಲ ಫ಼್ರೆಶರ್ಸ್ಗಳಿಗೆ ಮಾತ್ರ ಕೊಡುತ್ತಿದ್ದ ಸಹಾಯ ಹಸ್ತವನ್ನು, ಈಗಾಗಲೇ ಉದ್ಯೋಗದಲ್ಲಿದ್ದು ಕೊಂಡು ಅದಕ್ಕಿಂತಲೂ ಉತ್ತಮ ಅಥವಾ ಬೇರೆ ಉದ್ಯೋಗ ಹುಡುಕುವವರಿಗೂ(ಎಕ್ಸ್ಪೀರಿಯನ್ಸ್ಡ್) ವಿಸ್ತರಿಸಲಾಗಿದೆ. ಹಾಗಾಗಿ ಈಗ ಒಟ್ಟು 9 ವಾಟ್ಸ್ಯಾಪ್ ಗ್ರೂಪ್ಗಳಲ್ಲಿ ಉದ್ಯೂಗ ಮಾಹಿತಿಯನ್ನು ನೀಡಲಾಗುತ್ತಿದೆ.
ಇವೆಲ್ಲದರ ಜೊತೆಗೆ ಹಲವಾರು ವ್ಯಕ್ತಿತ್ವ ವಿಕಸನ, ಸಂದರ್ಶನ, ರೆಸುಮೆ, ಉದ್ಯೋಗ ಮಾಹಿತಿ ಕಾರ್ಯಾಗಾರಗಳೂ ಸಂಪನ್ನಗೊಂಡಿದೆ. ಇತ್ತೀಚೆಗೆ ನಮ್ಮದೇ ಆದ ಪ್ರತಿಷ್ಠಿತ ವಿ.ವಿ.ವಿಯ ಸಂಪನ್ಮೂಲ ನೇಮಕಾತಿಯಲ್ಲಿ ಜಾಹಿರಾತು ಪಸರಿಸುವ ಹಾಗೂ ರೆಸುಮೆ ಸಂಗ್ರಹಿಸುವ ಕಾರ್ಯಗಳಲ್ಲೂ ದಿಶಾದರ್ಶಿ ತಂಡ ಸಹಕರಿಸಿದೆ.
ಈ ಯೋಜನೆ ಶ್ರಿಮಠದ ಎಲ್ಲ ಶಿಷ್ಯ(ಹವ್ಯಕರು ಹಾಗೂ ಹವ್ಯಕೇತರ)ರಿಗೂ ಅನ್ವಯವಾಗಿದೆ.
ಉದ್ಯೋಗ ಮಾಹಿತಿಯ ಜೊತೆ ಜೊತೆಗೆ ದಿಶಾದರ್ಶಿಯ ಕೆಳಗೆ ಈವರೆಗೆ ನಡೆದ ಕಾರ್ಯಕ್ರಮಗಳು :
– 500ಕ್ಕೂ ಹೆಚ್ಚು ರೆಸ್ಯೂಮೆ ತಿದ್ದುಪಡಿ
– 500ಕ್ಕೂ ಹೆಚ್ಚು ಆಪ್ತ ಸಮಾಲೋಚನೆ
– 12 ಕ್ಕೂ ಹೆಚ್ಚು ವ್ಯಕ್ತಿತ್ವ ವಿಕಸನ, ರೆಸುಮೆ, ಸಂದರ್ಶನ ಕಲೆ ಹಾಗು ಉದ್ಯೋಗ ಮಾಹಿತಿ ಕಾರ್ಯಾಗಾರಗಳು (ಸ್ಥಳ: ಬೆಂಗಳೂರು, ಪುತ್ತೂರು, ಉಜಿರೆ, ಮಂಗಳೂರು, ಹೊನ್ನಾವರ, ಸಾಗರ ಹಾಗು ಮಾಣಿ ಮಠ.)
– ಸಂಪನ್ಮೂಲ ವ್ಯಕ್ತಿಗಳಲ್ಲಿ ದಿಶಾದರ್ಶಿ ತಂಡ ಹಾಗು ಇತರ ಕ್ಷೇತ್ರಗಳ ಅನುಭವೀ ಖ್ಯಾತನಾಮರೂ ಒಳಗೊಂಡಿದ್ದಾರೆ.
– 4 ತಾಂತ್ರಿಕ(ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಇತರ) ವಿಷಯಗಳ ಕಾರ್ಯಾಗಾರಗಳು.
– 2 ಐಬಿಪಿಎಸ್ ಪರೀಕ್ಷೆ ಬರೆಯುವ ಕುರಿತು ತರಬೇತಿ.
– 1 ಸೆಲ್ಪ್ ಅಪ್ರೈಸಲ್ ಬರೆಯುವ ಬಗ್ಗೆ ಕಾರ್ಯಾಗಾರ.
– 4 ತಾಂತ್ರಿಕ ವಿದ್ಯಾಲಯಗಳಲ್ಲಿ ದಿಶಾದರ್ಶಿಯ ಮೂಲಕ “ಕ್ಯಾಂಪಸ್ ಇಂಟವ್ಯೂ” ನಡೆಸಲಾಗಿದೆ.
ದಿಶಾದರ್ಶಿಯ ಸಹಾಯ ಪಡೆದು ಉದ್ಯೋಗ ಪಡೆದವರ ಸಂಖ್ಯೆ 200 ತಲುಪಿದಾಗ, ಉದ್ಯೋಗ ಪಡೆದವರಿಗಾಗಿ ಶ್ರೀ ಗುರುಗಳಿಂದ ವಿಶೇಷ ಮಂತ್ರಾಕ್ಷತೆ ಕಾರ್ಯಕ್ರಮ “ವಿಜಯೀಭವ” (ನವಂಬರ್ 2017) ಆಯೋಜಿಸಲಾಗಿತ್ತು.
ಈ ದಿನ ಎರಡು ಖ್ಯಾತ ಅಭ್ಯಾಗತರಿಂದ ವಿಶೇಷ ಮಾಹಿತಿ ಕಾರ್ಯಾಗಾರಗಳು ಮತ್ತು
ಶ್ರೀ ಗುರುಗಳಿಂದ ದಿಶಾದರ್ಶಿಯ ಫಲಾನುಭವಿಗಳಿಗೆ ವಿಶೇಷ ಅನುಗ್ರಹ ಮಂತ್ರಾಕ್ಷತೆ ಹಾಗು ಅಶೀರ್ವಚನ.

ಅಂಕಿ-ಅಂಶ (ಈ ವರೆಗೆ) :
– ಉದ್ಯೋಗ ದೊರೆತವರ ಸಂಖ್ಯೆ : 577.
– ನೋಂದಣಿ ಮಾಡಿದ ಆಕಾಂಕ್ಷಿಗಳ ಸಂಖ್ಯೆ : 2090
– ಶ್ರೀಮಠದಿಂದ ಸಮಾಜಕ್ಕೆ ಕೊಡಲ್ಪಟ್ಟ ಅದಾಯ (577×3.6L ಸರಾಸರಿ ): 20.84 ಕೋಟಿ (ವರ್ಷಕ್ಕೆ)
ವಾರ್ಷಿಕ ಉದ್ಯೋಗ ವೊಂದರ ಸರಾಸರಿ ಸಂಬಳ 3.6ಲಕ್ಷದಂತೆ (ಪ್ರಥಮ ನೌಕರಿ ಹಾಗೂ ಅನುಭವಿ,ಹಿರಿತನದ ಉದ್ಯೋಗವೂ ಸೇರಿ) ಸಮಾಜಕ್ಕೆ ವಾರ್ಷಿಕ ಆದಾಯ 20 ಕೋಟಿ 80 ಲಕ್ಷಕ್ಕಿಂತಲೂ ಹೆಚ್ಚು ವೃದ್ಧಿ ಆಗುತ್ತಿದೆ.
ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪುಣ್ಯಾಶೀರ್ವಾದದಿಂದ ಸಾಧ್ಯವಾದ ಈ ಕೆಲಸ ಇಂದು ಶ್ರೀ ಮಠದಿಂದ ನೇರ ಮನೆಗಳಿಗೆ ತಲುಪುವ ಯೋಜನೆ.
ಮಠ ಸಮಾಜಕ್ಕೆ ಆರ್ಥಿಕವಾಗಿ ಕೂಡಾ ಬಲ ತುಂಬಿದೆ. ಧಾರ್ಮಿಕ ಮಾರ್ಗದರ್ಶನ,ದೈವಿಕತೆ,ಗೋ ರಕ್ಷಣೆ, ಶಿಕ್ಷಣ, ಇತ್ಯಾದಿಗಳ ಜೊತೆಗೆ ಇದೂ ಕೂಡಾ.
– ನೋಂದಣಿ ಹಾಗು ಉದ್ಯೋಗ ದೊರೆತವರ ಅನುಪಾತ(ರೇಶಿಯೊ) : 27.6% (ಪ್ರತೀ 3 ದಿವಸಕ್ಕೊಮ್ಮೆ 1 ಉದ್ಯೋಗದಂತೆ). ಆರಂಭದಿಂದಲೂ ಸರಾಸರಿ 20% ದರದಲ್ಲಿ ಉದ್ಯೋಗ ಕಲ್ಪಿಸಲು ಸಾಧ್ಯವಾಗಿದೆ.
– ಪ್ರತೀ ತಿಂಗಳಲ್ಲಿ ಆಗುವ ಸರಾಸರಿ ನೋಂದಣಿ : 25 ರಿಂದ 30
– ಉದ್ಯೋಗ ಮಾಹಿತಿ ಪ್ರತೀ ತಿಂಗಳಿಗೆ (ಸರಾಸರಿ) : 600 ರಿಂದ 800
– ಪ್ರತೀ ತಿಂಗಳಲ್ಲಿ ಆಗುವ ಸರಾಸರಿ ರೆಸುಮೆ ತಿದ್ದುಪಡಿ : 8 ರಿಂದ 10
– ಪ್ರತೀ ತಿಂಗಳಲ್ಲಿ ನಡೆಯುವ ಆಪ್ತ ಸಮಾಲೋಚನೆ ಹಾಗು ಸಲಹೆ (ಸರಾಸರಿ) : 15 ರಿಂದ 20.
– ಪ್ರತೀ ತಿಂಗಳಲ್ಲಿ ದಿಶಾದರ್ಶಿ ಕಾರ್ಯಕರ್ತರಿಂದ ಸಮರ್ಪಿಸಲ್ಪಡುವ ಸಮಯ : 72 ಗಂಟೆಗಳು (ಅಪ್ರೂವಲ್ಸ್, ರೆಸ್ಯೂಮೆ, ಉದ್ಯೋಗ ಮಾಹಿತಿ ಹಾಕುವಿಕೆ,ಸಲಹೆ ಹಾಗು ಸಮಾಲೋಚನೆ).
– ಊದ್ಯೋಗ ದೊರಕಿಸಲಾದ ಪ್ರಮುಖ ಕ್ಷೇತ್ರಗಳು : ಐಟಿ ಸಾಫ್ಟ್ವೇರ್, ಎಕೌಂಟಿಂಗ್, ಕಛೇರಿ ಸಹಾಯಕರು, ಬಯೋಟೆಕ್,ಶಿಕ್ಷಣ, ಅರ್ಚಕರು, ವೈದ್ಯಕೀಯ, ಪತ್ರಿಕೋದ್ಯಮ, ಸಹಕಾರ ಸಂಘ, ಸಿದ್ಧ ಉಡುಪು ಉದ್ಯಮ, ಫಾರ್ಮಾ ಕಂಪೆನಿಗಳು ಇತ್ಯಾದಿ…
ಕಾರ್ಯಕರ್ತರ ತಂಡ :
ಶ್ರೀ ಗುರುಗಳ ಪರಮಾಶೀರ್ವಾದಗಳೊಂದಿಗೆ, ಆಡಳಿತ ಖಂಡದ ಪ್ರಧಾನರಾದ ಶ್ರೀ ಪ್ರಮೋದ್ ಪಂಡಿತ್ ಹಾಗೂ ಜೀವಿಕಾ ವಿಭಾಗದ ಹಿರಿಯ, ಅನುಭವಿ ಸಲಹೆಗಾರರಾದ ಶ್ರೀ ಬಾಲಸುಬ್ರಮಣ್ಯ ಭಟ್ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ಈ ಕೆಳಗಿನ ತಂಡ ಕಾರ್ಯನಿರ್ವಹಿಸುತ್ತಿದೆ.
ಶ್ರೀ ಸತ್ಯಶಂಕರ ಪುತ್ತೂರು, ಶ್ರೀ ಮುರಳಿ ಕುಕ್ಕುಪುಣಿ, ಶ್ರೀ ವೆಂಕಟ ಶ್ರೇಯಸ್, ಕುಮಾರಿ ಅರ್ಪಿತ ಹೆಗಡೆ, ಶ್ರೀ ಸ್ಕಂದ ಪದ್ಯಾಣ, ಶ್ರೀ ಆನಂದ ಸುಬ್ರಮಣ್ಯ ನಾರಾವಿ, ಶ್ರೀಮತಿ ಅರುಣಾ ಅಜಯ್, ಶ್ರೀ ಕಾರ್ತಿಕ್ ಮಾಬಲಡ್ಕ, ಶ್ರೀಮತಿ ಕೀರ್ತನ ಹಾಗೂ ಶ್ರೀ ಚೇತನ್ ದೊಡ್ಡ ಮಾಣಿ. ಜಾಲತಾಣದ ಉಸ್ತುವಾರಿ : ಶ್ರೀ ಸತ್ಯ ಶಂಕರ ಮರಕ್ಕಿಣಿ ಹಾಗೂ ಕುಮಾರಿ ಚೈತ್ರ.

ನಾವೇನು ಮಾಡಬಹುದು?
ಈಗಾಗಲೇ ಹಲವು ಸಂಪರ್ಕಗಳನ್ನು ಸಂಗ್ರಹಿಸಿ ಶ್ರೀಮಠದ ಶಿಷ್ಯರಿಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿರುವ ಜೀವಿಕಾ ವಿಭಾಗಕ್ಕೆ ಪ್ರೋತ್ಸಾಹಿಸುವ ದೃಷ್ಠಿಯಿಂದ ನಾವೆಲ್ಲರೂ ತಮಗೆ ತಿಳಿದಿರುವ ಉದ್ಯೋಗ ಮಾಹಿತಿಯನ್ನು ತಂಡಕ್ಕೆ ತಲುಪಿಸಿದಲ್ಲಿ ಹುಡುಕುತ್ತಿರುವ ನಮ್ಮ ಶಿಷ್ಯರಿಗೆ ನೇರವಾಗಿ ತಲುಪಿಸಬಹುದು. ಹಾಗೆಯೇ ಉದ್ಯೋಗ ಹುಡುಕುತ್ತಿರುವ, ಸಂದರ್ಶನ ತಯಾರಿ/ಎದುರಿಸುವುದರ ಅಥವಾ ರೆಸುಮೆ ತಯಾರಿ ಬಗ್ಗೆ ಮಾಹಿತಿ ಬೇಕಾದ ಶ್ರೀ ಮಠದ ಯಾರೇ ಶಿಷ್ಯರಿಗೆ ಈ ವಿಭಾಗದ ಬಗ್ಗೆ ಮಾಹಿತಿ ತಲುಪಿಸುವುದು. ಕೊರೋನಾ ಕರಿಛಾಯೆ ಮುಗಿದ ನಂತರ ಮೊದಲಿನಂತೆ ವಿವಿದ ವಿಷಯಗಳಲ್ಲಿ ಕಾರ್ಯಾಗಾರಗಳನ್ನು ಸಂಯೋಜಿಸಲಾಗುವುದು.
ಸಂಪರ್ಕ : 9900102854 ಸತ್ಯಶಂಕರ ಪುತ್ತೂರು, ಜೀವಿಕಾ ಪ್ರಧಾನರು
9845285918, ಮುರಳಿ ಕುಕ್ಕುಪುಣಿ , ಜೀವಿಕಾ ಪ್ರಧಾನರು
ಜಾಲತಾಣದ ಕೊಂಡಿ : www.dishadarshi.in
ಮಿಂಚಂಚೆ : info@dishadarshi.in

Author Details


Srimukha

Leave a Reply

Your email address will not be published. Required fields are marked *