|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಗೋಸ್ವರ್ಗದಲ್ಲಿ ಪುಟಾಣಿಗಳ ಕಲರವ- ಗೋವುಗಳ ಜೊತೆ ಮೈಮರೆತ ಮಕ್ಕಳು

ಸಿದ್ದಾಪುರ: ಸಾಕ್ಷಾತ್ ಗೋವುಗಳ ಪಾಲಿನ ಸ್ವರ್ಗವಾಗಿರುವ ಗೋಸ್ವರ್ಗದಲ್ಲಿ ಭಾನುವಾರ ಗೋವುಗಳ ಜೊತೆ ಪುಟ್ಟ ಪುಟ್ಟ ಮಕ್ಕಳ ಜಾತ್ರೆಯೇ ಸೃಷ್ಟಿಯಾಗಿತ್ತು.

 

ಸಿದ್ದಾಪುರದ ಪ್ರಶಾಂತಿ ವಿದ್ಯಾಲಯದ ಪುಟಾಣಿ ಮಕ್ಕಳು ಗೋಸ್ವರ್ಗಕ್ಕೆ ಬಂದು ಗೋವುಗಳ ಕುರಿತು ಮಾಹಿತಿ ಪಡೆದು ಅವುಗಳ ಮೈದಡವಿ ಮೇವು‌ತಿನ್ನಿಸಿ ಆಟವಾಡಿ ಸಂಭ್ರಮಿಸಿದರು.

 

ಶಿಕ್ಷಕರು ಹಾಗೂ ಕೆಲ ಪಾಲಕರೊಂದಿಗೆ ಗೋಸ್ವರ್ಗಕ್ಕೆ ಬಂದಿದ್ದ ಮಕ್ಕಳು ಒಂದೆಡೆಯಲ್ಲಿ ಗೋವುಗಳ ರಾಶಿ ಕಂಡು ಕುಣಿದಾಡಿದರು. ಗೋಸ್ವರ್ಗದಲ್ಲಿಯೇ ಮಧ್ಯಾಹ್ನದ ಪ್ರಸಾದ ಸ್ವೀಕರಿಸಿದ ಮಕ್ಕಳು ಸಂಜೆಯವರೆಗೂ ಅಲ್ಲಿಯೇ ಆಟವಾಡಿ ಬಳಿಕ ಒಲ್ಲದ ಮನಸ್ಸಿನಿಂದ ಮನೆಗೆ ಮರಳಿದರು. ಒಟ್ಟಿನಲ್ಲಿ ಗೋಸ್ವರ್ಗ ಪ್ರತಿನಿತ್ಯ ವೀಕ್ಷಕರ ಹಾಗೂ ಗೋಪ್ರೇಮಿಗಳ ಪ್ರೀತಿಯ ತಾಣವಾಗುತ್ತಿದೆ.