ಬಜಕೂಡ್ಲು ಗೋಶಾಲೆಯ ಗೋವುಗಳಿಗೆ ಮುಳಿಹುಲ್ಲು : ಸೇವಾ ಅರ್ಘ್ಯ

ಗೋವು

ಗುಂಪೆಗುಡ್ಡೆಯ ಶ್ರೀಶಂಕರಧ್ಯಾನಮಂದಿರ ಪರಿಸರದಲ್ಲಿ ಮುಳಿಹುಲ್ಲು ಕತ್ತರಿಸುವ ಕಾರ್ಯ ದಿನಾಂಕ 9-12-2018ರಂದು ಪ್ರಾರಂಭವಾಯಿತು.

 

ಗುಂಪೆವಲಯದ ಅಧ್ಯಕ್ಷ ಶ್ರೀ ಅಮ್ಮಂಕಲ್ಲು ರಾಮಭಟ್ಟರು ಗೋಮಾತೆಗೆ ಗೋಗ್ರಾಸ ನೀಡುವ ಮೂಲಕ ಚಾಲನೆ ನೀಡಿದರು. ಕಾಮದುಘಾ ಕಾರ್ಯದರ್ಶಿ ಡಾ. ವೈ.ವಿ.ಕೃಷ್ಣಮೂರ್ತಿ ಯವರು ಧ್ಜಜಾರೋಹಣ ಮಾಡಿದರು. ಗುರುವಂದನೆ, ಗೋಸ್ತುತಿ ನಡೆಸಲಾಯಿತು.

 

ಮಂಡಲದ ವಿದ್ಯಾರ್ಥಿವಾಹಿನೀ ಪ್ರಧಾನ ಕೇಶವಪ್ರಸಾದ ಎಡಕ್ಕಾನ, ವಲಯದ ಕಾರ್ಯದರ್ಶಿ ಬಜಪ್ಪೆ ಸುಬ್ರಹ್ಮಣ್ಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.

 

ಮಹಾಮಂಡಲದ ಉಲ್ಲೇಖ ಪ್ರಧಾನ ಬಳ್ಳಮೂಲೆ ಗೋವಿಂದ ಭಟ್ಟ, ಶಾಮ ಭಟ್ ಬೇರ್ಕಡವು, ಮುಳ್ಳೇರಿಯಾ ಮಂಡಲದ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ನವನೀತ ಪನೆಯಾಲ, ವೈ.ಕೆ.ಗೋವಿಂದ ಭಟ್, ಬಾಲಸುಬ್ರಹ್ಮಣ್ಯ ಭಟ್ ಪರಪ್ಪೆ, ಗೀತಾಲಕ್ಷ್ಮೀ, ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಮತ್ತು ವಿವಿಧ ವಲಯಗಳ ಪದಾಧಿಕಾರಿಗಳು, ಗೋಪ್ರೇಮಿಗಳು ಭಾಗವಹಿಸಿದ್ದರು.

 

10 ಕಟಾವು ಯಂತ್ರ, 10 ಮಂದಿ ವಿದ್ಯಾರ್ಥಿಗಳ ಸಹಿತ 115 ಕಾರ್ಯಕರ್ತರು ಭಾಗವಹಿಸಿದ್ದರು.

 

ಶ್ರೀ ನೂಜಿ ವೆಂಕಟೇಶ್ವರ ಭಟ್ಟ ಎಡಕ್ಕಾನ ಇವರ ಮನೆಯಲ್ಲಿ ಉಪಾಹಾರ-ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಪುತ್ತೂರಿನ “ಸಪ್ತ ಫುಡ್” ನವರ ಪೂರಿ, ಅಕ್ಕಿರೊಟ್ಟಿ, ಗಸಿ, ಕಾರ್ಯಕರ್ತರ ಹಸಿವನ್ನು ನೀಗಿಸಿತು.

Author Details


Srimukha

Leave a Reply

Your email address will not be published. Required fields are marked *