ಭಾರತೀಯ ಗೋಪರಿವಾರ-ಕರ್ನಾಟಕ ವತಿಯಿಂದ ಈ ಬಾರಿಯ ಪಂಚಗವ್ಯ ಪ್ರಶಿಕ್ಷಣವನ್ನು ಕಲಬುರಗಿ(ಗುಲ್ಬರ್ಗ) ಜಿಲ್ಲೆಯ ಜೀವರ್ಗಿ ತಾಲೂಕಿನ ಗಂವ್ಹಾರದ ಶ್ರೀತ್ರಿವಿಕ್ರಮಾನಂದ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಜನವರಿ 4ರಿಂದ 6ರವರೆಗೆ ಮೂರುದಿನಗಳ ಕಾಲ ಪಂಚಗವ್ಯ ಪ್ರಶಿಕ್ಷಣ ನಡೆಯಲಿದೆ.
ಜನವರಿ 4ರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಿ ಜನವರಿ 6ರ ಸಂಜೆ 5 ಘಂಟೆಗೆ ಮುಕ್ತಾಯಗೊಳ್ಳುತ್ತದೆ.
★ಪಂಚಗವ್ಯ ಪ್ರಶಿಕ್ಷಣ-ಗಂವ್ಹಾರ ಶಿಬಿರದಲ್ಲಿ…
◆ಗೋವುಗಳ ಪರಿಚಯ
◆ಗವ್ಯ ಉತ್ಪನ್ನಗಳ ಪರಿಚಯ
◆ಗವ್ಯ ಉತ್ಪನ್ನಗಳ ತಯಾರಿಕೆ (ಮಾಹಿತಿ ಮತ್ತು ಪ್ರಾಯೋಗಿಕ ತರಬೇತಿ)
◆ಗೋ ಆಧಾರಿತ ಕೃಷಿ
◆ಗೋ ಆಧಾರಿತ ಜೀವನ
◆ಗೋವು ಮತ್ತು ನಾವು
◆ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ಮೂರು ದಿನದ ಪಂಚಗವ್ಯ ಪ್ರಶಿಕ್ಷಣ ಶಿಬಿರದಲ್ಲಿ ಸಾಮೂಹಿಕ ವಸತಿಸಹಿತ ಸ್ಥಳೀಯ ಊಟೋಪಚಾರದ ವ್ಯವಸ್ಥೆ ಇರುತ್ತದೆ.
★ಕೇವಲ 50 ಜನರಿಗೆ ಮಾತ್ರ ಅವಕಾಶ ಇದೆ.
★ಶಿಬಿರಾರ್ಥಿಗಳು ಮೂರು ದಿನಗಳ ಕಾಲ ಕಡ್ಡಾಯವಾಗಿ ಶಿಬಿರದಲ್ಲಿಯೇ ವಾಸ್ತವ್ಯ ಮಾಡಬೇಕು.
★ಶಿಬಿರದ ಶಿಸ್ತು, ನಿಯಮ ಮತ್ತು ಸಮಯವನ್ನು ಅನುಸರಿಸಬೇಕು.
★1,500/- ಶುಲ್ಕ ಇರುತ್ತದೆ.
ಆಸಕ್ತರು ಡಿಸೆಂಬರ್ 25ನೇ ತಾರೀಖಿನ ಒಳಗೆ ಶುಲ್ಕದೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಲು ಕೋರಿದೆ.
ಗೂಗಲ್ ಫಾರ್ಮ್ ನಲ್ಲಿ ಹೆಸರು ನೋಂದಾಯಿಸಲು
https://goo.gl/forms/6qg76eJPABqVf9sr1
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಲು ಕೋರಿದೆ.
ಡಾ|| ರವಿ : 9483942776
ಮಹೇಶ ಚಟ್ನಳ್ಳಿ : 9449595277
ಮಧು ಗೋಮತಿ: 9449595278
ಶಿಶರ ಅಂಗಡಿ: 9483484074
Bharatiya GouParivara – ಭಾರತೀಯ ಗೋಪರಿವಾರ