ಅಮೃತಪಥ : ಗೋವುಗಳು ಸಂಚರಿಸುವ ಹಾದಿ ಪ್ಲ್ಯಾಸ್ಟಿಕ್ ಮುಕ್ತಗೊಳಿಸುವ ವಿಶಿಷ್ಟ ಯೋಜನೆ – ವಲಯಗಳಲ್ಲಿ ಉತ್ತಮ‌ ಪ್ರತಿಕ್ರಿಯೆ

ಗೋವು ಸುದ್ದಿ

ಬೆಂಗಳೂರು: ಶ್ರೀಸಂಸ್ಥಾನದವರ ದಿವ್ಯ ಮಾರ್ಗದರ್ಶನದಲ್ಲಿ ರೂಪ ಪಡೆದ ಅಮೃತಪಥ ಯೋಜನೆಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಗೋವುಗಳು ಸಂಚರಿಸುವ ಹಾದಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಅಮೃತ ಸ್ವರೂಪವಾದ ಹಾಲು, ಗೋಮೂತ್ರ, ಗೋಮಯವನ್ನು ನೀಡುವ ಪುಣ್ಯಕೋಟಿಗೆ ಅಮೃತಪಥವನ್ನು ಮಾಡಿ ಕೊಡುವ ಸದುದ್ದೇಶದ ಯೋಜನೆಗೆ ಎಲ್ಲ ಮಂಡಲ ಹಾಗೂ ವಲಯಗಳ ಕಾರ್ಯಕರ್ತರು ಸಹಯೋಗ ನೀಡಿದ್ದಾರೆ.

 

ಮುಳ್ಳೇರಿಯ: ನಿರ್ಚಾಲು ವಲಯದಲ್ಲಿ ದಿನಾಂಕ ನವೆಂಬರ 18ರಂದು ಬೆಳಗ್ಗೆ 8 ಗಂಟೆಯಿಂದ 9ರವರೆಗೆ ಅಮೃತಪಥ ಕಾರ್ಯಕ್ರಮ ನಡೆಯಿತು. ಕುಂಟಿಕಾನ ಶಾಲೆಯ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಶರ್ಮ ಮಾಳಿಗೆಮನೆ ಅವರು ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಳ್ಳೇರಿಯಾ ಮಂಡಲದ ಶಿಷ್ಯ ಮಾಧ್ಯಮ ವಿಭಾಗದ ಸರಳಿ ಶ್ರೀ ಮಹೇಶ, ವಲಯ ಉಪಾಧ್ಯಕ್ಷೆ ಶ್ರೀಮತಿ ಕನಕವಲ್ಲಿ ಬಡಗಮೂಲೆ, ಕೋಶಾಧಿಕಾರಿ ಶ್ರೀ ಈಶ್ವರ ಭಟ್ ಹಳೆಮನೆ, ಮೂಲಮಠ ವಿಭಾಗದ ಶ್ರೀ ಕೃಷ್ಣಕುಮಾರ ಸಿದ್ದನಕೆರೆ, ಕಜೆಮೂಲೆ ಘಟಕದ ಗುರಿಕ್ಕಾರರಾದ ಶ್ರೀ ಗೋಪಾಲಕೃಷ್ಣ ಭಟ್, ಸಾಮರಸ್ಯ ವಿಭಾಗದ ಶ್ರೀ ಗಣಪತಿ ಪ್ರಸಾದ ಕುಳಮರ್ವ, ಶಿಷ್ಯ ಮಾಧ್ಯಮ ವಿಭಾಗದ ಶ್ರೀ ಮಹೇಶ ಕೃಷ್ಣ ತೇಜಸ್ವಿ, ಶ್ರೀ ಕಾರ್ಯಕರ್ತೆ ಶ್ರೀ ಸೌಮ್ಯಾ ಕೆರೆಕೋಡಿ, ಶ್ರೀ ಕಾರ್ಯಕರ್ತ ಶ್ರೀ ಸತ್ಯನಾರಾಯಣ ಭಟ್ ಕುಳಮರ್ವ, ಶ್ರೀ ಕಿಶೋರ್ ಕುಮಾರ್ ದೇವರಮೆಟ್ಟು, ವಿದ್ಯಾರ್ಥಿಗಳಾದ ಕು. ಸ್ಪೂರ್ತಿ ಕೆರೆಕೋಡಿ ಹಾಗೂ ಕು. ಶ್ರೀಶ ಶಂಕರ ಕೆರೆಕೋಡಿ ಸೇರಿದಂತೆ ಒಟ್ಟು 15 ಮಂದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

 

ಪೆರಡಾಲ: ಪೆರಡಾಲ ವಲಯದ ನೇತೃತ್ವದಲ್ಲಿ ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠ ಪರಿಸರದಲ್ಲಿ ಅಮೃತಪಥ ಕಾರ್ಯಕ್ರಮವನ್ನು ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ, ಚುಳ್ಳಿಕ್ಕಾನ ಶ್ರೀ ರಾಜಗೋಪಾಲ, ವಲಯ ಅಧ್ಯಕ್ಷ ಶ್ರೀ ಶ್ರೀಹರಿ ಪೆರ್ಮುಖ, ಉಪಾಧ್ಯಕ್ಷ ಶ್ರೀ ಶ್ರೀಕೃಷ್ಣ ಮುಡಿಪ್ಪು, ಗುರಿಕ್ಕಾರರಾದ ಶ್ರೀ ವೆಂಕಟಕೃಷ್ಣ ತಲ್ಪನಾಜೆ, ಶ್ರೀ ಬಾಲಕೃಷ್ಣ ಭಟ್ ಆಲಂಗೋಡ್ಲು ಸೇರಿದಂತೆ ಹಲವರು ಪುಣ್ಯಕೋಟಿಯ ಈ ಸೇವೆಯಲ್ಲಿ ಭಾಗಿಯಾಗಿದ್ದರು.

 

ಕುಂಬಳೆ: ಕುಂಬಳೆ ವಲಯದಲ್ಲಿ ಹಮ್ಮಿಕೊಂಡಿದ್ದ ಅಮೃತಪಥ ಕಾರ್ಯಕ್ರಮದ ಮೂಲಕ ಮುಜುಂಗಾವು ಶಾಲೆ ಹಾಗೂ ನೇತ್ರ ಚಿಕಿತ್ಸಾಲಯದ ಪರಿಸರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲಾಯಿತು.

 

ಎಣ್ಮಕಜೆ: ಎಣ್ಮಕಜೆ ವಲಯ ಸೇವಾವಿಭಾಗ ಹಾಗೂ ಅಮೃತಧಾರಾ ಗೋಶಾಲೆ ಸಹಯೋಗದಲ್ಲಿ ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ಸ್ವಚ್ಛತೆ ನಡೆಸುವ ಮೂಲಕ ಗೋವು ನಡೆದಾಡುವ ಹಾದಿಯನ್ನು ಅಮೃತಪಥವನ್ನಾಗಿಸಿದ್ದು, 18 ಮಂದಿ ಗೋಭಕ್ತರು ಈ ಕಾರ್ಯಕ್ರಮದಲ್ಲಿ ಕೈಜೋಡಿಸಿದ್ದರು.

 

ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿ ಮತ್ತು ರಥದ ಗದ್ದೆಯಲ್ಲಿ ಹವ್ಯಕ ವಲಯ ಪುತ್ತೂರು, ಸ್ವಚ್ಛ ಪುತ್ತೂರು, ಭಾರತೀಯ ಗೋ ಪರಿವಾರ ಜಂಟಿಯಾಗಿ ಆಯೋಜಿಸಿದ ಅಮೃತಪಥ ಕಾರ್ಯಕ್ರಮಕ್ಕೆ ಪುತ್ತೂರಿನ ಖ್ಯಾತ ಉದ್ಯಮಿಗಳಾದ ಬೋನಂತಾಯ ಶ್ರೀ ಶಿವಶಂಕರ ಭಟ್ ಪಾಲ್ಗೊಂಡು, ಕಾಮಧೇನು ಧ್ವಜ ಅರಳಿಸಿ ಚಾಲನೆ ನೀಡಿದರು. ದೇವಸ್ಥಾನದ ಗದ್ದೆ ಹಾಗೂ ರಥಬೀದಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿದ ಈ ಕಾರ್ಯಕ್ರಮದಲ್ಲಿ ಶ್ರೀ ರವಿಶಂಕರ ಭಟ್ ಉಪ್ಪಂಗಳ, ಶ್ರೀ ಉದಯಶಂಕರ್ ಅರಸಿನಮಕ್ಕಿ, ಶ್ರೀ ಸತ್ಯನಾರಾಯಣ ಕೋಟೆ, ಶ್ರೀ ಪದ್ಮನಾಭ, ಶ್ರೀ ಗಣೇಶ್ ಡಿ.ಎಸ್, ಶ್ರೀ ಈಶ್ವರ ಭಟ್ ಪುಳು, ಶ್ರೀ ಮಹಾಲಿಂಗೇಶ್ವರ ಭಟ್, ಶ್ರೀ ಜಯಪ್ರಕಾಶ್, ಶ್ರೀ ಕೃಷ್ಣಮೂರ್ತಿ, ಶ್ರೀ ವಿನಯ ಶಂಕರ್, ಶ್ರೀ ಜಯಾನಂದ, ಶ್ರೀಮತಿ ಕೆ.ಭಾಗ್ಯಲಕ್ಷ್ಮಿ ಅರ್ತಿಕಜೆ, ಶ್ರೀಮತಿ ವಿದ್ಯಾಗೌರಿ ಪತ್ತಡ್ಕ, ಶ್ರೀಮತಿ ಪಾರ್ವತಿ ಎಡೆಕ್ಕೊಡ್ಳು, ಶ್ರೀಮತಿ ಮನೋರಮಾ, ಶ್ರೀಮತಿ ವರಲಕ್ಷ್ಮಿ.ಜೆ, ಸೇರಿ ಒಟ್ಟು 25 ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು. ಮಂಗಳೂರು ಮಂಡಲದ ಪದಾಧಿಕಾರಿ ಶ್ರೀಮತಿ ಮಾಲಿನಿ ಉದಯಶಂಕರ್ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವಲಯ ಕಾರ್ಯದರ್ಶಿ ಹಾಗೂ ಪುತ್ತೂರು ಗೋ ಪರಿವಾರ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಕೆ. ಆಯೋಜಿಸಿದ್ದರು.

 

 

ಮಂಗಳೂರು: ಮಂಡಲದ ಕಲ್ಲಡ್ಕ ವಲಯದ ವತಿಯಿಂದ ಶ್ರೀ ಉಮಾಶಿವ ಕ್ಷೇತ್ರದ ಪರಿಸರದಲ್ಲಿ ಶ್ರಮದಾನ ನಡೆಸಿ ಸ್ವಚ್ಛತಾಕಾರ್ಯವನ್ನು ಮಾಡಲಾಯಿತು. ಸುಮಾರು 13 ಸೇವಾಬಿಂದುಗಳು ಸೇವೆ ಸಲ್ಲಿಸಿದ್ದರು.

 

ಧಾರೇಶ್ವರ: ವಲಯದ ಹಂದಿಗೋಣ ಘಟಕದಲ್ಲಿ ಮುಂಜಾನೆ ಹಂದಿಗೋಣ ಶಾಲೆ ಸುತ್ತಮುತ್ತ ಶ್ರೀಮಠದ ಅಮೃತಪಥ ಯೋಜನೆ ಅಡಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ವಲಯದ ಅಧ್ಯಕ್ಷರಾದ ಶ್ರೀ ರಮಾನಂದ ಭಟ್, ಜೀವಿಕಾ ವಿಭಾಗದ ಶ್ರೀ ಜಗದೀಶ್ ಭಟ್, ಗುರಿಕ್ಕಾರರಾದ ಶ್ರೀ ಪ್ರಕಾಶ್ ಭಟ್, ಶ್ರೀ ಪಿ.ಟಿ.ಭಾಗ್ವತ್, ಶ್ರೀ ಗಜಾನನ ಶಾಸ್ತ್ರಿ, ಕಾರ್ಯಕರ್ತರಾದ ಶ್ರೀ ಜಿ.ಪಿ.ಭಾಗ್ವತ್, ಶ್ರೀ ನೀಲಕಂಠ ಹೆಗಡೆ, ಶ್ರೀ ನಿಖಿಲ್ ಭಟ್, ಶ್ರೀ ವಿನಯ್ ಭಟ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿತ್ತು.

 

 

ತುಮರಿ: ತುಮರಿ ವಲಯದ ವತಿಯಿಂದ ಹೊಳೆಬಾಗಿಲಿನಿಂದ ಕಳಸವಳ್ಳಿಯವರೆಗಿನ ರಸ್ತೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಮೂಲಕ ಅಮೃತಪಥ ಮಾಡಲಾಯ್ತು.
ಭೀಮನಕೋಣೆಯ ಮುಖ್ಯ ರಸ್ತೆಯಲ್ಲಿ ಅಮೃತ ಪಥ ನಡೆಸಿದರು.

 

ಕೆಕ್ಕಾರು: ಕೆಕ್ಕಾರು ಮಠದ ಪರಿಸರ ಹಾಗೂ ಹಳೆಮಠದ ಪರಿಸರದಲ್ಲಿ ಕೆಕ್ಕಾರು ವಲಯದ 20 ಜನ ಕಾರ್ಯಕರ್ತರಿಂದ ಅಮೃತಪಥ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

 

ಕುಮಟಾ: ಕುಮಟಾ ವಲಯ ಹಾಗೂ ಗುಡೆ ಅಂಗಡಿ ವಲಯಗಳಲ್ಲೂ ಅಮೃತಪಥ ಕಾರ್ಯಕ್ರಮವನ್ನು ನಡೆಸಲಾಗಿತ್ತು.

 

ಕಾರವಾರ: ಮೂರೂರು ಕಲ್ಲಬ್ಬೆ ವಲಯದ ಬಸವನಕೆರೆ ಭಾಗದಲ್ಲಿ ಹಾಗೂ ಕಾರವಾರದಲ್ಲಿ ನಡೆದ ಅಮೃತಪಥ ಕಾರ್ಯಕ್ರಮದಲ್ಲಿ ಗೋಪಥವನ್ನು ಸ್ವಚ್ಛಗೊಳಿಸಲಾಯ್ತು

Author Details


Srimukha

Leave a Reply

Your email address will not be published. Required fields are marked *