ಭಟ್ಕಳ: ಇಲ್ಲಿನ ಹವ್ಯಕ ವಲಯದ ವಾರ್ಷಿಕೋತ್ಸವದ ಅಂಗವಾಗಿ ಸರಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರ ಪ್ರಥಮ ಕಾರ್ಯಕ್ರಮ ಶಿರಾಲಿ ಸಾಲೆಮನೆಯ ಶ್ರೀ ಪ್ರಕಾಶ ಭಟ್ಟರ ಮನೆಯಲ್ಲಿ ಭಾನುವಾರ ನಡೆಯಿತು.
ವಲಯೋತ್ಸವ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ರಕ್ಷಣೆಯ ಕುರಿತು ಉಪನ್ಯಾಸ ನಡೆಯಿತು. ಆರೋಗ್ಯ ರಕ್ಷಣೆಗೆ ನಾವು ವಹಿಸಬೇಕಾದ ಕಾಳಜಿ ಕುರಿತು ವೈದ್ಯರಾದ ಶ್ರೀ ಡಾ. ಬಾಲಕೃಷ್ಣ ಭಟ್ಟ ಮಾಹಿತಿ ನೀಡಿದರು.
ಶ್ರೀಮಠದ ಸಂಘಟನೆಯ ಕುರಿತು ಶ್ರೀ ನೀಲಕಂಠ ಯಾಜಿ ಮಾತನಾಡಿದರು. ಶ್ರೀ ಕೃಷ್ಣಾನಂದ ಭಟ್ಟರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಂಭು ಹೆಗಡೆಯವರು ಕಾರ್ಯಕ್ರಮ ನಿರೂಪಿಸಿದರು. ಸುಮಾರು 90ಕ್ಕೂ ಅಧಿಕ ಹವ್ಯಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.