ಧಾರಾ ರಾಮಾಯಣದಲ್ಲಿ ವೈಭವದ ಸೀತಾರಾಮ ಕಲ್ಯಾಣ

ಸುದ್ದಿ

ಮಿರುಗುವ ಮದುವೆ ಮಂಟಪ, ಪುರೋಹಿತರ ಮಂತ್ರಘೋಷ, ದಶರಥ ಮತ್ತು ಸೀರಧ್ವಜ ದಂಪತಿಗಳು, ರಾಮಾಶ್ರಮದಲ್ಲಿ ಸೀತಾರಾಮರ ವಿವಾಹಮಹೋತ್ಸವದ ಸುಂದರ ಪುಣ್ಯದೃಶ್ಯ. ಒಂದಂಗುಲವೂ ಎಡೆಬಿಡದೆ ಬಂದು ಸೇರಿದ ರಾಮಭಕ್ತರು ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು.

 

ಹೌದು, ಪರಮಪೂಜ್ಯ ಶ್ರೀಸಂಸ್ಥಾನದವರು ಕಳೆದ ೨೦ ದಿನಗಳಿಂದ ಧಾರಾರಾಮಾಯಣವೆಂಬ ಹೆಸರಿನಲ್ಲಿ ರಾಮಕಥೆಯನ್ನು ಅನುಗ್ರಹಿಸುತ್ತಿರುವುದು ನಮಗೆ ತಳಿದಿರುವ ಸಂಗತಿ. ಈ ಮಾಲಿಕೆಯಲ್ಲಿ ಇಂದು ಸೀರಾರಾಮ ವಿವಾಹದ ಕಥೆ ಪ್ರಸ್ತುತವಾಯಿತು. ತದಂಗವಾಗಿ ಕಲ್ಯಾಣೋತ್ಸವವು ನಡೆಯಿತು. ಪ್ರತಿದಿನದಂತೆ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮನ ವಿವಾಹೋತ್ತರ ಕಥೆಯನ್ನೂ ಪ್ರಸ್ತುತಪಡಿಸಿದರು.

ಅಮೃತವರ್ಷಿಣೀ ಸಂಗೀತ ಶಾಲೆಯ ಶಿಕ್ಷಕರೂ ವಿದ್ಯಾರ್ಥಿಗಳೂ ಕಲ್ಯಾಣ ಗೀತೆಯನ್ನು ಹಾಡಿದರು. ಮಂಗಲಾಚರಣೆ ಯ ಅನಂತರ ಭಕ್ತರು ವಿಷ್ಣುಗುಪ್ತವಿಶ್ವಾಪೀಠದ ಉದಯಕ್ಕಾಗಿ ಧನದ್ರವ್ಯಗಳನ್ನು ಸಮರ್ಪಿಸಿದರು. ವಿವಾಹೋತ್ಸವದ ನಿಮಿತ್ತ ಸಮಿತಿಯು ಮಧುರ ಪ್ರಸಾದವಿತರಣೆಯನ್ನು ಮಾಡಿತು.

ಧಾರಾರಾಮಾಯಣದ ಪ್ರಾಯೋಜಕರಾಗಿ ಉಮಾಮಹೇಶ್ವರ ಹೆಗಡೆ ಗೊಟ್ನಕೊಡ್ಳು ದಂಪತಿಗಳು, ಸಹಪ್ರಾಯೋಜಕರಾಗಿ ಕಜೆಹಿತ್ತಲು ಗೋವಿಂದ ಭಟ್ಟ ದಂಪತಿಗಳೂ, ಜನಕ ದಂಪತಿಗಳಾಗಿ ಮುಸವಳ್ಳಿ ರಮೇಶ ಹೆಗಡೆ ದಂಪತಿಗಳು, ದಶರಥ ದಂಪತಿಗಳಾಗಿ ಹರಿಪ್ರಸಾದ ಪೆರಿಯಪ್ಪು ದಂಪತಿಗಳೂ ಸೇವೆಯನ್ನು ಸಲ್ಲಿಸಿದರು.

 

ಹೊನ್ನಾವರದಲ್ಲೂ ಆಚರಣೆ:
ಹೊನ್ನಾವರ ಮಂಡಲದ ಗೇರುಸೊಪ್ಪ ವಲಯದ ಮೇಲಿನ ಮಣ್ಣಿಗೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧಾರಾ ರಾಮಾಯಣದ ಸೀತಾಕಲ್ಯಾಣದ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಶೋಭಾ ರಾಮಚಂದ್ರ ಭಟ್ಟ ಇವರು ವಿಷ್ಣುಗುಪ್ತ ವಿಶ್ವವಿದ್ಯಾಲಯದ ಬಗ್ಗೆ ಮಾಹಿತಿ ನೀಡಿದರು.

 

Author Details


Srimukha

Leave a Reply

Your email address will not be published. Required fields are marked *