ಮಾತೃವಿಭಾಗದಿಂದ ಕುಂಕುಮಾರ್ಚನೆ, ವೈದಿಕವಿಭಾಗದಿಂದ ವೇದಪಠನ

ಸುದ್ದಿ

ಭಾರತ: ಗೋವಾ ವಲಯದ ಮಾತೃವಿಭಾಗ ಹಾಗೂ ವೈದಿಕ ವಿಭಾಗಗಳ ಸಂಯೋಜನೆಯಲ್ಲಿ ಕುಂಕುಮಾರ್ಚನೆ ಹಾಗೂ ಮಂತ್ರಪಠನೆ ಕಾರ್ಯಕ್ರಮ ಅ.೨೦ರಂದು ಸುಕೂರಿನ ಶ್ರೀ ಮೋಹನ ಬರ್ವೆ ಅವರ ನಿವಾಸದಲ್ಲಿ ನಡೆಯಿತು.

 

೧೬ ಮಾತೆಯರು ಲಲಿತಾಸಹಸ್ರನಾಮಪೂರ್ವಕ ಕುಂಕುಮಾರ್ಚನೆಯನ್ನು ನೆರವೇರಿಸಿದರು. ಶ್ರೀ ಲಕ್ಷ್ಮೀ ನೃಸಿಂಹ ಕರಾವಲಂಬ ಸ್ತೋತ್ರ ಇತ್ಯಾದಿ ಸ್ತೋತ್ರಗಳನ್ನು ಪಠಿಸಲಾಯಿತು. ಹನ್ನೊಂದು ಪುರುಷರು ವೇದಪಠನೆ ನೆರವೇರಿಸಿದರು.

 

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವೇ.ಮೂ. ಕೃಷ್ಣ ಭಟ್ಟರನ್ನು ಹಾಗೂ ಯಾಜಮಾನ್ಯ ವಹಿಸಿದ್ದ ಮೋಹನ ಬರ್ವೆ ಅವರನ್ನು ಗೋವಾ ಹವ್ಯಕ ವಲಯದ ಪರವಾಗಿ ಅಧ್ಯಕ್ಷ ಈಶ್ವರ ಹೆಗಡೆ ಗೌರವಿಸಿದರು. ವಲಯದ ಪದಾಧಿಕಾರಿಗಳು ಹಾಗೂ ಗುರಿಕಾರರು ಹಾಜರಿದ್ದರು.

Author Details


Srimukha

Leave a Reply

Your email address will not be published. Required fields are marked *