ನೂತನ ಘಟಕ ಸಮಿತಿ ರಚನೆ

ಸುದ್ದಿ

ಮುಳ್ಳೇರಿಯಾ: ಚಂದ್ರಗಿರಿ ವಲಯದ ತಂಡ್ರಪಾರೆ ಘಟಕ ಸಭೆಯು ಘಟಕಾಧ್ಯಕ್ಷ ಕಾಕುಂಜೆ ಶಂಕರನಾರಾಯಣ ಭಟ್ಟರ ನಿವಾಸದಲ್ಲಿ ಅ.೨೦ರಂದು ಸಂಜೆ ನಡೆಯಿತು.

 

ವಲಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಮೀನಗದ್ದೆ ಇವರು ಆಗಮಿಸಿ ಘಟಕ ಸಭೆಯ ರೂಪೀಕರಣದ ಮಾಹಿತಿ ನೀಡಿ, ನೂತನ ಘಟಕ ಸಮಿತಿ ರೂಪೀಕರಿಸಲಾಯಿತು. ಶ್ರೀ ಮಠದ ಯೋಜನೆಗಳು, ವಲಯದ ವ್ಯಾಟ್ಸಪ್ ಗಳ ರಚನೆ, ಮೂಲಮಠಗಳ ಕುರಿತಾದ ಮಾಹಿತಿ ನೀಡಲಾಯಿತು.

 

ಘಟಕ ಸಂಯೋಜಕರಾಗಿ ನರಸಿಂಹ ರಾಜ ಪಯ, ನಿರ್ದೇಶಕರಾಗಿ ಕಾಮಲ ಸುಬ್ರಹ್ಮಣ್ಯ ಭಟ್, ಶ್ರೀ ಕಾರ್ಯಕರ್ತರಾಗಿ ವೆಂಕಟ್ರಮಣ ಭಟ್ ರಾಯಕೊಚ್ಚಿ, ಮಹಾಭಲ ಸುಬ್ರಹ್ಮಣ್ಯ ಭಟ್ ಮರ್ದಂಗರೆ, ಶಂಕರ ನಾರಾಯಣ ಭಟ್ ಕಾಮಲ, ರಾಜಗೋಪಾಲ ಭಟ್ಟ ಕುಂಡುಕುಚ್ಚಿ ಯವರನ್ನು ಆರಿಸಲಾಯಿತು.

 

ಶಂಖನಾದ ಗುರುವಂದನೆ, ಲಕ್ಷ್ಮೀ ನರಸಿಂಹ ಕರಾವಲಂಬನ ಸ್ತೋತ್ರ ಪಾರಾಯಣಯೊಂದಿಗೆ ಪ್ರಾರಂಭವಾಯಿತು. ರಾಮತಾರಕಮಂತ್ರ ,ಶಾಂತಿಮಂತ್ರ, ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು.

Leave a Reply

Your email address will not be published. Required fields are marked *