ಹವ್ಯಕ ಮಹಾಸಭೆಯಿಂದ ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಪ್ರಕಟಣೆ

ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ನಾಡಿನ ಸುಪ್ರಸಿದ್ದ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ಜುಲೈ ೧೪ರಂದು ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆಯ ತನಕ ಮಲ್ಲೇಶ್ವರದಲ್ಲಿರುವ ಹವ್ಯಕ ಮಹಾಸಭೆಯ ಹವ್ಯಕ ಭವನದಲ್ಲಿ ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ.

 

ಡಾ. ರವಿಶಂಕರ್, ಡಾ. ದಿವಾಕರ್ ಭಟ್, ಡಾ. ಬಿ ಎಸ್ ಭಟ್, ಡಾ. ಅರುಣ್ ಅಡಕ್ಕೋಳಿ, ಡಾ. ಬಾಲಮುರಳಿ, ಡಾ. ಎಸ್ ಆರ್ ಹೆಗಡೆ ಹಾಗೂ ಮಹಾಸಭೆಯ ಅಧ್ಯಕ್ಷರು ಹಾಗೂ ಪ್ರಸಿದ್ದ ವೈದ್ಯರಾದ ಡಾ. ಗಿರಿಧರ್ ಕಜೆ ಸೇರಿದಂತೆ ಹಲವಾರು ಪ್ರಸಿದ್ಧ ವೈದ್ಯರ ತಂಡ ಕಣ್ಣಿನ ತೊಂದರೆ, ದಂತ ಪರೀಕ್ಷೆ, ಚರ್ಮವ್ಯಾಧಿ, ಸ್ತ್ರೀರೋಗ, ಕ್ಯಾನ್ಸರ್, ವಯಸ್ಕರಲ್ಲಿ ಸಂಧು ನೋವು, ಬೆನ್ನು ನೋವು, ಅರೆ ತಲೆನೋವು ಸೇರಿದಂತೆ ಎಲ್ಲ ಬಗೆಯ ರೋಗಗಳಿಗೆ ಅಲೋಪತಿ – ಹೋಮಿಯೋಪತಿ ಹಾಗೂ ಆಯುರ್ವೇದ ವೈದ್ಯಪದ್ದತಿಯಲ್ಲಿ ಪರೀಕ್ಷೆ ಹಾಗೂ ಉಚಿತ ಚಿಕಿತ್ಸೆ ಲಭ್ಯವಿದೆ.

 

ಸರ್ವಸಮಾಜದ ಹಿತಕ್ಕಾಗಿ ಹವ್ಯಕ ಮಹಾಸಭೆಯ ವೈದ್ಯಕೀಯ ಹಾಗೂ ಆರೋಗ್ಯ ಸಮಿತಿ ಈ ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸುತ್ತಿದ್ದು, ಕರ್ನಾಟಕ ಕ್ಯಾನ್ಸರ್ ಸೊಸೈಟಿ, ಸುನೇತ್ರ ಕಣ್ಣಿನ ಆಸ್ಪತ್ರೆ ಹಾಗೂ ಶ್ರೀ ಭಗವಾನ್ ಮಹಾವೀರ ಜೈನ್ ಆಸ್ಪತ್ರೆ ಇವರುಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದೆ.

 

ಹೆಚ್ಚಿನ ಮಾಹಿತಿಗಾಗಿ; ಮಹಾಸಭೆಯ ವೈದ್ಯಕೀಯ ಹಾಗೂ ಆರೋಗ್ಯ ಸಮಿತಿಯ ಸಂಚಾಲಕರಾದ ಡಾ. ಶ್ರೀಪಾದ್ ಹೆಗಡೆ ( ೯೪೪೮೦೧೮೬೫೪) ಹಾಗೂ ಮಹಾಸಭೆಯ ಕಾರ್ಯಾಲಯ ೦೮೦-೨೩೩೪೮೧೯೩ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *