ಭಟ್ಕಳ ಹವ್ಯಕ ವಲಯದ ೪ ನೇ ಕಾರ್ಯಕ್ರಮ

ಸುದ್ದಿ

ಭಟ್ಕಳ : ಗುರು ವಂದನೆಯೊಂದಿಗೆ ಭಟ್ಕಳ ಹವ್ಯಕ ವಲಯದ ೪ ನೇ ಕಾಯ೯ಕ್ರಮ ದಿನಾಂಕ ೨೭/೦೧/೨೦೧೯ ರಂದು ಶ್ರೀ ಮಹಾಬಲೇಶ್ವರ ವೆಂಕಣ್ಣ ಹೆಗಡೆಯವರ ಮನೆಯಲ್ಲಿ ನಡೆಯಿತು. ಬೆಳಿಗ್ಗೆ ೧೦ ಗಂಟೆಗೆ ಮಹಿಳೆಯರ ಸಾಮೂಹಿಕ ಕುಂಕುಮಾರ್ಚನೆಯೊಂದಿಗೆ ಪ್ರಾರಂಭವಾದ ಕಾಯ೯ಕ್ರಮದಲ್ಲಿ ಶ್ರೀಮತಿ ಗೀತಾ ಹೆಗಡೆಯವರು ” ಹವ್ಯಕ ಸಂಪ್ರದಾಯ ಉಳಿಸುವಿಕೆಯಲ್ಲಿ ಮಹಿಳೆಯರ ಪಾತ್ರ” ಈ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ಮಕ್ಕಳಿಗೆ ಬಾಲ್ಯದಲ್ಲೇ ಉಡುಗೆ ತೊಡುಗೆ ಬಗ್ಗೆ, ಆಚರಣೆ ಅನುಕರಣೆ ಕುರಿತು ಅರಿವು ಮೂಡಿಸಬೇಕು ಅದರಿಂದ ನಮ್ಮ ಹವ್ಯಕ ಸಂಪ್ರದಾಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂಬುದನ್ನು ಕೆಲವು ಉದಾಹರಣೆ ಕೊಟ್ಟು ವಿವರಿಸಿದರು. ಇದರಲ್ಲಿ ಪುರುಷರ ಪಾತ್ರವೂ ಇದೆ ಎನ್ನುವುದನ್ನು ನೆನಪಿಸಿದರು.

ವೇದಿಕೆಯಲ್ಲಿ ವಲಯದ ಉಪಾಧ್ಯಕ್ಷರಾದ ಶ್ರೀ ನೀಲಕಂಠ ಉಪಾಧ್ಯಾಯರು, ಆರ್. ಎನ್. ಎಸ್. ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಶ್ರೀ ಎಂ. ವಿ. ಹೆಗಡೆಯವರು, ಸಿದ್ದಾಪುರದ ಶ್ರೀ ಪ್ರಭಾಕರ ಭಟ್ಟರವರು, ಸಿದ್ದಾಪುರ ಮಂಡಳದ ಮಾತೃ ವಿಭಾಗದ ಪ್ರಧಾನರಾದ ಶ್ರೀಮತಿ ವೀಣಾ ಭಟ್ಟರು ಉಪಸ್ಥಿತರಿದ್ದರು.

ಯುವ ಪ್ರತಿಭಾವಂತ ಕುಮಾರ್ ಸಂದೀಪ ಭಟ್ಟ ಹಾಗೂ ಬಾಲ ಪ್ರತಿಭಾವಂತರಾದ ಧಾರಿಣಿ, ತನುಶ್ರೀ ತಮ್ಮ ತಮ್ಮ ಪ್ರತಿಭೆಯನ್ನು ತೋಪ೯ಡಿಸಿ ನೆರೆದ ಹವ್ಯಕರ ಮನ ಗೆದ್ದರು.

ಶ್ರೀಮತಿ ಗೀತಾ ಹೆಗಡೆ ಪ್ರಾಥ೯ನೆ ಹಾಡಿದರು, ಆತಿಥ್ಯ ವಹಿಸಿದ ಶ್ರೀ ಮಹಾಬಲೇಶ್ವರ ವೆಂಕಣ್ಣ ಹೆಗಡೆಯವರು ಸ್ವಾಗತಿಸಿದರು, ನಾಗರಾಜ ಹೆಗಡೆ ವಂದಿಸಿದರು.

ರಾಮತಾರಕ ಮಂತ್ರ, ಶಂಖನಾದದೊಂದಿಗೆ ಕಾಯ೯ಕ್ರಮಕ್ಕೆ ಅಂತಿಮ ರೂಪ ನೀಡಲಾಯಿತು.

Leave a Reply

Your email address will not be published. Required fields are marked *