ಉತ್ತರಬೆಂಗಳೂರು ಮಂಡಲದ ವಿದ್ಯಾರಣ್ಯ ವಲಯದಲ್ಲಿಯ ತ್ರಿಧಾರಾ ಎಂಬ ಸೇವಾ ಸಂಘಟನೆಯ 40 ಸದಸ್ಯರು ಸೇರಿ ಮೇ 12 ರಂದು ಮಾಲೂರು ಗೋಶಾಲೆಗೆ ಹೋಗಿ ಗಣಪತಿಹೋಮ, ಗೋಪೂಜೆ, ಸೀಡ್ ಬಾಲ್ ನಿರ್ಮಾಣ, ಮಕ್ಕಳಿಗೆ ಎತ್ತಿನ ಬಂಡಿಯ ಸವಾರಿ, ಮತ್ತು ಕೆಲವು ಆಟಗಳು ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಅಲ್ಲದೆ ಗೋಶಾಲೆಗೆ ಯಥಾಶಕ್ತಿ ಧನ ಸಂಗ್ರಹ ಮಾಡಿ ನೀಡಿದ್ದಾರೆ.