ಶ್ರೀರಾಜರಾಜೇಶ್ವರಿ ನಗರದಲ್ಲಿ ಅಮೃತಪಥ : ಎಲ್ಲರೂ ಭಾಗವಹಿಸಿ – ಗೋಕೃಪೆಗೆ ಪಾತ್ರರಾಗಿ

ಬೆಂಗಳೂರು: ಶ್ರೀರಾಜರಾಜೇಶ್ವರೀ ನಗರದ ಬಾಲಕೃಷ್ಣ ರಂಗಮಂದಿರದಲ್ಲಿ ರವಿವಾರ, ನ.25ರಂದು ಬೆಳಿಗ್ಗೆ 8.30 ರಿಂದ 11ಗಂಟೆಯ ವರೆಗೆ ‘ಅಮೃತ ಪಥ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.   ಗೋಮಾತೆಯು ಓಡಾಡುವ ಸ್ಥಳವನ್ನು  ಕಸ ಮತ್ತು  ಪ್ಲಾಸ್ಟಿಕ್ ಮುಕ್ತ ಪಥವನ್ನಾಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀಮಠದ ಎಲ್ಲಾ ಗೋ ಭಕ್ತರೂ ಭಾಗವಹಿಸಲು ವಿನಂತಿಸಲಾಗಿದೆ.

Continue Reading

ಗೋವಿಗಾಗಿ ಮೇವು : ಗುಂಪೆ ವಲಯದವರ ಶ್ರಮದಾನ

ಪೆರ್ಲ: ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗರ್ಶನದಲ್ಲಿರುವ ಕಾಸರಗೋಡು ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಮೇವಿನ ಹುಲ್ಲನ್ನು ಸಾಗಿಸಿ ತಲಪಿಸುವ ಶ್ರಮದಾನ ನವೆಂಬರ್ 17ರಂದು ಜರಗಿತು.   ಗುಂಪೆ ವಲಯದ ಪುತ್ತಿಗೆ ಸುಬ್ರಾಯ ದೇವಸ್ಥಾನದ ಹತ್ತಿರದ ಗದ್ದೆಯಲ್ಲಿದ್ದ ಹಸಿಹುಲ್ಲನ್ನು ಕತ್ತರಿಸಿ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಕಳುಹಿಸಿಕೊಡಲಾಯಿತು.   ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿಯ ಪ್ರಧಾನ ಶ್ರೀ ಕೇಶವ ಪ್ರಸಾದ ಎಡಕ್ಕಾನ, ಗುಂಪೆ ವಲಯದ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಭಟ್ ಬೆಜಪ್ಪ, ನೀರ್ಚಾಲು ವಲಯದ ಶಿಷ್ಯಮಾಧ್ಯಮ ವಿಭಾಗದ ಶ್ರೀ […]

Continue Reading

ಅಮೃತಪಥ : ಗೋವುಗಳು ಸಂಚರಿಸುವ ಹಾದಿ ಪ್ಲ್ಯಾಸ್ಟಿಕ್ ಮುಕ್ತಗೊಳಿಸುವ ವಿಶಿಷ್ಟ ಯೋಜನೆ – ವಲಯಗಳಲ್ಲಿ ಉತ್ತಮ‌ ಪ್ರತಿಕ್ರಿಯೆ

ಬೆಂಗಳೂರು: ಶ್ರೀಸಂಸ್ಥಾನದವರ ದಿವ್ಯ ಮಾರ್ಗದರ್ಶನದಲ್ಲಿ ರೂಪ ಪಡೆದ ಅಮೃತಪಥ ಯೋಜನೆಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಗೋವುಗಳು ಸಂಚರಿಸುವ ಹಾದಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಅಮೃತ ಸ್ವರೂಪವಾದ ಹಾಲು, ಗೋಮೂತ್ರ, ಗೋಮಯವನ್ನು ನೀಡುವ ಪುಣ್ಯಕೋಟಿಗೆ ಅಮೃತಪಥವನ್ನು ಮಾಡಿ ಕೊಡುವ ಸದುದ್ದೇಶದ ಯೋಜನೆಗೆ ಎಲ್ಲ ಮಂಡಲ ಹಾಗೂ ವಲಯಗಳ ಕಾರ್ಯಕರ್ತರು ಸಹಯೋಗ ನೀಡಿದ್ದಾರೆ.   ಮುಳ್ಳೇರಿಯ: ನಿರ್ಚಾಲು ವಲಯದಲ್ಲಿ ದಿನಾಂಕ ನವೆಂಬರ 18ರಂದು ಬೆಳಗ್ಗೆ 8 ಗಂಟೆಯಿಂದ 9ರವರೆಗೆ ಅಮೃತಪಥ ಕಾರ್ಯಕ್ರಮ ನಡೆಯಿತು. ಕುಂಟಿಕಾನ ಶಾಲೆಯ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ […]

Continue Reading

ಗೋಮಹತಿ ಕಾರ್ಯಾಗಾರ

ನೀವು ೧೮-೨೫ ವರ್ಷದೊಳಗಿನವರಾಗಿದ್ದು, ಗೋವನ್ನು ಪ್ರೀತಿಸುವವರಾಗಿದ್ದು, ಗೋವಿನ ಕುರಿತು ಜಾಗೃತಿ ಮೂಡಿಸಲು ಆಸಕ್ತರಿದ್ದೀರೇ? ಉತ್ತಮ ಭಾಷಣಕಾರರಾಗುವ ಗುರಿ ನಿಮಗಿದೆಯೇ? ಹಾಗಿದ್ದರೇ ಈ ಕಾರ್ಯಾಗಾರ ನಿಮಗಾಗಿಯೇ..   ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ ಘಟಕದ ಗೋಮಹತಿ‌ ವಿಭಾಗ ದಿಂದ ಇದೇ ಡಿಸೆಂಬರ್ 2, ಭಾನುವಾರದಂದು 18 ರಿಂದ 25 ವಯಸ್ಸಿನವರಿಗೆ ಕೋಲಾರ ಜಿಲ್ಲೆಯ ಮಾಲೂರಿನ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋಮಹತಿ ಕಾರ್ಯಾಗಾರ ಎಂಬ ಒಂದು ದಿನದ ಉಚಿತ ಭಾಷಣ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಗೋವಿಚಾರ ಜಾಗೃತಿ, ಭಾಷಣ […]

Continue Reading

ವಿಶಿಷ್ಟ ಗೋಧಾಮ ಗೋಸ್ವರ್ಗಕ್ಕೆ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ, ಉಪಾಧ್ಯಕ್ಷರಾದ ಕೆಕ್ಕಾರು ಶ್ರೀಧರ್ ಭಟ್, ಕಾರ್ಯದರ್ಶಿ ಪ್ರಶಾಂತ್ ಭಟ್ ಮಳವಳ್ಳಿ, ವಿನಾಯಕ ಮಧ್ಯಸ್ಥ ಹಾಗೂ ಮಹಾಸಭೆಯ ಪದಾಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದರು.

Continue Reading

ಗೋಸ್ವರ್ಗಕ್ಕೆ ಶಾಸಕರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆಗಮಿಸಿ, ಗೋಸ್ವರ್ಗದ ವೀಕ್ಷಣೆ ನೆಡೆಸಿದರು. ಈ ಸಂದರ್ಭದಲ್ಲಿ ಶ್ರೀ ಆರ್.ಎಸ್.ಹೆಗಡೆಯವರು ಉಪಸ್ಥಿತರಿದ್ದರು

Continue Reading

‘ಅಶು’ವೆಂಬ ಹಸುವಿಗೊಂದು ಪತ್ರ – ಶ್ರೀಮತಿ ಶುಭಶ್ರೀ ಭಟ್ಟ, ಗುಡಬಳ್ಳಿ ಕುಮಟಾ

‘ಅಶೂ!! ಹೇಗಿದ್ದಿಯಾ ಮರಿ? ಕಾಮಧೇನುವಿನ ಸ್ವರ್ಗದಲ್ಲಿ ಎಲ್ಲರೂ ಚೆನ್ನಾಗಿ ನೋಡ್ಕೊತಾ ಇದಾರಲ್ವಾ?ಹಿಂಡಿ, ಗಂಜಿ, ಅಕ್ಕಚ್ಚು, ನೀರು, ಹಣ್ಣೆಲ್ಲಾ ಚೆಂದ ಇರ್ತದಾ? ಬೇಕಾದಷ್ಟು, ಹೊಟ್ಟೆ ತುಂಬುವಷ್ಟು, ತಿಂದು ತೇಗುವಷ್ಟು ತಿನ್ನಲಿಕ್ಕೆ ಕೊಡ್ತಾರಾ ಅಶೂ? ನನ್ನ ಮೇಲಿನ್ನೂ ಸಿಟ್ಟುಂಟಾ? ನಾನೇನ್ ಮಾಡ್ಲಿ ಹೇಳು ನಾನಾಗ ತುಂಬಾ ಚಿಕ್ಕೋಳು.   ಕುಂದಾಪುರದ ಅತ್ತೆ ಮನೆಯಿಂದ ನಿನ್ನಮ್ಮ ಸರಸ್ವತಿಯ ಜೊತೆ ಪುಟು-ಪುಟುವೆಂದು ತಪ್ಪು ಹೆಜ್ಜೆ ಇಡುತ್ತಾ ಬಂದವಳು ನೀನು. ವಾರವೂ ತುಂಬಿರದ ನೀನು ನಮ್ಮೆಲ್ಲರಿಗೂ ಬಲು ಅಚ್ಚುಮೆಚ್ಚಾಗಿದ್ದೆ. ಕಪ್ಪುರೋಮದ ಮೈಯಿ, ಬಿಳಿ ಹಂಡಾಪಟ್ಟೆ […]

Continue Reading

ಮಗನ ಜನ್ಮದಿನ ವಿಶಿಷ್ಟವಾಗಿ ಆಚರಣೆ : ಗೋವಿಗಾಗಿ ಮೇವು ಸಮರ್ಪಿಸಿದ ಹೆತ್ತವರು

ಬಜಕೂಡ್ಲು: ಮಕ್ಕಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಪಾಶ್ಚಾತ್ಯ ಸಂಪ್ರದಾಯದಲ್ಲಿ ಆಚರಿಸುವ ಹೆತ್ತವರ ನಡುವೆ ಶ್ರೀಮಠದ ಭಕ್ತರಾದ ಮುಳ್ಳೇರಿಯ ಮಂಡಲ ವಿದ್ಯಾರ್ಥಿವಾಹಿನಿ ವಿಭಾಗದ ಪ್ರಧಾ‌ನರಾದ ಶ್ರೀ ಕೇಶವಪ್ರಸಾದ ಎಡಕ್ಕಾನ ಅವರು ತಮ್ಮ ಸುಪುತ್ರನ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿ ಇತರರಿಗೂ ಮಾದರಿಯಾಗಿದ್ದಾರೆ.   ನವೆಂಬರ್ ೧೫ರಂದು ಶ್ರೀ ಕೇಶವಪ್ರಸಾದ ಎಡಕ್ಕಾನ ಅವರ ಪುತ್ರ ಕು. ರಾಮಶರ್ಮನ ಹುಟ್ಟುಹಬ್ಬವಿತ್ತು. ಅಂದು ಮಗನ ಹೆಸರಿನಲ್ಲಿ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಗೋಪೂಜಾ ಸೇವೆ ಹಾಗೂ ಗೋವಿಗಾಗಿ ಮೇವು ಯೋಜನೆಯಲ್ಲಿ ಒಂದು ದಿನದ ಮೇವು ಸಮರ್ಪಿಸಿ […]

Continue Reading

ಅಮೃತಧಾರಾ ಗೋಶಾಲೆಯಲ್ಲಿ ಸಂಪನ್ನಗೊಂಡಿತು ಗೋಮಾತಾಸಪರ್ಯಾ~ಗೋಪಾಷ್ಟಮೀ

  ಪೆರ್ಲ: ಗೋಪಾಷ್ಟಮಿಯ ಶುಭ ಸಂದರ್ಭದಲ್ಲಿ ಶುದ್ಧ ದೇಶೀಯ ತಳಿಯ ಗೋಮಯದಿಂದ ತಯಾರಿಸಿದ ಗೋವರ್ಧನಗಿರಿಯಲ್ಲಿ ಗುರುವಾರ ರಾತ್ರಿ ಭಗವಾನ್ ಶ್ರೀಕೃಷ್ಣನಿಗೆ ನಡೆದ ರಂಗಪೂಜೆಯನ್ನು ದೀಪದ ಬೆಳಕಿನಲ್ಲಿ ಭಕ್ತಿಭಾವದೊಂದಿಗೆ ಆಚರಿಸಿ ಅನೇಕ ಭಕ್ತಾದಿಗಳು ಕಣ್ತುಂಬಿಕೊಂಡರು.   ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿ ನಡೆಯುತ್ತಿರುವ ಕಾಸರಗೋಡು -ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಕಳೆದ ಒಂದುವಾರದಿಂದ ನಡೆದು ಬರುತ್ತಿದ್ದ ಗೋಮಾತಾ ಸಪರ್ಯಾ ಹಾಗೂ ೮ನೇ ವರ್ಷದ ಗೋಪಾಷ್ಟಮೀ ಮಹೋತ್ಸವವು ಗುರುವಾರ ರಾತ್ರಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನವಾಯಿತು. ಬೆಳಗ್ಗೆ ಗಣಪತಿ ಹವನ, ಕಾಮಧೇನು ಹವನ, […]

Continue Reading

ಕಸಾಯಿಖಾನೆಗೆ ಸಾಗಿಸುತ್ತಿದ್ದ ಎತ್ತುಗಳ ರಕ್ಷಣೆ: ರಕ್ಷಿಸಿದ ಎತ್ತುಗಳಿಗೆ ಅಗತ್ಯ ಮೇವು ನೀಡಲು ದಾನಿಗಳಿಗೆ ಕೋರಿಕೆ

ಬೆಂಗಳೂರು: ನಗರದ ಚಿಕ್ಕಜಾಲ ಪೊಲೀಸ್ ಠಾಣಾ‌ ವ್ಯಾಪ್ತಿಯ ರಾಮಗಿರಿ ಸರ್ಕಲ್ ಬಳಿ ಎರಡು ಟ್ರಕ್ ಗಳಲ್ಲಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಎತ್ತುಗಳನ್ನು ಪೊಲೀಸರು ರಕ್ಷಿಸಿದ್ದಾರೆ.   ಈ ಎತ್ತುಗಳನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಬೆಂಗಳೂರು ನಗರಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ರಾತ್ರಿ ವೇಳೆಯಲ್ಲಿ ಗಸ್ತು ನಡೆಸುತ್ತಿದ್ದ ಪೊಲೀಸರು ಈ ಎತ್ತುಗಳನ್ನು ಹಿಡಿದಿರುತ್ತಾರೆ. ಈ ದೇಶೀ ತಳಿಯ ಎತ್ತುಗಳನ್ನು ಬಾಗೆಪಲ್ಲಿಯ ಸಂತೆಯಲ್ಲಿ ಮಾರಾಟ ಮಾಡಲೆಂದು ಸಾಗಿಸುತ್ತಿದ್ದುದಾಗಿ ಸಾಗಾಟಗಾರರು ಹೇಳಿದರೂ ಇದನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.   ಠಾಣಾಧಿಕಾರಿಗಳು ಚಿಕ್ಕಜಾಲ ಠಾಣೆಯಲ್ಲಿ ಕೇಸು […]

Continue Reading

ಮಾನವೀಯತೆಯ ಸಾಕಾರ ಮಹದೀಶ್ವರ

ಕೇರಳದ ತುತ್ತತುದಿ ಮತ್ತು ಕರ್ನಾಟಕದ ಪಾದಮೂಲದಲ್ಲಿರುವ ಗಡಿನಾಡು ಕಾಸರಗೋಡು. ೧೯೫೬ರಲ್ಲಿ ಕೇರಳದ ತೆಕ್ಕೆಗೆ ಸೇರಿದ ಈ ಊರು ೧೯೮೪ರಲ್ಲಿ ಜಿಲ್ಲಾಕೇಂದ್ರವಾಯ್ತು. ಹೆಚ್ಚುಕಡಿಮೆ ಹದಿಮೂರು ಲಕ್ಷ ಜನಸಂಖ್ಯೆ. ಸಂಖ್ಯಾ ಬಾಹುಳ್ಯದಲ್ಲಿ ಹಿಂದೂಗಳ ಅನಂತರದ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ೩.೪೮ ಕೋಟಿ ಕೇರಳದ ಜನಸಂಖ್ಯೆ. `ಟೈಮ್ಸ್ ಆಫ್ ಇಂಡಿಯಾ’ ಮತ್ತು `ದಿ ಹಿಂದು’ ವರದಿ (೨೦೧೫-೨೦೧೬)ಗಳ ಪ್ರಕಾರ ಭಾರತ ದೇಶದಲ್ಲೇ ಅತ್ಯಧಿಕ ಬೀಫ್ (ಹಸು ಮತ್ತು ಕೋಣಗಳ ಮಾಂಸ) ಬಳಕೆಯಾಗುತ್ತಿರುವ ರಾಜ್ಯ ಕೇರಳ. ಸಂಖ್ಯಾ ಸಮೀಕ್ಷೆ: ೩೫,೩೨೪ ಸಾವಿರ ಮೆಟ್ರಿಕ್ ಟನ್ […]

Continue Reading

ಅಮೃತಧಾರಾ ಗೋಶಾಲೆಯಲ್ಲಿ ಶನಿದೋಷ ನಿವಾರಣೆಗೆ ನಡೆಯಿತು‌ ವಿಶೇಷಪೂಜೆ: ನವೆಂಬರ್ 15 ರವರೆಗೂ ನಡೆಯಲಿದೆ ಪೂಜಾ ಕಾರ್ಯ

ಪೆರ್ಲ: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಶನಿವಾರ ಶನಿದೋಷ ನಿವಾರಣೆಗಾಗಿ ಶ್ರೀ ಆಂಜನೇಯ ಕಲ್ಪೋಕ್ತ ಪೂಜೆ ಹಾಗೂ ಆಂಜನೇಯ ಹೋಮ ನಡೆಯಿತು.   ನೂರಾರು ಭಕ್ತಾದಿಗಳು ಈ ಸಂದರ್ಭದಲ್ಲಿ ಭಕ್ತಭಾವದೊಂದಿಗೆ ಶನಿದೋಷ ನಿವಾರಣೆಗಾಗಿ ಪೂಜೆ ನಡೆಸಿದರು. ಬೆಳಗ್ಗೆ ಮಹಾಗಣಪತಿ ಹೋಮ, ಕಾಮಧೇನು ಹವನ, ಗೋಪೂಜೆಗಳು ನಡೆದವು. ಮಧ್ಯಾಹ್ನ ಪೂರ್ಣಾಹುತಿಯ ಅನಂತರ ವೈದಿಕ ಪ್ರಧಾನ ವೇದಮೂರ್ತಿ ಶ್ರೀ ಕೇಶವ ಪ್ರಸಾದ ಕೂಟೇಲು ಪ್ರಾರ್ಥನೆ‌ ಸಲ್ಲಿಸಿದರು.   ಈ ಸೇವೆಯನ್ನು ಕಾರ್ತಿಕ ಮಾಸದ ಶನಿವಾರದ ದಿನ ಶನಿದೋಷ ನಿವಾರಣೆಗಾಗಿ […]

Continue Reading

ಮುಂಬೈನಲ್ಲೂ ನಡೆಯಿತು ಸಂಭ್ರಮದ ಗೋಪೂಜೆ: ನಿಜಾರ್ಥದಲ್ಲಿ ಬೆಳಕಿನ ಹಬ್ಬ ಆಚರಿಸಿದ ಗೋಪ್ರೇಮಿಗಳು

ಮುಂಬೈ: ದೀಪಾವಳಿಗೂ ಗೋಪೂಜೆಗೂ ಅವಿನಾಭಾವ ಸಂಬಂಧವಿದೆ. ಅದರಲ್ಲೂ ಕೃಷಿ ಅವಲಂಬಿತ ಎಲ್ಲ ಭಾಗಗಳಲ್ಲೂ ದೀಪಾವಳಿಯಲ್ಲಿ ಗೋಪೂಜೆ ನಡೆಸುವುದು ವಾಡಿಕೆ. ಆದರೆ ಗೋಪೂಜೆ ಕೇವಲ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ ಮಹಾನಗರಗಳಲ್ಲೂ ಇದೆ. ಶ್ರೀರಾಮಚಂದ್ರಾಪುರಮಠ ಹಾಗೂ ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಮುಂಬಯಿಯ ಕೋಲಾಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಯಲ್ಲಿ, ಯಾವ ಗ್ರಾಮೀಣ ಪ್ರದೇಶಕ್ಕೂ ಕಡಿಮೆ ಇಲ್ಲದಂತೆ ಗೋಪೂಜೆಯೊಂದಿಗೆ ಸಂಭ್ರಮದಿಂದ ದೀಪಾವಳಿ ಆಚರಿಸಲಾಯಿತು.   ನವೆಂಬರ್ 8ರಂದು ನಡೆದ ಗೋಪೂಜೆಯಲ್ಲಿ ಮುಂಬಯಿ ವಲಯ ಅಧ್ಯಕ್ಷ ಶ್ರೀ ಕೃಷ್ಣ ಭಟ್ಟ ಗುಡ್ಡೆಬಾಳ ಪಾಲ್ಗೊಂಡು ಪೂಜೆ‌ ಸಲ್ಲಿಸಿದರು. ಈ […]

Continue Reading

ಜೇಡ್ಲ ಗೋಶಾಲೆಯಲ್ಲಿ ದೀಪಾವಳಿ : ಗೋಪೂಜೆ- ಕುಂಕುಮಾರ್ಚನೆ

ಸುಳ್ಯ : ಸುಳ್ಯ ಹವ್ಯಕ ವಲಯದ ವತಿಯಿಂದ ಸಂಪಾಜೆಯ ಜೇಡ್ಲದಲ್ಲಿರುವ ಶ್ರೀಮಠದ ಗೋಶಾಲೆಯಲ್ಲಿ ನವೆಂಬರ್ 09ರಂದು ಶೃದ್ಧಾಭಕ್ತಿಯಿಂದ ಗೋಪೂಜೆ‌ ನೆರವೇರಿಸಲಾಯಿತು.   ಗೋಪೂಜೆ ಸಂದರ್ಭದಲ್ಲಿಯೇ ಮಾತೆಯರು ಕುಂಕುಮಾರ್ಚನೆ ಗೈಯ್ದರು. ಅಲ್ಲದೇ ಸುಳ್ಯ ವಲಯ ವೈದಿಕ-ಸಂಸ್ಕಾರ ವಿಭಾಗದ ವತಿಯಿಂದ 114ನೇ ವೇದವಾಹಿನಿ ಪಾರಾಯಣವನ್ನೂ ಕೈಗೊಳ್ಳಲಾಯಿತು. ವೈದಿಕರಾದ ಎತ್ತುಕಲ್ಲು ಶ್ರೀ ನಾರಾಯಣ ಭಟ್, ಅರಂಬೂರು ಶ್ರೀ ಕೃಷ್ಣ ಭಟ್, ಶ್ರೀ ವಿಶ್ವಕೀರ್ತಿ ಜೋಯಿಸರು, ಶ್ರೀ ವೆಂಕಟೇಶ ಶಾಸ್ತ್ರೀ ಪಾರಾಯಣ ಹಾಗೂ‌ ಇತರ ಧಾರ್ಮಿಕ‌ ವಿಧಿವಿಧಾನ ನಡೆಸಿಕೊಟ್ಟರು.   ವಲಯದ ಅಧ್ಯಕ್ಷರಾದ […]

Continue Reading

ಗೋಸ್ವರ್ಗದಲ್ಲಿ ಗವ್ಯೋತ್ಪನ್ನ ತರಬೇತಿ ಶಿಬಿರ

ಸಾವಿರದ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ, ಸಪ್ತದೇವತೆಗಳ ಸನ್ನಿಧಿಯಾದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೋಸ್ವರ್ಗದಲ್ಲಿ ಕರ್ನಾಟಕ ರಾಜ್ಯ ಗೋಪರಿವಾರದ ಆಶ್ರಯದಲ್ಲಿ ನವೆಂಬರ್ 23,24,25 ರಂದು ಗವ್ಯೋತ್ಪನ್ನಗಳ ತಯಾರಿಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರ ಗೋವಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಗೋಮಯ, ಗೋಮೂತ್ರ ಸೇರಿದಂತೆ ಆರೋಗ್ಯ, ಕೃಷಿ, ಪರಿಸರದ ಸಮೃದ್ಧಿಗೆ ಸಹಕಾರವಾಗುವ ವಿವಿಧ ಗವ್ಯೋತ್ಪನ್ನಗಳ ತಯಾರಿಕೆಯ ಪ್ರಾತ್ಯಕ್ಷಿಕೆಯ ಜೊತೆ ತರಬೇತಿ ನೀಡಲಾಗುವುದು. ಮೂರು ದಿನಗಳ ವಸತಿ ಸಹಿತ ಶಿಬಿರದಲ್ಲಿ ಊಟೋಪಚಾರ ಹಾಗೂ ಸಾಮೂಹಿಕ ವಸತಿ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಆಸಕ್ತರು ನವೆಂಬರ್ 20ನೇ […]

Continue Reading

ಮಾಲೂರು‌ ಗೋಶಾಲೆಯಲ್ಲಿ ಗೋಪೂಜೆ – ದೀಪೋತ್ಸವ – ಪುಣ್ಯಕಾರ್ಯದಲ್ಲಿ‌ ಪಾಲ್ಗೊಂಡ‌ ಗೋಪ್ರೇಮಿಗಳು

ಮಾಲೂರು: ಮಾಲೂರು ತಾಲೂಕು ಗಂಗಾಪುರದ ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ದೀಪಾವಳಿ ಅಂಗವಾಗಿ ನವೆಂಬರ್ 8 ರ ಸಂಜೆ ಗೋಪೂಜೆ‌ ನಡೆಯಿತು.   ವೇ. ಮೂ. ಗೋಪಾಲಕೃಷ್ಣ ಭಟ್ ರವರ ಮಾರ್ಗದರ್ಶನದಲ್ಲಿ ಗೋ‌ ಆಶ್ರಮ ನಿರ್ವಹಣಾ ಸಮಿತಿ ಕೋಶಾಧ್ಯಕ್ಷರು ಸೇರಿದ ಸಮಸ್ತರ ಪರವಾಗಿ ಗೋಪೂಜೆ ನಡೆಸಿದರು.   ಅನಂತರ‌ ದೀಪಾವಳಿ ಬೆಳಕನ್ನು ಗೋಶಾಲೆಯಲ್ಲೂ ಮೂಡಿಸುವ ಉದ್ದೇಶದಿಂದ ಗೋಶಾಲೆ‌ ಉದ್ದಕ್ಕೂ‌ ಹಣತೆಯನ್ನು ಹಚ್ಚಿ ದೀಪೋತ್ಸವ ನೆರವೇರಿಸಲಾಯಿತು.   ಇದೇ ಸಂದರ್ಭದಲ್ಲಿ ಸ್ಥಳದಲ್ಲಿರುವ ಶ್ರೀ ಸಿದ್ಧ ಆಂಜನೇಯಸ್ವಾಮಿ ದೇವರಿಗೂ ವಿಶೇಷ ಅಭಿಷೇಕ ಪೂಜೆ […]

Continue Reading

ಇಂದಿನಿಂದ ಪೆರ್ಲದಲ್ಲಿ ಗೋಮಾತಾಸಪರ್ಯಾ ಹಾಗೂ ಗೋಪಾಷ್ಟಮಿ ಮಹೋತ್ಸವ

ಪೆರ್ಲ: ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮಮಂದಿರದಲ್ಲಿ ಇಂದಿನಿಂದ ನವೆಂಬರ 15ರ ತನಕ ಗೋಮಾತಾಸಪರ್ಯಾ ಹಾಗೂ ಗೋಪಾಷ್ಟಮಿ ಮಹೋತ್ಸವ ನಡೆಯಲಿದೆ.   ನವೆಂಬರ್ ೭ ಬುಧವಾರ ಸಂಜೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ದೇವತಾ ಪ್ರಾರ್ಥನೆ, ಸಪ್ತಶುದ್ಧಿ, ಪುಣ್ಯಾಹ, ಮಂಟಪ ಸಂಸ್ಕಾರ, ವಾಸ್ತು ಪೂಜೆ, ರಾಕ್ಷೋಘ್ನ ಹವನ, ನ.8ರಂದು ಬೆಳಗ್ಗೆ 7ರಿಂದ ಗಣಪತಿ ಹವನ, ಕಾಮಧೇನು ಹವನ, ಸಂಜೆ 4.30ರಿಂದ ಭಜನರಾಮಾಯಣ, ವಿಷ್ಣುಸಹಸ್ರನಾಮ ಪಾರಾಯಣ, ಗೋಪೂಜೆ, ತುಳಸೀಪೂಜೆ, ಗೋಪಾಲಕೃಷ್ಣ ಪೂಜೆ, ರಾತ್ರಿ 7ರಿಂದ ದೀಪೋತ್ಸವ, ಮಂಗಳಾರತಿ, ಪ್ರಸಾದ […]

Continue Reading

ಗೋವಿಗಾಗಿ ಮೇವು- ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಕಾರ್ಯಕರ್ತರು

ಕಾಸರಗೋಡು: ಶ್ರೀಸಂಸ್ಥಾನದವರ ದಿಗ್ದರ್ಶನದಲ್ಲಿರುವ ಕಾಸರಗೋಡು ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಪೆರಡಾಲ ವಲಯದ ಮಾಯಿಲಂಕೋಡಿ ಗಣೇಶ ಭಟ್ ಇವರ ಹಿತ್ತಲಲ್ಲಿ ಇದ್ದ ಮೇವಿನ ಹುಲ್ಲನ್ನು ಸಾಗಿಸಿ ತಲುಪಿಸುವ ಶ್ರಮದಾನ ಯಶಸ್ವಿಯಾಗಿ ಜರುಗಿತು.   ಮಂಗಳವಾರ ಗಣೇಶ್ ಭಟ್ ಅವರ ಹಿತ್ತಲಿನ ಹಸಿಹುಲ್ಲನ್ನು ಕಾರ್ಯಕರ್ತರ ನೇತೃತ್ವದಲ್ಲಿ ಕತ್ತರಿಸಲಾಯಿತು. ಮಹಾಮಂಡಲ ಅಧ್ಯಕ್ಷರಾದ ಶ್ರೀಮತಿ ಈಶ್ವರಿ ಶ್ಯಾಮ್ ಭಟ್ ಬೇರ್ಕಡವು, ಮುಳ್ಳೇರಿಯ ಮಂಡಲ ಮಾತೃ ವಿಭಾಗದ ಕುಸುಮಾ ಪೆರ್ಮುಖ, ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ, ಶ್ಯಾಮ್ ಭಟ್ […]

Continue Reading

ದೀಪಾವಳಿಯಂದು ಮಹಾನಂದಿ ಗೋಲೋಕಕ್ಕೆ ಬನ್ನಿ- ಗೋಪೂಜೆ ಸಲ್ಲಿಸಿ, ಗೋಗ್ರಾಸ ನೀಡಿ ಪುಣ್ಯಪ್ರಾಪ್ತಿ ಮಾಡಿಕೊಳ್ಳಿ

ಹೊಸನಗರ: ಗೋವುಗಳು ಅನಾದಿಕಾಲದಿಂದಲೂ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಗೋವುಗಳು ಎಷ್ಟರಮಟ್ಟಿಗೆ ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿತ್ತು ಎಂದರೆ ಹಿಂದಿನ ಕಾಲದಲ್ಲಿ ಯಾರ ಬಳಿ ಹೆಚ್ಚು ಗೋವುಗಳಿದೆ ಎಂಬ ಆಧಾರದ ಮೇಲೆ ಆತನ ಸಿರಿತನವನ್ನು ನಿರ್ಧರಿಸಲಾಗುತ್ತಿತ್ತು. ಅನ್ಯವಸ್ತುಗಳ ವಿನಿಮಯವೂ ಗೋವುಗಳ‌ ಮೂಲಕವೇ ಆಗುತ್ತಿತ್ತು. ಉಡುಗೊರೆಯಾಗಿಯೂ ಗೋವುಗಳನ್ನೇ ಕೊಡಲಾಗುತ್ತಿತ್ತು.   ಮನುಷ್ಯನ ಜೀವನ ಸಂಪೂರ್ಣ ಗೋ ಆಧಾರಿತ ಎಂದರೆ ತಪ್ಪಾಗಲಾರದು. ಏಕೆಂದರೆ ತಾಯಿ ಎದೆಹಾಲು ಕೊಡುವುದನ್ನು ನಿಲ್ಲಿಸಿದ ಮೇಲೆ ಅದಕ್ಕೆ ಪ್ರತಿಯಾಗಿ ತನ್ನ ಅಮೃತಸದೃಶ ಕ್ಷೀರವನ್ನು ಮನುಕುಲಕ್ಕೆ ಪೂರೈಸಿ ಮನುಷ್ಯನನ್ನು […]

Continue Reading