ಬೆಂಗಳೂರು: ನಗರದ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಗಿರಿ ಸರ್ಕಲ್ ಬಳಿ ಎರಡು ಟ್ರಕ್ ಗಳಲ್ಲಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಎತ್ತುಗಳನ್ನು ಪೊಲೀಸರು ರಕ್ಷಿಸಿದ್ದಾರೆ.
ಈ ಎತ್ತುಗಳನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಬೆಂಗಳೂರು ನಗರಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ರಾತ್ರಿ ವೇಳೆಯಲ್ಲಿ ಗಸ್ತು ನಡೆಸುತ್ತಿದ್ದ ಪೊಲೀಸರು ಈ ಎತ್ತುಗಳನ್ನು ಹಿಡಿದಿರುತ್ತಾರೆ. ಈ ದೇಶೀ ತಳಿಯ ಎತ್ತುಗಳನ್ನು ಬಾಗೆಪಲ್ಲಿಯ ಸಂತೆಯಲ್ಲಿ ಮಾರಾಟ ಮಾಡಲೆಂದು ಸಾಗಿಸುತ್ತಿದ್ದುದಾಗಿ ಸಾಗಾಟಗಾರರು ಹೇಳಿದರೂ ಇದನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಠಾಣಾಧಿಕಾರಿಗಳು ಚಿಕ್ಕಜಾಲ ಠಾಣೆಯಲ್ಲಿ ಕೇಸು ದಾಖಲಿಸಿ ಮುಂದಿನ ತೀರ್ಮಾನದವರೆಗೆ ಸಾಕಲು ಕೋಲಾರ ಮಾಲೂರಿನ ಶ್ರೀರಾಘವೇಂದ್ರ ಗೋಆಶ್ರಮಕ್ಕೆ ತಂದು ಬಿಟ್ಟಿರುತ್ತಾರೆ. ಸದ್ಯ ಗೋವುಗಳಿಗೆ ನೀರು, ಮೇವು ನೀಡಲಾಗುತ್ತಿದೆ. ಅವುಗಳ ಪೈಕಿ ಏಳೆಂಟು ಗೋವುಗಳು ಸುದೀರ್ಘ ಪ್ರಯಾಣದ ಕಾರಣದಿಂದ ನಿತ್ರಾಣಗೊಂಡಿದ್ದು, ಅನಾರೋಗ್ಯದ ಕಾರಣವೂ ಸೇರಿ ಬದುಕುಳಿಯುವ ಸಾಧ್ಯತೆಯೂ ಕಡಿಮೆ ಇದೆ.
ಎಲ್ಲ ಗೋವುಗಳಿಗೂ ಅಗತ್ಯ ಚಿಕಿತ್ಸೆಯನ್ನು, ಉಪಚಾರವನ್ನು ವೈದ್ಯರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಆದರೆ ಇವುಗಳಿಗೆ ಮೇವಿನ ಅವಶ್ಯಕತೆ ಇದೆ. ಹೀಗಾಗಿ ಈ ಎತ್ತುಗಳ ನಿರ್ವಹಣೆಗಾಗಿ ಗೋಶಾಲೆಯು ದಾನಿಗಳ ಸಹಕಾರವನ್ನು ಬಯಸುತ್ತಿದೆ. ದಾನಿಗಳು ಮೇವನ್ನು ನೇರವಾಗಿ ಗೋಆಶ್ರಮಕ್ಕೆ ಕಳುಹಿಸಿಕೊಡಬಹುದು ಅಥವಾ ಹಣಕಾಸಿನ ನೆರವನ್ನು ಕೂಡ ನೀಡಬಹುದು.
ಹಣಕಾಸಿನ ನೆರವನ್ನು ಶ್ರೀರಾಘವೇಂದ್ರ ಗೋಆಶ್ರಮದ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.
ಬ್ಯಾಂಕ್ ಖಾತೆ ವಿವರ:
Account Name: Sri Raghavendra Gou Ashrama Trust
Account type: S B Account
Account No: 0484101027734
Bank: Canara Bank
Branch: Malur Branch
IFSC code: CNRB0000484 ಇಲ್ಲಿಗೆ ಕಳುಹಿಸಬಹುದಾಗಿದೆ.