ಗೋವಿಗಾಗಿ ಮೇವು : ಗುಂಪೆ ವಲಯದವರ ಶ್ರಮದಾನ

ಗೋವು ಸುದ್ದಿ

ಪೆರ್ಲ: ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗರ್ಶನದಲ್ಲಿರುವ ಕಾಸರಗೋಡು ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಮೇವಿನ ಹುಲ್ಲನ್ನು ಸಾಗಿಸಿ ತಲಪಿಸುವ ಶ್ರಮದಾನ ನವೆಂಬರ್ 17ರಂದು ಜರಗಿತು.

 

ಗುಂಪೆ ವಲಯದ ಪುತ್ತಿಗೆ ಸುಬ್ರಾಯ ದೇವಸ್ಥಾನದ ಹತ್ತಿರದ ಗದ್ದೆಯಲ್ಲಿದ್ದ ಹಸಿಹುಲ್ಲನ್ನು ಕತ್ತರಿಸಿ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಕಳುಹಿಸಿಕೊಡಲಾಯಿತು.

 

ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿಯ ಪ್ರಧಾನ ಶ್ರೀ ಕೇಶವ ಪ್ರಸಾದ ಎಡಕ್ಕಾನ, ಗುಂಪೆ ವಲಯದ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಭಟ್ ಬೆಜಪ್ಪ, ನೀರ್ಚಾಲು ವಲಯದ ಶಿಷ್ಯಮಾಧ್ಯಮ ವಿಭಾಗದ ಶ್ರೀ ಮಹೇಶ ಕೃಷ್ಣ ತೇಜಸ್ವಿ , ಶ್ರೀ ಲಕ್ಷ್ಮಣ ಹೆಬ್ಬಾರ ಶ್ರಾವಣಕೆರೆ, ಶ್ರೀ ರಾಮ ಶರ್ಮ ಎಡಕ್ಕಾನ ಅವರು ಶ್ರಮಸೇವೆ ಸಲ್ಲಿಸಿದರು.

 

ಘಟಕದ ಗುರಿಕ್ಕಾರ ಶ್ರೀ ಬಿ.ಯಲ್. ಶಂಭು ಹೆಬ್ಬಾರ ಹುಲ್ಲು ಕಟಾವು ಮಾಡುವ ಯಂತ್ರವನ್ನು ಒದಗಿಸಿದರು. ಶ್ರೀ ಅಜಿತ್ ಅವರ ಟೆಂಪೋದಲ್ಲಿ ಹುಲ್ಲನ್ನು ಸಾಗಿಸಲಾಯಿತು.

Author Details


Srimukha

Leave a Reply

Your email address will not be published. Required fields are marked *