ಮಾತು~ಮುತ್ತು : ಗುರುವಿನ ಮಹತ್ತ್ವ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಶ್ರೀಸಂಸ್ಥಾನ

ಒಂದು ಊರಿನಲ್ಲಿ ಒಬ್ಬ ಯುವಕನಿಗೆ ಜುಡೋ ಕಲಿಯಬೇಕೆಂಬ ಇಚ್ಛೆಯಾಗುತ್ತದೆ. ಅವನು ಗುರುವನ್ನು ಅರಸುತ್ತಾ ಹೋಗುತ್ತಾನೆ. ಹೀಗಿರುವಾಗ ಜುಡೋ ಕಲಿಸುವ ಒಬ್ಬ ಗುರು ಅವನಿಗೆ ಸಿಗುತ್ತಾನೆ.

 

ಆದರೆ ಯುವಕನಿಗೆ ಒಂದು ಕೈ ಇಲ್ಲದಿರುವುದನ್ನು ಗಮನಿಸಿದ ಗುರು ಒಂದು ಕೈಯಿಂದ ಆಟವಾಡುವ ಒಂದು ಪಾಠವನ್ನು ಮಾತ್ರ ಅವನಿಗೆ ಕಲಿಸಿಕೊಟ್ಟು ಪ್ರತಿದಿನ ಅಭ್ಯಾಸ ಮಾಡುವಂತೆ ಹೇಳುತ್ತಾನೆ. ಯುವಕ ಅತ್ಯಂತ ಶ್ರದ್ಧೆಯಿಂದ ಆ ಪಾಠವನ್ನು ಕರಗತ ಮಾಡಿಕೊಳ್ಳುತ್ತಾನೆ.

 

ಕೆಲವು ಸಮಯದ ಅನಂತರ ಅವನು ಒಂದು ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ. ಒಂದು, ಎರಡು, ಮೂರು ಹೀಗೆ ಅನೇಕ ಸುತ್ತುಗಳಲ್ಲೂ ಜಯಿಸಿ ಅಂತಿಮ ಸುತ್ತಿನಲ್ಲೂ ಒಬ್ಬ ಬಲಿಷ್ಠ ವ್ಯಕ್ತಿಯನ್ನು ಎದುರಿಸುತ್ತಾನೆ. ಧೃತಿಗೆಡದೆ ಹೋರಾಡುತ್ತಾನೆ. ಎದುರಾಳಿ ಮಾಡಿದ ಒಂದು ಸಣ್ಣ ತಪ್ಪಿನ ಒಂದು ಅವಕಾಶವನ್ನು ಇವನು ಉಪಯೋಗಿಸಿಕೊಂಡು ಅವನನ್ನು ಸೋಲಿಸುತ್ತಾನೆ.
ಗುರು ಕಲಿಸಿದ ಆ ಪಾಠ ಮಹತ್ತರವಾದ ಪಾಠವಾಗಿರುತ್ತದೆ.

 

ಹಾಗಾಗಿ ಕಲಿಕೆಯಲ್ಲಿ ಒಂದೇ ಒಂದು ವಿಷಯವೂ ಕೂಡ ನಮಗೆ ಲಾಭ ತರುವ ಸಾಧ್ಯತೆ ಇದೆ. ಅಲ್ಲದೆ ಸಮರ್ಥ ಗುರುವಿನ ನಿರ್ದೇಶನ, ಸತತ ಪ್ರಯತ್ನ ಎಂಥವನನ್ನೂ ಜಯಶಾಲಿಯನ್ನಾಗಿ ಮಾಡುತ್ತದೆ ಎಂಬುದು ಈ ಕತೆಯ ತಿರುಳು.

1 thought on “ಮಾತು~ಮುತ್ತು : ಗುರುವಿನ ಮಹತ್ತ್ವ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

Leave a Reply

Your email address will not be published. Required fields are marked *