ಮೇ 8, ವೈಶಾಖ ಶುದ್ಧ ಚತುರ್ಥಿ, ಗೋಸ್ವರ್ಗದಲ್ಲಿ ಕರುಗಳ ಅಂಬಾರವದೊಡನೆ ಮಕ್ಕಳ ಸಡಗರದ ರವ ಬೆರೆಯುವ ವಿಶೇಷ ಹಬ್ಬ! ಮಕ್ಕಳ ಮಹಾಸಮ್ಮೇಳನ.
ಗೋಸ್ವರ್ಗದಲ್ಲಿ ಮಕ್ಕಳ ಮಹಾಸಮ್ಮೇಳನವೆಂಬ ವಿಶಿಷ್ಟ ಪರಿಕಲ್ಪನೆಯ ಕೆಲವು ವೈಶಿಷ್ಟ್ಯಗಳು ಹೀಗಿವೆ.
*ಸಪ್ತಸನ್ನಿಧಿಯಲ್ಲಿ ಸಪ್ತಧಾರೆ!*
*ಕ್ಷೀರಧಾರೆ*
ಗೋಸ್ವರ್ಗದ ನಡುವಿನಲ್ಲಿ ಕಾಮಧೇನುವು ಇಳಿದು ಬಂದು ಹಾಲು ಸುರಿಸುವ ವಿಸ್ಮಯ!
ಮಕ್ಕಳಿಗೆ ಭೂಲೋಕದ ಅಮೃತ ಪ್ರಾಪ್ತವಾಗುವ ಸುಸಮಯ! ದಿವಿಯಿಂದ ಭುವಿಗಿಳಿದ ಸುರಧೇನುವಿನ ಸಂತಸದ ನೆಲೆ ಗೋಸ್ವರ್ಗದಲ್ಲಿ ಕಾಮಧೇನುವಿನ ಪುನರವತರಣದ ಸಂಭ್ರಮದ ಸೃಷ್ಟಿ! ನಮ್ಮ ಮಕ್ಕಳು ಕ್ಷೀರಸಾಗರದಲ್ಲಿ ದೇಶೀಗೋವಿನ ಹಾಲು ಸವಿಯುವ ಅಮೃತ ಘಳಿಗೆ!
*ವಿಚಾರ ಧಾರೆ*
ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುವ, ಅಚ್ಚರಿಯ ಅನಾವರಣಗಳ ಮೂಲಕ
ದೇಶೀ ಗೋತಳಿಗಳ ಮಹತಿ ದೇಶೀ ಹಾಲಿನ ವಿಶೇಷತೆಗಳನ್ನು , ಗೋಸ್ವರ್ಗದ ಪರಿಚಯವನ್ನೂ ವಿಶಿಷ್ಟ ರೀತಿಯಲ್ಲಿ ಪರಿಚಯಿಸುವ, ಕ್ಷಣ ಕ್ಷಣಕ್ಕೂ ಮಕ್ಕಳ ಮನಸ್ಸಿನಲ್ಲಿ ಬೆರಗು ಹುಟ್ಟಿಸುವ ವಿಚಾರ ಧಾರೆ, ಸಪ್ತ ಸನ್ನಿಧಿಯ ಸಪ್ತಧಾರೆಗಳಲ್ಲಿ….
*ಸಂವಾದ ಧಾರೆ*
ಕರು – ತುರು – ಗುರು – ಚಿಗುರುಗಳ ಮಹಾ ಸಂಗಮ!
*ಕರುಗಳೊಡನೆ ಚಿಕ್ಕಮಕ್ಕಳ ಆಟ
*ಗೋಸ್ವರ್ಗದ ವೀಕ್ಷಣೆ
*ಗುರುಗಳೊಡನೆ ಮಕ್ಕಳ ಸಂವಾದ
*ಮತ್ತಷ್ಟು ಅವಿಸ್ಮರಣೀಯ ಅನುಭವ ನೀಡುವ ವಿಶಿಷ್ಟ ಚಟುವಟಿಕೆಗಳು.
*ಉಲ್ಲಾಸಧಾರೆ*
ಮಕ್ಕಳ ಮನೋಲ್ಲಾಸಕ್ಕಾಗಿ ವಿಶೇಷ ಆಟಗಳು!
*ಕಲಾಧಾರೆ*
ಮಕ್ಕಳ ಧಮನಿಗಳಲ್ಲಿ ಗೋಪ್ರೇಮ – ರಾಷ್ಟ್ರಪ್ರೇಮ ಉಕ್ಕಿ ಹರಿಯುವಂತೆ ಮಾಡುವ , ಮಕ್ಕಳೇ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುವ ನಾಟಕ – ರೂಪಕ!
*ಆಶೀರ್ಧಾರೆ*
ಸಿಹಿಗೆ ಸಿಹಿ ಬೆರೆಯುವ ಸಮಯ!
ದಿನವಿಡೀ ಗೋಪ್ರೇಮದ ಗುರುವಾತ್ಸಲ್ಯದ ಧಾರೆಗಳಲ್ಲಿ ತೋಯಿಸಿಕೊಂಡ ಮಕ್ಕಳು ಪೂರ್ಣಾಶೀರ್ವಾದ ಪಡೆಯುವ ಸಮಯ!
ಆಶೀರ್ವಚನ – ಮಂತ್ರಾಕ್ಷತೆಗಳ ಆಶೀರ್ಧಾರೆ!
*ದೀಪಧಾರೆ!*
ಗೋಸ್ವರ್ಗದ ವೈಶಿಷ್ಟ್ಯಗಳಲ್ಲೊಂದು ಪ್ರತಿದಿನವೂ ಸೂರ್ಯಾಸ್ತದ ಸಮಯದಲ್ಲಿ ನಡೆಯುವ ಗೋ ಗಂಗಾರತಿ.
ಸಾವಿರಾರು ಮಕ್ಕಳು ಏಕಕಾಲದಲ್ಲಿ ಗೋಗಂಗಾರತಿಗೈಯುವ ಅಪರೂಪದ ದೃಶ್ಯ ದೀಪಧಾರೆ!
ಇವಲ್ಲದೇ ಇನ್ನಷ್ಟು ವಿಶೇಷತೆಗಳು!
*ಶ್ರೀಕರಾರ್ಚಿತ ಪೂಜೆ*
ಅಗಸ್ತ್ಯ ಪೂಜಿತ, ವರದಮುನಿಗಳಿಂದ ಆರಾಧಿಸಲ್ಪಟ್ಟ, ಆದಿಶಂಕರಾಚಾರ್ಯರು ಪೂಜಿಸಿ ವಿದ್ಯಾನಂದಾಚಾರ್ಯರಿಗೆ ಕರುಣಿಸಿದ, ಶ್ರೀ ರಾಮಚಂದ್ರಾಪುರ ಮಠದ 35 ಪೂಜ್ಯ ಪೀಠಾಧಿಪತಿಗಳು ಪ್ರತಿನಿತ್ಯ ಪೂಜಿಸಿದ ಪ್ರಪಂಚದ ಏಕಮಾತ್ರ ಅವಿಚ್ಛಿನ್ನ ಪರಂಪರೆಯ ಪೀಠದ ಆರಾಧ್ಯದೈವ ಸ್ವರ್ಣಕಾಂತಿಯ ಸೀತಾಕಾಂತನಿಗೆ ಶ್ರೀಪೀಠದ ಮೂವತ್ತಾರನೆಯ ಯತಿಶ್ರೇಷ್ಟ ಶ್ರೀಮಜ್ಜಗದ್ಗುರು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ದಿನಕ್ಕೆರಡು ಬಾರಿ ನಡೆಯುವ ಪೂಜೆಯನ್ನು ಕಣ್ತುಂಬಿಕೊಳ್ಳುವುದೇ ಪರಮಭಾಗ್ಯ! ಆ ತಪೋರಾಮಾದಿ ವಿಗ್ರಹಗಳೂ, ಚಂದ್ರಮೌಳೀಶ್ವರನೂ, ಶ್ರೀಚಕ್ರವೂ ಸ್ವರ್ಣಮಂಟಪದಲ್ಲಿ ಅರ್ಚನೆಗೊಳ್ಳುವ ಶೋಭೆಯಂತೂ ಅವರ್ಣನೀಯ. ಇಂತಹ ಅಪರೂಪದ ಸನ್ನಿವೇಶವನ್ನು ಭಕ್ತಿಭಾವದಿಂದ ಕಣ್ಮನಗಳನ್ನು ತುಂಬಿಕೊಂಡು ಧನ್ಯರಾಗುವ ಭಾಗ್ಯ ನಮ್ಮ ಮಕ್ಕಳದಾಗಲಿದೆ.
ಮಕ್ಕಳ ಮಹಾಸಮ್ಮೇಳನದ ಶುಭಾವಸರದಲ್ಲಿ.
ಬೆಳಿಗ್ಗೆ 9 ಗಂಟೆಗೆ.
*ಗೋಕಲಾ – ಗೋವಿಜ್ಞಾನ ಪ್ರದರ್ಶಿನಿ*
ಮಕ್ಕಳೇ ರಚಿಸಿದ ಗೋಸಂಬಂಧೀ ಚಿತ್ರ, ಕರಕುಶಲ, ಲೇಖನ, ಕವನಗಳ ಪ್ರದರ್ಶನ!
ಗವ್ಯಾಧಾರಿತ ವಿಜ್ಞಾನ ಮಾದರಿಗಳ ( science models) ಪ್ರದರ್ಶನ!
ಮಕ್ಕಳಿಗೆ – ವಿದ್ಯಾರ್ಥಿಗಳಿಗೆ ಪ್ರದರ್ಶನಕ್ಕೆ ಮುಕ್ತ ಅವಕಾಶ.
ನಿಮ್ಮ ಮಕ್ಕಳ ಗೋಪ್ರೇಮದ ಅಭಿವ್ಯಕ್ತಿಯ ಮಾಧ್ಯಮ ಚಿತ್ರಕಲೆ, ಕುಶಲಕಲೆ, ಲೇಖನ, ಕವನ, ವಿಜ್ಞಾನ ಮಾದರಿ ಯಾವುದೇ ಆಗಿರಲಿ! ಅಂತಹ ಮಕ್ಕಳ ಪ್ರತಿಭೆಯ ಅನಾವರಣಕ್ಕೊಂದು ಸದವಕಾಶ!
ಗೋಕಲಾ – ಗೋವಿಜ್ಞಾನ ಪ್ರದರ್ಶಿನಿ.
*ಕ್ಷೀರಖಾದ್ಯಗಳು – ಪಾನೀಯಗಳು – ಗೋಸನ್ನಿಧಿಯಲ್ಲಿ ಭೋಜನ!*
ದೇಶೀ ಹಾಲಿನ ಸವಿ, ಹಾಲಿನ ಸಿಹಿತಿಂಡಿಗಳು, ದಾಹವಾರಿಸುವ ತಂಪು ಮಜ್ಜಿಗೆ ಇವೆಲ್ಲವೂ ಮಕ್ಕಳ ಸಂತೃಪ್ತಿಗಾಗಿ!
ಗೋಸನ್ನಿಧಿಯಲ್ಲಿ ಭೋಜನ!
ಗೋಸ್ವರ್ಗದ ಪ್ರೇಕ್ಷಾಪಥದಲ್ಲಿ ಮಕ್ಕಳಿಗೆ ಹಿತವೆನಿಸುವ ಭೋಜನ!
ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ,
ಗೋಸ್ವರ್ಗದ ಸಪ್ತಸನ್ನಿಧಿಯಲ್ಲಿ ಸಪ್ತಧಾರೆ ಎಂಬ ದಿನವಿಡೀ ಅವಿಸ್ಮರಣೀಯ ಅನುಭವವನ್ನೀಯುವ ಮಕ್ಕಳ ಮಹಾಸಮ್ಮೇಳನ ನಮ್ಮ ಮಕ್ಕಳಿಗಾಗಿಯೇ ಆಯೋಜಿಸಲ್ಪಟ್ಟಿರುವ ಈ ಮಹಾಸಮ್ಮೇಳನಕ್ಕೆ
ಮಕ್ಕಳನ್ನು ಕರೆತನ್ನಿ – ನೀವೂ ಬನ್ನಿ.
ದಿನಾಂಕ 08-05-2019 ಬುಧವಾರ.