ಮಾಲೂರು: ಗೋವು ಹಾಲಿಗೇ ಮೀಸಲು ಆಗದೆ, ಕೃಷಿ ಚಟುವಟಿಕೆಗೆ ಅಗತ್ಯ ಎಂಬುದನ್ನು ಅರಿಯುವ ಕಾರ್ಯವಾಗಬೇಕು. ಕೃಷಿ ಭೂಮಿಗೆ ದೇಸೀ ಗೋವಿನ ಸಗಣಿ ಬೇಕಾದಷ್ಟು ಮಟ್ಟಿಗೆ ಸಿಗುತ್ತಿಲ್ಲವೆಂಬ ಪರಿಸ್ಥಿತಿ ಈಗ ಇದೆ. ಯುವ ಶಕ್ತಿಯನ್ನು ಬಳಸಿಕೊಂಡು ಯುವ ಫಾರ್ಮ್ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಗೋಶಾಲೆ ನಿರ್ಮಾಣ ಮಾಡುವ ಬಗ್ಗೆ ಮಾಹಿತಿ ಪಡೆಯಲು ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದಿಂದ ನಡೆಸಲ್ಪಡುತ್ತಿರುವ ಮಾಲೂರು ಶ್ರೀರಾಘವೇಂದ್ರ ಗೋಆಶ್ರಮಕ್ಕೆ ಭೇಟಿ ನೀಡಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗೋವುಗಳನ್ನೇ ಪರಿವಾರವೆಂದು ತಿಳಿದು, ಅದಕ್ಕಾಗಿ ಜೀವನ ನಡೆಸುವ ರಾಮಚಂದ್ರ ಅಜ್ಜಕಾನ ಅವರನ್ನು ಮಾತನಾಡಿಸುವ ಕಾರ್ಯಕ್ರಮವನ್ನು ಪ್ರತಿಯೊಬ್ಬ ಗೋಪ್ರೇಮಿಯೂ ಮಾಡಬೇಕು. ಗೋವುಗಳೊಂದಿಗೆ ಬದುಕು ನಡೆಸುವುದು ಎಷ್ಟು ಸುಂದರ ಎಂಬುದು ಅರಿವಿಗೆ ಬರಬೇಕಾದರೆ ಮಾಲೂರಿಗೆ ಒಮ್ಮೆ ಭೇಟಿ ನೀಡಬೇಕು ಎಂದು ತಿಳಿಸಿದರು.
ಗೋಶಾಲೆಯ ವಿಶೇಷ ಕರ್ತವ್ಯ ಅಧಿಕಾರಿ ರಾಮಚಂದ್ರ ಅಜ್ಜಕಾನ, ಸಿಬ್ಬಂದಿಗಳಾದ ಕೃಷ್ಣ ಭಟ್ ಹೊಸಕೋಟೆ, ಲಕ್ಷ್ಮೀಶ ಮತ್ತಿತರರು ಹಾಜರಿದ್ದರು.