ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಮಠ ಶ್ರಾವಣಕರೆ, ಬ್ರಹ್ಮಕಲಶೋತ್ಸವ

ಗೋವು

ಪೆರ್ಲ : ಪೆರ್ಲ ಬಜಕೂಡ್ಲು ಅಮೃತಧಾರಾಗೋಶಾಲೆಯಲ್ಲಿರುವ ಗೋಮಾತೆಯ ಉದರಭರಣಕ್ಕಾಗಿ ಮುಳ್ಳೇರಿಯ ಮಂಡಲದ ಗೋಕಿಂಕರರಿಂದ ಅಭೂತಪೂರ್ವವಾಗಿ ೪ತಿಂಗಳುಗಳ ಕಾಲ ನಡೆದ ಗೋವಿಗಾಗಿ ಮೇವು ಕಾರ್ಯಕ್ರಮಕ್ಕೆ ಶ್ರೀ ರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿಯವರು ಸಂತಸವ್ಯಕ್ತಪಡಿಸಿ ಮಾತನಾಡುತ್ತಾ ಬಜಕೂಡ್ಲಿನ ಗೋಶಾಲೆಯಲ್ಲಿ ಕಾಸರಗೋಡು ಗಿಡ್ಡ ತಳಿಯ ಗೋವುಗಳಿವೆ. ಗಾತ್ರದಲ್ಲಿ ಚಿಕ್ಕದಾದರೂ ಅದುಕೊಡುವ ಹಾಲು ಉತ್ಕೃಷ್ಟವಾದ ಔಷಧೀಯ ಗುಣವನ್ನು ಹೊಂದಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನವ ಹಾಗೆ ಅದರಲ್ಲಿ ಬ್ರಹ್ಮಾಂಡವೇ ಅಡಗಿದೆ. ಹಾಲು ಕೊಟ್ಟ ಗೋಮಾತೆಗೆ ಹುಲ್ಲನ್ನು ಕೊಡುವ ಕಾರ್ಯ ತುಂಬಾ ಸಂತಸ ತಂದಿದೆ. ಈ ನಿಟ್ಟಿನಲ್ಲಿ ಬಜಕೂಡ್ಲು ಗೋಶಾಲೆಗೆ ಮೇವು ಸಮರ್ಪಣೆ ಮಾಡುವ ಗೋಕಿಂಕರರ ಕಾರ್ಯ ಶ್ಲಾಘನೀಯ ಎಂದರು. ಇದು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

 

ಶ್ರಾವಣಕೆರೆ ಶ್ರೀ ದುರ್ಗಾಪರಮೇಶ್ವರಿ ಮಠದಲ್ಲಿ ಬ್ರಹ್ಮಕಲಶೋತ್ಸವದ ಸಮಾರೋಪದ ಸಂದರ್ಭದಲ್ಲಿ ಅವರು ಆಶೀರ್ವಚನವನ್ನು ನೀಡಿದರು. ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಸಾಮಾಜಿಕ ಮುಂದಾಳು ವೇದಮೂರ್ತಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಪಂಚಾಯತ್ ಸದಸ್ಯೆ ಅರಣಾ ಆಳ್ವ ಮಡ್ವ, ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ಹರಿಪ್ರಸಾದ ಪೆರಿಯಪ್ಪು, ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ. ಶ್ರೀಕೃಷ್ಣಭಟ್, ಗುಂಪೆವಲಯ ಅಧ್ಯಕ್ಷ ಅಮ್ಮಂಕಲ್ಲು ರಾಮ ಭಟ್ಟ ಉಪಸ್ಥಿತರಿದ್ದರು. ಶೈಲಜಾ ಗೋಳಿತ್ತಡ್ಕ ಕಾರ್ಯಕ್ರಮ ನಿರ್ವಹಿಸಿದರು.

 

ಇದೇ ಸಂದರ್ಭದಲ್ಲಿ ಪುತ್ತಿಗೆ ಸಮೀಪ ಮುಳಿಹುಲ್ಲು ಲಾರಿಗೆ ಬೆಂಕಿ ಅವಘಡವಾದ ಸಂದರ್ಭದಲ್ಲಿ, ನೀರುಕೊಟ್ಟು ಸಹಕರಿಸಿದ ವಿನೋದ ಆಳ್ವ ಹಾಗೂ ಮನೆಯವರು, ಲಾರಿ ಚಾಲಕ ಕಿಶೋರ್, ಲಾರಿ ಮಾಲಕ ಶಿವಶಂಕರ ಭಟ್ ಪೆರ್ಲ ಮತ್ತು ಮನೆಯವರನ್ನು ಶಾಲುಹೊದಿಸಿ ಶ್ರೀಗಳು ಆಶೀರ್ವದಿಸಿದರು. ಗೋವಿಗೆಮೇವು ಕಾರ್ಯಕ್ರಮಕ್ಕೆ ದೇಣಿಗೆ ಸಮರ್ಪಣೆ ಮಾಡಿದ ಕಾರಿಂಜ ಜಯಪ್ರಕಾಶ ರೈ, ಪುಣೂರು ನಾರಾಯಣ ಮೂರ್ತಿ, ಯಂ.ಯಂ. ಮಹಾಲಿಂಗೇಶ್ವರ ಎಂಬ್ರಾದಿರಿ ಬೆಂಗಳೂರು ಇವರನ್ನು ಶಾಲುಹೊದಿಸಿ ಆಶೀರ್ವದಿಸಲಾಯಿತು.

 

ಒಣಮೇವು ನೀಡಿದ ಭೂಮಾಲಿಕರಾದ ಕಾವೇರಿಕಾನ ಶಂಕರಭಟ್ಟ, ಹರೀಶ ಹಳೆಮನೆ, ಮಹೇಶ ಹಳೆಮನೆ, ಕೆ.ವೆಂಕಟ್ರಮಣ ಭಟ್ಟ, ಯನ್. ಸುಬ್ರಹ್ಮಣ್ಯ ಭಟ್, ಹಮೀದ್ ನೆಲ್ಲಿಕುನ್ನು, ಅಂಬಿಲಡ್ಕ ದೈವಸ್ಥಾನದ ಪದಾಧಿಕಾರಿಗಳು, ಶ್ರೀ ಶಂಕರಧ್ಯಾನ ಮಂದಿರ ಪೊಸಡಿಗುಂಪೆ, ಹಸಿರುಮೇವು ನೀಡಿದ ಶಂಕರಭಟ್ಟ, ಪುತ್ತಿಗೆ ದೇವಸ್ಥಾನದ ಟ್ರಸ್ಟಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಶ್ರೀ ಗುರುಗಳಿಗೆ ಸೇವಾಅಘ್ಯ ದ ಸಮಗ್ರ ವರದಿ ಹಾಗೂ ಮುಳಿಹುಲ್ಲನ್ನು ಸಂಚಾಲಕರಾದ ಡಾ. ಮಾಲತಿ ಪ್ರಕಾಶ, ಕೇಶವಪ್ರಸಾದ ಎಡಕ್ಕಾನ, ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ರಮೇಶ ಭಟ ವೈ. ವಿ. ನೀಡಿದರು. ಮಂಡಲ ವಲಯದ ಪದಾಧಿಕಾರಿಗಳು, ಗೋಕಿಂಕರರು, ಶ್ರಾವಣಕೆರೆ ಮಠದ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

 

Author Details


Srimukha

Leave a Reply

Your email address will not be published. Required fields are marked *