ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಕಾಲೇಜಿನಲ್ಲಿ ಜೀವ ವಿಮೆಯಲ್ಲಿ ಉದ್ಯೋಗಾವಕಾಶಗಳು ಎಂಬ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಎಲ್‌ಐಸಿಯ ಶಾಖೆ-1ರಲ್ಲಿ ಹಿರಿಯ ಶಾಖಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ರವಿರಾಜ್ ಕುಂಭಾಶಿ ಇವರು ಮಾತನಾಡಿ ಎಲ್‌ಐಸಿಯ ಮೂಲಕ ವಿದ್ಯಾರ್ಥಿಗಳಿಗೂ ಸ್ಕಾಲರ್‌ಶಿಪ್ ಅವಕಾಶವಿದೆ ಅದನ್ನು ಅವರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರಿನ ಎಲ್‌ಐಸಿಯ ಶಾಖೆ-1ರಲ್ಲಿ ಅಭಿವೃದ್ಧಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಶುಭಕರ್ ಇವರು ವಿದ್ಯಾರ್ಥಿಗಳಿಗೆ, ಮನಸ್ಸಿದ್ದರೆ ಜೀವ ವಿಮೆಯಲ್ಲಿ ಅನಿಸಿದ್ದನ್ನು ಗಳಿಸುವುದಕ್ಕೆ ಅವಕಾಶವಿದ್ದು, ಈ ಮೂಲಕ ಉತ್ತಮ ಭವಿಷ್ಯಕ್ಕೆ ದಾರಿಕಂಡುಕೊಳ್ಳಬಹುದು ಎಂದು ಪ್ರಾತ್ಯಕ್ಷಿಕೆಯೊಂದಿಗೆ ಉದ್ಯೋಗ ಮಾಹಿತಿ ನೀಡಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಬಂಟ್ವಾಳದ ಎಲ್‌ಐಸಿ ಶಾಖೆಯಲ್ಲಿ ಅಭಿವೃದ್ಧಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಉದಯಶಂಕರ್ ಇವರು ಜೀವ ವಿಮಾ ಸಂಸ್ಥೆಯು ಭಾರತ ಸರಕಾರದ ಅಧೀನದಲ್ಲಿರುವ ವಿಶ್ವದ ಅತೀ ದೊಡ್ಡ ಸಂಸ್ಥೆ. ಆದ್ದರಿಂದ ಅಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿವೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಈಶ್ವರ ಪ್ರಸಾದ ಎ. ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರೀ ಸೂರ್ಯನಾರಾಯಣ ಅವರು ಸ್ವಾಗತಿಸಿ, ಶ್ರೀ ಅಶೋಕ್ ವಂದಿಸಿದರು.