ಶ್ರೀಭಾರತಿ ವಿದ್ಯಾಲಯದಲ್ಲಿ ವಿಶಿಷ್ಟವಾದ ಶಾಲಾ ವಾರ್ಷಿಕೋತ್ಸವ

ಶಿಕ್ಷಣ

ಬೆಂಗಳೂರು: ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಅನನ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಹಂಪಿನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ ನಡೆಯಿತು.

 

ಗುರುವಂದನೆಯೊಂದಿಗೆ ಉದ್ಘಾಟನೆಗೊಂಡ ಸಭೆಗೆ ಆಗಮಿಸಿದ ಶಿಕ್ಷಣ ತಜ್ಞ ಡಾ.ವೂಡೆ ಪಿ ಕೃಷ್ಣ ಅವರು
ಪರಮಪೂಜ್ಯರ ದಿವ್ಯ ಪರಿಕಲ್ಪನೆಯನ್ನು, ಶಾಲಾಡಳಿತದ ಪರಿಶ್ರಮ, ಶಿಕ್ಷಕರ ನಿಷ್ಠೆ ಹಾಗೂ ಮಕ್ಕಳ ಪ್ರತಿಭಾಶಾಲಿತ್ವವನ್ನೂ ಪ್ರಶಂಸಿಸಿ ಪಾಲಕರಿಗೆ ಕಿವಿಮಾತನ್ನೂ ಹೇಳಿದರು.

 

ಶಾಲಾ ಪ್ರಶಾಸನ ಮಂಡಳಿ ಅಧ್ಯಕ್ಷರಾದ ಗೋಪಾಲಕೃಷ್ಣ ಹೆಗಡೆಯವರು ಗಣ್ಯರನ್ನು ಸ್ವಾಗತಿಸಿ ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು.

 

ಕಾರ್ಯದರ್ಶಿಗಳಾದ ಪ್ರಮೋದ ಪಂಡಿತ್ ಅವರು ಸಭಾವಂದನೆಯನ್ನು ಸಲ್ಲಿಸಿದರು.
ಪುಟಾಣಿ ಮಕ್ಕಳು ಪ್ರಾರ್ಥನಾ ಸ್ತೋತ್ರವನ್ನು ಹಾಡಿದರು.

 

ಥೀಮ್ ಆಧರಿಸಿದ ಮನರಂಜನಾ ಕಾರ್ಯಕ್ರಮಗಳು:

ಈ ಬಾರಿ ಭಾರತೀಯ ಹಬ್ಬಗಳು ಎಂಬ ಪರಿಕಲ್ಪನೆಯಲ್ಲಿ
ಚಿಣ್ಣರು ಬಣ್ಣ ಬಣ್ಣದ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಮಕ್ಕಳು ಯುಗಾದಿಯ ಕುರಿತ ಲಘುನಾಟಕ ಪ್ರದರ್ಶನ ಬೇಂದ್ರೆಯವರ ಯುಗಾದಿಯ ಹಾಡಿಗೆ ಹೆಜ್ಜೆ ಹಾಕಿದರು. ಕೃಷ್ಣಜನ್ಮಾಷ್ಟಮಿಯನ್ನು ಪ್ರತಿನಿಧಿಸುವ ನೃತ್ಯ ಹಾಗೂ ಶಾಲಾ ಆವರಣದಲ್ಲಿ ಹಬ್ಬಗಳ ಆಚರಣೆ ಮತ್ತು ಮಹತ್ವವನ್ನು ಸಾರುವ ಪ್ರಸ್ತುತಿಗಳು ಪ್ರದರ್ಶನಗೊಂಡವು.

 

ನಮ್ಮತನದ ಸದಭಿರುಚಿಯ ಮನರಂಜನೆಯನ್ನು ನೀಡಬಹುದು ಎಂಬುದನ್ನು ಶ್ರೀಭಾರತೀ ವಿದ್ಯಾಲಯ ದೃಢಪಡಿಸಿತು.

Author Details


Srimukha

Leave a Reply

Your email address will not be published. Required fields are marked *