ವೇದಶಿಬಿರಕ್ಕೆ ಚಿತ್ತೈಸಿದ ಗೋಮಾತೆ

ಗೋವು

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಬಜಕೋಡ್ಳುಲ ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ಶೋಭಿಸುತ್ತಿರುವ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ತಾ. 28. 04. 2019 ರಂದು ಶ್ರೀ ಗುರುಮಹಾದೇವ ವೇದಶಿಬಿರವು ಶುಭಾರಂಭಗೊಂಡಿತು. ಎಣ್ಮಕಜೆ ಹವ್ಯಕ ವಲಯ ಅಧ್ಯಕ್ಷರಾದ ಶಿವಪ್ರಸಾದ ವರ್ಮುಡಿಯವರು ಜ್ಯೋತಿ ಬೆಳಗಿಸಿ ವೇದಶಿಬಿರ ಉದ್ಘಾಟನೆಯನ್ನು ಮಾಡಿದರು. ವಲಯದ ಸಂಸ್ಕಾರ ವಿಭಾಗ ಪ್ರಧಾನರಾದ ಡಾ| ಸದಾಶಿವ ಭಟ್ಟ ಪೆರ್ಲ ಅವರು ಉಪನೀತ ವಟುಗಳಿಗೆ ಈ ಶ್ರೀ ಗುರುಮಹಾದೇವ ವೇದಶಿಬಿರವನ್ನು ನಡೆಸಿಕೊಡುತ್ತಿದ್ದಂತೆ ಗೋಮಾತೆಯು ತನ್ಮಯತಾಭಾವದಿಂದ ಬಂದು ಸಾನಿಧ್ಯವಹಿಸಿ ಹರಸಿತು. ತದೇಕಚಿತ್ತದಿಂದ ಅಲ್ಲಿದ್ದು ಬಳಿಕ ನಿರ್ಗಮಿಸಿತು. ಗೋಶಾಲೆ, ಗೋಮಾತೆ, ವೇದಶಿಬಿರ ಈ ರೀತಿಯಲ್ಲಿ ವಿಶೇಷವಾಗಿ ಅರ್ಥಪೂರ್ಣವಾಗಿ ಆದ್ವೈತವಾಗಿ ಪರಿಣಮಿಸಿತು. ಶ್ರೀಸಂಸ್ಥಾನದವರ ಅನುಗ್ರಹ ಅವಿನಾಭಾವವಾಗಿ ಪ್ರಾಪ್ತಿಯಾಯಿತು.

 

ಗೋಶಾಲಾ ಅಧ್ಯಕ್ಷರಾದ ಜಗದೀಶ್ ಬಿ. ಜಿ ಗೋಳಿತ್ತಡ್ಕ, ಸಂಘಟನಾ ಕಾರ್ಯದರ್ಶಿ ವಿನಯಕೃಷ್ಣ, ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *