2018 -19 ರ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪುತ್ತೂರಿನ ಸ್ವಸ್ತಿಕ್ ಪಿ ಮಾಡಾವು 594 ಅಂಕ ಪಡೆದು ರಾಜ್ಯದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಇವರು ಪುತ್ತೂರು ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ.
ಪ್ರಾಥಮಿಕ ವಿದ್ಯಾಭ್ಯಾಸ ನರಿಮೊಗರು ಸಾಂದೀಪನಿ ವಿದ್ಯಾ ಸಂಸ್ಥೆ ಹಾಗೂ ಭೆಥೆನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಸಂತ ಫಿಲೋಮಿನಾ ಹೈಸ್ಕೂಲಿನಲ್ಲಿ ಮುಗಿಸಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಮೃದಂಗ ಜೂನಿಯರ್ ಗ್ರೇಡ್ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದು, ರಾಷ್ಟ್ರೀಯ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ 3ನೆಯ ಪಾರಿತೋಷಿಕವನ್ನು ಗೆದ್ದಿರುತ್ತಾರೆ.
ಇವರ ಅವಳಿ ಸಹೋದರಿ ಸಾತ್ವಿಕಾ ಪಿ. ಮಾಡಾವು 589 ಅಂಕ ಪಡೆದು ರಾಜ್ಯದಲ್ಲಿ 8 ನೆಯ ಸ್ಥಾನವನ್ನು ಪಡೆದುಕೊಂಡಿರುತ್ತಾಳೆ.
ಕರ್ನಾಟಕ ಸಂಗೀತ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್, ವಯಲಿನ್ ಕಲಿಕೆ, ರಾಷ್ಟ್ರೀಯ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಕಂಚಿನ ಪದಕ, ಎನ್. ಸಿ. ಸಿ. ಯಲ್ಲಿ ಅವಾರ್ಡ್ ಗಳಿಕೆ, ಡ್ರಾಯಿಂಗ್ ನಲ್ಲಿ ಡಿಸ್ಟಿಂಕ್ಷನ್, ಈಕೆಯ ಸಾಧನೆಗಳು. ಕಾಸರಗೋಡು ಚಿದಾನಂದ ಕಾಮತ್ ಇವರ ನಿರ್ದೇಶನದಲ್ಲಿ ನಡೆಯುತ್ತಿದ್ದ ‘ ಬಾರಿಸು ಕನ್ನಡ ಡಿಂಡಿಮವ ‘ ಕಾರ್ಯಕ್ರಮದಲ್ಲಿ ನೂರಕ್ಕೂ ಮಿಗಿಲಾಗಿ ಕಾರ್ಯಕ್ರಮದಲ್ಲಿ ಈ ಇಬ್ಬರು ಮಕ್ಕಳು ಭಾಗವಹಿಸಿರುತ್ತಾರೆ. ಇವರೀರ್ವರು ಮಾಡಾವು ನಿವಾಸಿಯಾದ ಕೃಷ್ಣಮೂರ್ತಿ ಪಿ. ಹಾಗೂ ವಿದ್ಯಾ ದಂಪತಿಯ ಮಕ್ಕಳು. ಮುಂದಿನ ವಿದ್ಯಾಯಶಸ್ಸಿಗೆ ಶ್ರೀಗುರುದೇವತಾನುಗ್ರಹ ಇಂಬಾಗಲಿ ಎಂಬ ಹಾರೈಕೆ. ಕೃಷ್ಣಮೂರ್ತಿ ಪಿ. ಮಾಡಾವು ಇವರು ಮುಳ್ಳೇರಿಯಾ ಹವ್ಯಕ ಮಂಡಲದ ಈಶ್ವರಮಂಗಲ ವಲಯದ ಅಧ್ಯಕ್ಷರಾಗಿ ಗುರುಸೇವೆ ಮಾಡುತ್ತಿದ್ದಾರೆ.