ಅನೂಚಾನ ವಿದ್ಯಾ ಪ್ರತಿಷ್ಠಾನ ಗುತ್ತಿಗಾರು ಮತ್ತು ಹವ್ಯಕ ವಲಯ ಗುತ್ತಿಗಾರು ಸಹಯೋಗದಲ್ಲಿ ವಸಂತ ವೇದ ಶಿಬಿರ ಮತ್ತು ಗಾಯತ್ರೀ ಯಜ್ಞ ಮಹಾಸಂಕಲ್ಪ ಮತ್ತು ಘೃತ ಕಲಶ ಸ್ಥಾಪನೆ, ಗಾಯತ್ರೀ ಜಪ ಪ್ರಾರಂಭೋತ್ಸವವು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ದಿನಾಂಕ 15/04/19 ಸೋಮವಾರ ಬೆಳಿಗ್ಗೆ ಗಂಟೆ 8.30 ಕ್ಕೆ ಗುರುವಂದನೆ, ಪ್ರಾರ್ಥನೆಯೊಂದಿಗೆ ಆರಂಭವಾಯಿತು. ವೇ.ಮೂ.ಪಿ.ಸುಬ್ರಾಯ ಕೆದಿಲಾಯ ವಳಲಂಬೆ ಇವರು ದೀಪ ಬೆಳಗಿಸಿ ವೇದ ಶಿಬಿರ ವನ್ನು ಉದ್ಘಾಟಿಸಿ ವೇದ ಶಿಬಿರದ ಅಗತ್ಯತೆ ಮತ್ತು ಅವಶ್ಯಕತೆಯನ್ನು ತಿಳಿಸಿದರು.
ಶ್ರೀಸಂಸ್ಥಾನದವರ ನೇತೃತ್ವದಲ್ಲಿ ಇಂತಹ ವೇದಪಾಠಶಾಲೆಗಳು ನಡೆಯುತ್ತಲಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಶಿಬಿರದ ಮುಖ್ಯ ಪ್ರಾಚಾರ್ಯ ವೇ.ಮೂ.ಮಹಾಬಲೇಶ್ವರ ಭಟ್ಟರು ಪ್ರಥಮ ಪಾಠವನ್ನು ಶಿಬಿರಾರ್ಥಿಗಳಿಗೆ ಭೋಧಿಸಿದರು.
ಗುತ್ತಿಗಾರು ವಲಯಾಧ್ಯಕ್ಷ ಸೀತಾರಾಮ ಭಟ್ಟರು ಸಭಾದ್ಯಕ್ಷತೆ ವಹಿಸಿ ಶಿಬಿರಾರ್ಥಿಗಳಿಗೆ ಶುಭಹಾರೈಸಿ ನಿತ್ಯಾನುಷ್ಠಾನ, ಜಪಗಳನ್ನು ನಿರಂತರ ನಡೆಸಿಕೊಂಡು ಬರುವಂತೆ ತಿಳಿಸಿದರು.
ಅನೂಚಾನ ವಿದ್ಯಾ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶ್ರೀಕೃಷ್ಣ ಗುಂಡಿಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇ.ಮೂ.ಕರುವಜೆ ಕೇಶವ ಜೋಯಿಸರು ಗಾಯತ್ರೀ ಯಜ್ಞ ಸಂಕಲ್ಪ ಮತ್ತು ಘೃತ ಕಲಶ ಸ್ಥಾಪಿಸಿ ಗಾಯತ್ರೀ ಜಪಾರಂಬಿಸಿದರು.
ವಲಯ ಸಂಸ್ಕಾರ ವಿಭಾಗ ಪ್ರಮುಖ ಸುಬ್ರಹ್ಮಣ್ಯ ಭಟ್ಟ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಸೂರ್ಯನಾರಾಯಣ ಪುಚ್ಛೆಪ್ಪಾಡಿ ವಂದಿಸಿದರು.
ವಿದ್ಯಾಪ್ರತಿಷ್ಟಾನದ ಕಾರ್ಯದರ್ಶಿ ಶಿವರಾಮ ಕರುವಜೆಯವರು ಸಭಾ ನಿರ್ವಹಣೆ ಮಾಡಿ ಶಿಬಿರಾರ್ಥಿಗಳ ನೊಂದಣಿ ಮಾಡಿಕೊಂಡರು.
ಶಿಬಿರಾರ್ಥಿಗಳ ಪೋಷಕರು ಮತ್ತು ವೇದಾಭಿಮಾನಿಗಳು ಉಪಸ್ಥತರಿದ್ದರು.
ಶಾಂತಿ ಮಂತ್ರದೊಂದಿಗೆ ಸಭೆಮುಕ್ತಾಯಗೊಂಡಿತು.
ಹರೇರಾಮ