ಗೋಪಾಷ್ಟಮೀ ಮಹೋತ್ಸವ

ಬಜಕೂಡ್ಲು: ಭಗವಾನ್ ಗೋಪಾಲಕೃಷ್ಣನು ಗೋವರ್ಧನಗಿರಿಯನ್ನೆತ್ತಿ ಗೋಕುಲವನ್ನು ಸಂರಕ್ಷಿಸಿದ ಪರ್ವಕಾಲದಲ್ಲಿ ಗೋಪಾಷ್ಟಮೀ ಮಹೋತ್ಸವ ನ.೪ರಂದು ವೈಭವದಿಂದ ಆಚರಿಸಲಾಯಿತು. ಬೆಳಗ್ಗೆ ೭ ರಿಂದ ಗುರುವಂದನೆ, ಕಾರ್ತಿಕ ಸೋಮವಾರದ ಪ್ರಯುಕ್ತ ಶತರುದ್ರಾಭಿಷೇಕ ಶಿವಪೂಜೆ, ಗೋಪೂಜೆ, ಸ್ತೋತ್ರಪಾರಾಯಣಗಳು, ಗಣಪತಿಹವನ, ನವಗ್ರಹಶಾಂತಿ, ಗೋವರ್ಧನಹವನ, ಕಾಮಧೇನುಹವನ, ಗೋಪಾಲಕೃಷ್ಣಹವನಗಳು ನಡೆದವು. ಮಾತೆಯರು ಕುಂಕುಮಾರ್ಚನೆ, ಭಜನೆ ನಡೆಸಿದರು. ಸಾಯಂಕಾಲ ೪ ರಿಂದ ಗುರುವಂದನೆ, ದೇಶೀ ಹಸುವಿನ ಗೋಮಯನಿರ್ಮಿತ ಭವ್ಯ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ,ಭಕ್ತರಿಂದ ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀನೃಸಿಂಹಕರಾವಲಂಬಸ್ತೋತ್ರ ಪಠಣ, ಗೋಪೂಜೆ, ತುಳಸೀಪೂಜೆ, ಭಜನೆ ಹಾಗೂ ದೀಪೋತ್ಸವ ನಡೆಯಿತು. … Continue reading ಗೋಪಾಷ್ಟಮೀ ಮಹೋತ್ಸವ