ಗೋಸ್ವರ್ಗ

ನೋಡ ಬನ್ನಿರಿ ಭಾನ್ಕುಳಿಯ ಗೋಸ್ವರ್ಗದಿವ್ಯಾವರಣವ ನಡುವಿರುವ ಪುಷ್ಕರಿಣಿ ತೊಟ್ಟಿಹ ಶುದ್ಧನೀರಾಭರಣವ ನವುರುಕೆತ್ತನೆಯಿಹ ಶಿಲಾಮಂಡಪ ಸರೋವರಮಧ್ಯದಿ ಸಪ್ತಸನ್ನಿಧಿಯಲ್ಲಿ ನೆಲೆಸಿದೆ ದೇವತಾಸಾಕ್ಷಾನ್ನಿಧಿ ಪಾವಟಿಗೆ ಪಟ್ಟಿಕೆಯು ಸುತ್ತಲು ಮುಡಿಪು ಜನರಿಗೆ ತಪಿಸಲು ತೀರ್ಥಪಥ ನಾಲ್ಕಿಹುದು ಗೋತೀರ್ಥವನು ಸುಲಭದಿ ತಲುಪಲು ಬಳಿಕಿರುವ ಪರಿವೃತ್ತ ಮೀಸಲು ಗೋವಿರಾಮದ ಬಳಕೆಗೇ ನೆರಳ ಬಯಸುವ ಗೋವುಗಳು ವಿಶ್ರಾಂತಿ ಪಡೆಯುವುದಿಲ್ಲಿಯೇ ಮತ್ತೆ ಮುಂದಿನ ಪರಿಧಿಯಲ್ಲಿದೆ ಗೋವಿಹಾರದ ವಿಸ್ತರ ತೆರೆದ ಬಯಲಲಿ ಸಂಚರಿಸೆ ಗೋವುಗಳಿಗಿದುವೆ ಮಹತ್ತರ ಕೊನೆಯಲಿರುವ ಪರಿಕ್ರಮವೆ ಗೋಭಕ್ತಜನಪ್ರೇಕ್ಷಾಪಥ ಸಾವಿರದ ಗೋವುಗಳ ಒನ್ನೋಟದಲಿ ತೋರಿಪ ಸತ್ಪಥ ಇಲ್ಲಿ ಗೋವೇ […]

Continue Reading

ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನದಿಂದ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ : ಶ್ರೀಸಂಸ್ಥಾನದಿಂದ ಅನುಗ್ರಹ ಪಡೆದ ವೈದಿಕರು

ಬೆಂಗಳೂರು: ಬ್ರಹ್ಮರ್ಷಿ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನವು ಇದೇ ಬರುವ 12-11-2018, ಸೋಮವಾರದಿಂದ 20-11-2018, ಮಂಗಳವಾರದವರೆಗೆ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ ಹಮ್ಮಿಕೊಂಡಿದೆ.   ರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿ ಮಾಡಿದ ಸಂಪ್ರತಿಷ್ಠಾನದ‌‌‌ ಸದಸ್ಯರು, ಹಮ್ಮಿಕೊಂಡಿರುವ ಪಾರಾಯಣದ ವಿಚಾರ ಅರುಹಿ‌ ಮಂತ್ರಾಕ್ಷತೆ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಡಾ.ಪಾದೆಕಲ್ಲು ವಿಷ್ಣು ಭಟ್ ಹಾಗೂ ಮಿತ್ತೂರು ಪುರೋಹಿತ ಶ್ರೀ ತಿರುಮಲೇಶ್ವರ್ ಭಟ್ ಸಂಪಾದಿಸಿದ ‘ಮಿತ್ತೂರು ಪುರೋಹಿತ ಶಂಕರನಾರಾಯಣ ಭಟ್ಟ ಹಾಗೂ ಮೈಕೆ ಶಂಕರನಾರಾಯಣ ಭಟ್ಟ ಜನ್ಮಶತಮಾನ ಸ್ಮರಣಸಂಪುಟ’ ಗ್ರಂಥವನ್ನು ಶ್ರೀಸಂಸ್ಥಾನದವರಿಗೆ ಅರ್ಪಿಸಿ ಆಶೀರ್ವಾದ […]

Continue Reading

ಶ್ರೀಮಠದ ಶಿಷ್ಯ, ಹಿನ್ನೆಲೆ ಧ್ವನಿ ಕಲಾವಿದ, ನಿರೂಪಕ ಶ್ರೀ ಪ್ರದೀಪ ಬಡೆಕ್ಕಿಲ ಅವರಿಗೆ ‘ಸೃಷ್ಟಿ ಕಲೋಪಾಸಕ ಪ್ರಶಸ್ತಿ’

ಬೆಂಗಳೂರು: ಜಯನಗರದ ಜೆ‌.ಎಸ್.ಎಸ್. ಆಡಿಟೋರಿಯಂನಲ್ಲಿ ಶನಿವಾರ ನಡೆದ ಸೃಷ್ಟಿ ಕಲಾವಿದ್ಯಾಲಯದ ಸಂಗೀತ-ನೃತ್ಯೋತ್ಸವ ಸಮಾರಂಭದಲ್ಲಿ ಚಲನಚಿತ್ರ-ಕಿರುತೆರೆ‌ ನಟ, ಟಿವಿ ನಿರೂಪಕ, ಲೇಖಕ, ಶ್ರೀರಾಮಚಂದ್ರಾಪುರ‌ಮಠದ ಹಲವು ಪ್ರಸ್ತುತಿಗಳ ಧ್ವನಿ ಕಲಾವಿದರಾಗಿರುವ, ಶ್ರೀಮಠದ ಶಿಷ್ಯರೂ ಆಗಿರುವ ಶ್ರೀ ಪ್ರದೀಪ‌ ಬಡೆಕ್ಕಿಲ ಅವರಿಗೆ ಸೃಷ್ಟಿ ಕಲೋಪಾಸಕ ಪ್ರಶಸ್ತಿ ಪ್ರದಾನ ಮಾಡಲಾಯಿತು.   ಕಿರುತೆರೆಯ‌ ಹಲವು ಜನಪ್ರಿಯ ಕಾರ್ಯಕ್ರಮಗಳಿಗೆ ಹಿನ್ನೆಲೆ ಧ್ವನಿ ನೀಡಿರುವ ಇವರು ಮೆಟ್ರೋ ರೈಲಿನ ಉದ್ಘೋಷಗಳಿಗೂ ಧ್ವನಿಯಾಗಿದ್ದಾರೆ. ಶ್ರೀಯುತರಿಗೆ ಸಂದ ಗೌರವಕ್ಕೆ ಶ್ರೀಸಂಸ್ಥಾನ ಹಾಗೂ ಶಿಷ್ಯವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.   ಇದೇ […]

Continue Reading

ನಾಳೆ ರಾಮಾಶ್ರಮದಲ್ಲಿ ಸೋಮಪ್ರದೋಷ ಹಾಗೂ ಮಾಸ ಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ ಹಾಗೂ ರುದ್ರಹವನ

ಬೆಂಗಳೂರು: ಶ್ರೀರಾಮಚಂದ್ರಾಪುರ‌ ಮಠದ ಶಾಖಾಮಠವಾದ ಗಿರಿನಗರದ ರಾಮಾಶ್ರಮದಲ್ಲಿ ಸೋಮವಾರ ದಿನಾಂಕ 05-11-2018 ರಂದು ಸೋಮಪ್ರದೋಷ ಹಾಗೂ ಮಾಸಶಿವರಾತ್ರಿ ಅಂಗವಾಗಿ ಬ್ರಹ್ಮೀಭೂತ ಶ್ರೀಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳವರ ಸಮಾಧಿಸಾನ್ನಿಧ್ಯದಲ್ಲಿ ಶ್ರೀಸಂಸ್ಥಾನದವರ ದಿವ್ಯಕರಗಳಿಂದ ವಿಶೇಷರುದ್ರಾಭಿಷೇಕ ನಡೆಯಲಿದೆ.   ಮುಂಜಾನೆ 10 ಗಂಟೆಗೆ ಶ್ರೀಕರಾರ್ಚಿತದೇವತಾ ಪೂಜೆಯೊಂದಿಗೆ ಧಾರ್ಮಿಕ‌ ಕಾರ್ಯಕ್ರಮಗಳು ಆರಂಭವಾಗಲಿದ್ದು, 11 ಗಂಟೆಗೆ ಶ್ರೀಸಂಸ್ಥಾನದವರು ಗುರುಮಂದಿರದಲ್ಲಿ ರುದ್ರಾಭಿಷೇಕ ನೆರವೇರಿಸಲಿದ್ದಾರೆ. 12 ಗಂಟೆಗೆ ಗುರು ವಂದನೆ, 12.30 ಕ್ಕೆ ಶ್ರೀಸಂಸ್ಥಾನದವರ ದಿವ್ಯ ಸಾನ್ನಿಧ್ಯದಲ್ಲಿ ರುದ್ರಹವನದ ಪೂರ್ಣಾಹುತಿ, 1 ಗಂಟೆಗೆ ಶ್ರೀಸಂಸ್ಥಾನದವರ ಸಾನ್ನಿಧ್ಯದಲ್ಲಿ ಗುರುಮಂದಿರದಲ್ಲಿ ಮಹಾಮಂಗಳಾರತಿ ನಡೆಯಲಿದೆ.   […]

Continue Reading

ಶ್ರೀಮಠದ ಶಿಷ್ಯೆ ಸಂಗೀತ ವಿದುಷಿ ಶ್ರೀಮತಿ ವಸುಧಾಶರ್ಮಾಗೆ ಪ್ರಶಸ್ತಿ : ರಾಷ್ಟ್ರೀಯ ಯುವ ಸಂಗೀತೋತ್ಸವದಲ್ಲಿ ಸನ್ಮಾನ

ಮೈಸೂರು: ಮೈಸೂರಿನಲ್ಲಿ ನವೆಂಬರ್ 1ರಿಂದ 4ರ ವರೆಗೆ ನಾಲ್ಕು ದಿನಗಳ ಕಾಲ ನಡೆದ ‘ರಾಷ್ಟ್ರೀಯ ಯುವ ಸಂಗೀತೋತ್ಸವ – 2018’ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರಮಠದ ಶಿಷ್ಯೆ ಸಂಗೀತ ವಿದುಷಿ ಶ್ರೀಮತಿ ವಸುಧಾಶರ್ಮಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.   ಮೈಸೂರಿನ ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾನಂದ ಆಶ್ರಮ ಹಾಗೂ ಸಂಸ್ಕಾರ ಭಾರತಿಯ ಸಹಯೋಗದೊಂದಿಗೆ ನಾದಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಲಾಗಿದ್ದು ಇದರಲ್ಲಿ ಶ್ರೀಮತಿ ವಸುಧಾಶರ್ಮಾವರಿಗೂ ಸನ್ಮಾನ ಹಾಗೂ ಪ್ರಶಸ್ತಿ ಸಂದಿರುವುದು […]

Continue Reading

ಸುಳ್ಯ ವಲಯದಲ್ಲಿ ವೇದವಾಹಿನಿ ಕಾರ್ಯಕ್ರಮ : ಸಂಪನ್ನಗೊಂಡ ಪಾರಾಯಣ – ವೇದಶ್ರವಣ

ಸುಳ್ಯ: ಸುಳ್ಯ ಹವ್ಯಕ ವಲಯದ ವೈದಿಕ-ಸಂಸ್ಕಾರ ವಿಭಾಗದಿಂದ 112 ಮತ್ತು 113ನೆಯ ವೇದವಾಹಿನಿ ಕಾರ್ಯಕ್ರಮಗಳು ನವೆಂಬರ್ 2ರಂದು ನಡೆದವು.   112ನೆಯ ವೇದವಾಹಿನಿ ಕಾರ್ಯಕ್ರಮವನ್ನು ಪಾರೆ ಶ್ರೀ ಕೇಶವಯ್ಯ ಭಟ್ ಅವರ ಮನೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮನೆಯ ಯಜಮಾನರು ಕುಟುಂಬ ಸಮೇತರಾಗಿ ವೇದಶ್ರವಣ ಮಾಡಿದರು. ಘಟಕ ಗುರಿಕಾರರಾದ ಶ್ರೀ ವಿಷ್ಣುಕಿರಣ ಭಟ್ ಅವರು ಉಪಸ್ಥಿತರಿದ್ದರು. ಇದೇ ದಿನ ನೀರಬಿದರೆ ಶ್ರೀ ವೆಂಕಟರಮಣ ಭಟ್ ಅವರ ಮನೆಯಲ್ಲಿ ನಡೆದ 113ನೆಯ ವೇದವಾಹಿನಿ ಕಾರ್ಯಕ್ರಮದಲ್ಲಿ ಮನೆ ಯಜಮಾನರು ಕುಟುಂಬ […]

Continue Reading

ಶ್ರೀರಾಮಾಶ್ರಮದಲ್ಲಿ ಸಂಗೀತ ಸೇವೆ

ಬೆಂಗಳೂರು:- ದೇವರಿಗೆ ಹರಕೆ ರೂಪದಲ್ಲಿ‌ ಹೂವು-ಹಣ್ಣು ಕಾಣಿಕೆ‌ ಸಮರ್ಪಿಸುವಂತೆ ಸಂಗೀತ ಕಲಾವಿದರಾದ ಶ್ರೀರಘುನಂದನ ಬೇರ್ಕಡವುರವರು ಶ್ರೀಕರಾರ್ಚಿತ ದೇವರ ಸಮ್ಮುಖದಲ್ಲಿ ತಮ್ಮ ಗಾನಸುಧೆಯ ಮೂಲಕ ಹರಕೆ ಸಲ್ಲಿಸಿದರು.   ಗುರುವಾರ(೧-೧೧-೨೦೧೮) ಗಿರಿನಗರದ ಶ್ರೀರಾಮಾಶ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಅವರು ನಡೆಸಿಕೊಟ್ಟರು. ರಾಗ ನಾಟದಿಂದ ಆರಂಭಿಸಿ, ಬಹುದಾರಿ, ದೇವಗಾಂಧಾರಿ, ರೀತಿಗೌಳ, ದರ್ಬಾರ್, ಪಂತುವರಾಳಿ, ಕಾನಡ, ಸಿಂಧುಬೈರವಿ, ದುರ್ಗಾ, ಮಿಶ್ರ ಪಹಾಡಿ, ಮೋಹನ, ಕಲ್ಯಾಣಿ, ಸೌರಾಷ್ಟ್ರ ರಾಗದಲ್ಲಿ ಹಾಡಿ ಶ್ರೀರಾಮನಿಗೆ ಕಲಾಸೇವೆಗೈದರು.   ಶ್ರೀಸಂಸ್ಥಾನದವರ ಆಶೀರ್ವಾದ ಹಾಗೂ ಸೂಚನೆಯ ಮೇರೆಗೆ […]

Continue Reading

ಸ್ವಾನುಭವ – ವಿದ್ಯಾಶಂಕರಿ ಯಸ್.

ಇದು ಆರೆಂಟು ತಿಂಗಳ ಹಿಂದಿನ ಘಟನೆ‌. ಬೆಳಿಗ್ಗೆ ಏಳುವಾಗ ಸರಿಯಾಗಿಯೆ ಇದ್ದ ಕಣ್ಣುಗಳು, ಸ್ವಲ್ಪ ಹೊತ್ತಿಗೆ ಉರಿಯಲಾರಂಭಿಸಿತು. ಅದೇನೋ ಕಣ್ಣೊಳಗೆ ಹೊಕ್ಕಿರಬಹುದು ಎಂದು ಉಜ್ಜಿದೆ, ನೀರು ಹಾಕಿ ತೊಳೆದೆ, ಇನ್ನೂ ಏನೇನೋ‌ ಮಾಡಿದೆ, ಉರಿ ಕಡಿಮೆಯಾಗುವ ಬದಲು ಜಾಸ್ತಿ ಆಗ್ತಾ ಹೋಯಿತು, ಕಣ್ಣು ಕೆಂಪಾಯಿತು ಅಷ್ಟೇ ಅಲ್ಲ ಕಣ್ಣಿನ ಸುತ್ತಲೂ ಬಾವು ಕೂಡ ಬಂದಿತ್ತು,‌ ನೋವು ಮತ್ತು ಉರಿ ತಡೆಯಲಾರದಾಯಿತು‌. ಗೋಮೂತ್ರ ಸರ್ವರೋಗಕ್ಕೂ ಮದ್ದು ಎಂದು ಶ್ರೀಗುರುಗಳು ಹೇಳಿದ್ದನ್ನು ಕೇಳಿದ್ದ ನಾನು, ನಮ್ಮ ಮನೆಯಲ್ಲಿದ್ದ ಮಾ ಗೋ […]

Continue Reading

ಈ ಸಲದ ಧರ್ಮಭಾರತಿಯಲ್ಲಿ

ಭಾರತೀಯರ ಮನಸ್ಸು, ಸಂಪ್ರದಾಯ, ಪರಂಪರೆಗಳನ್ನು ಭಗವದ್ಭಕ್ತಿಯ ಮೂಲಕ ನೆಲೆಗೊಳಿಸಿ ಉಳಿಸಿ ಬೆಳೆಸುವಲ್ಲಿ ಶ್ರೀತ್ಯಾಗರಾಜರ ಕೊಡುಗೆ ಅಪಾರ. ಅವರು ರಚಿಸಿದ ಉತ್ಸವಸಂಪ್ರದಾಯ ಕೀರ್ತನೆಗಳ ಬಗೆಗಿನ ಕಾಂಚನ ರೋಹಿಣಿ ಸುಬ್ಬರತ್ನಂ ಅವರ ಸವಿವರ ಬರಹ. ‘ಈ ರಾಜ್ಯದ ಕುರಿತು ಹೇಳಜ್ಜೀ’ ಎಂದ ರಾಜ. ‘ಅದನ್ನು ನೀನು ಕೇಳಬಾರದು. ನಾನು ಹೇಳಲೂ ಬಾರದು’ ಎಂದಳು ಅಜ್ಜಿ. ಕಥೆಯೇನು ಅಡಗೂಲಜ್ಜಿಯ ರಾಜ್ಯದ್ದು? ಶ್ರೀಗೋಪಾಲಕೃಷ್ಣ ಕುಂಟಿನಿಯವರ ಕಥೆಯಲ್ಲಿ. ದಿವ್ಯಸನ್ನಿಧಿಯಲ್ಲಿ ಶ್ರೀಸಂಸ್ಥಾನದವರ ಪ್ರವಚನಾಮೃತ – ನಲಿವಿನ ನೆಲೆಗೆ ನಲವತ್ತು ಮೆಟ್ಟಿಲು. ಶ್ರೀಸಂಸ್ಥಾನದವರ ಲೇಖನಾಮೃತ – ರಾಮರಶ್ಮಿ. […]

Continue Reading

ಶನಿವಾರ ರಾಮಾಶ್ರಮದಲ್ಲಿ ರಾಮಪದ ಸತ್ಸಂಗ

ಬೆಂಗಳೂರು:- ಏಕಾದಶಿಯ ಹರಿದಿನದಂದು ಶ್ರೀಸಂಸ್ಥಾನದವರು ಶಿಷ್ಯರೊಡಗೂಡಿ ರಾಮಪದಗಳನ್ನು ಹಾಡುವ ರಾಮಪದ ಸಹಜ ಸತ್ಸಂಗ ಕಾರ್ಯಕ್ರಮ ಶನಿವಾರ(೩-೧೧-೨೦೧೮) ದಂದು ಸಂಜೆ ೬ ರಿಂದ ೮ ಗಂಟೆಯವರೆಗೆ ನಡೆಯಲಿದೆ. ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯಲಿರುವ ಈ ರಾಮಪದದಲ್ಲಿ ಪ್ರತಿಬಾರಿಯಂತೆ ಶ್ರೀಸಂಸ್ಥಾನ ರಾಮಪದತಲದಲ್ಲಿ ಕುಳಿತು ಶ್ರೀರಾಮನ ಹಾಡುಗಳನ್ನು ಹಾಡುತ್ತ‌ ಶ್ರೀರಾಮನ ಗುಣವಿಶೇಷಗಳನ್ನು ಪರಿಚಯಿಸುತ್ತ ಸತ್ಸಂಗ ನಡೆಸಲಿದ್ದಾರೆ. ಈ ಬಾರಿಯ ರಾಮಪದ ಕಾರ್ಯಕ್ರಮದಲ್ಲಿ ಗಾಯಕರಾಗಿ ಹಿಂದೂಸ್ಥಾನಿ ಸಂಗೀತಕ್ಷೇತ್ರದ ಉದಯೋನ್ಮುಖ‌ ಕಲಾವಿದ ಸಿದ್ಧಾರ್ಥ ಬೆಳ್ಮಣ್ಣು ಪಾಲ್ಗೊಳ್ಳಲಿದ್ದಾರೆ. ಕಲಾರಾಮ ಅರ್ಪಿಸುವ ಈ ಅಪರೂಪದ ರಾಮಪದ ಕಾರ್ಯಕ್ರಮದಲ್ಲಿ ನೀವೆಲ್ಲರೂ […]

Continue Reading

ಮಾತಾಪಿತೃಗಳಿಗೆ ಪಾದಪೂಜೆ ನೆರವೇರಿಸಿದ ಮಕ್ಕಳು : ಸಂಸ್ಕೃತಿ ಅರಿವು ಮೂಡಿಸಲು ನಡೆಯಿತು ವಿಶಿಷ್ಟ ಕಾರ್ಯಕ್ರಮ..

ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಹಾಗೂ ಹೆತ್ತವರ ಮಹತ್ತ್ವ ತಿಳಿಸಿಕೊಡುವ ನಿಟ್ಟಿನಲ್ಲಿ ಇಂದು ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆ ಶ್ರೀಭಾರತೀವಿದ್ಯಾಲಯದಲ್ಲಿ ಜನ್ಮದಾತರಿಗೆ ಪೂಜೆ ಸಲ್ಲಿಸುವ ವಿಶಿಷ್ಟ ಕಾರ್ಯಕ್ರಮ ಜರುಗಿತು. ಕನ್ನಡ ರಾಜ್ಯೋತ್ಸವದ ಈ ಶುಭದಿನದಂದು ಹೆತ್ತವರ ಪಾದ ತೊಳೆದು ಪೂಜೆ ಸಲ್ಲಿಸಿದ ಮಕ್ಕಳು, ಬದುಕಿಡಿ ತಮ್ಮನ್ನು ಸಲಹುವ ತಂದೆ-ತಾಯಿಗಳನ್ನು ಗೌರವದಿಂದ ಕೊನೆತನಕ ಸಲಹುವ ಶಪಥ ಗೈಯ್ದರು. ಕಣ್ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು ನೆನಪಿಸುವ ಹಾಗೂ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ […]

Continue Reading

ರಾಮಾಶ್ರಮದಲ್ಲಿ ರಾಮದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಸಂಪನ್ನ

ಬೆಂಗಳೂರು : ಶ್ರೀರಾಮಚಂದ್ರಾಪುರಮಠದ‌ ಶಾಖಾಮಠವಾದ ಬೆಂಗಳೂರು ಗಿರಿನಗರದ ರಾಮಾಶ್ರಮದಲ್ಲಿ ಸಪರಿವಾರ ಶ್ರೀರಾಮಚಂದ್ರದೇವರ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮವು ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಾಗಿ ನಡೆಯಿತು. ಶ್ರೀಸಂಸ್ಥಾನದವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ವಿಲಂಬ ಸಂವತ್ಸರದ ಅಶ್ವಯುಜ ಕೃಷ್ಣ ಷಷ್ಠಿ ಹಾಗೂ ಸಪ್ತಮಿಯಂದು ಹಲವು ಧಾರ್ಮಿಕ‌ ಕಾರ್ಯಕ್ರಮಗಳು ನಡೆದವು. (ದಿನಾಂಕ 30.10.2018 ಹಾಗೂ 31.10.2018) ಮಂಗಳವಾರದಂದು ಗುರುದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡ‌ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಣಪತಿ ಪೂಜೆ, ದೇವನಾಂದಿ, ಪುಣ್ಯಾಹ, ಕೌತುಕ ಬಂಧನ, ಧ್ವಜಾರೋಹಣ, ಬಲಿ ವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ರಂಗಪೂಜೆ, ಪಲ್ಲಕ್ಕಿ ಉತ್ಸವ, […]

Continue Reading