ಗೋವಾವಲಯದಲ್ಲಿ ಶ್ರೀರಾಮ ಜನ್ಮೋತ್ಸವ

ಗೋವಾ-ಜೂ28 : ಕುಮಟಾ ಮಂಡಲದ ಗೋವಾವಲಯದಲ್ಲಿ ಶ್ರೀ ಸಂಸ್ಥಾನದವರ ನಿರ್ದೇಶನದಂತೆ ಶ್ರೀರಾಮ ಜನ್ಮೋತ್ಸವವನ್ನು ಗುರಿಕಾರರಾದ ಶ್ರೀ ಗಿರೀಶ ಹೆಗಡೆ ಮಡಗಾಂವ ಅವರ ಮನೆಯಲ್ಲಿ ಇಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀರಾಮ ಜಪ, ಭಜನರಾಮಾಯಣ ಪಠನ, ರಾಮ ಭಜನೆ ಮಾಡಿ, ಬಂದ ಎಲ್ಲಾ ಭಕ್ತರು ರಾಮದೇವರಿಗೆ ಆರತಿ ಬೆಳಗಿದರು. ಗಿರೀಶ ಹೆಗಡೆಯವರು ಉದಯಿಸಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತು ಶ್ರೀಸಂಸ್ಥಾನದವರ ಆಶಯವನ್ನು ಸವಿಸ್ತಾರವಾಗಿ ಹೇಳಿದರು. ಇದರ ಸಲುವಾಗಿ ಸಮರ್ಪಣೆ ನಡೆಯಿತು. ವಲಯದ ಉಪಾಧ್ಯಕ್ಷ ಶ್ರೀ ಐ.ಕೆ ಹೆಗಡೆ, ಪೋಂಡಾ ಗುರಿಕಾರ […]

Continue Reading

ನಂತೂರಿನಲ್ಲಿ ಶ್ರೀರಾಮಜನ್ಮೋತ್ಸವ

ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀರಾಮನ ಜನ್ಮೋತ್ಸವ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಶ್ರೀ ಮಠದ ಶಿಷ್ಯ ಭಕ್ತರು, ಪ್ರಾಂಶುಪಾಲರುಗಳು ಸೇರಿ ಒಟ್ಟು 40 ಮಂದಿ ಬೋಧಕ, ಬೋಧಕೇತರ ವೃಂದದವರು, ಸುಮಾರು 250 ವಿದ್ಯಾರ್ಥಿಗಳು ಜತೆಯಾಗಿ ಕುಳಿತು ರಾಮತಾರಕ ಮಂತ್ರ, ಭಜನೆ, ಭಜನ ರಾಮಾಯಣ ಪಠಣ ನೆರವೇರಿಸಿದರು. ಮಂಗಳೂರು ಹವ್ಯಕ ಮಂಡಲ ಮಾತೃಪ್ರಧಾನರಾದ ಶ್ರೀಮತಿ ಸುಮಾ ರಮೇಶ ಅವರ ತಂಡದಿಂದ ಭಜನೆ, ಸಂಸ್ಥೆಯ ಸೇವಾ ಸಮಿತಿ ಸದಸ್ಯರೂ ಮಂಗಳೂರು ಮಧ್ಯಹವ್ಯಕ ವಲಯ […]

Continue Reading

*ಭಾನ್ಕುಳಿಮಠದಲ್ಲಿ ಶ್ರೀರಾಮಜನ್ಮೋತ್ಸವ *

ಭಾನ್ಕುಳಿ ಜೂ. 28 : ಶ್ರೀರಾಮದೇವ ಬಾನ್ಕುಳಿಮಠದಲ್ಲಿ ಶ್ರೀ ಶ್ರೀಗಳ ನಿರ್ದೇಶನದಂತೆ ಶ್ರೀರಾಮ ಜನ್ಮೋತ್ಸವವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಯಿತು. ಮಠದ ಅರ್ಚಕರು ,ಯಜಮಾನ ದಂಪತಿಗಳು, ನಿಯಾಮಕರು, ಬಂದ ಶಿಷ್ಯಭಕ್ತರೊಡಗೂಡಿ ಶ್ರೀರಾಮ ಜಪ, ಭಜನರಾಮಾಯಣ ಪಠನ, ರಾಮ ಭಜನೆ ಮಾಡಿ, ವಿದ್ಯುಕ್ತವಾಗಿ ಪೂಜಿಸಿ , ಶ್ರೀ ಬಾಲರಾಮನನ್ನು ತೊಟ್ಟಿಲಲ್ಲಿಟ್ಟು ತೂಗಿ ಸಂಭ್ರಮಿಸಿದರು. ಗಣಪತಿ ಹೆಗಡೆ ಗುಂಜಗೋಡು‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.   ಡಾ. ವೈ. ವಿ. ಕೃಷ್ಣಮೂರ್ತಿಯವರು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತು ಶ್ರೀಗಳ ಆಶಯವನ್ನು ಸವಿಸ್ತಾರವಾಗಿ ವಿವರಿಸಿದರು. ಆಮೇಲೆ ಮಹಾಗುರುಕುಲಕ್ಕಾಗಿ […]

Continue Reading

ಕು. ಶ್ರೀನಿಧಿಗೆ ರೇಂಜರ್ ಪ್ರಶಸ್ತಿ

ಹೊನ್ನಾವರ ಮಂಡಲದ ಮುಗ್ವಾ ವಲಯದ ಶ್ರೀಮತಿ ಜಯಲಕ್ಷ್ಮೀ ಮತ್ತು ಶ್ರೀ ನಾರಾಯಣ ಭಟ್ಟ ದಂಪತಿಯ ಪುತ್ರಿಯಾದ ಶ್ರೀನಿಧಿ ಭಟ್ಟ “THE BHARAT SCOUTS AND GUIDS KARNATAKA” ನೀಡುವ ರಾಜ್ಯ ಪುರಸ್ಕಾರ “RANGER” ಪ್ರಶಸ್ತಿ ಯನ್ನು ಗೌರವಾನ್ವಿತ ರಾಜ್ಯಪಾಲರಾದ” ಶ್ರೀ ವಜುಭಾಯಿ ವಾಲಾ” ಇವರಿಂದ ಪಡೆದಿರುತ್ತಾಳೆ. “RANGER” ಪ್ರಶಸ್ತಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಪ್ರಥಮ ವಿದ್ಯಾರ್ಥಿನಿಯಾಗಿರುತ್ತಾಳೆ..

Continue Reading

ಸಿದ್ದಾಪುರಮಂಡಲದಲ್ಲಿ ಶ್ರೀರಾಮಜನ್ಮೋತ್ಸವ

ಸಿದ್ದಾಪುರ ಜೂ 28 : ಸಿದ್ದಾಪುರ ಮಂಡಲದ ವಲಯಗಳಲ್ಲಿ ಶ್ರೀ ಶ್ರೀಗಳವರ ನಿರ್ದೇಶನದಂತೆ ಶ್ರೀರಾಮ ಜನ್ಮೋತ್ಸವವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಯಿತು. ಶಿಷ್ಯಭಕ್ತರೊಡಗೂಡಿ ಶ್ರೀರಾಮ ಜಪ, ಭಜನರಾಮಾಯಣ ಪಠನ, ರಾಮ ಭಜನೆ ಮಾಡಿ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತು ಶ್ರೀಗಳ ಆಶಯವನ್ನು ಸವಿಸ್ತಾರವಾಗಿ ಪ್ರಸ್ತುತಿ ವೀಡಿಯೋ ಮತ್ತು ಆಶಯನುಡಿಗಳೊಂದಿಗೆ ವಿವರಿಸಲಾಯಿತು. ಆಮೇಲೆ ಮಹಾಗುರುಕುಲಕ್ಕಾಗಿ ಸಮರ್ಪಣೆ ನಡೆಯಿತು.ಅನಂತರ ಪ್ರಸಾದ ಪನಿವಾರ ಪಾನಕ ಸಿಹಿತಿಂಡಿಗಳ ವಿತರಣೆ ನಡೆದು ಕಾರ್ಯಕ್ರಮವು ಸಂಪನ್ನಗೊಂಡಿತು.

Continue Reading

ಶ್ರೀಭಾರತೀ ವಿದ್ಯಾಲಯದಲ್ಲಿ ನರ್ಸರಿ ತರಗತಿಯ ಮಕ್ಕಳ ಪಾಲಕ-ಪೋಷಕರಿಗೆ ಮಾರ್ಗದರ್ಶನ ಸಭೆ

ಮಕ್ಕಳ ಬೆಳವಣಿಗೆಯಲ್ಲಿ ಆರೋಗ್ಯಕರ ಆಹಾರ ಕ್ರಮದ ಕುರಿತು ವಿಶೇಷ ಆಹ್ವಾನಿತ ಪ್ರಶಿಕ್ಷಕರಾದ ಶ್ರೀಮತಿ ಡಾ. ಸುವರ್ಣಿನಿ ಕೊಣಲೆ ಅವರು ಅವರು ಮಾರ್ಗದರ್ಶನ ಮಾಡಿದರು. ಆಹಾರದ ಮಹತ್ವ, ಆಹಾರದ ಸಮಯ, ಆಹಾರ ಮಕ್ಕಳ ಮನಸಿನ ಹಾಗೂ ದೈಹಿಕ ಬೆಳವಣಿಗೆಯಲ್ಲಿ ಎಷ್ಟು ಮುಖ್ಯವಾಗಿದೆ? ಯಾವ ರೀತಿಯ ಆಹಾರ ಕೊಡಬೇಕು, ಯಾವ ಪ್ರಮಾಣ ಹಾಗೂ ಗುಣಮಟ್ಟದ ಆಹಾರ ಮಕ್ಕಳಿಗೆ ಹಿತಕರ? ಎಂಬುದನ್ನು ಅವರು ಪಾಲಕರಿಗೆ ಮನಮುಟ್ಟುವ ರೀತಿಯಲ್ಲಿ ತಿಳಿಸಿದರು. ಅತ್ಯಂತ ಪ್ರಯೋಜನಕರ ಮಾಹಿತಿಯನ್ನು ಪಾಲಕರಿಗೆ ಹಾಗೂ ಶಿಕ್ಷಕರಿಗೆ ತಿಳಿಸಿಕೊಟ್ಟ ಡಾ. ಸುವರ್ಣಿನಿ […]

Continue Reading

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಯೋಗೋತ್ಸವ

ಬದಿಯಡ್ಕ: ಜೂ.21 : ಶಾಲಾ ಪ್ರಾರಂಭದಿಂದಲೇ ಯೋಗಶಿಕ್ಷಣವನ್ನು ಪಠ್ಯದ ಭಾಗವಾಗಿ ಅಳವಡಿಸಿಕೊಂಡಿರುವ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಯೋಗದಿನಾಚರಣೆಯಂದು ೧ನೆಯ ತರಗತಿಯಿಂದ ೧೦ನೆಯ ತರಗತಿಯ ತನಕದ ಎಲ್ಲಾ ವಿದ್ಯಾರ್ಥಿಗಳೂ ಸಾಂಘಿಕವಾಗಿ ಹಾಗೂ ವಿಭಾಗಶಃ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ನಿವೃತ್ತ ಪ್ರಾಂಶುಪಾಲರಾದ ಡಾ. ಬೇ.ಸೀ.ಗೋಪಾಲಕೃಷ್ಣ ಯೋಗದ ಕುರಿತು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಯೋಗವು ಜನಜನಿತವಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ನೀಡಿದ ಉತ್ತಮ ಪ್ರದರ್ಶನವನ್ನು ನೋಡಿ ನನಗೂ ನಿಮ್ಮೊಂದಿಗೆ […]

Continue Reading

ದಿವ್ಯತೆ – ಭವ್ಯತೆ ಇದ್ದಲ್ಲಿ ಶುಭವಿದೆ – ಶ್ರೀಸಂಸ್ಥಾನ

ಗಿರಿನಗರ: ದಿವ್ಯತೆ ಹಾಗೂ ಭವ್ಯತೆ ಇದ್ದಲ್ಲಿ ಶುಭವಿರುತ್ತದೆ. ಭಾರತವೆಂಬ ಭವನದಲ್ಲಿ ವಿದ್ಯೆಗಳು ಹಾಗೂ ಕಲೆಗಳು ಬೆಳಕನ್ನು ನೀಡಿದೆ. ಭಿನ್ನ ಬೇದವಿಲ್ಲದೆ ಎಲ್ಲರಿಗೆ ಹಿತವನ್ನುಂಟು ಮಾಡುವವರು ಶ್ರೇಷ್ಠರು. ಲಕ್ಷಕ್ಕೆ ಮಿಕ್ಕ ಮಕ್ಕಳು ತಮ್ಮೊಳಗೆ ವಿದ್ಯಾ ದೀಪವನ್ನು ಬೆಳಗಿದಾಗ ಭಾರತ ಬೆಳಗಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಮೊದಲ ದಿನ ಆಶೀರ್ವಚನ ನೀಡಿದರು. ಮಾಡುವ ಕಾರ್ಯದಲ್ಲಿ ತೀವ್ರತೆ ಇದ್ದಾಗ ಫಲ ಪ್ರಾಪ್ತಿಯಾಗುತ್ತದೆ. […]

Continue Reading

ಶ್ರೀ ಮಹಾಬಲನ ಸನ್ನಿಧಿಯಲ್ಲಿ ಶಿವಪದ ವೇದಿಕೆ ಲೋಕಾರ್ಪಿತ

ಗೋಕರ್ಣ ಜೂ.08 : ಶೂನ್ಯದಲ್ಲಿ ಜಗತ್ತಿನ ಪೂರ್ಣ ಚಿತ್ರ ಬಿಡಿಸುವ ಮಹಾಕಲಾವಿದ ಶಿವ. ಕಲೆ ತಲೆಯ ಮೇಲೆ ಕಿರೀಟ ಇದ್ದ ಹಾಗೆ ಎಂಬುದನ್ನು ಜಗತ್ತಿಗೆ ತೋರಿಸುವ ಕಾರ್ಯ ಮಾಡಿದ್ದಾನೆ. ಕಲಾಸ್ವರೂಪರಾದ ದೇವರ ಸನ್ನಿಧಿಯಲ್ಲಿ ನಾದವು ವಿಜ್ರಂಭಿಸಬೇಕು. ಆನಂದದ ಹಿಂದೆ ಭಗವಂತನ ಕರುಣೆ ಇದೆ ಎಂದು ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಗಳು ಹೇಳಿದರು. ಅವರು ಶ್ರೀ ಕ್ಷೇತ್ರ ಗೋಕರ್ಣ ಸಂಸ್ಥಾನ ಶ್ರೀಮಹಾಬಲೇಶ್ವರ ದೇವ ದೇವಸ್ಥಾನದಲ್ಲಿ ಶಿವಪದ ವೇದಿಕೆ ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಿದರು. ನಾದ ಮತ್ತು […]

Continue Reading

ಶ್ರೀಭಾರತೀ ವಿದ್ಯಾಲಯದಲ್ಲಿ ಶಿಕ್ಷಕಪ್ರಶಿಕ್ಷಣ ಶಿಬಿರ

ಬೆಂಗಳೂರಿನ ಹಂಪಿನಗರದ ಶ್ರೀಭಾರತೀ ವಿದ್ಯಾಲಯದ ನೂತನ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ವಿಶ್ರಾಂತ ಪ್ರಾಂಶುಪಾಲರು, ಶಿಕ್ಷಣ ತಜ್ಞರು, ಸಂಪನ್ಮೂಲ ವ್ಯಕ್ತಿಗಳೂ ಆದ ಶ್ರೀ ವಿಶ್ವೇಶ್ವರ ಭಟ್ಟ ಉಂಡೆಮನೆಯವರು ಕಳೆದೆರಡು ದಿನಗಳಿಂದ ಶಿಕ್ಷಕರಿಗೆ ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ. ಮೊದಲನೆಯ ದಿನದ ವಿಷಯ ವಸ್ತುವು ” ಮಿತ್ರದ್ವಾರಾ ಸ್ವಪರಿಚಯ” .ಪ್ರತಿಯೊಬ್ಬ ಶಿಕ್ಷಕನೂ ೨ ನಿಮಿಷದ ಅವಧಿಯಲ್ಲಿ ತಮ್ಮ ಸಹೋದ್ಯೋಗಿ‌ ಮಿತ್ರರೋರ್ವರ ಮಾಹಿತಿಯನ್ನು ಕಲೆಹಾಕಿ ಶಿಕ್ಷಕ ಸಮೂಹದೆದುರು ಪರಸ್ಪರ ಪರಿಚಯ ಮಾಡಿಕೊಡುವ ಚಟುವಟಿಕೆಯಾಗಿದ್ದು ಬಹಳ ಆಸಕ್ತಿಯುತವಾಗಿತ್ತು. ಶಿಕ್ಷಕರು ಇಂತಹ ಚಟುವಟಿಕೆಗಳನ್ನು ತಮ್ಮ ತರಗತಿಗಳಲ್ಲಿ ಮಾಡಿಸುವುದರಿಂದ […]

Continue Reading

ಶ್ರೀಭಾರತೀ ವಿದ್ಯಾಪೀಠದಲ್ಲಿ ಶೈಕ್ಷಣಿಕ ವರ್ಷದ ಶುಭಾರಂಭ

ಬದಿಯಡ್ಕ: ಶ್ರೀಭಾರತೀ ವಿದ್ಯಾಪೀಠದಲ್ಲಿ ೨೦೧೯-೨೦ನೆಯ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಹರ್ಷೋಲ್ಲಾಸದಿಂದ ನಡೆಸಲಾಯಿತು. ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ನಾವು ಎಷ್ಟು ಅಂಕ ಪಡೆದರೂ ಕಡಿಮೆಯೇ. ಅಂಕ ಗಳಿಸುವುದರ ಜೊತೆಗೆ ಸರ್ಜನಾತ್ಮಕ ಕ್ರಿಯಾಶೀಲತೆಯೂ ಇರಬೇಕು ಎಂದು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಪಂಜಿತ್ತಡ್ಕ ಅವರು ಶಾಲಾ ನೀತಿ-ನಿಯಮಗಳನ್ನು ತಿಳಿಸಿ, ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಮುನ್ನುಗ್ಗಬೇಕು ಎಂದು ಹೇಳಿದರು.   ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ […]

Continue Reading

ಶ್ರೀಕ್ಷೇತ್ರ ಗೋಕರ್ಣದಲ್ಲಿ ನಿರಂತರ ಕಲಾಸೇವೆ

  ಶ್ರೀಕ್ಷೇತ್ರ ಗೋಕರ್ಣದ ಸರ್ವಾಂಗೀಣ ಅಭಿವೃದ್ಧಿ ಪರ್ವದಲ್ಲಿ ಹೊಸ ಶಕೆಯೊಂದು ಆರಂಭವಾಗುತ್ತಿದ್ದು, ನಾಡಿನ ಖ್ಯಾತ ಉದಯೋನ್ಮುಖ ಕಲಾವಿದರು ಶ್ರೀ ಮಹಾಬಲೇಶ್ವರನಿಗೆ ನಿರಂತರ ಕಲಾಸೇವೆ ಸಮರ್ಪಿಸಲು ಅನುವಾಗುವಂತೆ ದೇವಾಲಯದ ಆವರಣದಲ್ಲಿ “ಶಿವಪದ” ವೇದಿಕೆ ಸಿದ್ಧವಾಗಿದೆ. ಜೂ.8ರಂದು ಈ ಶಿವಪದ ವೇದಿಕೆ ಲೋಕಾರ್ಪಣೆಯಾಗುತ್ತಿದೆ. ಜಗತ್ತಿನ ಏಕೈಕ ಆತ್ಮಲಿಂಗವನ್ನು ಸ್ವತಃ ಸ್ಪರ್ಶಿಸಿ ಪೂಜಿಸಲು ಭಕ್ತರಿಗೆ ಅವಕಾಶ ಇರುವಂತೆ, ಶ್ರೀ ಸನ್ನಿಧಿಯಲ್ಲಿ ಕಲಾವಿದರು ಅನುದಿನವೂ, ಅನುಕ್ಷಣವೂ ನಾದ- ನಾಟ್ಯದ ಮೂಲಕ ಶ್ರೀಮಹಾಬಲೇಶ್ವರನನ್ನು ಆರಾಧಿಸಲು ಇದು ವೇದಿಕೆಯಾಗಲಿದೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಜಗದ್ಗುರು ಶಂಕರಾಚಾರ್ಯ […]

Continue Reading

ಕು.ಭಾರ್ಗವ ಹೆಬ್ಬಾರ ; ಪೀ.ಯೂ.ಸೀ. ಯಲ್ಲಿ ಸಾಧನೆ

ಮಂಗಳೂರು ಮಂಡಲದ ಮರವಂತೆ ವಲಯದ ಮತ್ತು ಘಟಕದ ಘಟಕದ ಲಕ್ಷ್ಮಿ ನಾರಾಯಣ ಹೆಬ್ಬಾರರ ಪುತ್ರನಾದ ಭಾರ್ಗವ ಎಲ್. ಹೆಬ್ಬಾರ ಇವರು ಕುಂದಾಪುರದ ಶ್ರೀ ವೇಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿ ಪೀಯೂಸೀ (ವಾಣಿಜ್ಯ) ಪರೀಕ್ಷೆಯಲ್ಲಿ 90.33%.ಅಂಕಗಳಿಸಿದ್ದಾರೆ.

Continue Reading

ಶ್ರೀ ಶ್ರೀ ವಿಶ್ವಸಂತೋಷ ಗುರೂಜಿಯವರಿಂದ ಗೋಕರ್ಣಶ್ರೀಕ್ಷೇತ್ರದ ದರ್ಶನ

ಗೋಕರ್ಣ: ಶ್ರೀ ಬಾರಕೂರು ಸಂಸ್ಥಾನಮಠದ ಶ್ರೀ ಶ್ರೀ ವಿಶ್ವಸಂತೋಷ ಸ್ವಾಮೀಜಿಗಳವರು, ಇಂದು ಬೆಳಿಗ್ಗೆ ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿ ಅಭಿಷೇಕ, ಪೂಜೆ ನೆರವೇರಿಸಿದರು. ಪೂಜೆಯ ನಂತರ ಸ್ವಾಮೀಜಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಶ್ರೀ ನಾಗರಾಜ ನಾಯಕ ತೊರ್ಕೆ, ಶ್ರೀ ಆನಂದು ಕವರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶ್ರೀ ಶ್ರೀ ವಿಶ್ವಸಂತೋಷ ಸ್ವಾಮೀಜಿಗಳವರಿಗೆ ಪೂರ್ಣಫಲ ಸಮರ್ಪಿಸಿದರು. ವೇ. ಶ್ರೀ ವಿನೋದ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು. […]

Continue Reading

ಎಸ್. ಎ‌ಸ್. ಎಲ್ .ಸಿ. ; ಶ್ರೀಭಾರತೀ ವಿದ್ಯಾಪೀಠಕ್ಕೆ 100% ಫಲಿತಾಂಶ

ಕೇರಳ ರಾಜ್ಯದ SSLC ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಶ್ರೀಮಠದ ಡಿಸಿಎಸ್ ಶಾಲಾ ಮಾಲೆಯ, ಕಾಸರಗೋಡಿನ ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದ ಮಕ್ಕಳು ಶೇಕಡಾ 100 ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿರುತ್ತಾರೆ. ಒಟ್ಟು 19 ವಿದ್ಯಾರ್ಥಿಗಳ ಪೈಕಿ 13 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಅಧಿಕ ಅಂಕ ಗಳಿಸಿರುತ್ತಾರೆ. ಇವರಲ್ಲಿ ಅಭಿರಾಮ್ ಕಶ್ಯಪ್ ಕೆ. ವಿ., ಗಾಮಿನಿ, ಶಮಾತ್ಮಿಕಾ ಎ, ಶ್ರೀರತ್ನಮಾಲಾ ಎಸ್.ವಿ , ಸ್ನೇಹಶ್ರೀ ಪಿ, ಇವರುಗಳು ಎಲ್ಲಾ ವಿಷಯಗಳಲ್ಲೂ A+ ಗ್ರೇಡ್ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಇವರಿಗೆ […]

Continue Reading

ಅಂಬಾಗಿರಿಯಲ್ಲಿ ಮಕ್ಕಳ ಬೇಸಿಗೆಶಿಬಿರದ ಉದ್ಘಾಟನೆ

ಅಂಬಾಗಿರಿ, ಶಿರಸಿ – ದಿನಾಂಕ 02-05-2019 ಬುಧವಾರದಂದು ಶಿರಸಿ ಅಂಬಾಗಿರಿ ಕಾಳಿಕಾ ಮಠದಲ್ಲಿ ಶ್ರೀಮಠದ ವಿದ್ಯಾರ್ಥಿ ವಾಹಿನಿ‌ ವಿಭಾಗ ನಡೆಸುವ ವಿರಾಮ-ವಿಚಾರ-ವಿಹಾರ ಬೇಸಿಗೆ ಶಿಬಿರದ ಉದ್ಘಾಟನೆ ನಡೆಯಿತು. ಹವ್ಯಕ ಮಹಾಮಂಡಲದ ಅಧ್ಯಕ್ಷೆ ಶ್ರೀಮತಿ ಈಶ್ವರಿ ಶ್ಯಾಮ ಭಟ್ಟ ಬೇರ್ಕಡವು ದೀಪ ಪ್ರಜ್ವಾಲನೆಯ ಮೂಲಕ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು. ಅನಂತರ ಮಾತನಾಡಿ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನಮ್ಮ ಗುರುಗಳು ನಮ್ಮ ಜೊತೆಗಿದ್ದಾರೆ, ನಾವು ಒಳ್ಳೆಯ ಪ್ರಜೆಗಳಾಗಿ ಬಾಳೋಣ, ಅದಕ್ಕೆ ಪೂರಕವಾದ ಅಂಶ ಶ್ರೀ ಗುರುಗಳಿಂದ ದೊರೆಯುತ್ತದೆ, ಕಷ್ಟವೆಂದು ಎನಿಸಿದರೂ […]

Continue Reading

ಶ್ರೀಭಾರತೀ ಪದವಿ ಕಾಲೇಜಿಗೆ ನೂತನ ಪ್ರಾಂಶುಪಾಲರು

ಮಂಗಳೂರಿನ ನಂತೂರಿನಲ್ಲಿರುವ ಶ್ರೀಮಠದ ವಿದ್ಯಾಸಂಸ್ಥೆ ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಶ್ರೀ ಜೀವನದಾಸ್ ಎ. ಅವರು ಮತ್ತು ಉಪಪ್ರಾಂಶುಪಾಲರಾಗಿ ಗಂಗಾರತ್ನ ಮುಗುಳಿ ಅವರು ಗುರುವಾರ ಜವಾಬ್ದಾರಿಯನ್ನು ಸ್ವೀಕರಿಸಿದರು.   ಶ್ರೀಭಾರತೀ ಸಮೂಹ ಸಂಸ್ಥೆಗಳ ಸೇವಾ ಸಮಿತಿ ಕಾರ್ಯಾಧ್ಯಕ್ಷ ಗಣೇಶಮೋಹನ ಕಾಶಿಮಠ, ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ, ಆಡಳಿತಾಧಿಕಾರಿ ಪ್ರೊ.ಕೆ.ಶಂಕರ ಭಟ್ಟ, ಸಹಕಾರ್ಯದರ್ಶಿಗಳಾದ ಪ್ರೊ.ವಿ.ಜಿ.ಭಟ್ಟ, ಉಂಡೆಮನೆ‌ ವಿಶ್ವೇಶ್ವರ ಭಟ್ಟ , ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್ಟ , ಪ.ಪೂ. ಕಾಲೇಜು ಪ್ರಾಂಶುಪಾಲರಾದ ವಿದ್ಯಾ ಭಟ್ಟ, ಬೋಧಕ, ಬೋಧಕೇತರ ವೃಂದದವರು ಉಪಸ್ಥಿತರಿದ್ದರು

Continue Reading

ಗೋಸ್ವರ್ಗದಲ್ಲಿ ಮಕ್ಕಳ ಮಹಾಸಮ್ಮೇಳನ

ಕರು – ತುರುಗಳ ಸಂಗದಲ್ಲಿ ಗುರು – ಚಿಗುರುಗಳ ಸಂಗಮ. ಮೇ 8, ವೈಶಾಖ ಶುದ್ಧ ಚತುರ್ಥಿ, ಗೋಸ್ವರ್ಗದಲ್ಲಿ ಕರುಗಳ ಅಂಬಾರವದೊಡನೆ ಮಕ್ಕಳ ಸಡಗರದ ರವ ಬೆರೆಯುವ ವಿಶೇಷ ಹಬ್ಬ! ಮಕ್ಕಳ ಮಹಾಸಮ್ಮೇಳನ. ಗೋಸ್ವರ್ಗದಲ್ಲಿ ಮಕ್ಕಳ ಮಹಾಸಮ್ಮೇಳನವೆಂಬ ವಿಶಿಷ್ಟ ಪರಿಕಲ್ಪನೆಯ ಕೆಲವು ವೈಶಿಷ್ಟ್ಯಗಳು ಹೀಗಿವೆ. ಸಪ್ತಸನ್ನಿಧಿಯಲ್ಲಿ ಸಪ್ತಧಾರೆ!   ಕ್ಷೀರಧಾರೆ ಗೋಸ್ವರ್ಗದ ನಡುವಿನಲ್ಲಿ ಕಾಮಧೇನುವು ಇಳಿದು ಬಂದು ಹಾಲು ಸುರಿಸುವ ವಿಸ್ಮಯ! ಮಕ್ಕಳಿಗೆ ಭೂಲೋಕದ ಅಮೃತ ಪ್ರಾಪ್ತವಾಗುವ ಸುಸಮಯ! ದಿವಿಯಿಂದ ಭುವಿಗಿಳಿದ ಸುರಧೇನುವಿನ ಸಂತಸದ ನೆಲೆ ಗೋಸ್ವರ್ಗದಲ್ಲಿ […]

Continue Reading

ಗುರುಕುಲದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ 100%

ಶ್ರೀಮಠದ ಶ್ರೀ ಭಾರತೀ ಗುರುಕುಲದಲ್ಲಿ 100 ಕ್ಕೆ ನೂರು ಎಸ್ ಎಸ್ ಎಲ್ ಸಿ ಫಲಿತಾಂಶ ದೊರಕಿದೆ. ಈ ಉತ್ತಮ ಪರಿಣಾಮಕ್ಕೆ ಕಾರಣರಾದ ಅಧ್ಯಾಪಕರು, ಸಿಬ್ಬಂದಿಗಳು , ವಿದ್ಯಾರ್ಥಿಗಳು, ಪೋಷಕರು ,ದಾನಿಗಳು, ಹಿತೈಷಿಗಳಿಗೆ ಆಡಳಿತಸಮಿತಿಯು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದೆ.

Continue Reading

ಜೀವಜಲ ಉಚಿತ ವಿತರಣಾ ಸೇವೆಯ ಶುಭಾರಂಭ

  ಪರಮಪೂಜ್ಯ ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಶ್ರೀ ಕ್ಷೇತ್ರ ಗೋಕರ್ಣ ಹಾಗೂ ಸುತ್ತಮುತ್ತಲಿನ ಊರುಗಳಿಗೆ ಉಚಿತವಾಗಿ ನೀರು ವಿತರಿಸುವ ನಾಲ್ಕನೆಯ ವರ್ಷದ ಕಾರ್ಯಕ್ರಮಕ್ಕೆ 26-04-2019 ಶುಕ್ರವಾರ ಚಾಲನೆ ನೀಡಲಾಯಿತು. ಅಂದು ಗೋಕರ್ಣದ ಸಮೀಪದ ತಿಪ್ಪಸಗಿ ಗ್ರಾಮದಲ್ಲಿ ನೀರು ವಿತರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ವೇ|| ಶಿವರಾಮ ಮಯ್ಯರು ಶ್ರೀ ಲಂಬೋಧರ ಸಭಾಹಿತ, ಶ್ರೀ ಜಿ ವಿ ಹೆಗಡೆ ಹಾಗೂ ತಿಪ್ಪಸಗಿ, ಕಡಿಮೆ ಗ್ರಾಮಸ್ಥರು ಉಪಸ್ಥಿತರಿದ್ದರು. […]

Continue Reading