|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಸಾಗರ ವಲಯೋತ್ಸವದ ಅಂಗವಾಗಿ ಶ್ರೀದೇವೀ ಪಾರಾಯಣ

ಸಾಗರ: ಸಾಗರ ನಗರದ ಪೂರ್ವ ಮತ್ತು ಪಶ್ಚಿಮ ವಲಯಗಳ ವಲಯೋತ್ಸವ ನವೆಂಬರ 17, ಶನಿವಾರದಂದು ನಡೆಯಿತು.

 

ಬೆಳಗ್ಗೆ 8.30ಕ್ಕೆ ವಲಯೋತ್ಸವನ್ನು ಗುರುವಂದನೆ ಹಾಗೂ ದೀಪಪ್ರಜ್ವಲನಗಳ ಮೂಲಕ ಉದ್ಘಾಟಿಸಲಾಯಿತು.

 

ಬಳಿಕ ಶ್ರೀದೇವೀ ಪಾರಾಯಣ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಂಕಲ್ಪ, ಮಹಿಳೆಯರಿಂದ ಕುಂಕುಮಾರ್ಚನೆ, ಭಜನರಾಮಾಯಣ ಪಠಣ, ರುದ್ರ ಪಠಣ ನಡೆಯಿತು.

 

ಮಧ್ಯಾಹ್ನದ ಸಭಾ ಕಾರ್ಯಕ್ರಮದಲ್ಲಿ ಸಾಗರ ಮಂಡಲದಿಂದ ವಿದ್ಯಾ ಸಹಾಯನಿಧಿಯನ್ನು ಮಕ್ಕಳಿಗೆ ವಿತರಿಸಲಾಯಿತು. ಸಂಜೆ ಗೋಪೂಜೆ, ಕಾರ್ತೀಕ ದೀಪೋತ್ಸವ ನಡೆಸಲಾಯಿತು.