|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಶ್ರೀ ರಾಮಚಂದ್ರಾಪುರ ಮಠದಿಂದ ಕಿಟ್ ವಿತರಣೆ

ಶ್ರೀ ರಾಮಚಂದ್ರಾಪುರ ಮಠ ಹೊಸನಗರ ವತಿಯಿಂದ ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೊಳಗಾದ ದಿನಗೂಲಿಯಿಂದ ಜೀವನ ನಡೆಸುವ ೪೮ ಕುಟುಂಬಗಳಿಗೆ ಅಕ್ಕಿ, ಬೇಳೆಕಾಳು, ಬೆಲ್ಲ, ಉಪ್ಪು ಸೇರಿದ ಕಿಟ್ ವಿತರಣೆಯನ್ನು ರಾಮಚಂದ್ರಾಪುರ ಗ್ರಾಮಪಂಚಾಯತಿ ಮುಖಾಂತರ ಶಾಸಕ ಆರಗ ಜ್ಞಾನೇಂದ್ರ ಅವರು ಮಾಡಿದರು. ನಿರ್ವಹಣಾ ಸಮಿತಿ ಅಧ್ಯಕ್ಷ ಜಟ್ಟಿಮನೆ ಗಣಪತಿ, ವ್ಯವಸ್ಥಾಪಕ ರಾಘವೇಂದ್ರಮಧ್ಯಸ್ಥ, ಮಾಧ್ಯಮ ಸಂಚಾಲಕ ಒಡ್ಡಿನಭೈಲು ವೆಂಟೇಶ, ಜಿಲ್ಲಾ ಪಂಚಾಯತಿ ಸದಸ್ಯ ಸುರೇಶಸ್ವಾಮಿರಾವ್, ತಾಲೂಕು ಪಂಚಾಯಿತಿ ಸದಸ್ಯ ಚಂದ್ರಮೌಳಿ, ಗ್ರಾಮಪಂಚಾಯತಿ ಅಧ್ಯಕ್ಷರು, ಸದಸ್ಯರು, ಪಿ ಡಿ ಓ ಹಾಜರಿದ್ದರು.