ಶ್ರೀಭಾರತೀಗುರುಕುಲಂನಲ್ಲಿ ಕಾರ್ಯಾಗಾರ: ಬಾಹ್ಯಾಕಾಶ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ

ಹೊಸನಗರ: ಶ್ರೀರಾಮಚಂದ್ರಾಪುರಮಠದ ಶ್ರೀಭಾರತೀಗುರುಕುಲಂನಲ್ಲಿ, ಬಾಹ್ಯಾಕಾಶ ಮತ್ತು ತ್ಯಾಜ್ಯ ನಿರ್ವಹಣೆ ಎಂಬ ವಿಷಯದ ಬಗ್ಗೆ ನಿವೃತ್ತ ಇಸ್ರೋ ನಿರ್ದೇಶಕರಾದ ಶ್ರೀ ಡಾ. ಪಿ. ಜೆ. ಭಟ್ಟರು ಎರಡು ದಿನಗಳ ಕಾರ್ಯಾಗಾರ ನಡೆಸಿದರು.   ಕಾರ್ಯಾಗಾರದ ಅಂತ್ಯದಲ್ಲಿ ಮಕ್ಕಳ ಸಂಶಯಗಳನ್ನು‌ ನಿವಾರಿಸಿ, ಮಕ್ಕಳಿಗೆ ರಸಪ್ರಶ್ನೆ ನಡೆಸಿ, ಉತ್ತರಿಸಿದವರನ್ನು ಪುರಸ್ಕರಿಸಿದರು. ಬಳಿಕ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮಿತಾಂಡವೇಶ್ವರ ಮೈಸೂರು ಅತಿಥಿಯಾಗಿ ಭಾಗವಹಿಸಿದರು.  

Continue Reading

ಕಳ್ಳತನದ ಆರೋಪಿಗೆ ಸಜೆ

  ಗೋಕರ್ಣ: ಕಳೆದ ಆರು ವರ್ಷಗಳ ಹಿಂದೆ ಶ್ರೀಕ್ಷೇತ್ರ ಗೋಕರ್ಣದಲ್ಲಿ ನಡೆದಿದ್ದ ಹುಂಡಿ ಕಳ್ಳತನ ಪ್ರಕರಣದ ಆರೋಪಿಗೆ ಕುಮಟಾ ನ್ಯಾಯಾಲಯ ಸಜೆ ವಿಧಿಸಿದೆ.   2012ರ ಅಗಸ್ಟ್ 24ರಂದು ನಡೆದಿದ್ದ ದೇವಾಲಯದ ಹುಂಡಿ ಕಳ್ಳತನಕ್ಕೆ ಸಂಬಂಧಿಸಿದಂತೆ ಆಡಳಿತಾಧಿಕಾರಿ ಶ್ರೀ ಜಿ. ಕೆ. ಹೆಗಡೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ದಂಡ ಹಾಗೂ ಸಜೆ ವಿಧಿಸಿದೆ.  

Continue Reading

ಸಾಧಕರಿಗೆ ಶ್ರೀಸಂಸ್ಥಾನದವರಿಂದ ವಿಶೇಷ ಅನುಗ್ರಹ

  ಬೆಂಗಳೂರು: ಹವ್ಯಕ ಮಹಾಮಂಡಲದ ವತಿಯಿಂದ ದಿನಾಂಕ 16-12-2018ರಂದು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಶ್ರೀಸಂಸ್ಥಾನದವರು ಆಶೀರ್ವದಿಸಿದರು. ಯೋಗ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀಮತಿ ಸಂಧ್ಯಾ ಎನ್. ಭಟ್ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರಿಂದ ವಿಶೇಷ ಅನುಗ್ರಹವನ್ನು ಪಡೆದುಕೊಂಡರು. ದಕ್ಷಿಣ ಬೆಂಗಳೂರು ಮಂಡಲಾಂತರ್ಗತ ಸರ್ವಧಾರಿ ವಲಯದ ಶ್ರೀ ಪಟ್ಣಡ್ಕ ನಾರಾಯಣ ಭಟ್ ಇವರ ಪತ್ನಿ (ಪುತ್ತೂರಿನ ಮಾಜಿ ಶಾಸಕ ಹಿರಿಯ ಮುಖಂಡ ಉರಿಮಜಲು ರಾಮ ಭಟ್ ಅವರ ಪುತ್ರಿ) ಶ್ರೀಮತಿ ಸಂಧ್ಯಾ ಎನ್. ಭಟ್ ಹಲವಾರು ರಾಜ್ಯ ಮಟ್ಟದ ಹಾಗೂ ರಾಷ್ಟ್ರ […]

Continue Reading

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅನುಗ್ರಹ

  ಬೆಂಗಳೂರು: ಹವ್ಯಕ ಮಹಾಮಂಡಲದ ವಿದ್ಯಾರ್ಥಿವಾಹಿನೀ ವಿಭಾಗದ ವತಿಯಿಂದ ದಿನಾಂಕ 16.12.2018ರಂದು ಗಿರಿನಗರದ ಶ್ರೀರಾಮಾಶ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಶ್ರೀಸಂಸ್ಥಾನದವರಿಂದ ಅನುಗ್ರಹ ಪೂರ್ವಕ ಪ್ರತಿಭಾ ಪುರಸ್ಕಾರವನ್ನು ಪಡೆದರು.   ಶ್ರೀರಾಮಚಂದ್ರಾಪುರ ಮಂಡಲಾಂತರ್ಗತ ತೀರ್ಥರಾಜಪುರ ವಲಯದ ಶ್ರೀಮತಿ ಸೌಮ್ಯಾ ಪಿ. ವಿ. ಹಾಗೂ ಶ್ರೀ ಡಾ. ಸುರೇಶ್ ಕುಮಾರ್ ಇವರ ಪುತ್ರಿ ಕು. ಯಾಮಿನೀ ಭಟ್ ಎಂಜಿನಿಯರಿಂಗ್ ಪದವಿಯಲ್ಲಿ ಎರಡು ಸ್ವರ್ಣ ಪದಕಗಳನ್ನು ಗಳಿಸಿ ವಿಶೇಷ ಸಾಧನೆಗೈದಿದ್ದಾರೆ. ಮುಳ್ಳೇರಿಯ ಮಂಡಲಾಂತರ್ಗತ ಎಣ್ಮಕಜೆ ವಲಯದ ಶ್ರೀಮತಿ ಸುಮಿತ್ರಾ ಪಿ. […]

Continue Reading

ನಾಟ್ಯತರಂಗದಲ್ಲಿ ಎಂಟನೆಯ ಸಂಸ್ಕೃತಿ ಸಪ್ತಾಹ

  ನಾಟ್ಯತರಂಗ ತನ್ನ ಎಂಟನೆಯ ಸಂಸ್ಕೃತಿ ಸಪ್ತಾಹದ ಸಿದ್ದತೆ ನಡೆಸಿದೆ. ವರ್ಷದಿಂದ ವರ್ಷಕ್ಕೆ ಇನ್ನೂ ಉತ್ತಮ ಕಾರ್ಯಕ್ರಮ ಕೊಡುವ ಪ್ರಯತ್ನ ನಡೆಸುತ್ತಿದೆ. ಸಂಗೀತ, ವಿವಿಧ ಪ್ರಕಾರ ದ ನೃತ್ಯಗಳು, ಯಕ್ಷಗಾನ, ವಾದ್ಯ ಸಂಗೀತ ಕಾರ್ಯಗಳನ್ನು ಈ ಸಪ್ತಾಹ ಒಳಗೊಂಡಿದೆ. ಈ ಸಪ್ತಾಹದಲ್ಲಿ ರಾಜ್ಯ ಹೊರ ರಾಜ್ಯಗಳಿಂದ ಸುಮಾರು 40ಕ್ಕೂ ಹೆಚ್ಚು ಕಲಾವಿದರು,40ಕ್ಕೂ ಹೆಚ್ಚು ವಿವಿಧ ಕ್ಷೇತ್ರ ಗಳ ಗಣ್ಯರು ಅಥಿತಿಗಳಾಗಿ ಆಗಮಿಸುತ್ತದ್ದಾರೆ. ಕಲಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸುತ್ತಿದ್ದೇವೆ. ಉದಯೋನ್ಮುಖ ರನ್ನು ಪ್ರೋತ್ಸಹಿಸುವ, ಹಿರಿಯರನ್ನು ಗೌರವಿಸುವ ನಾಟ್ಯತರಂಗದ ಈ […]

Continue Reading

ವಿದ್ವಾನ್ ಉಮಾಕಾಂತ್ ಭಟ್ಟರಿಗೆ ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ

ಶ್ರೀರಾಮಚಂದ್ರಾಪುರಮಠದ ಅವಿಚ್ಚಿನ್ನ ಗುರುಪರಂಪರೆಯ 35ನೇ ಯತಿಗಳಾದ ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಶ್ರೀಮಠದ ಬೆಂಗಳೂರಿನ ಗಿರಿನಗರದ ಶಾಖಾಮಠದಲ್ಲಿ ದಿನಾಂಕ 15.12.2018 ಶನಿವಾರದಂದು ನಡೆಯಲಿದ್ದು, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯದಲ್ಲಿ ತೀರ್ಥರಾಜ ಪೂಜೆ ಇತ್ಯಾದಿ ಮಠೀಯ ಪದ್ಧತಿಯಂತೆ ಪೂರ್ವಾಚಾರ್ಯರ ಆರಾಧನೆ ಸಂಪನ್ನವಾಗಲಿದೆ.   ಆನಂತರ ಧರ್ಮಸಭೆ ನಡೆಯಲಿದ್ದು, ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ ಹಾಗೂ ಶ್ರೀಗುರುಪರಂಪರಾನುಗ್ರಹ ಕಾರ್ಯಕ್ರಮಗಳು ಸಂಪನ್ನವಾಗಲಿವೆ.   ‘ಶ್ರೀರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ’ : ಪೂರ್ವಾಚಾರ್ಯರಾದ […]

Continue Reading

ಶ್ರೀಭಾರತೀವಿದ್ಯಾಲಯದಲ್ಲಿ ಏಕಾಗ್ರತೆ ಮತ್ತು ಓದುವ ಕೌಶಲಗಳ ಬಗ್ಗೆ ಕಾರ್ಯಗಾರ

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ DCS ವಿದ್ಯಾಸಂಸ್ಥೆಗಳಲ್ಲೊಂದಾದ ಬೆಂಗಳೂರಿನ ಶ್ರೀಭಾರತೀ ವಿದ್ಯಾಲಯದ ೯ ಮತ್ತು ೧೦ ನೆಯ ತರಗತಿಯ ವಿದ್ಯಾರ್ಥಿಗಳಿಗೆ “ಏಕಾಗ್ರತೆ ಮತ್ತು ಓದುವ ಕೌಶಲಗಳು” ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಮತಿ ಜಯಗೌರಿಯವರು ಈ ಕಾರ್ಯಗಾರವನ್ನು ನಡೆಸಿಕೊಡುವ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.  

Continue Reading

ವಿಶ್ವ ಹವ್ಯಕ ಸಮ್ಮೇಳನ – ಅಮೃತಮಹೋತ್ಸವ ಕಾರ್ಯಕ್ರಮ – ಮಹಾಸಮಿತಿ ರಚನೆ

ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಅನಾವರಣಗೊಳಿಸುವ ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು ಹವ್ಯಕ ಮಹಾಸಭೆಯಿಂದ ಆಯೋಜಿಸಲಾಗಿದ್ದು, ಡಿಸೆಂಬರ್ 28, 29 ಮತ್ತು 30 ರಂದು ಅರಮನೆ ಮೈದಾನದ ರಾಯಲ್ ಸೆನೆಟ್ ಹಾಗೂ ಗ್ರಾಂಡ್ ಕ್ಯಾಸೆಲ್ ಸಭಾಂಗಣದಲ್ಲಿ ಸಂಪನ್ನವಾಗಲಿದೆ.   ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ ನಾಡಿಗೆ ವೈಶಿಷ್ಟ್ಯಪೂರ್ಣ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು […]

Continue Reading

ಪ್ರೇರಣಾ ಕಾರ್ಯಾಗಾರ : ಪ್ರಶಾಂತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

ಮಂಗಳೂರು: ನಂತೂರು ಶ್ರೀಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ, ಪ್ರೇರಣಾದ ವತಿಯಿಂದ 4.12.2018ರಂದು ಬಾಯಾರಿನ ಪ್ರಶಾಂತಿ ವಿದ್ಯಾಕೇಂದ್ರದ 10ನಯ ತರಗತಿಯ ವಿದ್ಯಾರ್ಥಿಗಳಿಗೆ ‘ಪರೀಕ್ಷೆಗಳಲ್ಲಿ ಧನಾತ್ಮಕ ಉತ್ತರಿಸುವಿಕೆ’ ವಿಷಯದ ಬಗ್ಗೆ ಕಾರ್ಯಾಗಾರ ನಡೆಸಿ ಪರೀಕ್ಷೆ ಎದುರಿಸುವ ಬಗ್ಗೆ ಮಾರ್ಗದರ್ಶನ ನೀಡಯಿತು.   ಪ್ರೇರಣಾ ಸಂಯೋಜಕ ಶ್ರೀ ಯು. ಎಸ್. ವಿಶ್ವೇಶ್ವರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಸರಳತೆಯಿಂದ ಕ್ಲಿಷ್ಟತೆಯೆಡೆಗೆ; ಉತ್ತೀರ್ಣನಾಗುವೆನೆಂಬ ಮಾನಸಿಕತೆ; ಉತ್ತರ ಗೊತ್ತಿರುವ ಪ್ರಶ್ನೆಗಳಿಂದ ಉತ್ತರಿಸತೊಡಗುವುದು; ಎಲ್ಲ ಪ್ರಶ್ನೆಗಳಿಗೂ ಉತ್ತರಗಳನ್ನು ಬರೆಯಲು ಯತ್ನಿಸುವುದು ಮುಂತಾದ […]

Continue Reading

ಶ್ರೀಭಾರತೀ ಗುರುಕುಲಂನಲ್ಲಿ ವಿಶೇಷ ಕಾರ್ಯಕ್ರಮ-ನಾಟಕ

ಗುರುಕುಲದಿಂದ ಅರ್ಜಿಸಿದ ಶಿಕ್ಷಣವನ್ನು ಜೀವನದಲ್ಲಿ ಬಳಸಿಕೊಳ್ಳುವಂತೆ ಶ್ರೀರಾಮಚಂದ್ರಾಪುರಮಠದ ಶ್ರೀಭಾರತೀ ಗುರುಕುಲಂ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಸಹಪ್ರಾಧ್ಯಾಪಕ ಡಾ. ಮಂಜುನಾಥ ಭಟ್ಟ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ತಮ್ಮ ಮಗಳ ಜನ್ಮದಿನದ ಅಂಗವಾಗಿ ಅವರು ವಿಶೇಷ ದೇಣಿಗೆಯನ್ನು ನೀಡಿದರು.   ಮಾಲೂರು ನಿವಾಸಿ ಶ್ರೀಮತಿ ವಸುಂಧರಾ ಅರವಿಂದ ಒಂದುವಾರದ ಕರಕುಶಲ ಪ್ರಶಿಕ್ಷಣ ನೀಡಿದರು.   ಪ್ರತಿಭಾನು ಸಭೆಯ ಪ್ರಯುಕ್ತ ಸುಶಾಖಾ ವೃಂದದ ವಿದ್ಯಾರ್ಥಿಗಳು ‘ಮೂರ್ತಿಪೂಜೆಯ ರಹಸ್ಯ’ ಎಂಬ ನಾಟಕವಾಡಿದರು. ಅಂಕುರ ವೃಂದದ ವಿದ್ಯಾರ್ಥಿನಿಯರು ‘ಒನಕ್ಕೆ ಓಬವ್ವ’ ಎಂಬ ನಾಟಕ ಪ್ರದರ್ಶಿಸಿದರು.

Continue Reading

ಭಾನ್ಕುಳಿ: ಅಂಬಾರವದೊಂದಿಗೆ ಚಿಣ್ಣರ ಚಿಲಿಪಿಲಿಯೂ‌ ಇಂದು‌ ಗೋಸ್ವರ್ಗದಲ್ಲಿ ಮಾರ್ದನಿಸಿತು

ಮೂರೂರಿನ ಪ್ರಗತಿ ವಿದ್ಯಾಲಯದ, ಎರಡರಿಂದ ಐದನೇ ತರಗತಿಯ ವರೆಗಿನ ಒಂದುನೂರ ಐವತ್ತು ಮಕ್ಕಳು ಪ್ರವಾಸಕ್ಕಾಗಿ ಗೋಸ್ವರ್ಗಕ್ಕೆ ಇಂದು ಆಗಮಿಸಿದರು. ಪುಟಾಣಿಗಳು ಸ್ವರ್ಗಸೌಂದರ್ಯವನ್ನೂ, ಗೋವು-ಕರುಗಳ‌‌ ಒಡನಾಟವನ್ನೂ ಆಸ್ವಾದಿಸಿ ಸಂಭ್ರಮಿಸಿದರು.

Continue Reading

ಗೋಸ್ವರ್ಗದಲ್ಲಿ ಯೋಗ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ : ಶ್ರೀರಾಮಸೇನೆ ನೇತೃತ್ವದಲ್ಲಿ ಏಳು ದಿನಗಳ ಶಿಬಿರ

ಭಾನ್ಕುಳಿ: ಶ್ರೀರಾಮಸೇನೆಯ ನೇತೃತ್ವದಲ್ಲಿ, ಗೋಸ್ವರ್ಗದಲ್ಲಿ, 2.12.2018ರಿಂದ ಏಳು ದಿನಗಳ ಕಾಲ ‘ಯೋಗ ಮತ್ತು ವ್ಯಕ್ತಿತ್ವ ವಿಕಸನ’ ತರಬೇತಿ ಶಿಬಿರವು ನಡೆಯಲಿದೆ. ಈ ಶಿಬಿರವನ್ನು ಉದ್ಘಾಟಿಸಿದ ಶ್ರೀ ಪ್ರಮೋದ ಮುತಾಲಿಕ್ ಗೋಸ್ವರ್ಗದಲ್ಲಿ ವಿಹರಿಸಿ, ಗೋಸ್ವರ್ಗದ ಬಗ್ಗೆ ಮಾಹಿತಿ ಪಡೆದುಕೊಂಡರು.

Continue Reading

ಮಾಲೂರು ಶ್ರೀರಾಘವೇಂದ್ರ ಗೋ ಆಶ್ರಮದಲ್ಲಿ ಭಾಷಣ ಕಾರ್ಯಾಗಾರ ಯಶಸ್ವಿಯಾಗಿ ಸಂಪನ್ನ

ಮಾಲೂರು: ಭಾರತೀಯ ಗೋಪರಿವಾರ-ಕರ್ನಾಟಕದ ಗೋಮಹತಿ ವಿಭಾಗದಿಂದ ಒಂದು ದಿನದ ಭಾಷಣ ಕಾರ್ಯಗಾರವು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಗಂಗಾಪುರದ ಶ್ರೀರಾಘವೇಂದ್ರ ಗೋಆಶ್ರಮದಲ್ಲಿ ನಡೆಯಿತು.   ಗೋಪೂಜೆ ಹಾಗೂ ಗೋಗ್ರಾಸ ನೀಡುವುದರೊಂದಿಗೆ ಶಿಬಿರವು ಆರಂಭವಾಯಿತು. ಬಳಿಕ ನಡೆದ ಕಾರ್ಯಾಗಾರದಲ್ಲಿ ಭಾರತೀಯ ಗೋಪರಿವಾರ, ಕರ್ನಾಟಕದ ಗೋಮಹತಿ ವಿಭಾಗದ ರಾಜ್ಯಾಧ್ಯಕ್ಷ ಶ್ರೀ ನಿತ್ಯಾನಂದ ವಿವೇಕವಂಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತರ ಶ್ರೀ ನಿತ್ಯಾನಂದ ವಿವೇಕವಂಶಿ, ಡಾ.ರವಿ ಪಾಂಡವಪುರ ಹಾಗೂ ಚಂದನ್ ಕಲಾಹಂಸ ಗೋವಿನ ಮಹತ್ತ್ವ ಮತ್ತು ಭಾಷಣ ತರಬೇತಿಯನ್ನು ನಡೆಸಿಕೊಟ್ಟರು. ಬಳಿಕ ಗೋಶಾಲೆಗೆ […]

Continue Reading

ಮುಳ್ಳೆರಿಯಾ ಹವ್ಯಕ ಮಂಡಲ ಸಭೆ : ಗೋವಿಗಾಗಿ ಮೇವು ಯೋಜನೆಯ ಕುರಿತು ಮಾಹಿತಿ

ಗುತ್ತಿಗಾರು : ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆಯು ಗುತ್ತಿಗಾರು ವಲಯದ ಅಧ್ಯಕ್ಷ ಅಡಿಕೆಹಿತ್ಲು ಶ್ರೀ ಸೀತಾರಾಮ ಭಟ್ ಅವರ ಮನೆಯಲ್ಲಿ 25.11.2018ರಂದು ಜರಗಿತು.   ಮಂಡಲಾಧ್ಯಕ್ಷ ಪ್ರೊ. ಟಿ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಸ್ತಾವನೆಗೈದು, ಗತಸಭೆಯ ವರದಿಯನ್ನು ಮಂಡಿಸಿದರು. ಕೋಶಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಭಟ್ ಗಬ್ಲಲಡ್ಕ ಇವರು ಲಕ್ಷ್ಮೀಲಕ್ಷಣದ ಮಾಹಿತಿ ನೀಡಿ ಲೆಕ್ಕಪತ್ರ ಮಂಡಿಸಿದರು. ವಲಯ ಪದಾಧಿಕಾರಿಗಳು ಮತ್ತು ವಿಭಾಗ ಪ್ರಧಾನರು ವರದಿ ನೀಡಿ […]

Continue Reading

ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯಲ್ಲಿ ಪ್ರಗತಿ ವಿದ್ಯಾಲಯದ ಪ್ರತಿಭೆಗಳ ಸಾಧನೆ

ಮೂರೂರು: ಅಂಕೋಲಾದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯಲ್ಲಿ ಮೂರೂರು ಪ್ರಗತಿ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ‌ ಸಾಧನೆ ತೋರಿದ್ದಾರೆ.   ಪ್ರಗತಿ ವಿದ್ಯಾಲಯದ ಆಂಗ್ಲ ಮಾಧ್ಯಮ ವಿಭಾಗದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕುಮಾರ ಸೃಜನ್ ನಾಯ್ಕ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ.   ಪ್ರೌಢಶಾಲಾ ವಿಭಾಗದಲ್ಲಿ ಕುಮಾರಿ ಅಶ್ವಿನಿ ಭೈರವ್ ಹೆಗಡೆ ನೀಲ್ಕೋಡ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.   ವಿದ್ಯಾರ್ಥಿಗಳ ಸಾಧನೆಗೆ ಮುಖ್ಯ ಅಧ್ಯಾಪಕರು, ಶಿಕ್ಷಕರು, ಶಾಲಾ ಆಡಳಿತ ಮಂಡಳಿ,ಸಿಬ್ಬಂದಿ ಶುಭಕೋರಿ […]

Continue Reading

ಮೂರೂರು ಪ್ರಗತಿ ವಿದ್ಯಾಲಯದಲ್ಲಿ ಕ್ರೀಡೋತ್ಸವ

ಮೂರೂರು: ಪ್ರಗತಿ ವಿದ್ಯಾಲಯದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ನವೆಂಬರ್ 27 ಮತ್ತು 28ರಂದು ಎರಡು ದಿನಗಳ ಕ್ರೀಡೋತ್ಸವ ಜರುಗಿತು.   27ರಂದು ಆಡಳಿತ ಮಂಡಳಿಯ ಸದಸ್ಯ ಶ್ರೀ ಟಿ. ಆರ್. ಜೋಷಿ ಕ್ರೀಡೋತ್ಸವವನ್ನು ಉದ್ಘಾಟಿಸಿ, ಮಾತನಾಡಿ, ಮಕ್ಕಳೆಲ್ಲರೂ ಸ್ಪರ್ಧಾತ್ಮಕ ಮನೋಭಾವ ಮತ್ತು ಸಂಭ್ರಮದಿಂದ ಭಾಗವಹಿಸಬೇಕು ಎಂದು ಹೇಳಿದರು.   ಕ್ರೀಡೋತ್ಸವದಲ್ಲಿ ಓಟ, ಚಕ್ರ ಎಸೆತ, ಗುಂಡೆಸೆತ, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಕಬಡ್ಡಿಗಳನ್ನು ಆಯೋಜಿಸಲಾಗಿತ್ತು.   ಪ್ರಾಥಮಿಕ ಶಾಲೆ, ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ […]

Continue Reading

ಪ್ರತಿಭಾ ಪುರಸ್ಕಾರ : ಜರ್ಮನಿಯಲ್ಲಿ ಪ್ರಬಂಧ ಮಂಡಿಸಿದ ಮೈತ್ರೇಯ ಹೆಗಡೆಗೆ ಶ್ರೀಸಂಸ್ಥಾನದವರಿಂದ ಆಶೀರ್ವಾದ

ಬೆಂಗಳೂರು: ಶ್ರೀಗಿರಿನಗರ ವಲಯದ ಕುಮಾರ ಮೈತ್ರೇಯ ಹೆಗಡೆ ಜರ್ಮನಿಯಲ್ಲಿ ನಡೆದ ಇಂಟರ್ ನ್ಯಾಷನಲ್ ಆಸ್ಟ್ರೋನಾಟಿಕಲ್ ಕಾಂಗ್ರೆಸ್ ನಲ್ಲಿ ಭಾಗವಹಿಸಿ ‘ಬಿಹೆವಿಯರ್ ಆಫ್ ಬ್ಯಾಕ್ಟೀರಿಯಾ ಇನ್ ಸ್ಪೇಸ್’ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದಾರೆ. ಈ ಸಾಧನೆಗಾಗಿ ಶ್ರೀಸಂಸ್ಥಾನದವರರ ವಿಶೇಷ ಆಶೀರ್ವಾದಕ್ಕೆ ಕುಮಾರ ಮೈತ್ರೇಯ ಪಾತ್ರರಾದರು. ಕುಮಾರ ಮೈತ್ರೇಯ ಹೆಗಡೆ, ಹವ್ಯಕ ಮಾಸಪತ್ರಿಕೆ ಸಂಪಾದಕ ಶ್ರೀಕಾಂತ ಹೆಗಡೆ ಅಂತ್ರವಳ್ಳಿ ಹಾಗೂ ಶ್ರೀಮತಿ ಕಮಲಿನಿ ಹೆಗಡೆ ಅಂತ್ರವಳ್ಳಿ ದಂಪತಿ ಪುತ್ರ.  

Continue Reading

ಮಕ್ಕಳಿಂದ ಮಾತಾಪಿತರಿಗೆ ಪೂಜೆ : ಶ್ರೀಭಾರತೀ ವಿದ್ಯಾಪೀಠದಲ್ಲಿ ಮಾದರಿ ಕಾರ್ಯಕ್ರಮ

ಮುಜುಂಗಾವು: ಇಲ್ಲಿನ ಶ್ರೀಭಾರತೀ ವಿದ್ಯಾಪೀಠದ ಮಕ್ಕಳಿಂದ ಮಾತಾಪಿತೃ ಪೂಜೆ ನೆರವೇರಿತು. ವಿದ್ಯಾಪೀಠ ಶಾಲೆಯಲ್ಲಿ 26.11.2018ರ ಸೋಮವಾರರಂದು ನಡೆದ ಕಾರ್ಯಕ್ರಮವು ದೀಪಪ್ರಜ್ವಲನ, ಗಣಪತಿ ಸ್ತುತಿ, ಗುರುವಂದನೆಗಳೊಂದಿಗೆ ಆರಂಭವಾಯಿತು. ಬಳಿಕ ಮಕ್ಕಳು ಅವರವರ ಮಾತಾಪಿತೃಗಳಿಗೆ ಆರತಿ ಅಕ್ಷತೆಯೊಂದಿಗೆ ಪೂಜೆ ನೆರವೇರಿಸಿದರು. ಅನಂತರ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬಳಿಕ ಮಾತನಾಡಿದ ಆಡಳಿತಾಧಿಕಾರಿ ಶ್ರೀ ಶ್ಯಾಮ ಭಟ್ ದರ್ಬೆಮಾರ್ಗ, ‘ಇಳೆಗೆ ಇಳಿಸಿದ ನಮ್ಮ ಮಾತಾಪಿತರು ಜಗತ್ತಿನ ತಂದೆತಾಯಿಯರಾದ ಪಾರ್ವತಿಪರಮೇಶ್ವರರಿಗೆ ಸಮಾನರು. ವೃದ್ಧಾಪ್ಯದಲ್ಲಿ ಅವರ ಬೇಕುಬೇಡಗಳನ್ನು ನಾವು ಪೂರೈಸಿ ಸೇವೆಯನ್ನು ಮಾಡಬೇಕು’ ಎಂದು ಕಿವಿಮಾತು […]

Continue Reading