ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹಗಳೊಂದಿಗೆ ಮೂರನೇ ವರ್ಷದ ಶಂಕರಶ್ರೀ ವಸಂತ ವೇದ ಪಾಠಶಾಲೆ ಭಾರತೀ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿರುವ ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಹಯೋಗದೊಂದಿಗೆ 2026ನೇ ಎಪ್ರಿಲ್ 15 ಬುಧವಾರದಿಂದ ಮೇ 17 ಆದಿತ್ಯವಾರದವರೆಗೆ ಮಂಗಳೂರಿನ ನಂತೂರು ಶ್ರೀಭಾರತೀ ಕಾಲೇಜು ಆವರಣದಲ್ಲಿರುವ ಶಂಕರಶ್ರೀ ಸಭಾಭವನದಲ್ಲಿ ವೇದ ಪಾಠ ಶಿಬಿರವು ನಡೆಯಲಿರುವುದು.
ಈ ಶಿಬಿರದಲ್ಲಿ ಸಂಧ್ಯಾವಂದನೆ, ಸೂಕ್ತ, ಸಂಸ್ಕೃತ ಶ್ಲೋಕಗಳ ಕಲಿಕೆಯ ಜೊತೆಗೆ ಯೋಗ, ವ್ಯಕ್ತಿತ್ತ್ವ ವಿಕಸನದ ಹಾಗೂ ಮನೋಲ್ಲಾಸದ ಚಟುವಟಿಕೆ, ಸಂಸ್ಕೃತಿಯ ಪರಿಚಯ, ಆಹಾರದ ಔಚಿತ್ಯ, ಧಾರ್ಮಿಕ ಆಚರಣೆ, ಆರೋಗ್ಯ ತಪಾಸಣೆ ಇತ್ಯಾದಿ ಕಾರ್ಯಗಳನ್ನು ಸಂಯೋಜಿಸಲಾಗಿದೆ.
ಹಾಗೆಯೇ ಈ ವರ್ಷ ವಿಶೇಷವಾಗಿ ಮಂಗಳೂರು ಪರಿಸರದ ನಾಲ್ಕನೇ ತರಗತಿಯಿಂದ ಏಳನೇ ತರಗತಿಯ ಒಳಗಿನ ವಿದ್ಯಾರ್ಥಿನಿಯರಿಗಾಗಿ ಮೇ 7 ರಿಂದ ಸುಮಾರು ಹತ್ತು ದಿನಗಳ ಕಾಲದ ಪರಂಪರಾ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು
ಪ್ರವೇಶ ಪತ್ರವನ್ನು ಪಡೆದುಕೊಳ್ಳಬಹುದಾಗಿದೆ.
ವೇದಪಾಠಶಾಲೆಯ ವಿದ್ಯಾರ್ಥಿಗಳಿಗೆ ರಾತ್ರಿಯ ವಸತಿಯು ಐಚ್ಛಿಕ ಮತ್ತು ಅಪೇಕ್ಷಿತರಿಗೆ
ವಸತಿಯ ವ್ಯವಸ್ಥೆ ಮಾಡಲಾಗುವುದು.
ಸಹಕಾರ:
ಮಂಗಳೂರು ಹವ್ಯಕಸಭಾ (ರಿ.), ಹವ್ಯಕ ಮಂಡಲ ಮಂಗಳೂರು, ದ.ಕ ಮತ್ತು ಕಾಸರಗೋಡು ಹವ್ಯಕ ಮಹಾಜನ ಸಭಾ, ಶ್ರೀ ಭಾರತೀ ಸಮೂಹ ಸಂಸ್ಥೆ, ರುದ್ರ ಸಮಿತಿ ಮಂಗಳೂರು, ಶ್ರೀ ಭಾರತೀ ಸೌಹಾರ್ದ ಸಹಕಾರಿ ನಿಯಮಿತ ಮತ್ತು ದಕ್ಷಿಣ, ಮಧ್ಯ, ಉತ್ತರ ವಲಯಗಳು
ಸಂಪರ್ಕ:
ಶಿವಪ್ರಸಾದ ಭಟ್ ಅಮೈ
+91 9448911113, +91 9535170403
ಹೊಸಮನೆ ಭಾಸ್ಕರ ಭಟ್
+91 89700 15493
ಗಣೇಶಮೋಹನ ಕಾಶಿಮಠ
ಅಧ್ಯಕ್ಷರು
ಶ್ರೀಕೃಷ್ಣ ನೀರಮೂಲೆ
ಕಾರ್ಯದರ್ಶಿಗಳು
(ಭಾರತೀ ಎಜುಕೇಶನ್ ಟ್ರಸ್ಟ್)