ಭುಕ್ತಿಮುಕ್ತಿಪ್ರದಾತಾ

ಸುದ್ದಿ

ನಮ್ಮ ಬದುಕಿಗೆ, ಭವಿಷ್ಯಕ್ಕೆ ಮಾರ್ಗದರ್ಶಿ ಶ್ರೀಗುರು.
ಈ ಲೋಕದಲ್ಲಿ ಸಾಂಸಾರಿಕವಾದ ಸುಖ ಗುರುವಿನಿಂದ.
ಜೀವಿಯ ಜನನ ಮರಣಚಕ್ರಭ್ರಮಣವನ್ನು ಇಲ್ಲವಾಗಿಸುವವನೂ ಗುರುವೇ.
ಜ್ಞಾನಶಕ್ತಿಸಮಾರೂಢಃ ತತ್ತ್ವಮಾಲಾವಿಭೂಷಿತಃ |
ಭುಕ್ತಿಮುಕ್ತಿಪ್ರದಾತಾ ಚ ತಸ್ಮೈ ಶ್ರೀಗುರವೇ ನಮಃ ||

ಇದು ಗುರುವಿನ ಕುರಿತಾದ ಪ್ರಾಜ್ಞರ ನುಡಿ.
ನನ್ನ ಹೆತ್ತ ತಾಯಿ. ವಯಸ್ಸು 93 ವರ್ಷ.
ಕಳೆದ ಐದು ವರ್ಷಗಳಿಂದ ಪರಾಧೀನಳಾಗಿ ಹಾಸಿಗೆ ಹಿಡಿದವಳು.
ಅನ್ನಾಹಾರಾದಿಗಳನ್ನು ಸೇವಿಸುತ್ತ ಆರೋಗ್ಯವಾಗಿಯೇ ಇದ್ದವಳು. ಅಂತಿಮದಿನದ ಮೊದಲ ಮೂರುದಿನಗಳಲ್ಲಿ ಸ್ವಲ್ಪ ವ್ಯತ್ಯಾಸ.
ಹಿಂದಿನ ದಿನವಷ್ಟೇ ಪೂಜ್ಯಶ್ರೀ ಸನ್ನಿಧಾನದವರು ಆಕೆಯ ಸ್ವಸ್ಥತೆಯ ಬಗ್ಗೆ ಕೇಳಿದ್ದರು. ಕೊಂಚ ವ್ಯತ್ಯಾಸವಾಗಿದೆ ಎಂದಿದ್ದೆ.
ಅಂದೇ ರಾತ್ರಿ ಯಾಕೋ ತಡೆಯದೆ ಮರುದಿನ ತೀರ್ಥವನ್ನು ಅನುಗ್ರಹಿಸುವಂತೆ ಅವರಲ್ಲಿ ಪ್ರಾರ್ಥಿಸಿದ್ದೆ.
ಮರುದಿನ ರಾಮದೇವರ ಪೂಜೆಯು ಮುಗಿದಕೂಡಲೇ ಪವಿತ್ರಗಂಗಾಜಲದ ತೀರ್ಥವನ್ನು ನೀಡಿದರು.
ಮನೆಗೆ ತೀರ್ಥವನ್ನು ತಂದು ತಾಯಿಗೆ ಸ್ನಾನಮಾಡಿಸಿ ಕುಳ್ಳಿರಿಸಿ ತೀರ್ಥವನ್ನು ಹಾಕಿದೆ. ಅಷ್ಟೆ.
ಅದನ್ನೇ ಕಾಯುತ್ತಿದ್ದಳೋ ಎಂಬಂತೆ ಆಕೆ ಶರೀರತ್ಯಾಗ ಮಾಡಿದಳು. ಗುರುದೇವ ಸಾನ್ನಿಧ್ಯದಲ್ಲಿ 30/ ಶನಿವಾರ ಆಕೆ ಮುಕ್ತಳಾದಳು.
ನಂಬಿದವರನ್ನು ಶ್ರೀಗುರುವು ಹೇಗೆ ಕಾಪಾಡುತ್ತಾರೆ ಎಂಬುದಕ್ಕೊಂದು ನಿದರ್ಶನ.
“ಕಮಲಾಕ್ಷೀ ಚ ಮೇ ಮಾತಾ ಕಮಲಾಕ್ಷಪದಂ ಗತಾ”

ಸತ್ಯನಾರಾಯಣ ಶರ್ಮಾ
“ಕಮಲಾರಾಮ” ಅಶೋಕವನ, ಗೋಕರ್ಣ

Leave a Reply

Your email address will not be published. Required fields are marked *