ಮಂಡ್ಯ: ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನ ಅಭಿಯಾನದ ವತಿಯಿಂದ ಜೂನ್ – ಜುಲೈ ತಿಂಗಳುಗಳಲ್ಲಿ ‘ಜೋಡೆತ್ತು ಅಭಿಯಾನ’ ನಡೆಸಲು ಘೋಷಿಸಲಾಗಿದೆ. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಕೆಂಗೇರಿ ಇದರ ಶ್ರೀಶ್ರೀನಿಶ್ಚಲಾನಂದ ಸ್ವಾಮೀಜಿಗಳವರ ನೇತೃತ್ವದಲ್ಲಿ, ರೈತ ಶಾಲೆ ಮಂಡ್ಯ ಇವರ ಉಸ್ತುವಾರಿಯಲ್ಲಿ, ಸಾವಯವ ಕೃಷಿ – ಗೋ-ಆಧಾರಿತ ಕೃಷಿ – ವಿಷಮುಕ್ತ ಆಹಾರ – ಸಾಂಪ್ರದಾಯಿಕ ಜೋಡೆತ್ತಿನ ಅಭಿಯಾನವನ್ನು ನಡೆಸಲಾಗುತ್ತಿದೆ.


ಈ ಅಭಿಯಾನದ ಮೊದಲ ಹಂತದ ಕಾರ್ಯಕ್ರಮದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದದೊಂದಿಗೆ ಹೊಸಾಡದ ಭಾರತೀಯ ಗೋ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ವಿವೇಕ್ ಬ್ರಹ್ಮೂರು ಇವರ ನೇತೃತ್ವದಲ್ಲಿ ಹೊಸಾಡಿನ ಶ್ರೀಅಮೃತಧಾರಾ ಗೋಬ್ಯಾಂಕ್ ಭಾಗವಹಿಸಿತು. ಅಧಿಕಜ್ಯೇಷ್ಠ ಚತುರ್ದಶಿಯಂದು (14-06-2026) ನಡೆದ ಕಾರ್ಯಕ್ರಮದಲ್ಲಿ ನೂರು ರೈತರಿಗೆ ಜೋಡೆತ್ತುಗಳನ್ನು ಹಾಗೂ ಗೋವನ್ನು ಸತ್ಯಮೂರ್ತಿ ಅವರ ಮುಖಾಂತರ ನೀಡಲಾಯಿತು.