ಹವಿ ಸವಿ ತೋರಣ – ೨೫ ನಮ್ಮ ಸಂಸ್ಕೃತಿ ಒಳುಶುವ°

ಲೇಖನ

 

ನಮ್ಮ ಸಂಸ್ಕೃತಿ ಹೇಳಿದರೆ ಸಮಾಜದ ಆತ್ಮ ಹೇಳಿ ಹೇಳ್ಲಕ್ಕು. ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದ ಹಳೆಯ ಆಚರಣೆಗೂ, ಕೆಲವು ನಂಬಿಕೆಗೊ, ರೂಢಿಲಿ ಬಂದ ಜೀವನದ ಸಂಸ್ಕಾರಂಗೊ, ಭಾಶೆ, ಕಲೆ ಇದೆಲ್ಲವನ್ನು ಸೇರಿಸಿ ನಾವು ಸಂಸ್ಕೃತಿ ಹೇಳುದು. ನಮ್ಮ ವ್ಯಕ್ತಿತ್ವ ರೂಪಿಸುದು ಈ ಸಂಸ್ಕೃತಿ. ನಮ್ಮ ಜೀವನಕ್ಕೆ ದಿಕ್ಕು ತೋರಿಸುವ ಸಂಸ್ಕಾರಂಗೋ ಈ ಸಂಸ್ಕೃತಿಯ ಒಳ ಇದ್ದು.

ಸಂಸ್ಕೃತಿ ಹೇಳಿದರೆ ಒಂದು ಮರದ ಬೇರಿನ ಹಾಂಗೆ. ನಮ್ಮ ಹಿರಿಯರು ತುಂಬಾ ಕಷ್ಟಪಟ್ಟು ಒಳ್ಳೆಯ ಸಂಸ್ಕಾರಂಗಳ, ಒಳ್ಳೆಯ ಚಿಂತನೆಗಳ ನಮಗೆ ಕೊಟ್ಟಿದವು. ಹಿರಿಯರ ಗೌರವಿಸುದು, ನಮ್ಮ ಭಾಶೆಲಿ ಮಾತಾಡುದು, ನಮ್ಮ ಸಂಪ್ರದಾಯದ ವಸ್ತ್ರ ಸುತ್ತುದು, ಹಬ್ಬಂಗಳ ಆಚರಣೆ, ಮನೆದೇವರ ಪೂಜೆಯ ಕ್ರಮಂಗಳ ಅನುಸರಿಸುದು ಇದೆಲ್ಲವೂ ನಮಗೆ ಹಿರಿಯರ ಬಳುವಳಿಯಾಗಿ ಬಯಿಂದು.

ಮನಗೆ ಬಂದ ನೆಂಟ್ರುಗಳ ದೇವರ ಹಾಂಗೆ ಗ್ರೇಶಿ ಉಪಚಾರ ಮಾಡುದು. ಗುರುಹಿರಿಯರ ಗೌರವಿಸುದು ಇದೆಲ್ಲವೂ ನಮ್ಮ ಸಂಸ್ಕೃತಿಯ ಜೀವಂಗೊ. ನಮ್ಮ ಹವ್ಯಕ ಸಮಾಜವ ಒಳುಶುದು ಹೀಂಗಿದ್ದ ಚೆಂದದ ಆಚರಣೆಗಳೇ.

 

ಹಿರಿಯರ ಮೂಲಕ ಬಂದ ಸಂಸ್ಕೃತಿ ಹೇಳುವ ಸಂಸ್ಕಾರಂಗಳ ನಾವು ದಿನನಿತ್ಯದ ಜೀವನಲ್ಲಿ ರೂಢಿಸಿಕೊಳ್ಳೆಕು.

ಮನಗೆ ಬಂದವಕ್ಕೆ ಆಸರಿಂಗೆ ಬೆಲ್ಲ ನೀರು ಕೊಡುದು, ಬಾಳೆಲೆಲಿ ಉಂಬದು, ಉಂಬ ಮೊದಲು ಉಪನಯನ ಆದ ಮಕ್ಕೊ ಆದರೆ ಕೈನೀರು ತೆಗವದು….ಹೀಂಗೇ ದಿನನಿತ್ಯದ ಆಚರಣೆಗಳಲ್ಲಿ ತುಂಬ ವಿಶಯಂಗೊ ಇದ್ದು.

 

ಇಂದು ಕಾಲ ಬದಲಿದ್ದು. ನಮ್ಮ ಸಹಜವಾದ ಗುಣಂಗಳ ಮೇಲೆ ಸಾನು ಸಾಮಾಜಿಕ ಜಾಲತಾಣಂಗಳ ಪ್ರಭಾವ ತುಂಬಾ ಆವ್ತಾಯಿದ್ದು. ಅಜ್ಜಿ, ಅಜ್ಜ, ದೊಡ್ಡಪ್ಪ, ಅಪ್ಪಚ್ಚಿ ಹೇಳುವ ಕೂಡು ಕುಟುಂಬ ಸಂಪ್ರದಾಯವೇ ಇಲ್ಲದ್ದ ಹಾಂಗಾಯಿದು. ಅಷ್ಟಪ್ಪಗ ಮಕ್ಕೊಗೆ ಹಿರಿಯರ ಮೂಲಕ ಸಿಕ್ಕುವ ಎಷ್ಟೋ ಅನುಭವದ ಕಥೆಗೊ, ಉಪದೇಶಂಗೊ ಕಮ್ಮಿ ಆಯಿತು.

ಮನೇಲಿ ಸಿಕ್ಕುವ ಸಂಸ್ಕಾರಂಗೋ ಕಮ್ಮಿ ಆವ್ತಾಯಿದ್ದು. ಮನೆ೦ದಲೇ ನಮ್ಮ ಸಂಪ್ರದಾಯ0ಗಳ, ಆಚರಣೆಗಳ, ಮೌಲ್ಯoಗಳ ಪಾಠ ಸಿಕ್ಕುದು ಕಮ್ಮಿ ಆದ ಹಾ೦ಗೆ ಹೆರಾಣ ಆಧುನಿಕ ಕ್ರಮಂಗಳ ಪ್ರಭಾವ ನಮ್ಮ ಮಕ್ಕಳ ಮೇಲೆ ಹೆಚ್ಚು ಬೀಳ್ತಾಯಿದ್ದು. ನಮ್ಮ ಮನೆ ಭಾಷೆಯ ಒಟ್ಟಿಂಗೆ ಬೇರೆ ಭಾಷೆ ಬೆರಕೆ ಆಯಿದು. ಆಧುನಿಕತೆಯ ಆಕರ್ಷಣೆಯ ಹೊಳಪಿಂಗೆ ನಮ್ಮ ಸಾಂಪ್ರದಾಯಿಕ ಸಂಸ್ಕಾರದ ಮೌಲ್ಯ ಕಮ್ಮಿಆವ್ತಾಯಿದ್ದು.

 

ಇಂದ್ರಾಣ ವಿಜ್ಞಾನ, ತಂತ್ರಜ್ಞಾನದ ಹಾಂಗಿಪ್ಪ ಹೊಸ ಕ್ರಮದ ಜೀವನಶೈಲಿ ನಮಗೆ ಬದುಕುಲೇ ತುಂಬಾ ಸುಲಭ ಆವ್ತರುದೆ ನಮ್ಮ ಹಳೆಯ ಸಾಂಪ್ರದಾಯಿಕ ಆಚರಣೆಗೊ ನಿಧಾನವಾಗಿ ಕಾಣೆಯಾವ್ತಾಯಿದ್ದು ಹೇಳುದು ಬೇಜಾರಿನ ಸಂಗತಿ. ಎಷ್ಟೋ ಹಬ್ಬಂಗಳ ಆಚರಣೆಗೊ ಬರಿ ಬಾಯಿಲ್ಲಿ ಮಾಂತ್ರ ಆಗಿಹೋಯಿದು. ಹಬ್ಬಂಗೊಕ್ಕೆ ರಜೆ ಇದ್ದರೆ ಮನೆ ಬಾಗಿಲು ಹಾಕಿ ಹೆರ ಹೋಪವು ಎಷ್ಟೋ ಜನ ಇದ್ದವು. ಎಂತಕೆ ಹೇಳಿರೆ ಈಗಾಣ ಯುವ ಜನತೆಗೆ ಕೆಲವು ಹಬ್ಬoಗಳ ಮಹತ್ವವೇ ಗೊಂತಿರ್ತಿಲ್ಲೆ. ಇದು ಬದಲೆಕು. ಹೊಸತ್ತಿನ ಜೀವನಕ್ಕೆ ತೆಕ್ಕೊಂಬಗ ಹಳತ್ತಿನ ಮರವಲಾಗ.

 

ಗುರು ಹಿರಿಯರ ಆಶೀರ್ವಾದ ತೆಕ್ಕೊಂಡು ಮಕ್ಕೊಗೆ ಉಪನಯನ ಮಾಡಿಕ್ಕಿ, ಅವಕ್ಕೆ ಗಾಯತ್ರಿ ಮಂತ್ರ ಹೇಳ್ಲೆ ಕೂಡ ಅಭ್ಯಾಸ ಮಾಡ್ಸದ್ರೆ ಉಪನಯನ ಮಾಡಿ ಎಂತ ಪ್ರಯೋಜನ. ನಮ್ಮ ಮನೆ ದೇವರ ಬಗ್ಗೆ, ನಮ್ಮ ಆಚಾರ-ವಿಚಾರಂಗಳ ಬಗ್ಗೆ ಮಕ್ಕೊಗೆ ಮನೆಂದಲೇ ಹೇಳಿಕೊಡೆಕು. ಎಷ್ಟು ಬಂಙ ಆದರೂ ನಮ್ಮ ಹಿರಿಯರು ಅವರ ಕೊನೆ ಉಸಿರಿನವರೆಗೆ ಕೆಲವು ಆಚರಣೆಗಳ ನಿಷ್ಠೆಲ್ಲಿ ನಡೆಸಿಕೊಂಡು ಬಂದದರ ನಾವು ಗಮನಿಸಿದ್ದು. ಅವರ ನಿಷ್ಠೆಯ ಆಚರಣೆಗಳ ನಾವು ನೆನಪು ಮಾಡಿಕೊಂಡು ಅದರ ಮುಂದಾಣ ತಲೆಮಾರಿoಗೆ ದಾಂಟ್ಸೆಕು. ಕುಟುಂಬ ವ್ಯವಸ್ಥೆಯ ಮಹತ್ವವ ಮಕ್ಕೊಗೆ ತಿಳಿಶೆಕು. ಜೀವನ ಮೌಲ್ಯಂಗಳ ಪಾಠವನ್ನು ಕಲಿಶೆಕು.

 

ಮಂತ್ರ, ತಂತ್ರ, ವೇದ ಉಪವಾಸನೆಗಳ ಮಹತ್ವಂಗಳ ತಿಳಿಶಿ, ಮಕ್ಕೊ ಪ್ರತಿದಿನವೂ ಜಪ ಮಾಡುವ ಹಾoಗೆ, ಧ್ಯಾನ ಮಾಡುವ ಹಾoಗೆ ಮನೆಯ ಹಿರಿಯರೇ ಹೇಳಿಕೊಡೆಕು. ಗುರು – ಶಿಷ್ಯ ಪರಂಪರೆಯ ಮಹತ್ವ ತಿಳಿಶೆಕು. ಹಿರಿಯರು ಮಠಕ್ಕೆ ಹೋಪಗ ಮಕ್ಕಳನ್ನೂ ಒಟ್ಟಿಂಗೆ ಕರ್ಕೊಂಡು ಹೋಯೆಕು. ನಮ್ಮ ಮೂಲ ಮೌಲ್ಯಂಗಳ ಮರೆಯದ್ದ ಹಾಂಗೆ ಗುರುಗಳ ಆಶೀರ್ವಚನಂಗಳನ್ನು ಕೇಳ್ಸೆಕು.

ನಮ್ಮ ಸಂಸ್ಕಾರಂದ ಬಪ್ಪ ಸಂಸ್ಕೃತಿಯ ಒಳಿಶಿ ಬೆಳೆಶುವ ಕಾರ್ಯ ನಮ್ಮ ನಮ್ಮ ಮನೆಂದಲೇ ಸುರು ಆಗಲಿ. ನಮ್ಮ ಭಾಶೆ, ನಡತೆ, ಮಾತು ಎಲ್ಲದರಲ್ಲಿಯೂ ನಮ್ಮ ಸಂಪ್ರದಾಯದ, ಸಂಸ್ಕೃತಿಯ ಮಹತ್ವ ಎದ್ದು ಕಾಣಲಿ. ಅಬ್ಬೆ ಅಪ್ಪಂದ್ರೇ ಅವರವರ ಮಕ್ಕಳಲ್ಲಿ ಮನೆಯ ಅನುಷ್ಠಾನಂಗಳ ವಿಶಯಂಗಳ ತಿಳಿಶುವ ಹಾಂಗಾಗಲಿ. ಪ್ರತಿಯೊಂದು ಮನೆಯ ಹಿರಿಯರುದೆ ಹೀಂಗಿದ್ದ ವಿಶಯಲ್ಲಿ ಹೆಚ್ಚು ಜಾಗ್ರತೆ ಮಾಡಿ ಅವರವರ ಮಕ್ಕೊಗೆ ಮೂಲ ಸಂಸ್ಕೃತಿಯ, ಅದರ ಮೌಲ್ಯಂಗಳ ಬಗ್ಗೆ ತಿಳಿಶಿ, ಅದರ ಮುಂದುವರಿಸೆಕಾದ ವಿಷಯಲ್ಲಿ ಮಾರ್ಗದರ್ಶನ ಕೊಟ್ಟರೆ ನಮ್ಮ ಸಂಸ್ಕೃತಿ ಖಂಡಿತಾ ಒಳಿಗು.

 

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *