ಅಶೋಕೆ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಹಲವು ತಿಂಗಳಿಂದ ಪ್ರತಿ ತಿಂಗಳು ಮಾತೃವಂದನೆ-ಛಾತ್ರಭಿಕ್ಷೆ ನಡೆಯುತ್ತಿದೆ. ಗುರುಕುಲದ ವಿದ್ಯಾರ್ಥಿಗಳು ಸಮಾಜದ ಅನೇಕ ಮಾತೆಯರನ್ನು ಪೂಜಿಸಿ ಅವರಿಂದ ಛಾತ್ರಭಿಕ್ಷೆ ಸ್ವೀಕರಿಸುವ ಅಪೂರ್ವ ಕಾರ್ಯಕ್ರಮವಿದು. ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯನಿರ್ದೇಶನದಂತೆ ನಡೆಯುತ್ತಿರುವ ಈ ಸಮ್ಮಿಲನ ವಿದ್ಯೆ-ವಾತ್ಸಲ್ಯಗಳ ವಿಶೇಷ ಬೆಸುಗೆ.

ಈ ವರ್ಷದ ಮೊದಲ ಮಾತೃವಂದನೆ-ಛಾತ್ರಭಿಕ್ಷೆ ಕಾರ್ಯಕ್ರಮ ದಿನಾಂಕ ನಿಜ ಜ್ಯೇಷ್ಠ ಕೃಷ್ಣ ಪಾಡ್ಯದಂದು (30-06-2026) ಗುರುದೃಷ್ಟಿ ಭವನದಲ್ಲಿ ನಡೆಯಿತು. ಪರಂಪರಾ ಗುರುಕುಲದ ವಿದ್ಯಾರ್ಥಿಗಳಿಗೆ ಹೊನ್ನಾವರ ಮಂಡಲದ ಮಾತೆಯರು ಛಾತ್ರಭಿಕ್ಷೆಯನ್ನಿತ್ತರು. ೭೪ ಮಾತೆಯರು ಭಾಗವಹಿಸಿದ್ದರು.
ಸುಧನ್ವ ಆರ್ಯ ಅವರು ಛಾತ್ರಭಿಕ್ಷೆಯನ್ನು ಸಾಂಗವಾಗಿ ನಡೆಸಿಕೊಟ್ಟರು. ವಿ.ವಿ.ವಿ.ಯ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಗುರುಕುಲದ ಮಕ್ಕಳಿಂದ ಪ್ರತಿಭಾ ಪ್ರದರ್ಶನವೂ ನಡೆಯಿತು.