|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಡಿಸೆಂಬರ್ 15ರಂದು ರಾಮಾಶ್ರಮದಲ್ಲಿ ಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನೆ

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ 35ನೆಯ ಯತಿವರ್ಯರಾದ
ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ
ಮಹಾಸ್ವಾಮಿಗಳ ಆರಾಧನಾ
ಮಹೋತ್ಸವವು ಮಾರ್ಗಶೀರ್ಷ ಶುದ್ಧ ಅಷ್ಟಮೀ ಡಿಸೆಂಬರ್ 15ರಂದು ಗಿರಿನಗರದ ಶ್ರೀರಾಮಾಶ್ರಮದಲ್ಲಿ ಸಂಪನ್ನಗೊಳ್ಳಲಿದೆ.

ಆರಾಧನಾ ಮಹೋತ್ಸವ ಬಳಿಕ ಧರ್ಮಸಭೆ, ನಡೆಯಲಿದ್ದು, ಪಾಂಡಿತ್ಯಪುರಸ್ಕಾರ, ಪ್ರವಚನ,
ಮಂತ್ರಾಕ್ಷತೆ ವಿತರಣೆಗಳು ನಡೆಯಲಿವೆ.
ಶಿಷ್ಯಭಕ್ತರು ಭಾಗವಹಿಸಿ ಕೃಪೆಗೆ ಪಾತ್ರರಾಗಬೇಕೆಂದು ಉತ್ಸವ ಕಾರ್ಯದರ್ಶಿಗಳಾದ ಶ್ರೀ ಶಾಂತಾರಾಮ ಹಿರೇಮನೆ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.