ಪ್ರಧಾನಮಠದಲ್ಲಿ ವಿದ್ಯಾಸಹಾಯನಿಧಿ ವಿತರಣೆ ಕಾರ್ಯಕ್ರಮ

ರಾಮಚಂದ್ರಾಪುರ (ಹೊಸನಗರ) : ಶ್ರೀಮಠವು ಧಾರ್ಮಿಕಕಾರ್ಯಗಳಿಗೆ ಮಾತ್ರ ಸೀಮಿತವಾಗಿರದೇ ವಿದ್ಯಾರ್ಥಿಗಳ ಶೈಕ್ಷಣಿಕ ಉದ್ದೇಶಕ್ಕೆಆರ್ಥಿಕ ನೆರವು ನೀಡುವುದರಲ್ಲೂ ಯಾವಾಗಲೂ ಮುಂದು ಎಂದು ಮಂಡಲ ಅಧ್ಯಕ್ಷ ರಮೇಶ ಗುಂಡೂಮನೆ ಹೇಳಿದರು.   ಹೊಸನಗರದ ಪ್ರಧಾನ ಮಠದಲ್ಲಿ ೨೫-೧೧-೨೦೧೮ (ಭಾನುವಾರ)ರಂದು ನಡೆದ ವಿದ್ಯಾಸಹಾಯ ನಿಧಿ 2018- 19ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ವಿದ್ಯಾಸಹಾಯ ನಿಧಿಯು ಹಣಕಾಸಿನ ನೆರವು ಮಾತ್ರವಲ್ಲದೇ ಬದುಕಿಗೆ ಬೆಳಕು ನೀಡುವ ಅನುಗ್ರಹವೂ ಆಗಿದೆ’ ಎಂದರು. ವಿದ್ಯಾರ್ಥಿಗಳು ಸಮಾಜ ಗೌರವಿಸುವ ಸ್ಥಾನವನ್ನು ಸಂಪಾದಿಸಿ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ಕಿವಿಮಾತು […]

Continue Reading

ಮೂರೂರು ಶಾಲೆ ವಿದ್ಯಾರ್ಥಿಯ ಸಾಧನೆ : ಚಕ್ರ ಎಸೆತ ಸ್ಪರ್ಧೆಯಲ್ಲಿ ರಾಜ್ಯಕ್ಕೆ‌ ಪ್ರಥಮ – ರಾಷ್ಟ್ರಮಟ್ಟಕ್ಕೆ ಆಯ್ಕೆ

ಕುಮಟಾ : ಮೂರೂರಿನ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಕುಮಾರ ಅಭಿ ಆರ್. ಅಡಿಗುಂಡಿ ರಾಜ್ಯಮಟ್ಟದ ಚಕ್ರ ಎಸೆತ (ಡಿಸ್ಕಸ್ ಥ್ರೋ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.   ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನ.21, 22ರಂದು ನಡೆದ ರಾಜ್ಯಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕು. ಅಭಿ 39.75 ಮೀಟರ್ ದೂರ ಚಕ್ರ ಎಸೆಯುವುದರೊಂದಿಗೆ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾನೆ. […]

Continue Reading

ರಂಗೋಲಿ ಸ್ಪರ್ಧೆ : ಅಮೃತ ಮಹೋತ್ಸವ ಹಾಗೂ ದ್ವುತೀಯ ವಿಶ್ವ ಹವ್ಯಕ ಸಮ್ಮೇಳನದ ಅಂಗವಾಗಿ – ಡಿಸೆಂಬರ್ 28ರ ಅಪರಾಹ್ಣ – ಅರಮನೆ ಮೈದಾನದಲ್ಲಿ

Continue Reading

ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ತ್ರಿಪುರಾಖ್ಯ ದೀಪೋತ್ಸವ : ಭಕ್ತರ ಸಂಭ್ರಮ

ಶ್ರೀಸಂಸ್ಥಾನದವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ವಿಲಂಬ ಸಂವತ್ಸರದ ತ್ರಿಪುರಾಖ್ಯ ದೀಪೋತ್ಸವವು ದಿನಾಂಕ 22.11.2018ರ ಗುರುವಾರ ವಿಜೃಂಭಣೆಯಿಂದ ಜರುಗಿತು.   ಲಕ್ಷಬಿಲ್ವಾರ್ಚನೆ , ಭೂತಬಲಿ, ವನಭೋಜನ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.   ದೇವಾಲಯದಲ್ಲಿ ಲಕ್ಷದೀಪೋತ್ಸವ, ಕೋಟಿತೀರ್ಥದಲ್ಲಿ ತೆಪ್ಪೋತ್ಸವ, ಕೊನೆಯಲ್ಲಿ ರಾತ್ರಿ ರಥೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ವೇದಮೂರ್ತಿ ಶ್ರೀ ಕೃಷ್ಣ ಭಟ್ ಷಡಕ್ಷರಿಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ದೇವಾಲಯದ ಹೊರ ಆವಾರ, ನಂದಿಮಂಟಪ , ಗರ್ಭಗುಡಿಯಲ್ಲಿ ವಿಶೇಷ […]

Continue Reading

ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಕಾರ್ತಿಕ ಪೌರ್ಣಿಮೆ ಸಂಭ್ರಮ : ಕಣ್ಮನಸೆಳೆದ ಹೂವಿನ ಅಲಂಕಾರ

ಗೋಕರ್ಣ: ಪುರಾಣ ಪ್ರಸಿದ್ಧ ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಕಾರ್ತಿಕ ಪೌರ್ಣಿಮೆ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಪೂಜೆ, ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ನೆರವೇರಿತು. ದೇವಾಲಯದ ಒಳ-ಹೊರ ಪ್ರಾಕಾರದ ಸುತ್ತ ದೀಪಗಳಿಂದ ಪ್ರಜ್ವಲಿಸಿ, ಶ್ರೀಮಹಾಬಲೇಶ್ವರ ದೇವರ ಉತ್ಸವವು ದೇವಾಲಯದ ಸುತ್ತ ಮೂರು ಪ್ರದಕ್ಷಿಣೆ ನಡೆಸಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಸಲಾಯಿತು.   ಮಧ್ಯಾಹ್ನದಿಂದಲೇ ದೇವಾಲಯದಲ್ಲಿ ಮಹಾಪೂಜೆ, ಬಲಿ ನಡೆಸಿ, ದೇವರ ಉತ್ಸವವು ವನ ಭೋಜನಕ್ಕಾಗಿ ಸಮೀಪದ ಭೀಮಕುಂಡ ಎಂಬ ಸುಂದರ ಗುಡ್ಡ ಪ್ರದೇಶಕ್ಕೆ ತೆರಳಲಾಯಿತು. ಅಲ್ಲಿ […]

Continue Reading

ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ಮಾತಾಪಿತೃ ಪೂಜೆ : ಹೆತ್ತವರ ಸೇವೆಗೆ ಪ್ರತಿಜ್ಞಾಬದ್ಧರಾದ ಮಕ್ಕಳು – ಭಾವುಕರಾದ ಹೆತ್ತವರು

ಬದಿಯಡ್ಕ: ನವೆಂಬರ್ 23ರಂದು ಇಲ್ಲಿನ ಶ್ರೀಭಾರತೀ ವಿದ್ಯಾಪೀಠ ಶಾಲೆಯಲ್ಲಿ ಮಾತಾಪಿತೃ ಪೂಜೆಯು ಭಕ್ತಿ-ಶ್ರದ್ಧೆಗಳಿಂದ ನೆರವೇರಿತು.   ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪೂಜಾ ವಿಧಾನಗಳ ಬಗ್ಗೆ ತಿಳಿಸಿ ಮಕ್ಕಳಿಂದ ಪಾಲಕರ ಪಾದ ಪೂಜೆ ನೆರವೇರಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಪ್ರತಿಜ್ಞಾವಿಧಿಯಲ್ಲಿ ಮಕ್ಕಳು ‘ತಂದೆ-ತಾಯಿ ನಮ್ಮ‌ ಕಣ್ಣಿಗೆ ಕಾಣುವ ದೇವರು. ಅವರ ಆಶೀರ್ವಾದದಿಂದ ಜೀವನದಲ್ಲಿ ಏನು ಬೇಕಾದರೂ ಸಾಧಿಸಲು ಸಾಧ್ಯ. ನಾವು ಹೆತ್ತವರನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೇವೆ.’ ಎಂದು ಹೆತ್ತವರ ಪಾದಸ್ಪರ್ಶಿಸಿ ಪ್ರತಿಜ್ಞೆಗೈದರು. ಈ ಸಂದರ್ಭದಲ್ಲಿ ಹೆತ್ತವರು […]

Continue Reading

ಪ್ರಾಯ-ಅಭಿಪ್ರಾಯಗಳಲ್ಲಿ ಆದರ್ಶಪ್ರಾಯರಾದ ಪಕ್ವಜೀವಿಗಳಿಗೆ ಪರಿಪಕ್ವವಾದ ಕಾರ್ಯ ‘ಸಂಧ್ಯಾಮಂಗಲ’ : ಶ್ರೀಸಂಸ್ಥಾನದವರಿಂದ ವಿಶೇಷ ಆಶೀರ್ವಾದ

ಬೆಂಗಳೂರು: ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ಜೀವಗಳ ಶೇಷಾಯುಷ್ಯವು ಮಂಗಲಕರವಾಗಿರಲಿ ಎಂಬ ಸದುದ್ದೇಶದೊಂದಿಗೆ ಬೆಂಗಳೂರಿನ ಶ್ರೀರಾಮಾಶ್ರಮದಲ್ಲಿ 21.11.2018ರ ಬುಧವಾರದಂದು ಸಂಧ್ಯಾಮಂಗಲ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಹವ್ಯಕ ಮಹಾಮಂಡಲದ ನೇತೃತ್ವದಲ್ಲಿ ನಡೆದ ಸಂಧ್ಯಾಮಂಗಲದಲ್ಲಿ 60 ವರ್ಷ, 70 ವರ್ಷ, 80 ವರ್ಷಗಳನ್ನು ಪೂರೈಸಿದ ಒಟ್ಟು 70 ಹಿರಿಯ ದಂಪತಿಗಳು ಪಾಲ್ಗೊಂಡು, ಶ್ರೀಸಂಸ್ಥಾನದವರ ಅಮೃತಹಸ್ತಗಳಿಂದ ವಿಶೇಷ ದಿವ್ಯಾಶೀರ್ವಾದಗಳನ್ನು ಪಡೆದರು.   ಸಂಧ್ಯಾಮಂಗಲ ಕಾರ್ಯಕ್ರಮದ ಧರ್ಮಸಭೆಯ ದಿವ್ಯಸಾನ್ನಿಧ್ಯವನ್ನು ವಹಿಸಿದ್ದ ಶ್ರೀಸಂಸ್ಥಾನದವರು, ಬಹುಕಾಲ ಬದುಕಿ ಬಾಳಿ ಸಮಾಜವನ್ನು ಬೆಳಗಿದ, ಪ್ರಾಯ-ಅಭಿಪ್ರಾಯಗಳೆರಡರಲ್ಲಿಯೂ ಪಕ್ವರಾಗಿ ಸಮಾಜಕ್ಕೆ […]

Continue Reading

ಶ್ರೀಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ತುಳಸಿ ವಿವಾಹ ಸಂಪನ್ನ.

ಗೋಕರ್ಣ: ಶ್ರೀಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ನ.20ರಂದು, ಮಂಗಳವಾರ ತುಳಸಿ ವಿವಾಹ ಸಂಪನ್ನಗೊಂಡಿತು. ವೇದಮೂರ್ತಿ ಶ್ರೀ ಶಿತಿಕಂಠ ಹಿರೇಭಟ್ ಪೂಜೆ ನೆರವೇರಿಸಿದರು. ಆಡಳಿತಾಧಿಕಾರಿ ಶ್ರೀ ಜಿ.ಕೆ. ಹೆಗಡೆ ಮತ್ತು ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Continue Reading

ವಿದ್ಯಾರ್ಥಿಗಳಿಗೆ ಕಾರ್ಯಾಗಾರ : ಪರೀಕ್ಷೆ ಎದುರಿಸುವ ವಿಧಾನ – ಮುಂದಿನ ಅವಕಾಶಗಳ ಬಗ್ಗೆ ಮಾಹಿತಿ

ನಲ್ಯಪದವು: ಪಠ್ಯವನ್ನು ಮನನ ಮಾಡಿಕೊಳ್ಳುವ ಹಾಗೂ ಪರೀಕ್ಷೆಯನ್ನು ಎದುರಿಸುವ ವಿಧಾನಗಳು, ಹತ್ತನೆಯ ತರಗತಿಯ ಅನಂತರ ಎದುರಿಸುವ ಸವಾಲುಗಳು ಹಾಗೂ ಅವಕಾಶಗಳ ಬಗ್ಗೆ ಸಂಸ್ಥೆಯ ಶಿಕ್ಷಣ ಸಂಯೋಜಕರಾದ ಪ್ರೊ. ವಿಶ್ವೇಶ್ವರ ಭಟ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.   ಶ್ರೀಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ಪ್ರೇರಣಾದಿಂದ ನಲ್ಯಪದವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಯಾವುದೇ ರೀತಿಯಲ್ಲೂ ಭಯಪಡದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಾಗಾರದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯ ಕುಮಾರಿ, ಕಂಪ್ಯೂಟರ್ […]

Continue Reading

ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ಮಾರ್ಗದರ್ಶನ

ಮಂಗಳೂರು: ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ಪ್ರೇರಣಾ ನೇತೃತ್ವದಲ್ಲಿ ಉಂಡೆಮನೆ ಶಂಭು ಶರ್ಮ ಪ್ರತಿಷ್ಠಾನದ ವತಿಯಿಂದ ಪರೀಕ್ಷೆ ಎದುರಿಸುವ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು.   ಮುಲ್ಲಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಶ್ರೀ ಯು.ಎಸ್. ವಿಶ್ವೇಶ್ವರ ಭಟ್ ತರಬೇತಿ ನೀಡಿದರು.   ಪರೀಕ್ಷೆ ಹೇಗೆ ಎದುರಿಸಬೇಕು, ಯಾವ ರೀತಿ ಸಿದ್ಧರಾಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಯಿತು. ಕೋ ಆರ್ಡಿನೇಟರ್ ಶ್ರೀ ಅನಂತನಾರಾಯಣ ಪದಕಣ್ಣಾಯ ತರಬೇತಿಗೆ ಸಹಾಯ […]

Continue Reading

ಇದು ಗೋಕರ್ಣದ ಪುರಾಣ ಪ್ರಸಿದ್ಧ ಕೋಟಿತೀರ್ಥದ ವಿಹಂಗಮ ನೋಟ. ನಾಳೆ ಇಲ್ಲಿ ನಡೆಯಲಿದೆ ಮಹಾಬಲನ ತೆಪ್ಪೋತ್ಸವ

Continue Reading

ಮಂಗಳೂರು ಶ್ರೀಭಾರತೀ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ : ಮಾತಾಪಿತೃ ಪೂಜೆಯೊಂದಿಗೆ ಆಚರಣೆ

ಮಂಗಳೂರು: ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಗಳ ಪ್ರೌಢಶಾಲೆಯಲ್ಲಿ‌ ಮಕ್ಕಳ ದಿನಾಚರಣೆಯಂದು ಮಾತಾಪಿತೃ ಪೂಜೆ ನಡೆಸುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.   ಶಾಲೆಯ ಶಂಕರಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾತಾಪಿತೃ ಪೂಜೆ ಕಾರ್ಯಕ್ರಮದಲ್ಲಿ 10ನೆಯ ತರಗತಿಯ ಮಕ್ಕಳು ತಮ್ಮ ತಂದೆ-ತಾಯಿಗಳ ಪಾದಪೂಜೆ ನೆರವೇರಿಸಿದರು.   ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಶ್ರೀ ಕೇಶವ ಭಟ್ ದಿವಾಣ ಮಾತನಾಡಿ, ತಂದೆ-ತಾಯಿ ನಮ್ಮ‌ ಕಣ್ಣಿಗೆ ಕಾಣುವ ದೇವರು. ಅವರ ಆಶೀರ್ವಾದ ಇದ್ದಾಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯ ಎಂದರು. ಹೆತ್ತವರನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುವ […]

Continue Reading

ಶ್ರೀಕ್ಷೇತ್ರ ಗೋಕರ್ಣದಲ್ಲಿ ತ್ರಿಪುರಾಖ್ಯ ದೀಪೋತ್ಸವ ನಿಮಿತ್ತ ಲಕ್ಷಬಿಲ್ವಾರ್ಚನೆ – ತೆಪ್ಪೋತ್ಸವ

ಗೋಕರ್ಣ: ಶ್ರೀಸಂಸ್ಥಾನದವರ ದಿವ್ಯಾಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ವಿಲಂಬ ಸಂವತ್ಸರದ ತ್ರಿಪುರಾಖ್ಯ ದೀಪೋತ್ಸವ ನಿಮಿತ್ತ ನವೆಂಬರ್ 22ರಂದು ಗುರುವಾರ ಮಧ್ಯಾಹ್ನ ಲಕ್ಷ ಬಿಲ್ವಾರ್ಚನೆ ಸಹಿತ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.   ಮುಂಜಾನೆ ಲಕ್ಷಬಿಲ್ವಾರ್ಚನೆ, ವಿಶೇಷ ಮಹಾಪೂಜೆ, ಬಿಲ್ವಾರ್ಚನಾ ಹವನ , ನೈಮಿತ್ತಿಕ ಬಲಿ, ಅನಂತರ ಭೀಮಕೊಂಡಕ್ಕೆ ಉತ್ಸವ ಹೋಗಿ ಅಲ್ಲಿ ಧಾತ್ರಿ ಹವನ, ವನಭೋಜನ ಜರುಗಲಿವೆ.   ರಾತ್ರಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ, ಕೋಟಿತೀರ್ಥದಲ್ಲಿ ಜಲಾಯನ ದೀಪೋತ್ಸವ , ತೆಪ್ಪೋತ್ಸವ ಹಾಗೂ […]

Continue Reading

ಶ್ರೀ ಭಾರತೀ ವಿದ್ಯಾಲಯದಲ್ಲಿ ಸಂಸ್ಕೃತೋತ್ಸವ ಸಮಾರೋಪ ಸಮಾರಂಭ

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಸಂಸ್ಕೃತದ ಕುರಿತು ಒಲವು ಮೂಡಿಸುವ ಹಾಗೂ ಭಾಷೆಯ ವ್ಯಾಪಕ ಬಳಕೆಗೆ ಪೂರಕ ವಾತಾವರಣ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ಶ್ರೀ ಭಾರತೀ ವಿದ್ಯಾಲಯದಲ್ಲಿ ಒಂದು ವಾರಗಳ ಕಾಲ ನಡೆದ ಸಂಸ್ಕೃತೋತ್ಸವವು ಯಶಸ್ವಿಯಾಗಿ ಸಂಪನ್ನಗೊಂಡಿತು.   ಸಮಾರೋಪ ಸಮಾರಂಭಕ್ಕೆ ಗುರುವಂದನೆ ಹಾಗೂ ದೀಪೋಜ್ವಲನದ ಮೂಲಕ ಚಾಲನೆ‌ ನೀಡಲಾಯಿತು. ಅಲ್ಲದೇ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.   ಶಾಲೆಯ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಶ್ರೀಮತಿ ಡಾ. ಶಾರದಾ ಜಯಗೋವಿಂದ್ ಇವರು ಉಪಸ್ಥಿತರಿದ್ದರು. […]

Continue Reading

ಶ್ರೀಭಾರತೀವಿದ್ಯಾಲಯಕ್ಕೆ ಪುಸ್ತಕ ಕೊಡುಗೆ: ಸಾವಿರಾರು ರೂಪಾಯಿ‌‌ ಮೌಲ್ಯದ ಪುಸ್ತಕ ಕೊಡುಗೆ ನೀಡಿದ ಶ್ರೀಮತಿ ಡಾ.ಶಾರದಾ ಜಯಗೋವಿಂದ

ಬೆಂಗಳೂರು: ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು‌ ಬೆಳೆಸುವ ಹಾಗೂ ಉಳಿಸುವ ನಿಟ್ಟಿನಲ್ಲಿ ಗೋಸ್ವರ್ಗ ಚಾತುರ್ಮಾಸ್ಯ ಪ್ರಶಸ್ತಿ ಪುರಸ್ಕೃತರೂ, ಶಿಕ್ಷಣ ತಜ್ಞರೂ ಆದ ಶ್ರೀಮತಿ ಡಾ. ಶಾರದಾ ಜಯಗೋವಿಂದ ಇಪ್ಪತ್ತೈದು ಸಾವಿರ ರೂಪಾಯಿ ಮೌಲ್ಯದ 163 ಪುಸ್ತಕವನ್ನು ಹಂಪಿನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯಕ್ಕೆ‌ ಕೊಡುಗೆಯಾಗಿ ನೀಡಿದ್ದಾರೆ.   ಉತ್ತಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಶಾಲೆಯ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಶ್ರೀಮತಿ ಡಾ. ಶಾರದಾ ಜಯಗೋವಿಂದ್ ಅವರು ವಿದ್ಯಾರ್ಥಿಗಳಿಗೆ‌ ಈ ಪುಸ್ತಕಗಳನ್ನು‌ ಓದುವ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುವಂತೆ‌ ಕರೆ‌ […]

Continue Reading

ವಿಶಿಷ್ಟವಾಗಿ ಮಕ್ಕಳ‌ ದಿನಾಚರಣೆ ಆಚರಿಸಿದ ಶ್ರೀಭಾರತೀವಿದ್ಯಾಪೀಠ: ಸಂಭ್ರಮಿಸಿದ ವಿದ್ಯಾರ್ಥಿಗಳು

ಮುಜುಂಗಾವು: ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಶ್ರೀಭಾರತೀ ವಿದ್ಯಾಪೀಠ ಮುಜುಂಗಾವಿನಲ್ಲಿ ವಿಭಿನ್ನ ಹಾಗೂ ವಿಶಿಷ್ಟವಾಗಿ ಆಚರಿಸಲಾಯಿತು.   ಮಕ್ಕಳ‌ ದಿನಾಚರಣೆಯಂದು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ pic and act ಮತ್ತು pic and speech ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಚೀಟಿ ಆಯ್ದುಕೊಂಡು ತಮಗೆ ಬಂದ ವಿಷಯದ ಕುರಿತು ಅಭಿನಯ ಹಾಗೂ ಭಾಷಣ ಪ್ರಸ್ತುತಪಡಿಸಿದರು.   ಬಳಿಕ‌ ನಡೆದ‌‌ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಶ್ರೀ ಶ್ಯಾಂಭಟ್ ದರ್ಬೆಮಾರ್ಗ ಮಾತನಾಡಿ, ಮಕ್ಕಳ ದಿನಾಚರಣೆಯ ಮಹತ್ತ್ವ ಹಾಗೂ ಮಕ್ಕಳ‌ […]

Continue Reading

ಮೂರೂರು ಪ್ರಗತಿ ವಿದ್ಯಾಲಯದಲ್ಲಿ‌ ಮಕ್ಕಳ ದಿನಾಚರಣೆ: ಮಾನವೀಯ ಮೌಲ್ಯ ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಕಿವಿಮಾತು

ಮೂರೂರು: ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ನವೆಂಬರ್ 14ರಂದು ಮಕ್ಕಳ‌ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.   ಮಕ್ಕ‌ಳ‌ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವೈವಿಧ್ಯಮಯ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಏರ್ಪಡಿಸಲಾಗಿತ್ತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ‌ ಮುಖ್ಯ ಗುರುಗಳಾದ ಶ್ರೀ‌ ಎಮ್.ಜಿ. ಭಟ್ ಮಾತನಾಡಿ, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ‌ ಸೌಂದರ್ಯ ಬೆಳೆಸಿಕೊಳ್ಳಿ.‌ ಮಾನವೀಯ ಮೌಲ್ಯಗಳೊಂದಿಗೆ ಸರ್ವತೋಮುಖವಾಗಿ ಅಧ್ಯಯನದಲ್ಲಿ ಪ್ರಗತಿ ಹೊಂದಿ ಸಾಧಕರಾಗಿ ಎಂದು ಕರೆ ನೀಡಿದರು.   ಅಲ್ಲದೇ ಎಸ್. ಎಸ್. ಎಲ್. ಸಿ. ಮಕ್ಕಳಿಗೆ ಶಾಲೆಯ […]

Continue Reading

ಶ್ರೀಭಾರತೀ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆಗೆ ಛದ್ಮವೇಷದ ಮೆರುಗು

ಬೆಂಗಳೂರು: ನವೆಂಬರ್ 14ರ ಮಕ್ಕಳ‌ ದಿನಾಚರಣೆಯನ್ನು ವಿಜಯನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ಛದ್ಮವೇಷ ಸ್ಪರ್ಧೆಯೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು.   ಮಕ್ಕಳು ಭೂಮಿ, ನೀರು, ಪರಿಸರ, ಭೀಮ, ಶ್ರೀಕೃಷ್ಣ, ರಾಧೆ, ದಾಸರು, ವಾಟ್ಸಪ್ ಹೀಗೆ ವಿವಿಧ ವೇಷ ಧರಿಸಿ ಬಂದು ರಂಜಿಸಿದರು.   ವಿದ್ಯಾರ್ಥಿಗಳಿಗಾಗಿ ಆಟೋಟಗಳು, ಸಂಗೀತ, ಹಿತನುಡಿ ಸೇರಿದಂತೆ ವಿವಿಧ ಸಾಂಸ್ಕೃತಿಕ‌ ಚಟುವಟಿಕೆಗಳನ್ನು ಕೂಡ ಏರ್ಪಡಿಸಲಾಗಿತ್ತು.   ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞೆ ಶ್ರೀಮತಿ ಡಾ.ಶಾರದಾ ಜಯಗೋವಿಂದ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ‌ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

Continue Reading

ಸಂಸ್ಕೃತ ಅಧ್ಯಯನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶ್ರೀಭಾರತೀ ವಿದ್ಯಾಲಯದಲ್ಲಿ ಸಂಸ್ಕೃತೋತ್ಸವ

ಬೆಂಗಳೂರು: ಸಂಸ್ಕೃತ ಅಧ್ಯಯನಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ವಿದ್ಯಾರ್ಥಿಗಳಿಗೆ ಸಂಸ್ಕೃ ತದ ಮಹತ್ತವ ತಿಳಿಸುವ ಉದ್ದೇಶದಿಂದ ಶ್ರೀಭಾರತೀ ವಿದ್ಯಾಲಯವು ಸಂಸ್ಕೃತೋತ್ಸವವನ್ನು ಆಯೋಜಿಸಿದೆ.   ಸಂಸ್ಕೃತ ಅಧ್ಯಯನ‌ದ ಮೂಲಕ ಭಾರತೀಯ ಪರಂಪರೆಯನ್ನು ಜನಮಾನಸದಲ್ಲಿ ಉಳಿಸುವುದು ಹಾಗೂ ಬೆಳೆಸುವುದು, ನವೆಂಬರ್ 13ರಂದು ಆರಂಭವಾಗಿರುವ 17ರ ವರೆಗೆ ನಡೆಯಲಿರುವ, ಈ ಸಂಸ್ಕೃತೋತ್ಸವದ ಉದ್ದೇಶವಾಗಿದೆ. ಸಂಸ್ಕೃತೋತ್ಸವದ ಅಂಗವಾಗಿ ಶ್ರೀಭಾರತೀ ವಿದ್ಯಾಲಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.

Continue Reading